ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಲಾಲ್ ಬಹಾದ್ದೂರ್ ಶಾಸ್ತ್ರೀ ರಾಷ್ಟ್ರೀಯ ಆಡಳಿತ ಅಕಾಡಮಿ (ಎಲ್.ಬಿ.ಎಸ್.ಎನ್.ಎ.ಎ.), ಮುಸ್ಸೋರಿ ಮತ್ತು ನಮೀಬಿಯಾದ ನಮೀಬಿಯಾ ಸಾರ್ವಜನಿಕ ಆಡಳಿತ ಸಂಸ್ಥೆ ಹಾಗೂ ನಿರ್ವಹಣೆ (ಎನ್.ಐ.ಪಿ.ಎ.ಎಂ.) ನಡುವೆ ಎರಡೂ ಸಂಸ್ಥೆಗಳಿಗೆ ಲಾಭವಾಗುವಂಥ ಇತರ ತರಬೇತಿ ಚಟುವಟಿಕೆಗಳು ಮತ್ತು ನಮೀಬಿಯಾದ ಸಾರ್ವಜನಿಕ ಅಧಿಕಾರಿಗಳ ಸಾಮರ್ಥ್ಯ ವರ್ಧನೆ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು, ಎನ್.ಐ.ಪಿ.ಎ.ಎಂ.ಗೆ ದೇಶದಲ್ಲಿ ಉನ್ನತ ನಾಗರಿಕ ಸೇವೆಯ ತರಬೇತಿ ಸಂಸ್ಥೆ ನಡೆಸಲು ತನ್ನಕೆಲವು ಅನುಭವ ಧಾರೆ ಎರೆಯಲು ಅಕಾಡಮಿಗೆ ನೆರವಾಗುತ್ತದೆ. ಇದು ಎರಡೂ ಕಡೆಯವರಿಗೆ ಈ ಜಗತ್ತಿನ ಸಾರ್ವಜನಿಕ ಆಡಳಿತ ಮತ್ತು ಸಾಮರ್ಥ್ಯವರ್ಧನೆಯ ಸಹಯೋಗಿ ಚಟುವಟಿಕೆಗಳಲ್ಲಿ ತೊಡಗಲೂ ನೆರವಾಗುತ್ತದೆ.
AKT/VBA/SH