Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿದೇಶೀ ನೇರ ಬಂಡವಾಳ ನೀತಿ, 2016 ವಿವಿಧ ವಲಯಗಳಲ್ಲಿ ಸರಳೀಕರಣ ಮತ್ತು ಉದಾರೀಕರಣಕ್ಕೆ ಸಂಪುಟ ಸಮ್ಮತಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2016ರ ಜೂನ್ 20ರಂದು ಸರ್ಕಾರ ಪ್ರಕಟಿಸಿದ್ದ ಎಫ್.ಡಿ.ಐ. ನೀತಿಯ ತಿದ್ದುಪಡಿಗಳಿಗೆ ಪೂರ್ವಾನ್ವಯವಾಗಿ ತನ್ನ ಅನುಮೋದನೆ ನೀಡಿದೆ. ದೇಶದಲ್ಲಿ ಸುಗಮವಾಗಿ ವ್ಯಾಪಾರ ನಡೆಸಲು ಮತ್ತು ಅದರಿಂದ ಹೂಡಿಕೆಯ ಅಭಿವೃದ್ಧಿಗೆ, ಆದಾಯ ಹಾಗೂ ಉದ್ಯೋಗ ಹೆಚ್ಚಳಕ್ಕೆ ಕೊಡುಗೆ ನೀಡುವ ದೊಡ್ಡ ಪ್ರಮಾಣದ ಎಫ್.ಡಿ.ಐ. ಹರಿವು ಹೆಚ್ಚಿಸುವ ಸಲುವಾಗಿ ಎಫ್.ಡಿ.ಐ. ನೀತಿಯ ಸರಳೀಕರಣ ಮತ್ತು ಉದಾರೀಕರಣದ ಉದ್ದೇಶದಿಂದ  ಎಫ್.ಡಿ.ಐ. ತಿದ್ದುಪಡಿ ತರಲಾಗಿದೆ. ವಿವರಳಗಳು ಈ ಕೆಳಕಂಡಂತಿವೆ:

  1. ಭಾರತದಲ್ಲಿ ಉತ್ಪಾದಿಸಲಾದ/ತಯಾರಿಸಲಾದ ಆಹಾರ ಉತ್ಪನ್ನಗಳ ಉತ್ತೇಜನಕ್ಕೆ ಆಮೂಲಾಗ್ರ ಬದಲಾವಣೆ    

ಭಾರತದಲ್ಲಿ ಉತ್ಪಾದಿಸಲಾದ ಮತ್ತು/ಅಥವಾ ತಯಾರಿಸಲಾದ ಆಹಾರ ಉತ್ಪನ್ನಗಳ ವಿಚಾರದಲ್ಲಿ ಇ-ವಾಣಿಜ್ಯದ ಮೂಲಕ ಸೇರಿದಂತೆ, ವಾಣಿಜ್ಯಕ್ಕೆ ಶೇ.100ರಷ್ಟು ಎಫ್.ಡಿ.ಐ. ಅನ್ನು ಸ್ವಯಂ ಚಾಲಿತ ಮಾರ್ಗದಲ್ಲಿ ಈಗ ಒದಗಿಸಲು ಅನುಮತಿಸಲಾಗಿದೆ.  

  1. ಶೇ.100ರವರೆಗೆ ರಕ್ಷಣಾ ಕ್ಷೇತ್ರದಲ್ಲಿ ವಿದೇಶೀ ಬಂಡವಾಳ

ಈ ಮುನ್ನ ಎಫ್.ಡಿ.ಐ. ಆಡಳಿತದಲ್ಲಿ ಕಂಪನಿಯ ಈಕ್ವಿಟಿಯಲ್ಲಿ ಸ್ವಯಂಚಾಲಿತ ಮಾರ್ಗದಲ್ಲಿ ಶೇ.49ರಷ್ಟು ಎಫ್.ಡಿ.ಐ.ಗೆ ಅನುಮತಿ ನೀಡಲಾಗಿತ್ತು. ದೇಶದಲ್ಲಿ ಎಲ್ಲೆಲ್ಲಿ ಆಧುನಿಕ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಲಭ್ಯತೆಗೆ ಕಾರಣವಾಗುತ್ತದೋ ಅಲ್ಲಿ ಶೇ.49ಕ್ಕಿಂತ ಹೆಚ್ಚಿನ ಎಫ್.ಡಿ.ಐ.ಗೆ ಪ್ರಕರಣದಿಂದ ಪ್ರಕರಣದ ಆಧಾರದ ಮೇಲೆ ಸರ್ಕಾರದ ಮೂಲಕ ಅನುಮತಿ ನೀಡಲಾಗುತ್ತಿತ್ತು. ಈ ನಿಟ್ಟಿನಲ್ಲಿ ಈ ವಲಯದಲ್ಲಿ ಎಫ್.ಡಿ.ಐ. ನೀತಿಗೆ ಇತರ ವಲಯಗಳಲ್ಲಿ ಈ ಕೆಳಗಿನ ಬದಲಾವಣೆ ತರಲಾಗಿದೆ.:

