Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಗೀಶ್ ಶಾಸ್ತ್ರೀ ಎಂದು ಜನಜನಿತರಾಗಿದ್ದ ಸಂಸ್ಕೃತ ವೈಯ್ಯಾಕರಣಿ, ಪ್ರೊ. ಭಗೀರಥ್ ಪ್ರಸಾದ್ ತ್ರಿಪಾಠಿ ನಿಧನಕ್ಕೆ ಪ್ರಧಾನ ಮಂತ್ರಿ ಶೋಕ


ವಾಗೀಶ್ ಶಾಸ್ತ್ರೀ ಎಂದು ಜನಜನಿತರಾಗಿದ್ದ ಸಂಸ್ಕೃತ ವೈಯ್ಯಾಕರಣಿ, ಪ್ರೊ. ಭಗೀರಥ್ ಪ್ರಸಾದ್ ತ್ರಿಪಾಠಿ ನಿಧನಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಟ್ವೀಟೊಂದರಲ್ಲಿ ಪ್ರಧಾನ ಮಂತ್ರಿ ಅವರು;
“ಪ್ರೊ. ಭಗೀರಥ ಪ್ರಸಾದ್ ತ್ರಿಪಾಠಿ “ವಾಗೀಶ್ ಶಾಸ್ತ್ರಿ” ಅವರು ಸಂಸ್ಕೃತವನ್ನು ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಬಳಸಿ ಯುವಜನತೆಯಲ್ಲಿ ಜನಪ್ರಿಯಗೊಳಿಸುವುದರಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅವರು ಬಹಳ ದೊಡ್ಡ ಜ್ಞಾನಿಯಾಗಿದ್ದರು ಮತ್ತು ವಿಸ್ತಾರವಾದ ಓದಿನ ವ್ಯಾಪ್ತಿ ಅವರದಾಗಿತ್ತು.  ಅವರ ನಿಧನ ನೋವು ತಂದಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು, ಓಂ ಶಾಂತಿ”. ಎಂದು ಹೇಳಿದ್ದಾರೆ.