ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸ್ವತಂತ್ರ ಸಭಾಗರ್ ನಲ್ಲಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದರು. ಅವರು ಕಾಶಿ ಸಂಸದ್ ಪ್ರತಿಯೋಗಿತಾ ಕಿರುಪುಸ್ತಕ ಮತ್ತು ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು . ಪ್ರಧಾನಮಂತ್ರಿಯವರು ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತಾ, ಕಾಶಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಮತ್ತು ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು ಮತ್ತು ವಾರಣಾಸಿಯ ಸಂಸ್ಕೃತ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಸಮವಸ್ತ್ರ, ಸಂಗೀತ ಉಪಕರಣಗಳು ಮತ್ತು ಮೆರಿಟ್ ವಿದ್ಯಾರ್ಥಿವೇತನವನ್ನು ವಿತರಿಸಿದರು. ಅವರು ಕಾಶಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಗ್ಯಾಲರಿಗೆ ಭೇಟಿ ನೀಡಿದರು ಮತ್ತು “ಸನ್ವರ್ತಿ ಕಾಶಿ” ವಿಷಯದ ಕುರಿತು ತಮ್ಮ ತಮ್ಮ ಸ್ವೀಕರಿಸಲ್ಪಟ್ಟ ಛಾಯಾಚಿತ್ರಗಳ ಜೊತೆ ಇದ್ದ ಭಾಗವಹಿಸುವವರೊಂದಿಗೆ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಯುವ ವಿದ್ವಾಂಸರಲ್ಲಿ ಉಪಸ್ಥಿತರಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು ಮತ್ತು ಜ್ಞಾನದ ಗಂಗೆಯಲ್ಲಿ ಮೀಯುತ್ತಿರುವ ಭಾವನೆ ಮೂಡುತ್ತಿದೆ ಎಂದು ಹೇಳಿದರು. ಪುರಾತನ ನಗರದ ಅಸ್ಮಿತೆಯನ್ನು ಬಲಪಡಿಸುವ ಯುವ ಪೀಳಿಗೆಯ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಭಾರತದ ಯುವಕರು ಅಮೃತ ಕಾಲದಲ್ಲಿ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬುದು ಹೆಮ್ಮೆ ಮತ್ತು ತೃಪ್ತಿಯ ಸಂಗತಿ ಎಂದರು. “ಕಾಶಿಯು ಶಾಶ್ವತ ಜ್ಞಾನದ ರಾಜಧಾನಿ” ಎಂದು ಹೇಳಿದ ಪ್ರಧಾನಮಂತ್ರಿಯವರು, ಕಾಶಿಯ ಸಾಮರ್ಥ್ಯಗಳು