  1. ಎಲ್ಲೆಲ್ಲಿ ಆಧುನಿಕ ತಂತ್ರಜ್ಞಾನ ಅಥವಾ ಇತರ ದಾಖಲಾಗುವ ಕಾರಣಗಳಿಗೆ ಶೇ.49 ಮೀರಿದ ವಿದೇಶೀ ಹೂಡಿಕೆಗೆ ಈಗ ಸರ್ಕಾರದ ಅನುಮೋದನೆ ಮಾರ್ಗದ ಮೂಲಕ ಅನುಮತಿ ನೀಡಲಾಗುತ್ತದೆ.
  2. 1959ರ ಶಸ್ತ್ರಾಸ್ತ್ರ ಕಾಯಿದೆ ವ್ಯಾಪ್ತಿಯಲ್ಲಿ ಬರುವ ಸಣ್ಣ ಶಸ್ತ್ರಗಳು ಮತ್ತು ಮದ್ದುಗುಂಡುಗಳ ಉತ್ಪಾದನೆಯಲ್ಲಿ ಎಫ್.ಡಿ.ಐ. ಮಿತಿಯನ್ನು ರಕ್ಷಣಾ ವಲಯಕ್ಕೂ ಅನ್ವಯವಾಗುವಂತೆ ಮಾಡಲಾಗಿದೆ.
  3. ಪ್ರಸಾರ ಸೇವೆಗಳಲ್ಲಿ ಪ್ರವೇಶ ಮಾರ್ಗಗಳ ವಿಮರ್ಶೆ

ಪ್ರಸಾರ ಸೇವೆಯ ಎಫ್.ಡಿ.ಐ. ನೀತಿಗೂ ತಿದ್ದುಪಡಿ ಮಾಡಲಾಗಿದೆ. ಹೊಸ ಕ್ಷೇತ್ರಗಳ ಮಿತಿ ಮತ್ತು ಪ್ರವೇಶ ಮಾರ್ಗ ಈ ಕೆಳಗಿನಂತಿದೆ:

5.2.7.1.1

(1)ಟೆಲಿಪೋರ್ಟ್ ಗಳು (ಅಪ್ ಲಿಂಕಿಂಗ್ ಹಬ್ ಗಳು/ಟೆಲಿಪೋರ್ಟ್ ಗಳ ಸ್ಥಾಪನೆ);

(2)ಡೈರೆಕ್ಟ್ ಟು ಹೋಮ್ (ಡಿ.ಟಿ.ಎಚ್.);

(3)ಕೇಬಲ್ ಜಾಲಗಳು (ಬಹು ವ್ಯವಸ್ಥೆ ಕಾರ್ಯಾಚರಣೆದಾರರು (ಎಂ.ಎಸ್.ಓ.ಗಳು) ರಾಷ್ಟ್ರ ಅಥವಾ ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮತ್ತು ಡಿಜಿಟಲೀಕರಣ ಮತ್ತು ಅಡ್ರೆಸೆಬಿಲಿಟಿಯತ್ತ ತಮ್ಮ ಜಾಲವನ್ನು ಮೇಲ್ದರ್ಜೆಗೇರಿಸುವ ಕಾರ್ಯ ಕೈಗೆತ್ತಿಕೊಂಡಿರುವವರು);

(4)ಮೊಬೈಲ್ ಟಿವಿ;

(5)ಹೆಡ್ ಎಂಡ್ –ಇನ್-ದಿ ಸ್ಕೈ ಪ್ರಸಾರ ಸೇವೆ (ಎಚ್.ಐ.ಟಿ.ಎಸ್.)

