ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲತಾ ಮಂಗೇಶ್ಕರ್ ಅವರು ಹಾಡಿರುವ “ಮಾತಾ ರಾಮೋ ಮತ್ಪಿತಾ ರಾಮಚಂದ್ರಃ” ಎಂಬ ಶ್ರೀರಾಮ ರಕ್ಷಾ ಶ್ಲೋಕವನ್ನು ಹಂಚಿಕೊಂಡಿದ್ದಾರೆ.
ಇದು ಸುಪ್ರಸಿದ್ಧ ಗಾಯಕಿಯ ಧ್ವನಿ ಮುದ್ರಣವಾದ ಕೊನೆಯ ಶ್ಲೋಕ ಆಗಿತ್ತು.
ಈ ಬಗ್ಗೆ ‘ಎಕ್ಸ್’ ವೇದಿಕೆಯಲ್ಲಿ ಪ್ರಧಾನ ಮಂತ್ರಿಗಳು ಸಂದೇಶ ಪೋಸ್ಟ್ ಮಾಡಿದ್ದಾರೆ;
“ದೇಶವು ಜನವರಿ 22ರ ಅವಿಸ್ಮರಣೀಯ ಸಂದರ್ಭವನ್ನು ಉತ್ಸಾಹದಿಂದ ಕಾಯುತ್ತಿರುವ ಹೊತ್ತಿನಲ್ಲಿ ನಮ್ಮೊಂದಿಗೆ ನಮ್ಮಪ್ರೀತಿಯ ಲತಾ ಅಕ್ಕನವರ ಅನುಪಸ್ಥಿತಿಯನ್ನು ನೆನಪಿಸಿಕೊಳ್ಳುತ್ತೇವೆ.
ಹಾಗಾಗಿ ಅವರು ಪ್ರಸ್ತುತಪಡಿಸಿರುವ ಗಾಯನವೊಂದು ಇಲ್ಲಿದೆ.
ಇದು ಅವರ ಧ್ವನಿ ಮುದ್ರಣದ ಕೊನೆಯ ಶ್ಲೋಕ ಎಂದು ಅವರ ಕುಟುಂಬದವರು ನನಗೆ ತಿಳಿಸಿದ್ದಾರೆ.
#ಶ್ರೀರಾಮಭಜನೆ” ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
***
As the nation awaits 22nd January with great enthusiasm, one of the people who will be missed is our beloved Lata Didi.
— Narendra Modi (@narendramodi) January 17, 2024
Here is a Shlok she sung. Her family told me that it was the last Shlok she recorded. #ShriRamBhajanhttps://t.co/MHlliiABVX