ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟ – GAVI ಗೆ ಭಾರತ 15 ಮಿಲಿಯನ್ ಅಮೆರಿಕನ್ ಡಾಲರ್ ವಾಗ್ದಾನ ನೀಡಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಯೋಜಿಸಿದ್ದ ವರ್ಚುವಲ್ ಗ್ಲೋಬಲ್ ಲಸಿಕೆ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಶೃಂಗಸಭೆಯಲ್ಲಿ 50 ಕ್ಕೂ ಹೆಚ್ಚು ದೇಶಗಳು – ಉದ್ಯಮಿಗಳು, ವಿಶ್ವಸಂಸ್ಥೆ ಏಜೆನ್ಸಿಗಳು, ನಾಗರಿಕ ಸಮಾಜ, ಸರ್ಕಾರಗಳ ಸಚಿವರು, ರಾಜ್ಯಗಳ ಮುಖ್ಯಸ್ಥರು ಮತ್ತು ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದರು.
ಈ ಸವಾಲಿನ ಕಾಲದಲ್ಲಿ ಭಾರತವು ವಿಶ್ವದೊಂದಿಗೆ ಒಟ್ಟಾಗಿ ನಿಂತಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.
ಭಾರತದ ನಾಗರಿಕತೆಯು ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವುದನ್ನು ಕಲಿಸುತ್ತದೆ ಮತ್ತು ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತವು ಈ ಬೋಧನೆಗೆ ತಕ್ಕಂತೆ ಇರಲು ಪ್ರಯತ್ನಿಸಿದೆ. 120 ಕ್ಕೂ ಹೆಚ್ಚು ದೇಶಗಳೊಂದಿಗೆ ದೇಶದಲ್ಲಿ ಲಭ್ಯವಿರುವ ಔಷಧಿಗಳನ್ನು ಹಂಚಿಕೊಳ್ಳುವ ಮೂಲಕ, ನೆರೆಹೊರೆಯಲ್ಲಿ ಸಾಮಾನ್ಯ ಪ್ರತಿಕ್ರಿಯೆ ತಂತ್ರವನ್ನು ರೂಪಿಸುವ ಮೂಲಕ ಮತ್ತು ಅದನ್ನು ಬಯಸುವ ದೇಶಗಳಿಗೆ ನಿರ್ದಿಷ್ಟ ಬೆಂಬಲವನ್ನು ನೀಡುವ ಮೂಲಕ ಹಾಗೂ ಭಾರತದ ಸ್ವಂತ ಜನರನ್ನು ರಕ್ಷಿಸುವ ಮೂಲಕ ಭಾರತ ಇದನ್ನು ಮಾಡಿದೆ ಎಂದು ಶ್ರೀ ಮೋದಿ ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗವು ಜಾಗತಿಕ ಸಹಕಾರದ ಮಿತಿಗಳನ್ನು ಬಹಿರಂಗಪಡಿಸಿದೆ ಮತ್ತು ಇತ್ತೀಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮಾನವ ಸಂಕುಲವು ಸ್ಪಷ್ಟವಾದ ಸಾಮಾನ್ಯ ಶತ್ರುವನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟ – GAVI ಯ ಬಗ್ಗೆ ಉಲ್ಲೇಖಿಸಿದ ಅವರು, ಇದು ಕೇವಲ ಜಾಗತಿಕ ಮೈತ್ರಿ ಮಾತ್ರವಲ್ಲ, ಜಾಗತಿಕ ಒಗ್ಗಟ್ಟಿನ ಸಂಕೇತವಾಗಿದೆ ಮತ್ತು ಇತರರಿಗೆ ಸಹಾಯ ಮಾಡುವ ಮೂಲಕ ನಾವು ನಮಗೇ ಸಹಾಯ ಮಾಡಿಕೊಳ್ಳಬಹುದು ಎಂದು ಹೇಳಿದರು.
ಭಾರತವು ಅಪಾರ ಜನಸಂಖ್ಯೆ ಮತ್ತು ಸೀಮಿತ ಆರೋಗ್ಯ ಸೌಲಭ್ಯಗಳನ್ನು ಹೊಂದಿದೆ ಮತ್ತು ರೋಗ ನಿರೋಧಕತೆಯ ಮಹತ್ವವನ್ನು ಅದು ಅರ್ಥಮಾಡಿಕೊಂಡಿದೆ ಎಂದರು.
