ಡೀಸೆಲ್‍ನಿಂದ ವಿದ್ಯುತ್‍ಗೆ ಪರಿವರ್ತಿತ ಮೊಟ್ಟಮೊದಲ ಲೋಕೋಮೋಟಿವ್‍ಗೆ ಚಾಲನೆ: ಗುರು ರವಿದಾಸ್ ಜನ್ಮಸ್ಥಳ ಅಭಿವೃದ್ಧಿ ಯೋಜನೆಗೆ ಶಿಲಾನ್ಯಾಸ: “ಸರ್ಕಾರವು ಭ್ರಷ್ಟರನ್ನು ಶಿಕ್ಷಿಸುತ್ತಿದೆ, ಪ್ರಾಮಾಣಿಕರಿಗೆ ಬಹುಮಾನ ನೀಡುತ್ತಿದೆ,’: ಪ್ರಧಾನ ಮಂತ್ರಿ ಹೇಳಿಕೆ
ಪ್ರಧಾನ ಮಂತ್ರಿ ಮಾನ್ಯ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಿದ್ದರು. ರವಿದಾಸರ ಜಯಂತಿ ಆಚರಣೆ ಪ್ರಯುಕ್ತ ಗುರು ರವಿದಾಸ ಜನ್ಮಸ್ಥಳ ಅಭಿವೃದ್ಧಿ ಯೋಜನೆಗೆ ಶಿಲಾನ್ಯಾಸ ಮಾಡಿದರು.
ವಾರಾಣಸಿಯ ಡೀಸೆಲ್ ಲೋಕೋಮೋಟಿವ್ ವಕ್ರ್ಸ್‍ನಲ್ಲಿ ಡೀಸೆಲ್‍ನಿಂದ ವಿದ್ಯುತ್‍ಗೆ ಪರಿವರ್ತಿತ ಮೊಟ್ಟಮೊದಲ ಲೋಕೋಮೋಟಿವ್‍ಗೆ ಹಸಿರು ನಿಶಾನೆ ತೋರಿದರು.
ಭಾರತೀತ ರೈಲ್ವೆಯ ಶೇ. 100ರಷ್ಟು ವಿದ್ಯುದೀಕರಣ ಗುರಿಗೆ ಅನುಗುಣವಾಗಿ ವಾರಾಣಸಿಯ ಡೀಸೆಲ್ ಲೋಕೋಮೋಟಿವ್ ವಕ್ರ್ಸ್ ಡೀಸೆಲ್ ಲೋಕೋಮೋಟಿವ್‍ನಿಂದ ವಿದ್ಯುತ್ ಲೋಕೋಮೋಟಿವ್‍ಗೆ ಪರಿವರ್ತಿತ ನೂತನ ಮಾದರಿ(ಪ್ರೊಟೋಟೈಪ್)ಯನ್ನು ಅಭಿವೃದ್ಧಿ ಪಡಿಸಿದೆ. ಕಡ್ಡಾಯ ಪರೀಕ್ಷಾರ್ಥ ಸಂಚಾರದ ಬಳಿಕ ಪ್ರಧಾನ ಮಂತ್ರಿ ಅವರು ಲೋಕೋಮೋಟಿವ್‍ನ್ನು ಪರಿಶೀಲಿಸಿದರು ಹಾಗೂ ಹಸಿರು ನಿಶಾನೆ ತೋರಿಸಿದರು. ಭಾರತೀಯ ರೈಲ್ವೆಯು ಅರ್ಧ ಜೀವಿತಾವಧಿ ಮುಗಿಸಿದ ಎಲ್ಲ ಡೀಸೆಲ್ ಲೋಕೋಮೋಟಿವ್‍ಗಳನ್ನು ವಿದ್ಯುತ್ ಲೋಕೋಮೋಟಿವ್‍ಗಳಾಗಿ ಪರಿವರ್ತಿಸಿ, ಜೀವಿತಾವಧಿ ಪೂರೈಸುವವರೆಗೆ ಪ್ರಯಾಣಕ್ಕೆ ಬಳಸಲು ನಿರ್ಧರಿಸಿದೆ. ಈ ಯೋಜನೆಯು ಇಂಧನ ವೆಚ್ಚ ಉಳಿತಾಯ ಹಾಗೂ ಇಂಗಾಲ ಹೊರಚೆಲ್ಲುವಿಕೆಯನ್ನು ಕಡಿತಗೊಳಿಸುವಿಕೆಯೆಡೆಗಿನ ಒಂದು ಹೆಜ್ಜೆ. ಡೀಸೆಲ್ ಲೋಕೋಮೋಟಿವ್ ವಕ್ರ್ಸ್ ಎರಡು ಡಬ್ಲ್ಯುಡಿಜಿ3ಎ ಡೀಸೆಲ್ ಎಂಜಿನ್‍ಗಳನ್ನು ಹತ್ತು ಸಾವಿರ ಎಚ್‍ಪಿ ಸಾಮಥ್ರ್ಯದ ಎರಡು ಎಲೆಕ್ಟ್ರಿಕ್ ಡಬ್ಲ್ಯುಎಜಿಸಿ3 ಲೋಕೋಮೋಟಿವ್ ಆಗಿ ಪರಿವರ್ತಿಸಲು ಕೇವಲ 69 ದಿನ ತೆಗೆದು ಕೊಂಡಿದೆ. ಇದು ಸಂಪೂರ್ಣ “ಮೇಕ್ ಇನ್ ಇಂಡಿಯಾ’ ಉಪಕ್ರಮವಾಗಿದ್ದು, ಎಂಜಿನ್ ಪರಿವರ್ತನೆಯು ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಅನ್ವೇಷಣೆಯಾಗಿದೆ.
