Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲಕ್ಷಾಂತರ ಅಮಾಯಕರ ಜೀವ ಉಳಿಸಲು ಮತ್ತು ರಸ್ತೆಗಳನ್ನು ಸುರಕ್ಷಿತ ಮಾಡುವತ್ತ ಐತಿಹಾಸಿಕ ಹೆಜ್ಜೆ ಮೋಟಾರು ವಾಹನ (ತಿದ್ದುಪಡಿ) ಮಸೂದೆ 2016ಕ್ಕೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೋಟಾರು ವಾಹನ (ತಿದ್ದುಪಡಿ) ವಿಧೇಯಕ 2016ಕ್ಕೆ ತನ್ನ ಅನುಮೋದನೆ ನೀಡಿದೆ. ಈ ತಿದ್ದುಪಡಿಗಳು ಈ ಕೆಳಗಿನವುಗಳ ಸುಧಾರಣೆಯ ಗುರಿ ಹೊಂದಿವೆ.

ದೇಶದಲ್ಲಿ ಪ್ರತಿವರ್ಷ 5 ಲಕ್ಷ ರಸ್ತೆ ಅಪಘಾತಗಳು ವರದಿಯಾಗುತ್ತವೆ. ಇದರಲ್ಲಿ 1.5 ಲಕ್ಷ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಮತ್ತು ಅಪಮೃತ್ಯುವಿನ ಸಂಖ್ಯೆಯನ್ನು ಶೇ.50ರಷ್ಟು ಇಳಿಸಲು ಬದ್ಧವಾಗಿದೆ.

ರಸ್ತೆ ಸುರಕ್ಷತೆಗೆಸಂಬಂಧಿಸಿದ ಸಮಸ್ಯೆ ಎದುರಿಸಲು ಎನ್.ಡಿ.ಎ. ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರಸ್ತೆ ಸಾರಿಗೆ ಮತ್ತು ಸುರಕ್ಷತೆ ಮಸೂದೆಯ ಕರಡು ಸಿದ್ಧಪಡಿಸಲಾಯಿತು. ಆದಾಗ್ಯೂ ಹಲವು ರಾಜ್ಯಗಳು ಇದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದವು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆ ಎದುರಿಸಲು ಮತ್ತು ನಾಗರಿಕರು ಸಾರಿಗೆ ಇಲಾಖೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ವ್ಯವಹರಿಸುವಾಗ ಸೇವೆಗಳ ಸುಧಾರಣೆ ಮಾಡಲು ರಾಜ್ಯಗಳ ಸಾರಿಗೆ ಸಚಿವರುಗಳ (ಜಿಓಎಂ) ಗುಂಪು ರಚಿಸಲಾಗಿದೆ. ರಾಜಾಸ್ಥಾನದ ಗೌರವಾನ್ವಿತ ಸಾರಿಗೆ ಸಚಿವ ಯೂನುಸ್ ಖಾನ್ ಅವರ ನೇತೃತ್ವದ ಈ ಜಿಓಎಂ ಮೂರು ಸಭೆಗಳನ್ನು ನಡೆಸಿದೆ. ವಿವಿಧ ರಾಜಕೀಯ ಪಕ್ಷಗಳ 18 ಸಾರಿಗೆ ಸಚಿವರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಅವರು ಮೂರು ಮಧ್ಯಂತರ ವರದಿಗಳನ್ನು ಸಲ್ಲಿಸಿದ್ದರು.

ರಸ್ತೆ ಸುರಕ್ಷತೆಗೆ ಒತ್ತು ನೀಡಿರುವ ಜಿಓಎಂ ಸಾರಿಗೆ ಸನ್ನಿವೇಶದ ಸಮಸ್ಯೆಗಳನ್ನು ಪರಿಹರಿಸಲು, ಸರ್ಕಾರ ತಕ್ಷಣವೇ ಹಾಲಿ ಇರುವ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿಗಳನ್ನು ತರಬೇಕು ಎಂದು ಶಿಫಾರಸು ಮಾಡಿದೆ. ಜಿ.ಓ.ಎಂ.ನ ಶಿಫಾರಸುಗಳ ಆಧಾರದ ಮೇಲೆಮತ್ತು ಇತರ ಒತ್ತಡದ ಅಗತ್ಯಗಳಿಗೆ ಅನುಗುಣವಾಗಿ ಸಾರಿಗೆ ಇಲಾಖೆ ಮೋಟಾರು ವಾಹನ (ತಿದ್ದುಪಡಿ)ವಿಧೇಯಕ 2016ನ್ನು ಸಂಪುಟದ ಪರಾಮರ್ಶೆಗೆ ಒಪ್ಪಿಸಿತ್ತು. ಇಂದು ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಇದಕ್ಕೆ ತನ್ನ ಅನುಮೋದನೆ ನೀಡಿದೆ. ಪ್ರಸಕ್ತ ಇರುವ ಮೋಟಾರು ವಾಹನ ಕಾಯಿದೆಯಲ್ಲಿ 223 ಸೆಕ್ಷನ್ ಗಳಿದ್ದು ಅದರಲ್ಲಿ ಈ ಮೂಸೂದೆಯಲ್ಲಿ 68 ಸೆಕ್ಷನ್ ಗಳಿಗೆ ತಿದ್ದುಪಡಿ ತರಲು ಜೊತೆಗೆ ಚಾಪ್ಟರ್ 10ನ್ನು ತೆಗೆದುಹಾಕಲು ಹಾಗೂ ಥರ್ಡ್ ಪಾರ್ಟಿ ವಿಮೆ ಕ್ಲೇಮ್ ಗಳನ್ನು ಮತ್ತು ಇತ್ಯರ್ಥ ಮಾಡುವ ಪ್ರಕ್ರಿಯೆ ಸರಳೀಕರಿಸಲು ಚಾಪ್ಟರ್ 11ನ್ನು ಹೊಸ ನಿಯಮಗಳೊಂದಿಗೆ ಬದಲಾವಣೆ ಮಾಡಲಾಗಿದೆ.