100%

ಸ್ವಯಂಚಾಲಿತ

5.2.7.1.2 ಕೇಬಲ್ ಜಾಲಗಳು (ಡಿಜಿಟಲೀಕರಣ ಮತ್ತು ಅಡ್ರೆಸೆಬೆಲಿಟಿ ಉನ್ನತೀಕರಣ ಕಾರ್ಯ ಕೈಗೊಳ್ಳದ ಇತರ ಎಂ.ಎಸ್.ಓಗಳು ಮತ್ತು ಸ್ಥಳೀಯ ಕೇಬಲ್ ಆಪರೇಟರ್ ಗಳು (ಎಲ್.ಸಿ.ಓ.ಗಳು)

ವಿಭಾಗೀಯ ಸಚಿವಾಲಯದ ಅನುಮತಿ/ಪರವಾನಗಿ ಪಡೆಯದಿರುವ ಕಂಪನಿಗಳಲ್ಲಿ ಶೇ.49ಕ್ಕಿಂತ ಹೆಚ್ಚು ಹೊಸ ವಿದೇಶೀ ಹೂಡಿಕೆಯ ಪೂರಣವು ಮಾಲೀಕತ್ವದ ಸ್ವರೂಪದ ಬದಲಾವಣೆ ಅಥವಾ ಹಾಲಿ ಹೂಡಿಕೆದಾರರ ಪಾಲನ್ನು ವಿದೇಶೀ ಹೂಡಿಕೆದಾರರಿಗೆ ವರ್ಗಾವಣೆ ಮಾಡುವುದಾಗಿದ್ದು, ಇದಕ್ಕೆ ಎಫ್.ಐ.ಪಿ.ಬಿ. ಅನುಮೋದನೆ ಅಗತ್ಯವಾಗಿದೆ.

ವಲಯ/ಚಟುವಟಿಕೆ ಹೊಸ ಮಿತಿ ಮತ್ತು ಮಾರ್ಗ

  1. ಔಷಧ

ಈ ಮುನ್ನ ಔಷಧ ಕ್ಷೇತ್ರದ ಎಫ್.ಡಿ.ಐ. ನೀತಿಯು ಗ್ರೀನ್ ಫೀಲ್ಡ್ ಔಷಧದಲ್ಲಿ ಶೇ.100ರಷ್ಟು ಎಫ್.ಡಿ.ಐ.ಗೆ ಸ್ವಯಂಚಾಲಿತ ಮಾರ್ಗದಡಿ ಅವಕಾಶ ನೀಡಿತ್ತು ಮತ್ತು ಬ್ರೌನ್ ಫೀಲ್ಡ್ ಫಾರ್ಮಾದಲ್ಲಿ ಶೇ.100ರಷ್ಟು ಎಫ್.ಡಿ.ಐ.ಗೆ ಸರ್ಕಾರದ ಅನುಮೋದನೆಯೊಂದಿಗೆ ಅವಕಾಶ ಕೊಟ್ಟಿತ್ತು. ಈ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದೊಂದಿಗೆ, ಬ್ರೌನ್ ಫೀಲ್ಡ್ ಔಷಧೀಯ ಕ್ಷೇತ್ರದಲ್ಲಿ ಸ್ವಯಂಚಾಲಿತ ಮಾರ್ಗದಡಿಯಲ್ಲಿ ಶೇ.74ರಷ್ಟು ಎಫ್.ಡಿ.ಐ.ಗೆ ಅನುಮತಿ ನೀಡಲಾಗಿದೆ. ಶೇ.74 ಮೀರಿದ ಎಫ್.ಡಿ.ಐ.ಗೆ. ಸರ್ಕಾರದ ಅನುಮತಿ ಮಾರ್ಗದಿಂದ ಅನುಮತಿಸಲಾಗುತ್ತದೆ.

