Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಯಟ್ನಾಂಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ; ಚೀಣಾದ ಹ್ಯಾಂಗ್ವೂ ನ ಜಿ-20 ನಾಯಕರ ವಾರ್ಷಿಕ ಶೃಂಗದಲ್ಲೂ ಭಾಗವಹಿಸಲಿರುವ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2ರಿಂದ ಸೆಪ್ಟೆಂಬರ್ 3, 2016ರವರೆಗೆ ವಿಯಟ್ನಾಂಗೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿಯವರು ಚೀಣಾದ ಹ್ಯಾಂಗ್ವೂನಲ್ಲಿ ಸೆಪ್ಟೆಂಬರ್ 3, 2016ರಿಂದ 2016ರ ಸೆಪ್ಟೆಂಬರ್ 5ರವರೆಗೆ ನಡೆಯಲಿರುವ ಜಿ-20 ರಾಷ್ಟ್ರಗಳ ನಾಯಕರ ವಾರ್ಷಿಕ ಶೃಂಗಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಫೇಸ್ಬುಕ್ ಖಾತೆಯ ಸರಣಿ ಪೋಸ್ಟ್ ಗಳಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ:

“ವಿಯಟ್ನಾಂನ ಜನತೆಗೆ ರಾಷ್ಟ್ರೀಯ ದಿನದ ಶುಭಾಶಯಗಳು. ವಿಯಟ್ನಾಂ ಸ್ನೇಹಪರ ರಾಷ್ಟ್ರವಾಗಿದ್ದು, ನಾವು ಅದರೊಂದಿಗೆ ನಮ್ಮ ಬಾಂಧವ್ಯವನ್ನು ಪೋಷಿಸುತ್ತಿದ್ದೇವೆ.

ಇಂದು ಸಂಜೆ, ನಾನು ವಿಯಟ್ನಾಂನ ಹನೋನಿಯನ್ನು ತಲುಪಲಿದ್ದೇನೆ, ಇದರೊಂದಿಗೆ ಭಾರತ ಮತ್ತು ವಿಯಟ್ನಾಂ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಭೇಟಿಯನ್ನು ಇಲ್ಲಿಂದ ಆರಂಭಿಸಲಿದ್ದೇನೆ. ನನ್ನ ಸರ್ಕಾರವು ವಿಯಟ್ನಾಂನೊಂದಿಗಿನ ನಮ್ಮ ದ್ವಿಪಕ್ಷೀಯ ಬಾಂಧವ್ಯಕ್ಕೆ ಉನ್ನತ ಆದ್ಯತೆ ನೀಡಿದೆ. ಭಾರತ-ವಿಯಟ್ನಾಂ ಪಾಲುದಾರಿಕೆಯು ಏಷ್ಯಾ ಮತ್ತು ವಿಶ್ವದ ಇತರ ರಾಷ್ಟ್ರಗಳಿಗೂ ನೆರವಾಗಲಿದೆ.

ಈ ಭೇಟಿಯ ವೇಳೆ, ನಾನು ಪ್ರಧಾನಮಂತ್ರಿ ಶ್ರೀ ನ್ಗುಯೇನ್ ಕ್ಸುವಾನ್ ಫುಕ್ ಅವರೊಂದಿಗೆ ವ್ಯಾಪಕ ಚರ್ಚೆ ನಡೆಸಲಿದ್ದೇನೆ. ನಾವು ನಮ್ಮ ದ್ವಿಪಕ್ಷೀಯ ಬಾಂಧವ್ಯದ ಸಂಪೂರ್ಣ ಆಯಾಮಗಳ ಬಗ್ಗೆ ಪರಾಮರ್ಶಿಸಲಿದ್ದೇವೆ.

ನಾನು ವಿಯಟ್ನಾಂ ಅಧ್ಯಕ್ಷ ಶ್ರೀ ಟ್ರಾನ್ ಡಾಯ್ ಕ್ವಾಂಗ್, ವಿಯಟ್ನಾಂ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಶ್ರೀ ನ್ಗುಯೇನ್ ಫು ಟ್ರಾಂಗ್ ಅವರನ್ನು; ಮತ್ತು ವಿಯಟ್ನಾಂ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷ ಶ್ರೀ ನ್ಗುಯೇನ್ ಥಿ ಕಿಮ್ ಎಗ್ನಾನ್ ಅವರನ್ನೂ ಭೇಟಿ ಮಾಡಲಿದ್ದೇನೆ.

ನಾವು ವಿಯಟ್ನಾಂನೊಂದಿಗೆ ಬಲವಾದ ಆರ್ಥಿಕ ಬಾಂಧವ್ಯ ಹೊಂದಲು ಬಯಸಿದ್ದು, ಅದು ನಮ್ಮ ಪ್ರಜೆಗಳಿಗೆ ಪರಸ್ಪರ ಲಾಭ ತರಲಿದೆ. ಜನರೊಂದಿಗಿನ ಬಾಂಧವ್ಯವನ್ನು ಸಹ ಬಲಪಡಿಸುವುದೂ ವಿಯಟ್ನಾಂ ಭೇಟಿಯಲ್ಲಿ ನನ್ನ ಪ್ರಯತ್ನವಾಗಲಿದೆ.

