Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು ಹಂತ ಹಂತವಾಗಿ ವಿಸರ್ಜಿಸಲು ಸಂಪುಟದ ಅನುಮೋದಿಸಿದೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವಿದೇಶೀ ಹೂಡಿಕೆ ಉತ್ತೇಜನ ಮಂಡಳಿ (ಎಫ್.ಐ.ಪಿ.ಬಿ.)ಯನ್ನು ಹಂತ ಹಂತವಾಗಿ ವಿಸರ್ಜಿಸಲು ತನ್ನ ಅನುಮೋದನೆ ನೀಡಿದೆ. ಈ ಪ್ರಸ್ತಾವನೆಯು ಎಫ್.ಐ.ಪಿ.ಬಿ.ಯನ್ನು ತೆಗೆದುಹಾಕಲು ಮತ್ತು ಸರ್ಕಾರದ ಅನುಮೋದನೆ ಅಗತ್ಯವಿರುವ ಎಫ್.ಡಿ.ಐ. ಅರ್ಜಿಗಳಿಗೆ ಆಡಳಿತಾತ್ಮಕ ಸಚಿವಾಲಯ/ಇಲಾಖೆಗಳೇ ಪ್ರಕ್ರಿಯೆ ನಡೆಸಲು ಅವಕಾಶ ನೀಡುತ್ತದೆ.

ಇನ್ನು ಮುಂದೆ ಎಫ್.ಡಿ.ಐ. ಅರ್ಜಿಗಳ ಪ್ರಕ್ರಿಯೆ ಮತ್ತು ಆ ನಂತರ ಎಫ್.ಡಿ.ಐ. ನೀತಿ ಮತ್ತು ಫೆಮಾ ಅಡಿ ಸರ್ಕಾರದ ಅನುಮೋದನೆಯನ್ನು ಸಂಬಂಧಿತ ಸಚಿವಾಲಯ/ಇಲಾಖೆಗಳು ವಾಣಿಜ್ಯ ಸಚಿವಾಲಯದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ (ಡಿಐಪಿಪಿ)ಯೊಂದಿಗೆ ಸಮಾಲೋಚನೆ ನಡೆಸುವ ಮೂಲಕ ನಿರ್ವಹಿಸುತ್ತವೆ, ಅಲ್ಲದೆ ಅರ್ಜಿಗಳ ವಿಲೇವಾರಿಗೆ ಮತ್ತು ಸರ್ಕಾರಕ್ಕೆ ಎಫ್.ಡಿ.ಐ. ನೀತಿ ಅಡಿ ನಿರ್ಧಾರಕ್ಕಾಗಿ ಗುಣಮಟ್ಟ ಕಾರ್ಯಾಚರಣೆ ಪ್ರಕ್ರಿಯೆ (ಎಸ್.ಓ.ಪಿ.) ನೀಡುತ್ತದೆ.

ಇದರ ಜೊತೆಗೆ ವಿದೇಶೀ ಹೂಡಿಕೆದಾರರು ಭಾರತ ಆಕರ್ಷಕ ತಾಣ ಎಂದು ಕಂಡುಕೊಂಡಿರುವ ಹಿನ್ನೆಲೆಯಲ್ಲಿ ಮತ್ತು ಹೆಚ್ಚಿನ ಎಫ್.ಡಿ.ಐ. ಹರಿವಿಗೆ ಕಾರಣವಾಗಿದೆ. ಈ ನಿರ್ಧಾರವು ಸುಲಭವಾಗಿ ವಾಣಿಜ್ಯ ನಡೆಸಲು ಮತ್ತು ಕನಿಷ್ಠ ಸಿಬ್ಬಂದಿ ಮತ್ತು ಗರಿಷ್ಠ ಆಡಳಿತ ನೀತಿಯನ್ನೂ ಉತ್ತೇಜಿಸುತ್ತದೆ.

ಹಿನ್ನೆಲೆ

ಎಫ್.ಐ.ಪಿ.ಬಿ. ರದ್ದು ಪ್ರಸ್ತಾಪಕ್ಕೆ 24.5.2017ರಂದು ನಡೆದ ಸಚಿವ ಸಂಪುಟ ಸಭೆ ತನ್ನ ಅನುಮೋದನೆ ನೀಡಿದೆ. ಪ್ರಸ್ತುತ ಹಣಕಾಸು ಸಚಿವಾಲಯದ ವಿವಿಧ ಭಾರತ ಸರ್ಕಾರದ ಕಾರ್ಯದರ್ಶಿಗಳನ್ನೊಳಗೊಂಡ ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿಇಎ)ಲ್ಲಿನ ಎಫ್.ಐ.ಪಿ.ಬಿ. ಎಫ್.ಡಿ.ಐ. ಅರ್ಜಿಗಳನ್ನು ಪರಿಶೀಲಿಸಿ ಶಿಫಾರಸು ಮಾಡುತ್ತಿದೆ. ಸಂಪುಟದ ನಿರ್ಧಾರದ ಬಳಿಕ ಇದನ್ನು ವಲಯಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಸಚಿವಾಲಯಗಳೇ ಸ್ವತಂತ್ರವಾಗಿ ನಿರ್ವಹಿಸುತ್ತವೆ.

*****

AKT/SH