Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಕಸಿತ ಭಾರತ ಯುವ ನಾಯಕರ ಸಂವಾದ 2025 ಕಾರ್ಯಕ್ರಮವು ಯುವಕರಲ್ಲಿ ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಗುರಿ ಹೊಂದಿದೆ: ಪ್ರಧಾನಮಂತ್ರಿ


ವಿಕಸಿತ ಭಾರತ ಯುವ ನಾಯಕರ ಸಂವಾದ 2025 ಯುವಕರನ್ನು ಹೆಚ್ಚು ಹೆಚ್ಚು ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ವಿಕಸಿತ ಭಾರತ ಯುವ ನಾಯಕರ ಸಂವಾದ (ಯಂಗ್ ಲೀಡರ್ಸ್ ಡೈಲಾಗ್) 2025 ಕುರಿತು ಕೇಂದ್ರ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಅವರು ಬರೆದ ಲೇಖನಕ್ಕೆ ಪ್ರತಿಕ್ರಿಯಿಸಿದ ಶ್ರೀ ಮೋದಿ ಅವರು ಹೀಗೆ ಸಂದೇಶ ಬರೆದಿದ್ದಾರೆ;

“ಕೇಂದ್ರ ಸಚಿವರಾದ, ಡಾ. @mansukhmandviya, ಭಾರತದ ಮರುರೂಪಿಸಲಾದ ರಾಷ್ಟ್ರೀಯ ಯುವ ಉತ್ಸವದ ಕುರಿತು ‘ವಿಕ‌ಸಿತ ಭಾರತ ಯುವ ನಾಯಕರ ಸಂವಾದ 2025’ ಎಂದು ಬರೆದಿದ್ದಾರೆ. ಇದು ಯುವಕರನ್ನು ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ… ಓದಿ!”

 

 

*****