Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಪ್ರಧಾನಮಂತ್ರಿಯವರ ಒಳನೋಟದ ಸಂಭಾಷಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇತ್ತೀಚೆಗೆ ಖ್ಯಾತ ಪಾಡ್ ಕಾಸ್ಟರ್ ಮತ್ತು ಕೃತಕ ಬುದ್ಧಿಮತ್ತೆ ಸಂಶೋಧಕರಾದ ಲೆಕ್ಸ್ ಫ್ರಿಡ್ಮನ್ ಅವರೊಂದಿಗೆ ಆಕರ್ಷಕ ಚಿಂತನಶೀಲ ಸಂಭಾಷಣೆ ನಡೆಸಿದರು. ಮೂರು ಗಂಟೆಗಳ ಕಾಲ ನಡೆದ ಈ ಸಂಭಾಷಣೆಯಲ್ಲಿ ಪ್ರಧಾನಿ ಮೋದಿಯವರ ಬಾಲ್ಯ, ಹಿಮಾಲಯದಲ್ಲಿ ಅವರು ಕಳೆದ ರಚನಾತ್ಮಕ ವರ್ಷಗಳು ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ಪ್ರಯಾಣ ಎಲ್ಲವೂ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು. ಪ್ರಸಿದ್ಧ ಕೃತಕ ಬುದ್ಧಿಮತ್ತೆ ಸಂಶೋಧಕ ಮತ್ತು ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಈ ಬಹುನಿರೀಕ್ಷಿತ ಮೂರು ಗಂಟೆಗಳ ಪಾಡ್ಕಾಸ್ಟ್ ನಾಳೆ, ಮಾರ್ಚ್ 16, 2025 ರಂದು ಬಿಡುಗಡೆಯಾಗಲಿದೆ. ಲೆಕ್ಸ್ ಫ್ರಿಡ್ಮನ್ ಈ ಸಂಭಾಷಣೆಯನ್ನು ತನ್ನ ಜೀವನದ “ಅತ್ಯಂತ ಶಕ್ತಿಯುತ ಸಂಭಾಷಣೆಗಳಲ್ಲಿ ಒಂದು” ಎಂದು ಬಣ್ಣಿಸಿದ್ದಾರೆ.

ಮುಂಬರುವ ಪಾಡ್ಕಾಸ್ಟ್ ಬಗ್ಗೆ ಲೆಕ್ಸ್ ಫ್ರಿಡ್ಮನ್ ಅವರ Xನ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ಮೋದಿಯವರು; 

“ಇದು ನಿಜವಾಗಿಯೂ @lexfridman ಅವರೊಂದಿಗಿನ ಆಕರ್ಷಕ ಸಂಭಾಷಣೆಯಾಗಿದ್ದು, ನನ್ನ ಬಾಲ್ಯ, ಹಿಮಾಲಯದಲ್ಲಿನ ವರ್ಷಗಳು ಮತ್ತು ಸಾರ್ವಜನಿಕ ಜೀವನದ ಪ್ರಯಾಣದ ಮೆಲುಕುಹಾಕುವಿಕೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ಇದನ್ನು ಕೇಳಿ!” ಎಂದು Xನಲ್ಲಿ ಬರೆದಿದ್ದಾರೆ.

 

 

*****