ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಯಲ್ಲಿ ‘ಘಟಕ ಮತ್ತು ಯಂತ್ರೋಪಕರಣಗಳು/ಸಲಕರಣೆಗಳ ಹೂಡಿಕೆ’ಯ ಆಧಾರದ ಬದಲಿಗೆ ‘ವಾರ್ಷಿಕ ವಹಿವಾಟಿ’ ನ. ಆಧಾರದ ವರ್ಗೀಕರಣದ ಬದಲಾವಣೆಗೆ ತನ್ನ ಅನುಮೋದನೆ ನೀಡಿದೆ.
ಇದು ಸುಗಮವಾಗಿ ವಾಣಿಜ್ಯ ನಡೆಸುವುದನ್ನು, ಪ್ರಗತಿ ಆಧಾರಿತ ನಿಯಮ ರೂಪಿಸಲು ಮತ್ತು ಅವುಗಳನ್ನು ಸರಕು ಮತ್ತು ಸೇವೆಗಳ ತೆರಿಗೆ –ಜಿಎಸ್ಟಿಯ ಸುತ್ತ ಹೊಸ ತೆರಿಗೆ ವ್ಯವಸ್ಥೆಗೆ ಸರಿಹೊಂದಿಸಲು ಉತ್ತೇಜಿಸಲಿದೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಅಭಿವೃದ್ಧಿ (ಎಂ.ಎಸ್.ಎಂ.ಇ.ಡಿ.) ಕಾಯಿದೆ 2006ರ ಸೆಕ್ಷನ್ 7ರ ರೀತ್ಯ ಸರಕುಗಳನ್ನು ಉತ್ಪಾದಿಸುವ ಘಟಕಗಳನ್ನು ವ್ಯಾಖ್ಯಾನಿಸಲು ತಿದ್ದುಪಡಿ ಮಾಡಲಾಗುವುದು ಮತ್ತು ವಾರ್ಷಿಕ ವಹಿವಾಟಿನ ಪರಿಭಾಷೆಯಲ್ಲಿ ಸೇವೆಗಳನ್ನು ಒದಗಿಸುವುದು ಈ ಕೆಳಗಿನಂತಿರುತ್ತದೆ:
ಪ್ರಸ್ತುತ ಎಂ.ಎಸ್.ಎಂ.ಇ.ಡಿ ಕಾಯಿದೆ (ಸೆಕ್ಷನ್ 7) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂ.ಎಸ್.ಎಂ.ಇ.ಗಳು)ಗಳನ್ನು ಘಟಕದಲ್ಲಿ ಮತ್ತು ಯಂತ್ರೋಪಕರಣದಲ್ಲಿನ ಹೂಡಿಕೆ ಮತ್ತು ಸೇವಾ ವಲಯದಲ್ಲಿ ಸಾಧನಗಳ ಮೇಲಿನ ಹೂಡಿಕೆಯ ಆಧಾರದ ಮೇಲೆ ವರ್ಗೀಕರಿಸುತ್ತದೆ. ಘಟಕ ಮತ್ತು ಯಂತ್ರೋಪಕರಣಗಳ ಹೂಡಿಕೆಯ ಮಾನದಂಡವು ಸ್ವಯಂ ಘೋಷಣೆಯನ್ನು ನಿಗದಿಪಡಿಸುತ್ತದೆ ಮತ್ತು ಅದು ಅಗತ್ಯವಾದವು ಎಂದು ಪರಿಗಣಿಸಿದರೆ ಮತ್ತು ಪರಿಶೀಲನೆಯ ವೆಚ್ಚಗಳಿಗೆ ಕಾರಣವಾಗುತ್ತದೆ.
ವಹಿವಾಟನ್ನು ಮಾನದಂಡವಾಗಿ ತೆಗೆದುಕೊಳ್ಳುವುದರಿಂದ ಲಭ್ಯವಿರುವ ವಿಶ್ವಾಸಾರ್ಹ ಅಂಕಿ ಅಂಶಗಳು ಉದಾ. ಜಿಎಸ್ಟಿ ಜಾಲ ಮತ್ತು ವಿವೇಚನೇತರ, ಪಾರದರ್ಶಕ ಮತ್ತು ವಸ್ತುನಿಷ್ಠ ಮಾನದಂಡಗಳನ್ನು ಹೊಂದಿರುವ ನಿರ್ಧರಣೆಯ ಇನ್ನಿತರ ವಿಧಾನಗಳು ಪರಿಶೀಲನೆಯ ಅಗತ್ಯಗಳನ್ನು ತೊಡೆದುಹಾಕುತ್ತವೆ, ವರ್ಗೀಕರಣ ವ್ಯವಸ್ಥೆಯನ್ನು ಪ್ರಗತಿಪರ ಮತ್ತು ವಿಕಸನೀಯವಾಗಿಸುತ್ತವೆ, ಘಟಕ ಮತ್ತು ಯಂತ್ರೋಪಕರಣಗಳು/ಸಲಕರಣೆಗಳು ಮತ್ತು ಉದ್ಯೋಗಗಳ ಮೇಲಿನ ಬಂಡವಾಳ ಹೂಡಿಕೆಯ ಆಧಾರದ ವರ್ಗೀಕರಣದ ಅನಿಶ್ಚಿತತೆಯಿಂದ ಹೊರಬರಲು ಸಹಾಯ ಮಾಡುತ್ತದೆ, ಮತ್ತು ಸುಗಮವಾಗಿ ವ್ಯಾಪಾರ ಮಾಡುವುದನ್ನು ಸುಧಾರಿಸುತ್ತದೆ. ಇದರ ಜೊತೆಗೆ ತಿದ್ದುಪಡಿಯು ಎಂ.ಎಸ್.ಎಂ.ಇ.ಡಿ. (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಅಭಿವೃದ್ಧಿ) ಕಾಯಿದೆಯ ತಿದ್ದುಪಡಿ ಆಶ್ರಯಿಸದೆಯೇಎಂ.ಎಸ್.ಎಂ.ಇ.ಗಳ ವರ್ಗೀಕರಣವನ್ನು ಬದಲಾಗುತ್ತಿರುವ ಆರ್ಥಿಕ ಸನ್ನಿವೇಶಗಳಿಗೆ ಅನುಗುಣವಾಗಿ ಉತ್ತಮಪಡಿಸಲು ಅವಕಾಶವನ್ನು ಒದಗಿಸುತ್ತದೆ.
ವರ್ಗೀಕರಣದ ನಿಯಮಾವಳಿಗಳ ಬದಲಾವಣೆಯು ಸುಗಮ ವಾಣಿಜ್ಯದ ಸಾಧ್ಯತೆ ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಬೆಳವಣಿಗೆಗೆ ಇಂಬು ದೊರೆಯಲಿದ್ದು ದೇಶದ ಎಂ.ಎಸ್.ಎಂ.ಇವಲಯದಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗ ಹೆಚ್ಚಿಸಲು ದಾರಿ ಮಾಡಿಕೊಡುತ್ತದೆ.