ಮತ್ತು ಸ್ವರೂಪವು ತನ್ನ ವೈಭವವನ್ನು ಮರಳಿ ಪಡೆಯುತ್ತಿರುವುದು ಇಡೀ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಅವರು ಇಂದು ಕಷಿ ಸಂಸದ ಜ್ಞಾನ ಪ್ರತಿಯೋಗಿತಾ, ಕಷಿ ಸಂಸದ್ ಛಾಯಾಗ್ರಹಣ ಪ್ರತಿಯೋಗಿತಾ ಮತ್ತು ಕಷಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ವಿಜೇತರಿಗೆ ಪ್ರಶಸ್ತಿ ನೀಡಿ ವಿಜೇತರನ್ನು ಅಭಿನಂದಿಸಿದರು. ವಿಜೇತರಾಗಲು ಸಾಧ್ಯವಾಗದವರಿಗೆ ಅವರು ಪ್ರೋತ್ಸಾಹಕ ನುಡಿಗಳನ್ನಾಡುತ್ತಾ “ಯಾವುದೇ ಭಾಗವಹಿಸುವವರು ಸೋಲಿಸಲ್ಪಟ್ಟಿಲ್ಲ ಅಥವಾ ಹಿಂದುಳಿದಿಲ್ಲ, ಬದಲಿಗೆ, ಪ್ರತಿಯೊಬ್ಬರೂ ಈ ಅನುಭವದಿಂದ ಕಲಿತಿದ್ದಾರೆ”, ಎಲ್ಲಾ ಭಾಗವಹಿಸುವವರು ಪ್ರಶಂಸೆಗೆ ಅರ್ಹರು ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಾಶಿಯ ಸಂಸದರಾಗಿ ತಮ್ಮ ದೂರದೃಷ್ಟಿಯನ್ನು ಮುಂದಕ್ಕೆ ಕೊಂಡೊಯ್ದ ಶ್ರೀ ಕಾಶಿ ವಿಶ್ವನಾಥ ಮಂದಿರ ನ್ಯಾಸ್, ಕಾಶಿ ವಿದ್ವತ್ ಪರಿಷತ್ ಮತ್ತು ವಿದ್ವಾಂಸರಿಗೆ ಪ್ರಧಾನಮಂತ್ರಿಯವರು ಧನ್ಯವಾದಗಳನ್ನು ಅರ್ಪಿಸಿದರು. ಇಂದು ಬಿಡುಗಡೆಯಾದ ಕಾಫಿ ಟೇಬಲ್ ಪುಸ್ತಕಗಳು ಕಳೆದ 10 ವರ್ಷಗಳಲ್ಲಿ ಕಾಶಿಯ ಪುನಶ್ಚೇತನದ ಕಥೆಯನ್ನು ಒಳಗೊಂಡಿವೆ ಎಂದು ಅವರು ಹೇಳಿದರು .
ಕಳೆದ 10 ವರ್ಷಗಳಲ್ಲಿ ಕಾಶಿಯ ಪ್ರಗತಿಯನ್ನು ಗುರುತಿಸಿದ ಪ್ರಧಾನಮಂತ್ರಿಯವರು, ನಾವೆಲ್ಲರೂ ಭಗವಾನ್ ಮಹಾದೇವನ ಸಂಕಲ್ಪದ ಸಾಧನಗಳು ಎಂದು ಹೇಳಿದರು. ಮಹಾದೇವರ ಆಶೀರ್ವಾದದಿಂದ ಕಳೆದ 10 ವರ್ಷಗಳಿಂದ ಕಾಶಿಯಲ್ಲಿ ‘ವಿಕಾಸದ ಢಮರುಗ’ ಪ್ರತಿಧ್ವನಿಸುತ್ತಿದೆ ಎಂದರು. ಕೋಟ್ಯಂತರ ರೂಪಾಯಿಗಳ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಶಿವರಾತ್ರಿ ಮತ್ತು ರಂಗಭಾರಿ ಏಕಾದಶಿಯ ಮೊದಲು ಕಾಶಿ ಇಂದು ಅಭಿವೃದ್ಧಿಯ ಹಬ್ಬವನ್ನು ಆಚರಿಸುತ್ತಿದೆ ಎಂದು ಹೇಳಿದರು. ‘ವಿಕಾಸ್ ಕಿ ಗಂಗಾ’ ಮೂಲಕ ಎಲ್ಲರೂ ಪರಿವರ್ತನೆ ಕಂಡಿದ್ದಾರೆ ಎಂದರು.