ತಮ್ಮ ಸರ್ಕಾರವು ಪ್ರಾರಂಭಿಸಿದ ಮೊದಲ ಕಾರ್ಯಕ್ರಮವೆಂದರೆ ಮಿಷನ್ ಇಂದ್ರಧನುಷ್, ಇದು ದೇಶದ ಮಕ್ಕಳು ಮತ್ತು ಗರ್ಭಿಣಿಯರಿಗೆ ಸಂಪೂರ್ಣ ಲಸಿಕೆ ಹಾಕುವ ಉದ್ದೇಶವನ್ನು ಹೊಂದಿದೆ, ನಮ್ಮ ವಿಶಾಲವಾದ ರಾಷ್ಟ್ರದ ಮೂಲೆಮೂಲೆಯ ಭಾಗಗಳು ಇದರಲ್ಲಿ ಸೇರಿವೆ ಎಂದರು.
ಆರೋಗ್ಯ ರಕ್ಷಣೆಯನ್ನು ವಿಸ್ತರಿಸುವ ಸಲುವಾಗಿ ಭಾರತವು ತನ್ನ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮಕ್ಕೆ ಆರು ಹೊಸ ಲಸಿಕೆಗಳನ್ನು ಸೇರಿಸಿದೆ ಎಂದು ಅವರು ಹೇಳಿದರು.
ಭಾರತವು ತನ್ನ ಸಂಪೂರ್ಣ ಲಸಿಕೆ ಪೂರೈಕೆಯನ್ನು ಡಿಜಿಟಲೀಕರಣಗೊಳಿಸಿದೆ ಮತ್ತು ಅದರ ಶೀತಲ ಸರಪಳಿಯ ಸಮಗ್ರತೆಯನ್ನು ಮೇಲ್ವಿಚಾರಣೆ ಮಾಡಲು ಎಲೆಕ್ಟ್ರಾನಿಕ್ ಲಸಿಕೆ ಜಾಲವನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಧಾನಿ ವಿವರಿಸಿದರು.
ಈ ಆವಿಷ್ಕಾರಗಳು ಕೊನೆಯ ಫಲಾನುಭವಿಯವರೆಗೂ ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಸುರಕ್ಷಿತ ಮತ್ತು ತೀಕ್ಷ್ಣವಾದ ಲಸಿಕೆಗಳ ಲಭ್ಯತೆಯನ್ನು ಖಾತ್ರಿಪಡಿಸುತ್ತಿವೆ ಎಂದು ಅವರು ಹೇಳಿದರು
ಭಾರತವು ಲಸಿಕೆಗಳನ್ನು ಉತ್ಪಾದಿಸುವ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿದೆ ಮತ್ತು ವಿಶ್ವದ ಸುಮಾರು ಶೇ.60 ರಷ್ಟು ಮಕ್ಕಳ ರೋಗನಿರೋಧಕ ಶಕ್ತಿಗೆ ಕೊಡುಗೆ ನೀಡುತ್ತಿರುವುದು ನಮ್ಮ ಅದೃಷ್ಟವಾಗಿದೆ ಎಂದು ಪ್ರಧಾನಿ ಹೇಳಿದರು.
GAVI ಕಾರ್ಯವನ್ನು ಭಾರತವು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು, ಅದಕ್ಕಾಗಿಯೇ ಅದು GAVI ಯ ಬೆಂಬಲವನ್ನು ಪಡೆಯಲು ಅರ್ಹವಾಗುವ ಮೊದಲೇ GAVI ಗೆ ದಾನಿಯಾಗಿದೆ ಎಂದರು.
GAVI ಗೆ ಭಾರತದ ಬೆಂಬಲವು ಕೇವಲ ಹಣಕಾಸಿನಲ್ಲಷ್ಟೇ ಇರುವುದಿಲ್ಲ, ಭಾರತದ ಭಾರಿ ಬೇಡಿಕೆಯಿಂದಾಗಿ ಲಸಿಕೆಗಳ ಜಾಗತಿಕ ಬೆಲೆಯು ಎಲ್ಲರಿಗೂ ಕಡಿಮೆಯಾಗಿದೆ ಮತ್ತು ಕಳೆದ ಐದು ವರ್ಷಗಳಲ್ಲಿ GAVI ಗೆ ಸುಮಾರು 400 ದಶಲಕ್ಷ ಡಾಲರ್ಗಳನ್ನು ಉಳಿತಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು.
ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಔಷಧಿಗಳು ಮತ್ತು ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ, ರೋಗನಿರೋಧಕತೆಯ ತ್ವರಿತ ವಿಸ್ತರಣೆಯಲ್ಲಿ ದೇಶೀಯ ಅನುಭವ ಮತ್ತು ಅದರ ಗಣನೀಯ ವೈಜ್ಞಾನಿಕ ಸಂಶೋಧನಾ ಪ್ರತಿಭೆಯೊಂದಿಗೆ ಭಾರತವು ವಿಶ್ವದೊಂದಿಗೆ ಒಟ್ಟಾಗಿ ನಿಂತಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.