  1. ನಾಗರಿಕ ವಿಮಾನ ಯಾನ ವಲಯ

(i)  ಈ ಮುನ್ನ ವಿಮಾನ ನಿಲ್ದಾಣಗಳ ಎಫ್.ಡಿ.ಐ. ನೀತಿಯಲ್ಲಿ ಹಸಿರು ವಲಯ ಯೋಜನೆಗಳಲ್ಲಿ ಶೇ.100ರಷ್ಟು ಎಫ್.ಡಿ.ಐಗೆ ಸ್ವಯಂಚಾಲಿತ ಮಾರ್ಗದಲ್ಲಿ ಮತ್ತು ಬ್ರೌನ್ ಫೀಲ್ಡ್ ವಲಯದಲ್ಲಿ ಶೇ.74ರಷ್ಟು ಎಫ್.ಡಿ.ಐ.ಗೆ ಸ್ವಯಂ ಚಾಲಿತ ಮಾರ್ಗದಲ್ಲಿ ಅನುಮತಿ ನೀಡಲಾಗಿತ್ತು. ಬ್ರೌನ್ ಫೀಲ್ಡ್ ನಲ್ಲಿ ಶೇ.74 ಮೀರಿದ ಎಫ್.ಡಿ.ಐ. ಯೋಜನೆಗಳಿಗೆ ಸರ್ಕಾರದ ಅನುಮತಿ ಮಾರ್ಗ ಅನುಸರಿಸಲಾಗುತ್ತಿತ್ತು.

 (ii) ಹಾಲಿ ಇರುವ ವಿಮಾನ ನಿಲ್ದಾಣಗಳನ್ನು ಅತ್ಯುನ್ನತ ದರ್ಜೆಗೆ ತರಲು ಆಧುನೀಕರಣ ಮಾಡುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಹಾಲಿ ಇರುವ ವಿಮಾನ ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುವ ಸಲುವಾಗಿ ಬ್ರೌನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಳಲ್ಲೂ ಶೇ.100ರಷ್ಟು ಎಫ್.ಡಿ.ಐ.ಗೆ ಸ್ವಯಂಚಾಲಿತ ಮಾರ್ಗದಲ್ಲಿ ಅನುಮತಿಸಲಾಗಿದೆ.

 (iii) ಈ ಹಿಂದಿನ ಎಫ್.ಡಿ.ಐ. ನೀತಿಯಂತೆ ಅನುಸೂಚಿತ ವೈಮಾನಿಕ ಸಾರಿಗೆ ಸೇವೆ/ ದೇಶೀಯ ಅನುಸೂಚಿತ ಪ್ರಯಾಣಿಕರ ವಾಯುಯಾನ ಸೇವೆ ಮತ್ತು ಪ್ರಾದೇಶಿಕ ವಾಯು ಸಾರಿಗೆ ಸೇವೆಗಳಲ್ಲಿ ಶೇ.49ರಷ್ಟು ವಿದೇಶೀ ಹೂಡಿಕಗೆ ಸ್ವಯಂಚಾಲಿತ ಮಾರ್ಗ ಅನುಸರಿಸಲಾಗುತ್ತಿತ್ತು. ಈ ಮಿತಿಯನ್ನು ಈಗ  ಶೇ.100ಕ್ಕೆ ಹೆಚ್ಚಿಸಲಾಗಿದೆ, ಆದರೆ ಶೇ.49ರವರೆಗೆ ಸ್ವಯಂಚಾಲಿತ ಮಾರ್ಗದಲ್ಲೂ ಮತ್ತು ಶೇ.49ಕ್ಕಿಂತ ಹೆಚ್ಚಿನ ಹೂಡಿಕೆಗೆ ಸರ್ಕಾರದ ಅನುಮೋದನೆ ಮಾರ್ಗದಲ್ಲಿ ಅನುಮತಿಸಲಾಗಿದೆ. ಅನಿವಾಸಿ ಭಾರತೀಯರಿಗೆ ಶೇ.100ರಷ್ಟು ಸ್ವಯಂಚಾಲಿತ ಮಾರ್ಗದಲ್ಲಿ ಅನುಮತಿ ಮುಂದುವರಿಯುತ್ತದೆ. ಅನುಸೂಚಿತ ಮತ್ತು ಅನನುಸೂಚಿತ ಯಾವು ಸಾರಿಗೆ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಕಂಪನಿಗಳಲ್ಲಿ ಬಂಡವಾಳ ಹೂಡಲು ವಿದೇಶೀ ವಿಮಾನಯಾನ ಸಂಸ್ಥೆಗಳಿಗೆ ಶೇ.49ರಷ್ಟು ಪೈಯ್ ಅಪ್ ಬಂಡವಾಳ ಮಿತಿಯವರಿಗೆ ಅನುಮತಿ ಮುಂದುವರಿಸಲಾಗಿದೆ.

  1. ಖಾಸಗಿ ಭದ್ರತೆ ಸಂಸ್ಥೆಗಳು

ಈ ಹಿಂದಿನ ನೀತಿಯಲ್ಲಿ ಖಾಸಗಿ ಭದ್ರತಾ ಸಂಸ್ಥೆಗಳ ವಲಯದಲ್ಲಿ ಶೇ.49ರಷ್ಟು ಎಫ್.ಡಿ.ಐ.ಗೆ ಸರ್ಕಾರದ ಅನುಮೋದನೆ ಮಾರ್ಗದಲ್ಲಿ ಅವಕಾಶ ನೀಡಲಾಗಿತ್ತು. ಪಿ.ಎಸ್.ಎ.ಆರ್. ಕಾಯಿದೆ  2005ರ ಅಡಿಯಲ್ಲಿ ಈಗಾಗಲೇ ಖಾಸಗಿ ಭದ್ರತಾ ಸಂಸ್ಥೆಗಳು ಪರವಾನಗಿ ಪಡೆಯ ಬೇಕಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಎಫ್.ಐ.ಪಿ.ಬಿ. ಮೂಲಕ ಮತ್ತೊಂದು ಸರ್ಕಾರಿ ಅನುಮೋದನೆಗೆ ಒಳಪಡಿಸುವುದನ್ನು ಈಗ ಶೇ.49ರವರೆಗಿನ ಎಫ್.ಡಿ.ಐ ಜೊತೆಯಲ್ಲೇ ಮಾಡಲಾಗುತ್ತದೆ. ಹೀಗಾಗಿ, ಶೇ. 49 ಮೇಲ್ಪಟ್ಟ ಮತ್ತು ಶೇ.74ರವರೆಗಿನ ಎಫ್.ಡಿ.ಐಗೆ ಸರ್ಕಾರದ ಅನುಮೋದನೆ ಮಾರ್ಗದಲ್ಲಿ ಅನುಮತಿಸಲಾಗುತ್ತದೆ.

  1. ಶಾಖಾ ಕಚೇರಿ, ಸಂಪರ್ಕ ಕಛೇರಿ ಮತ್ತು ಯೋಜನೆಯ ಕಚೇರಿ ಸ್ಥಾಪನೆ

ಅರ್ಜಿದಾರನ ಪ್ರಮುಖ ವ್ಯಾಪಾರ ರಕ್ಷಣೆ, ಟೆಲಿಕಾಂ, ಖಾಸಗಿ ಭದ್ರತೆ ಅಥವಾ ಸಮಾಚಾರ ಮತ್ತು ಪ್ರಸಾರ ಆಗಿದ್ದಲ್ಲಿ ಶಾಖಾ ಕಚೇರಿ, ಸಂಪರ್ಕ ಕಚೇರಿ ಅಥವಾ ಯೋಜನಾ ಕಚೇರಿ ಸ್ಥಾಪನೆ ಅಥವಾ ಭಾರತದಲ್ಲಿ ಇನ್ನಾವುದೇ ವಾಣಿಜ್ಯ ನಡೆಸಲು ಎಫ್.ಐ.ಪಿ.ಬಿ. ಅನುಮೋದನೆ ಅಥವಾ ಪರವಾನಗಿ/ಅನುಮತಿಯನ್ನು ಸಂಬಂಧಿತ ಸಚಿವಾಲಯ/ನಿಯಂತ್ರಕರು ಈಗಾಗಲೇ ನೀಡಿದ್ದಲ್ಲಿ ಭಾರತೀಯ  ರಿಜರ್ವ್ ಬ್ಯಾಂಕ್ ನ ಅನುಮೋದನೆ ಅಗತ್ಯವಿರುವುದಿಲ್ಲ.

  1. ಪಶು ಸಂಗೋಪನೆ

ಎಫ್.ಡಿ.ಐ. ನೀತಿ 2016ರ ಅನ್ವಯ, ಪಶು ಸಂಗೋಪನೆಯಲ್ಲಿ ಮೀನು ಸಾಕಣೆ, ಆಕ್ವಾಕಲ್ಚರ್ ಮತ್ತು ಜೇನುಸಾಕಣೆಯ (ನಾಯಿಗಳ ಸಂತಾನೋತ್ಪತ್ತಿ ಸೇರಿದಂತೆ)ಲ್ಲಿ ಶೇ.100ರಷ್ಟು ಎಫ್.ಡಿ.ಐ.ಗೆ ಸ್ವಯಂ ಚಾಲಿತ ಮಾರ್ಗದಲ್ಲಿ ನಿಯಂತ್ರಿತ ಷರತ್ತುಗಳಡಿ ಅನುಮತಿಸಲಾಗಿದೆ. ನಿಯಂತ್ರಿತ ಷರತ್ತುಗಳಿಗೆ ಅರ್ಹತೆಯು ಅಗತ್ಯವನ್ನು ದೂರಮಾಡಲಾಗಿದೆ.

  1. ಏಕ ಬ್ರಾಂಡ್ ಚಿಲ್ಲರೆ ಮಾರಾಟ

ಅತ್ಯಾಧುನಿಕ ಮತ್ತು ಅತ್ಯುನ್ನತ ತಂತ್ರಜ್ಞಾನ ಉತ್ಪನ್ನಗಳ ವ್ಯಾಪಾರ ಕೈಗೊಳ್ಳುವ  ಏಕ ಬ್ರಾಂಡ್ ಚಿಲ್ಲರೆ ಮಾರಾಟ ಸಂಸ್ಥೆಗಳಿಗೆ ಸರ್ಕಾರದ ಪೂರ್ವಾನುಮತಿಯೊಂದಿಗೆ ಸ್ಥಳೀಯ ಮೂಲದ ನಿಯಮಗಳನ್ನು ಮೂರು ವರ್ಷಗಳವರೆಗೆ ಸಡಿಲಿಸಲಾಗಿದೆ, ಅಂಥ ಸಂಸ್ಥೆಗಳಿಗೆ ವ್ಯಾಪಾರ ಆರಂಭಿಸಿದ ದಿನದಿಂದ ಮೂರು ವರ್ಷಗಳವರೆಗೆ ಸ್ಥಳೀಯ ಮೂಲದ ನಿಯಮಗಳು ಅನ್ವಯವಾಗುವುದಿಲ್ಲ. ಅಂದರೆ ಅತ್ಯಾಧುನಿಕ ಮತ್ತು ಅತ್ಯುನ್ನತ ತಂತ್ರಜ್ಞಾನದ ಉತ್ಪನ್ನಗಳ ಮಾರಾಟದ ಏಕ ಬ್ರಾಂಡ್ ಚಿಲ್ಲರೆ ಮಾರಾಟದ ಮೊದಲ ಮಳಿಗೆ ತೆರೆದಾಗಿನಿಂದ ಮತ್ತು ಎಲ್ಲಿ ಸ್ಥಳೀಯ ಮೂಲ ಸಾಧ್ಯವಿಲ್ಲವೋ ಅಲ್ಲಿ. ತದನಂತರ ಮೂಲದ ನಿಯಮಗಳು ಅನ್ವಯವಾಗುತ್ತವೆ.

ಹಿನ್ನೆಲೆ:

