ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಕಲಾಂಗತೆ ಕ್ಷೇತ್ರದಲ್ಲಿನ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ನವೆಂಬರ್ 22ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅಂಕಿತ ಹಾಕಲಾಗಿತ್ತು.
ಪ್ರಯೋಜನಗಳು:
ಈ ತಿಳಿವಳಿಕೆ ಒಪ್ಪಂದವು ವಿಕಲಾಂಗತೆಯ ಕ್ಷೇತ್ರದಲ್ಲಿ ಜಂಟಿ ಉಪಕ್ರಮಗಳ ಮೂಲಕ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಹಕಾರವನ್ನು ಉತ್ತೇಜಿಸಲಿದೆ. ಇದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯ ವರ್ಧಿಸಲಿದೆ. ಜೊತೆಗೆ ಈ ತಿಳಿವಳಿಕೆ ಒಪ್ಪಂದವು ಎರಡೂ ದೇಶಗಳಲ್ಲಿನ ವಿಕಲಾಂಗತೆ ಇರುವವವರ ಅದರಲ್ಲೂ ಬೌದ್ಧಿಕ ವಿಕಲಾಂಗತೆ ಮತ್ತು ಮಾನಸಿಕ ರೋಗ ಇರುವ ವ್ಯಕ್ತಿಗಳ ಪುನರ್ವಸತಿ ಸುಧಾರಣೆಗೂ ಅವಕಾಶ ಕಲ್ಪಿಸಲಿದೆ. ಎರಡೂ ದೇಶಗಳು ಅನುಷ್ಠಾನಕ್ಕಾಗಿ ಪರಸ್ಪರ ಸಮ್ಮತಿಸುವ ವಿಕಲಾಂಗತೆ ವಲಯದಲ್ಲಿನ ನಿರ್ದಿಷ್ಟ ಪ್ರಸ್ತಾವಗಳನ್ನು ಕೈಗೊಳ್ಳಲಿವೆ.
****