ವಿಯಟ್ನಾಂನಲ್ಲಿ ನನಗೆ 20ನೇ ಶತಮಾನದ ಎತ್ತರದ ನಾಯಕ ಹೋ ಚಿ ಮಿನ್ಹ್ ಅವರಿಗೆ ಗೌರವಾರ್ಪಣೆ ಸಲ್ಲಿಸುವ ಅವಕಾಶವೂ ದೊರೆತಿದೆ. ನಾನು ಕ್ವಾನ್ ಸು ಪಗೋಡಾಗೆ ಭೇಟಿ ನೀಡಿದಾಗ ನಾನು ರಾಷ್ಟ್ರೀಯ ನಾಯಕರ ಮತ್ತು ಹುತಾತ್ಮರ ಸ್ಮಾರಕಕ್ಕೆ ಪುಷ್ಪಾಂಜಲಿಯನ್ನೂ ಅರ್ಪಿಸಲಿದ್ದೇನೆ.

2016ರ ಸೆಪ್ಟೆಂಬರ್ 3-5ರವರೆಗೆ ನಡೆಯಲಿರುವ ವಾರ್ಷಿಕ ಜಿ-20 ನಾಯಕರ ಶೃಂಗಸಭೆಗಾಗಿ ನಾನು ಚೀಣಾದ ಹ್ಯಾಂಗ್ವೋಗೆ ಭೇಟಿ ನೀಡಲಿದ್ದೇನೆ. ನಾನು ಮಹತ್ವದ ದ್ವಿಪಕ್ಷೀಯ ಭೇಟಿ ಮುಗಿಸಿ ವಿಯಟ್ನಾಂನಿಂದ ಹ್ಯಾಂಗ್ವೋಗೆ ತೆರಳಲಿದ್ದೇನೆ.

ಜಿ-20 ಶೃಂಗದ ವೇಳೆ ನನಗೆ ವಿಶ್ವದ ಇತರ ನಾಯಕರ ಭೇಟಿಯ ಅವಕಾಶವೂ ಸಿಗಲಿದ್ದು, ಅಂತಾರಾಷ್ಟ್ರೀಯ ಆದ್ಯತೆ ಮತ್ತು ಸವಾಲುಗಳ ಬಗ್ಗೆ ಚರ್ಚಿಸಲಿದ್ದೇನೆ. ನಾವು ಜಾಗತಿಕ ಆರ್ಥಿಕತೆಯನ್ನು ಸುಸ್ಥಿರ ಮತ್ತು ಸ್ಥಿರ ವೃದ್ಧಿಯ ಹಾದಿಗೆ ತರುವ ಬಗ್ಗೆಯೂ ಚರ್ಚಿಸಲಿದ್ದೇವೆ ಮತ್ತು ಹೊರಹೊಮ್ಮುತ್ತಿರುವ ಮತ್ತು ಸಮಾಜದಲ್ಲಿ ಬೇರೂರಿರುವ, ಭದ್ರತೆ ಮತ್ತು ಆರ್ಥಿಕ ಸವಾಲುಗಳಿಗೂ ಸ್ಪಂದಿಸಲಿದ್ದೇವೆ.

ಭಾರತವು ನಮ್ಮ ಮುಂದಿರುವ ವಿಷಯಗಳ ಬಗ್ಗೆ ರಚನಾತ್ಮಕವಾಗಿ ಚರ್ಚಿಸಲಿದೆ ಮತ್ತು ಅದಕ್ಕೆ ಪರಿಹಾರ ಹುಡುಕಲು ಹೆಜ್ಜೆ ಹಾಕಲಿದೆ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಸ್ಥಿತಿಯನ್ನು ಸುಸ್ಥಿರ ಮತ್ತು ಸಮಗ್ರ ಹಾಗೂ ಚೇತೋಹಾರಿಗೊಳಿಸುವ ಕಾರ್ಯಕ್ರಮದತ್ತ ಅದರಲ್ಲೂ ಅದರ ಅಗತ್ಯವಿರುವ ಅಭಿವೃದ್ಧಿಶೀಲರಾಷ್ಟ್ರಗಳೊಂದಿಗೆ ಕೊಂಡೊಯ್ಯಲು ಯತ್ನಿಸಲಿದ್ದೇವೆ.

ನಾನು ಈ ಶೃಂಗದ ಫಲಿತಾಂಶ ಮತ್ತು ಫಲಪ್ರದತೆಯತ್ತ ಎದಿರು ನೋಡುತ್ತಿದ್ದೇನೆ.

***

AKT/AK