ಸಂತ ರವಿದಾಸ್ ಜಯಂತಿಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಗುರು ರವಿದಾಸ್‍ಗೆ ಗೌರವ ಸಮರ್ಪಿಸಿದರು. ಸಂತ ಗೋವರ್ಧನಪುರದ ಶ್ರೀ ಗುರು ಜನ್ಮಸ್ಥಳ ದೇವಾಲಯದಲ್ಲಿ ಗುರು ರವಿದಾಸ್ ಜನ್ಮಸ್ಥಳ ಅಭಿವೃದ್ಧಿ ಯೋಜನೆಗೆ ಶಿಲಾನ್ಯಾಸ ಮಾಡಿದರು.
ಈ ಸಂದರ್ಭದಲ್ಲಿ ಮಾತನ್ನಾಡಿದ ಪ್ರಧಾನ ಮಂತ್ರಿ ಅವರು,” ಸರ್ಕಾರ ಭ್ರಷ್ಟರನ್ನು ಶಿಕ್ಷಿಸುತ್ತಿದೆ ಮತ್ತು ಪ್ರಾಮಾಣಿಕರನ್ನು ಬಹುಮಾನಿಸುತ್ತಿದೆ’ ಎಂದರು. ಕವಿಗಳ ವಾಣಿ ಪ್ರತಿದಿನ ನಮ್ಮಲ್ಲಿ ಸ್ಫೂರ್ತಿ ತುಂಬುತ್ತದೆ ಎಂದರು. ಜಾತಿ ಆಧರಿತ ತಾರತಮ್ಯ ಇದ್ದಲ್ಲಿ ಸಮಾಜದಲ್ಲಿ ಸಮಾನತೆ ಇರುವುದಿಲ್ಲ ಹಾಗೂ ಒಬ್ಬರು ಇನ್ನೊಬ್ಬರೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು. ಎಲ್ಲರೂ ಸಂತ ರವಿದಾಸರು ತೋರಿದ ಪಥದಲ್ಲಿ ನಡೆಯಬೇಕು ಹಾಗೂ ಆ ಮಾರ್ಗದ ಪಾಲನೆಯಿಂದ ಭ್ರಷ್ಟಾಚಾರ ನಿರ್ಮೂಲವಾಗುತ್ತದೆ ಎಂದು ಒತ್ತಿ ಹೇಳಿದರು. ಯೋಜನೆಯ ಭಾಗವಾಗಿ ಸಂತರ ಪ್ರತಿಮೆ ಇರುವ ಭಾರಿ ಉದ್ಯಾನವನ್ನು ನಿರ್ಮಿಸಲು ಉದ್ದೇಶಿಸಿದ್ದು, ಯಾತ್ರಿಗಳಿಗೆ ಸಕಲ ಸೌಲಭ್ಯ ಒಂದೇ ಕಡೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಹೇಳಿದರು.
In Varanasi, flagged off the first ever Diesel to Electric Converted Locomotive.
— Narendra Modi (@narendramodi) February 19, 2019
I congratulate the entire team that has worked on this historic accomplishment, which will enhance the efforts of the Railways towards electrification. pic.twitter.com/0VmNI6BReF