ಕಳೆದ ಎರಡು ವರ್ಷಗಳಲ್ಲಿ, ಸರ್ಕಾರ, ರಕ್ಷಣೆ, ನಿರ್ಮಾಣ ಅಭಿವೃದ್ಧಿ, ವಿಮೆ, ಪಿಂಚಣಿ ವಲಯ, ಪ್ರಸಾರ ವಲಯ, ಟೀ, ಕಾಫಿ, ರಬ್ಬರ್, ಏಲಕ್ಕಿ, ಪಾಮ್ ಎಣ್ಣೆ ಮತ್ತು ಆಲೀವ್ ಎಣ್ಣೆ ಮರ ಬೆಳೆಸುವಿಕೆ, ಏಕ ಬ್ರಾಂಡ್ ವ್ಯಾಪಾರ, ಉತ್ಪಾದನಾ ವಲಯ, ಸೀಮಿತ ಋಣದ ಪಾಲುದಾರಿಕೆ, ನಾಗರಿಕ ವಿಮಾನಯಾನ, ಕ್ರೆಡಿಟ್ ಮಾಹಿತಿ ಕಂಪನಿಗಳು, ಬಾಹ್ಯಾಕಾಶ, ಸ್ಥಾಪನೆ/ಕಾರ್ಯಾಚರಣೆ ಮತ್ತು ಆಸ್ತಿ ಮರು ನಿರ್ಮಾಣ ಸಂಸ್ಥೆಗಳು ಸೇರಿದಂತೆ ಹಲವಾರು ವಲಯದಲ್ಲಿ ಎಫ್.ಡಿ.ಐ. ನೀತಿಯಲ್ಲಿ ಪ್ರಮುಖ ಸುಧಾರಣೆಗಳನ್ನು ತಂದಿದೆ. ಸರ್ಕಾರ ಕೈಗೊಂಡಿರುವ ಈ ಕ್ರಮಗಳಿಂದಾಗಿ ಎಫ್.ಡಿ.ಐ. ಒಳಹರಿವು 2015-16ರ ಆರ್ಥಿಕ ವರ್ಷದಲ್ಲಿ 55.46 ಶತಕೋಟಿ ಅಮೆರಿಕನ್ ಡಾಲರ್ ಆಗಲು ಕಾರಣವಾಗಿದೆ. 2013-14ರ ಅವಧಿಯಲ್ಲಿ ಇದು 36.04 ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು. ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಇದು ಹಿಂದೆಂದಿಗಿಂತ ಹೆಚ್ಚು ಎಫ್.ಡಿ.ಐ. ಹರಿವಾಗಿದೆ. ಆದಾಗ್ಯೂ, ದೇಶಕ್ಕೆ ಇನ್ನೂ ಹೆಚ್ಚಿನ ವಿದೇಶೀ ಬಂಡವಾಳವನ್ನು ಆಕರ್ಷಿಸುವ ಸಾಮರ್ಥ್ಯ ಇದೆ ಎಂಬುದನ್ನು ಮನಗಂಡು, ಎಫ್.ಡಿ.ಐ. ಆಡಳಿತೆಗೆ ಹೆಚ್ಚಿನ ಉದಾರೀಕರಣ ಮತ್ತು ಸರಳೀಕರಣ ಮಾಡಲಾಗಿದೆ.

ಆ ಪ್ರಕಾರವಾಗಿ, ಕೇಂದ್ರ ಸರ್ಕಾರ, ಭಾರತದಲ್ಲಿ ಉದ್ಯೋಗ ಸೃಷ್ಟಿಗೆ

ವಲಯ/ಚಟುವಟಿಕೆ

ಹೊಸ ಮಿತಿ ಮತ್ತು ಮಾರ್ಗ

ಆ ಪ್ರಕಾರವಾಗಿ, ಕೇಂದ್ರ ಸರ್ಕಾರ, ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಮತ್ತು ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಎಫ್.ಡಿ.ಐ. ಆಡಳಿತಕ್ಕೆ 2016ರ ಜೂನ್ 20ರಂದು ಆಮೂಲಾಗ್ರ ಬದಲಾವಣೆ ತಂದಿದೆ. 2015ರ ನವೆಂಬರ್ ನಲ್ಲಿ ಆಮೂಲಾಗ್ರ ಬದಲಾವಣೆ ಪ್ರಕಟಿಸಲಾದ ತರುವಾಯ ಮಾಡಲಾಗಿರುವ ಎರಡನೇ ಅತಿ ದೊಡ್ಡ ಸುಧಾರಣೆ ಇದಾಗಿದೆ. ನೀತಿಯಲ್ಲಿ ಮಾಡಲಾಗಿರುವ ಬದಲಾವಣೆಗಳಲ್ಲಿ ವರ್ಗೀಯ ಮಿತಿಯ ಹೆಚ್ಚಳ, ಸ್ವಯಂಚಾಲಿತ ಮಾರ್ಗದಲ್ಲಿ ಹೆಚ್ಚಿನ ಚಟುವಟಿಕೆ ತರುವುದು, ಮತ್ತು ವಿದೇಶೀ ಹೂಡಿಕೆಗೆ ಇದ್ದ ನಿಬಂಧನೆಗಳನ್ನು ಸಡಿಲಗೊಳಿಸುವುದೂ ಸೇರಿದೆ. ದೇಶದಲ್ಲಿ ಎಫ್.ಡಿ.ಐ.ನಲ್ಲಿನ ನಿಯಂತ್ರಣಗಳನ್ನು ಇನ್ನೂ ಹೆಚ್ಚು ಸರಳೀಕರಿಸುವ ಮತ್ತು ಮೇಕ್ ಇನ್ ಇಂಡಿಯಾಕ್ಕೆ ಭಾರತ ವಿದೇಶೀಯರಿಗೆ ಆಕರ್ಷಕ ತಾಣ ಮಾಡುವ ಉದ್ದೇಶವನ್ನು  ಈ ತಿದ್ದುಪಡಿಗಳು  ಹೊಂದಿವೆ. ಈ ಬದಲಾವಣೆಯೊಂದಿಗೆ ಸಣ್ಣ ನೇತ್ಯಾತ್ಮಕ ಪಟ್ಟಿಯ ಹೊರತಾಗಿ ಬಹುತೇಕ ವಲಯವನ್ನು ಎಫ್.ಡಿ.ಐ.ನ ಸ್ವಯಂಚಾಲಿತ ಮಾರ್ಗಕ್ಕೆ ತರಲಾಗಿದೆ. ಈ ತಿದ್ದುಪಡಿಗಳು ಎಫ್.ಡಿ.ಐ.ಗೆ. ಸಂಬಂಧಿಸಿದಂತೆ ವಿಶ್ವದ ಹೆಚ್ಚು ಮುಕ್ತ ಆರ್ಥಿಕತೆಯ ರಾಷ್ಟ್ರವನ್ನಾಗಿ ಮಾಡಿದೆ.