“ಕಾಶಿ ಕೇವಲ ನಂಬಿಕೆಯ ಕೇಂದ್ರವಲ್ಲ ಜೊತೆಗೆ ಇದು ಭಾರತದ ಶಾಶ್ವತ ಪ್ರಜ್ಞೆಯ ಚೈತನ್ಯದ ಕೇಂದ್ರವಾಗಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ವಿಶ್ವದಲ್ಲಿ ಭಾರತದ ಪ್ರಾಚೀನ ಪ್ರತಿಷ್ಠೆ ಕೇವಲ ಆರ್ಥಿಕ ಶ್ರೀಮಂತಿಕೆಯನ್ನು ಆಧರಿಸಿಲ್ಲ ಜೊತೆಗೆ ಅದರ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಶ್ರೀಮಂತಿಕೆಯು ಅದರ ಜೊತೆಗೆ ಇದೆ ಎಂದು ಅವರು ಹೇಳಿದರು. ಕಾಶಿ ಮತ್ತು ವಿಶ್ವನಾಥ ಧಾಮದಂತಹ ‘ತೀರ್ಥ ಸ್ಥಳಗಳು’ ರಾಷ್ಟ್ರದ ಅಭಿವೃದ್ಧಿಯ ‘ಯಜ್ಞಶಾಲೆ’ ಎಂದು ಅವರು ಹೇಳಿದರು, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸ್ಥಳಗಳೊಂದಿಗೆ ಭಾರತದ ಜ್ಞಾನ ಪರಂಪರೆಯ ಸಂಪರ್ಕವನ್ನು ಎತ್ತಿ ತೋರಿಸಿದರು. ಕಾಶಿಯ ಉದಾಹರಣೆಯನ್ನು ನೀಡಿ ತಮ್ಮ ಅಂಶವನ್ನು ವಿವರಿಸುತ್ತಾ ಪ್ರಧಾನಮಂತ್ರಿಯವರು, ಕಾಶಿಯು ಶಿವನ ಭೂಮಿಯಾಗಿರುವುದರ ಜೊತೆಗೆ ಬುದ್ಧನ ಬೋಧನೆಗಳ ಸ್ಥಳವೂ ಆಗಿದೆ ಎಂದು ಹೇಳಿದರು; ಜೈನ ತೀರ್ಥಂಕರರ ಜನ್ಮಸ್ಥಳ ಹಾಗೂ ಆದಿ ಶಂಕರಾಚಾರ್ಯರಿಗೆ ಜ್ಞಾನೋದಯವಾದ ಸ್ಥಳ. ದೇಶ ವಿದೇಶಗಳಿಂದ ಜನರು ಕಾಶಿಗೆ ಬರುವುದರಿಂದ ಕಾಶಿಯ ವಿಶ್ವಮಾನ್ಯ ಆಕರ್ಷಣೆಯನ್ನು ಅವರು ಎತ್ತಿ ತೋರಿಸಿದರು. “ಅಂತಹ ವೈವಿಧ್ಯತೆಯ ಸ್ಥಳದಲ್ಲಿ ಹೊಸ ಆದರ್ಶಗಳು ಹುಟ್ಟುತ್ತವೆ. ಹೊಸ ಆಲೋಚನೆಗಳು ಪ್ರಗತಿಯ ಸಾಧ್ಯತೆಯನ್ನು ಪೋಷಿಸುತ್ತವೆ.”, ಪ್ರಧಾನಮಂತ್ರಿಯವರು ಹೇಳಿದರು.
“ವಿಶ್ವನಾಥ ಧಾಮವು ನಿರ್ಣಾಯಕ ನಿರ್ದೇಶನವನ್ನು ನೀಡುತ್ತದೆ ಮತ್ತು ಭಾರತವನ್ನು ಉಜ್ವಲ ಭವಿಷ್ಯಕ್ಕೆ ಕೊಂಡೊಯ್ಯುತ್ತದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು, ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾಡಿದ ಭಾಷಣವನ್ನು ನೆನಪಿಸಿಕೊಂಡು ಇಂದು ಆ ನಂಬಿಕೆಯನ್ನು ಪುನರುಚ್ಚರಿಸಿದರು. ವಿಶ್ವನಾಥ ಧಾಮ್ ಕಾರಿಡಾರ್ ಇಂದು ವಿದ್ವತ್ಪೂರ್ಣ ಘೋಷಣೆಗೆ ಸಾಕ್ಷಿಯಾಗುತ್ತಿದೆ ಮತ್ತು ನ್ಯಾಯದ ಧರ್ಮಗ್ರಂಥಗಳ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. “ಕಾಶಿಯು ಶಾಸ್ತ್ರೀಯ ಸ್ವರಗಳನ್ನು ಮತ್ತು ಧರ್ಮಗ್ರಂಥದ ಸಂಭಾಷಣೆಗಳನ್ನು ಆಲಿಸಬಲ್ಲದು”, ಇದು ವಿಚಾರಗಳ ವಿನಿಮಯವನ್ನು ಉತ್ತೇಜಿಸುತ್ತದೆ, ಪ್ರಾಚೀನ ಜ್ಞಾನವನ್ನು ಸಂರಕ್ಷಿಸುತ್ತದೆ ಮತ್ತು ಹೊಸ ಸಿದ್ಧಾಂತಗಳನ್ನು ರಚಿಸುತ್ತದೆ ಎಂದು ಒತ್ತಿ ಹೇಳಿದರು. ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತಾ ಮತ್ತು ಕಾಶಿ ಸಂಸದ್ ಜ್ಞಾನ ಪ್ರತಿಯೋಗಿತಾ ಇಂತಹ ಪ್ರಯತ್ನಗಳ ಒಂದು ಭಾಗವಾಗಿದ್ದು, ಸಂಸ್ಕೃತ ಕಲಿಯಲು ಬಯಸುವ ಸಾವಿರಾರು ಯುವಕರಿಗೆ ವಿದ್ಯಾರ್ಥಿ ವೇತನದ ಜೊತೆಗೆ ಪುಸ್ತಕ, ಬಟ್ಟೆ ಮತ್ತು ಇತರ ಅಗತ್ಯ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು. ಶಿಕ್ಷಕರಿಗೂ ನೆರವು ನೀಡಲಾಗುತ್ತಿದೆ. “ವಿಶ್ವನಾಥ ಧಾಮವು ಕಾಶಿ ತಮಿಳು ಸಂಗಮಮ್ ಮತ್ತು ಗಂಗಾ ಪುಷ್ಕರುಲು ಮಹೋತ್ಸವದಂತಹ ‘ಏಕ ಭಾರತ, ಶ್ರೇಷ್ಠ ಭಾರತ’ ಅಭಿಯಾನದ ಭಾಗವಾಗಿದೆ” ಎಂದು ಶ್ರೀ ಮೋದಿ ಹೇಳಿದರು, ಈ ನಂಬಿಕೆಯ ಕೇಂದ್ರವು ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಒಳಗೊಳ್ಳುವಿಕೆಯ ಸಂಕಲ್ಪವನ್ನು ಬಲಪಡಿಸುತ್ತಿದೆ ಎಂದು ಹೇಳಿದರು. ಆಧುನಿಕ ವಿಜ್ಞಾನದ ದೃಷ್ಟಿಯಿಂದ ಪ್ರಾಚೀನ ಜ್ಞಾನದ ಬಗ್ಗೆ ಕಾಶಿಯ ವಿದ್ವಾಂಸರು ಮತ್ತು ವಿದ್ವತ್ ಪರಿಷತ್ತಿನಿಂದಲೂ ಹೊಸ ಸಂಶೋಧನೆಗಳು ನಡೆಯುತ್ತಿವೆ ಎಂದು ಶ್ರೀ ಮೋದಿ ತಿಳಿಸಿದರು. ನಗರದ ಹಲವೆಡೆ ದೇವಸ್ಥಾನದ ಮಂಡಳಿಯ ವತಿಯಿಂದ ಉಚಿತ ಊಟದ ವ್ಯವಸ್ಥೆ ಮಾಡುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದರು. “ಹೊಸ ಕಾಶಿಯು ಹೊಸ ಭಾರತಕ್ಕೆ ಸ್ಫೂರ್ತಿಯಾಗಿ ಹೊರಹೊಮ್ಮಿದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು, ನಂಬಿಕೆಯ ಕೇಂದ್ರವು ಸಾಮಾಜಿಕ ಮತ್ತು ರಾಷ್ಟ್ರೀಯ ನಿರ್ಣಯಗಳಿಗೆ ಹೇಗೆ ಶಕ್ತಿಯ ಕೇಂದ್ರವಾಗಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ. ಇಲ್ಲಿ ಕಲಿತ ಯುವಕರು ವಿಶ್ವದಾದ್ಯಂತ ಭಾರತೀಯ ಜ್ಞಾನ, ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರತಿನಿಧಿಗಳಾಗುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿಯವರು, “ನಮ್ಮ ಜ್ಞಾನ, ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಭಾಷೆಗಳಲ್ಲಿ ಸಂಸ್ಕೃತವು ಅತ್ಯಂತ ಪ್ರಮುಖವಾಗಿದೆ. ಭಾರತವು ಒಂದು ಕಲ್ಪನೆ, ಮತ್ತು ಸಂಸ್ಕೃತವು ಅದರ ಮುಖ್ಯ ಅಭಿವ್ಯಕ್ತಿಯಾಗಿದೆ. ಭಾರತವು ಒಂದು ಪ್ರಯಾಣ, ಸಂಸ್ಕೃತವು ಅದರ ಇತಿಹಾಸದ ಮುಖ್ಯ ಅಧ್ಯಾಯವಾಗಿದೆ. ಭಾರತವು ವಿವಿಧತೆಯಲ್ಲಿ ಏಕತೆಯ ನಾಡು, ಸಂಸ್ಕೃತವು ಅದರ ಮೂಲವಾಗಿದೆ. ಖಗೋಳಶಾಸ್ತ್ರ, ಗಣಿತ, ವೈದ್ಯಕೀಯ, ಸಾಹಿತ್ಯ, ಸಂಗೀತ ಮತ್ತು ಕಲೆಗಳಲ್ಲಿ ಸಂಸ್ಕೃತವು ಸಂಶೋಧನೆಯ ಮುಖ್ಯ ಭಾಷೆಯಾಗಿದ್ದ ಕಾಲವನ್ನು ಪ್ರಧಾನಮಂತ್ರಿಯವರು ನೆನೆದರು . ಇವುಗಳ ಮೂಲಕ ಭಾರತ ತನ್ನ ಅಸ್ಮಿತೆಯನ್ನು ಪಡೆದುಕೊಂಡಿದೆ ಎಂದರು. ಕಾಶಿ ಮತ್ತು ಕಂಚಿಯಲ್ಲಿ ವೇದಗಳ ಪಠಣವೇ ‘ಏಕ ಭಾರತ ಶ್ರೇಷ್ಠ ಭಾರತ’ದ ಧ್ವನಿಯಾಗಿವೆ ಎಂದರು.
ಪ್ರಧಾನಮಂತ್ರಿಯವರು, “ಇಂದು ಕಾಶಿಯನ್ನು ಪರಂಪರೆ ಮತ್ತು ಅಭಿವೃದ್ಧಿಯ ಮಾದರಿಯಾಗಿ ನೋಡಲಾಗುತ್ತಿದೆ. ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕತೆಯ ಸುತ್ತ ಆಧುನಿಕತೆಯು ಹೇಗೆ ವಿಸ್ತರಿಸುತ್ತದೆ ಎಂಬುದನ್ನು ಇಂದು ಜಗತ್ತು ನೋಡುತ್ತಿದೆ. ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಬಾಲರಾಮರ ಪ್ರಾಣ ಪ್ರತಿಷ್ಠೆಯ ನಂತರ ಅಯೋಧ್ಯೆಯು ಕಾಶಿಯಂತೆಯೇ ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು. ಕುಶಿನಗರದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನ ಮೋದಿಯವರು ಪ್ರಸ್ತಾಪಿಸುತ್ತಾ ದೇಶದಲ್ಲಿ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಆಧುನಿಕ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಮುಂದಿನ 5 ವರ್ಷಗಳಲ್ಲಿ, ದೇಶವು ಅಭಿವೃದ್ಧಿಗೆ ಹೊಸ ವೇಗವನ್ನು ನೀಡುತ್ತದೆ ಮತ್ತು ಯಶಸ್ಸಿನ ಹೊಸ ಮಾದರಿಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. “ಇದು ಮೋದಿಯ ಗ್ಯಾರಂಟಿ, ಮತ್ತು ಮೋದಿಯ ಗ್ಯಾರಂಟಿ ಎಂದರೆ ಗ್ಯಾರಂಟಿ ಈಡೇರಿಸುವ ಭರವಸೆ. ಮತದಾನದ ಮೂಲಕ ಆಯ್ಕೆ ಮಾಡಲಾದ ಪ್ರದರ್ಶನದ ಅತ್ಯುತ್ತಮ ಛಾಯಾಚಿತ್ರಗಳನ್ನು ಪ್ರವಾಸಿಗರಿಗೆ ಪೋಸ್ಟ್ಕಾರ್ಡ್ ಗಳನ್ನಾಗಿ ಬಳಸಬೇಕೆಂದು ಪ್ರಧಾನಮಂತ್ರಿಯವರು ಕೇಳಿದರು. ಸ್ಕೆಚಿಂಗ್ ಸ್ಪರ್ಧೆ ಮತ್ತು ಅತ್ಯುತ್ತಮ ರೇಖಾಚಿತ್ರಗಳನ್ನು ಪೋಸ್ಟ್ಕಾರ್ಡ್ ಗಳನ್ನಾಗಿ ಮಾಡಲು ಅವರು ಸಲಹೆ ನೀಡಿದರು. ಕಾಶಿಯ ರಾಯಭಾರಿಗಳು ಮತ್ತು ನಿರೂಪಣಾಕರರನ್ನು ರೂಪಿಸಲು ಗೈಡ್ ( ಪ್ರವಾಸಿ ಮಾರ್ಗದರ್ಶಕ) ಸ್ಪರ್ಧೆಗೆ ಅವರು ತಮ್ಮ ಸಲಹೆಯನ್ನು ಪುನರುಚ್ಚರಿಸಿದರು. ಕಾಶಿಯ ಜನರೇ ಅದರ ದೊಡ್ಡ ಶಕ್ತಿ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಪ್ರತಿಯೊಬ್ಬ ಕಾಶಿ ನಿವಾಸಿಗೆ ಒಬ್ಬ ಸೇವಕ ಮತ್ತು ಸ್ನೇಹಿತನಾಗಿ ನೆರವಾಗುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು.
ಈ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಉತ್ತರ ಪ್ರದೇಶ ಸರ್ಕಾರದ ಸಚಿವರು ಉಪಸ್ಥಿತರಿದ್ದರು.
***
युवा शक्ति विकसित भारत का आधार है। वाराणसी में काशी सांसद संस्कृत प्रतियोगिता के पुरस्कार वितरण समारोह को संबोधित कर रहा हूं। https://t.co/uNzFCCN3pv
— Narendra Modi (@narendramodi) February 23, 2024
काशी केवल हमारी आस्था का तीर्थ ही नहीं है, ये भारत की शाश्वत चेतना का जाग्रत केंद्र है: PM @narendramodi pic.twitter.com/BBhsSLIn7E
— PMO India (@PMOIndia) February 23, 2024
भारत ने जितने भी नए विचार दिये, नए विज्ञान दिये, उनका संबंध किसी न किसी सांस्कृतिक केंद्र से है।
— PMO India (@PMOIndia) February 23, 2024
काशी का उदाहरण हमारे सामने है: PM @narendramodi pic.twitter.com/VBxz1Foyzv
हमारे ज्ञान, विज्ञान और आध्यात्म के उत्थान में जिन भाषाओं का सबसे बड़ा योगदान रहा है, संस्कृत उनमें सबसे प्रमुख है: PM @narendramodi pic.twitter.com/QmQyvfqiwF
— PMO India (@PMOIndia) February 23, 2024
आज काशी को विरासत और विकास के एक मॉडल के रूप में देखा जा रहा है: PM @narendramodi pic.twitter.com/EOCCDfZREC
— PMO India (@PMOIndia) February 23, 2024