ಭಾರತಕ್ಕೆ ಜಾಗತಿಕ ಆರೋಗ್ಯ ಪ್ರಯತ್ನಗಳಿಗೆ ಕೊಡುಗೆ ನೀಡುವ ಸಾಮರ್ಥ್ಯ ಮಾತ್ರವಲ್ಲ, ಹಂಚಿಕೆ ಮತ್ತು ಕಾಳಜಿಯ ಮನೋಭಾವದಿಂದ ಹಾಗೆ ಮಾಡುವ ಇಚ್ಛಾಶಕ್ತಿಯೂ ಇದೆ ಎಂದು ಅವರು ಹೇಳಿದರು.
***
At the virtual summit with PM @ScottMorrisonMP. https://t.co/6JIpZRae21
— Narendra Modi (@narendramodi) June 4, 2020
सबसे पहले मैं अपनी ओर से और पूरे भारत की ओर से ऑस्ट्रेलिया में COVID-19 से प्रभावित सभी लोगों और परिवारों के प्रति हार्दिक संवेदना प्रकट करना चाहूँगा: PM @narendramodi
— PMO India (@PMOIndia) June 4, 2020
इस वैश्विक महामारी ने विश्व में हर प्रकार की व्यवस्था को प्रभावित किया है। और हमारे summit का यह डिजिटल स्वरूप इसी प्रकार के प्रभावों का एक उदाहरण है: PM @narendramodi
— PMO India (@PMOIndia) June 4, 2020
हमारी आज की मुलाक़ात आपकी भारत यात्रा का स्थान नहीं ले सकती। एक मित्र के नाते, मेरा आपसे आग्रह है कि स्थिति सुधरने के बाद आप शीघ्र सपरिवार भारत यात्रा प्लान करें और हमारा आतिथ्य स्वीकार करें: PM @narendramodi
— PMO India (@PMOIndia) June 4, 2020
भारत-ऑस्ट्रेलिया संबंध विस्तृत होने के साथ-साथ गहरे भी हैं। और यह गहराई आती है हमारे shared values, shared interests, shared geography और shared objectives से: PM @narendramodi
— PMO India (@PMOIndia) June 4, 2020
मेरा मानना है कि भारत और ऑस्ट्रेलिया के संबंधों को और सशक्त करने के लिए यह perfect समय है, perfect मौक़ा है। अपनी दोस्ती को और मज़बूत बनाने के लिए हमारे पास असीम संभावनाएँ हैं: PM @narendramodi
— PMO India (@PMOIndia) June 4, 2020
कैसे हमारे संबंध अपने क्षेत्र के लिए और विश्व के लिए एक ‘factor of stability’ बनें, कैसे हम मिल कर global good के लिए कार्य करें, इन सभी पहलुओं पर विचार की आवश्यकता है: PM @narendramodi
— PMO India (@PMOIndia) June 4, 2020
भारत ऑस्ट्रेलिया के साथ अपने सम्बन्धों को व्यापक तौर पर और तेज़ गति से बढ़ाने के लिए प्रतिबद्ध है। यह न सिर्फ़ हमारे दोनों देशों के लिए महत्वपूर्ण है, बल्कि Indo-Pacific क्षेत्र और विश्व के लिए भी आवश्यक है: PM @narendramodi
— PMO India (@PMOIndia) June 4, 2020
लेकिन मैं यह नहीं कहूँगा कि मैं इस गति से, इस विस्तार से संतुष्ट हूँ। जब आप जैसा लीडर हमारे मित्र देश का नेतृत्व कर रहा हो, तो हमारे संबंधों में विकास की गति का मापदंड भी ambitious होना चाहिए: PM @narendramodi
— PMO India (@PMOIndia) June 4, 2020
वैश्विक महामारी के इस काल में हमारी Comprehensive Strategic Partnership की भूमिका और महत्वपूर्ण रहेगी। विश्व को इस महामारी के आर्थिक और सामाजिक दुष्प्रभावों से जल्दी निकलने के लिए एक coordinated और collaborative approach की आवश्यकता है: PM @narendramodi
— PMO India (@PMOIndia) June 4, 2020
हमारी सरकार ने इस Crisis को एक Opportunity की तरह देखने का निर्णय लिया है। भारत में लगभग सभी क्षेत्रों में व्यापक reforms की प्रक्रिया शुरू की जा चुकी है। बहुत जल्द ही ग्राउंड लेवल पर इसके परिणाम देखने को मिलेंगे: PM @narendramodi
— PMO India (@PMOIndia) June 4, 2020
इस कठिन समय में आपने ऑस्ट्रेलिया में भारतीय समुदाय का, और ख़ास तौर पर भारतीय छात्रों का, जिस तरह ध्यान रखा है, उसके लिए मैं विशेष रूप से आभारी हूँ: PM @narendramodi
— PMO India (@PMOIndia) June 4, 2020