****

ಮತ್ತು ಉದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿ ಎಫ್.ಡಿ.ಐ. ಆಡಳಿತಕ್ಕೆ 2016ರ ಜೂನ್ 20ರಂದು ಆಮೂಲಾಗ್ರ ಬದಲಾವಣೆ ತಂದಿದೆ. 2015ರ ನವೆಂಬರ್ ನಲ್ಲಿ ಆಮೂಲಾಗ್ರ ಬದಲಾವಣೆ ಪ್ರಕಟಿಸಲಾದ ತರುವಾಯ ಮಾಡಲಾಗಿರುವ ಎರಡನೇ ಅತಿ ದೊಡ್ಡ ಸುಧಾರಣೆ ಇದಾಗಿದೆ. ನೀತಿಯಲ್ಲಿ ಮಾಡಲಾಗಿರುವ ಬದಲಾವಣೆಗಳಲ್ಲಿ ವರ್ಗೀಯ ಮಿತಿಯ ಹೆಚ್ಚಳ, ಸ್ವಯಂಚಾಲಿತ ಮಾರ್ಗದಲ್ಲಿ ಹೆಚ್ಚಿನ ಚಟುವಟಿಕೆ ತರುವುದು, ಮತ್ತು ವಿದೇಶೀ ಹೂಡಿಕೆಗೆ ಇದ್ದ ನಿಬಂಧನೆಗಳನ್ನು ಸಡಿಲಗೊಳಿಸುವುದೂ ಸೇರಿದೆ. ದೇಶದಲ್ಲಿ ಎಫ್.ಡಿ.ಐ.ನಲ್ಲಿನ ನಿಯಂತ್ರಣಗಳನ್ನು ಇನ್ನೂ ಹೆಚ್ಚು ಸರಳೀಕರಿಸುವ ಮತ್ತು ಮೇಕ್ ಇನ್ ಇಂಡಿಯಾಕ್ಕೆ ಭಾರತ ವಿದೇಶೀಯರಿಗೆ ಆಕರ್ಷಕ ತಾಣ ಮಾಡುವ ಉದ್ದೇಶವನ್ನು  ಈ ತಿದ್ದುಪಡಿಗಳು  ಹೊಂದಿವೆ. ಈ ಬದಲಾವಣೆಯೊಂದಿಗೆ ಸಣ್ಣ ನೇತ್ಯಾತ್ಮಕ ಪಟ್ಟಿಯ ಹೊರತಾಗಿ ಬಹುತೇಕ ವಲಯವನ್ನು ಎಫ್.ಡಿ.ಐ.ನ ಸ್ವಯಂಚಾಲಿತ ಮಾರ್ಗಕ್ಕೆ ತರಲಾಗಿದೆ. ಈ ತಿದ್ದುಪಡಿಗಳು ಎಫ್.ಡಿ.ಐ.ಗೆ. ಸಂಬಂಧಿಸಿದಂತೆ ವಿಶ್ವದ ಹೆಚ್ಚು ಮುಕ್ತ ಆರ್ಥಿಕತೆಯ ರಾಷ್ಟ್ರವನ್ನಾಗಿ ಮಾಡಿದೆ.

****