ಇದರಲ್ಲಿರುವ ಪ್ರಮುಖ ಕಟ್ಟಳೆಗಳಲ್ಲಿ ಗುದ್ದೋಡು (ಹಿಟ್ ಅಂಡ್ ರನ್) ಪ್ರಕರಣಗಳಲ್ಲಿ ಪರಿಹಾರದ ಮೊತ್ತವನ್ನು 25 ಸಾವಿರದಿಂದ 2 ಲಕ್ಷ ರೂಪಾಯಿಗಳಿಗೆ ಏರಿಸುವುದೂ ಸೇರಿದೆ. ರಸ್ತೆ ಅಪಘಾತದಲ್ಲಿ ದುರ್ಮರಣದ ಪರಿಹಾರವನ್ನು 10 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡುವ ನಿಬಂಧನೆಯೂ ಇದೆ.

ಈ ಮಸೂದೆಯು 28 ಹೊಸ ಸೆಕ್ಷನ್ ಗಳ ಸೇರ್ಪಡೆಯ ಪ್ರಸ್ತಾವವನ್ನೂ ಹೊಂದಿದೆ. ಈ ತಿದ್ದುಪಡಿಗಳು ಮುಖ್ಯವಾಗಿ ರಸ್ತೆ ಸುರಕ್ಷತೆ ಸುಧಾರಣೆ, ಸಾರಿಗೆ ಇಲಾಖೆಯೊಂದಿಗೆ ಸಾರ್ವಜನಿಕರು ಸುಲಭವಾಗಿ ವ್ಯವಹರಿಸುವ, ಗ್ರಾಮೀಣ ಸಾರಿಗೆಯನ್ನು ಬಲಪಡಿಸುವ, ಕೊನೆಯ ಮೈಲಿಯವರೆಗಿನ ಸಂಪರ್ಕ ಮತ್ತು ಸಾರ್ವಜನಿಕ ಸಾರಿಗೆ, ಆಟೋಮೇಷನ್ ಮತ್ತು ಕಂಪ್ಯೂಟರೈಸೇಷನ್ ಮತ್ತು ಆನ್ ಲೈನ್ ಸೇವೆಗಳ ಮೇಲೆ ಗಮನ ಹರಿಸಿದೆ.
ಈ ಮಸೂದೆಯು ಗ್ರಾಮೀಣ ಸಾರಿಗೆ, ಸಾರ್ವಜನಿಕ ಸಾರಿಗೆ, ಕೊನೆಯ ಮೈಲಿಯ ಸಂಪರ್ಕ ಮತ್ತು ಪ್ರಯಾಣಿಕರ ಅನುಕೂಲತೆ ಹಾಗೂ ರಸ್ತೆ ಸುರಕ್ಷತೆಗಾಗಿ ಸ್ಟೇಜ್ ಕ್ಯಾರೇಜ್ ಮತ್ತು ಗುತ್ತಿಗೆ ಸಾಗಣೆಗೆ ವಿನಾಯಿತಿ ನೀಡಲು ರಾಜ್ಯಗಳಿಗೆ ಅನುಮತಿ ನೀಡುವ ಮೂಲಕ ದೇಶದಲ್ಲಿ ಸಾರಿಗೆ ಸನ್ನಿವೇಶವನ್ನು ಸುಧಾರಿಸುವ ಪ್ರಸ್ತಾಪವನ್ನೂ ಒಳಗೊಂಡಿದೆ.

ಈ ಮಸೂದೆ ಈ ಕಾಯಿದೆ ಅಡಿಯಲ್ಲಿ ಮತ್ತು ದಂಡದ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪ್ರತಿ ದಂಡಕ್ಕೆ ಒಂದಕ್ಕಿಂತ ಕಡಿಮೆ ಇಲ್ಲದ ಮತ್ತು ಹತ್ತಕ್ಕಿಂತ ಹೆಚ್ಚಿಲ್ಲದಂತೆ ಬಹು ಹಂತದಲ್ಲಿ ಹಾಕಲು ಅವಕಾಶ ನೀಡುತ್ತದೆ.

ಈ ಮಸೂದೆ ಪಾದಚಾರಿ ಮಾರ್ಗದಲ್ಲಿ ಮತ್ತು ಅಂಥ ಸಾರಿಗೆ ವ್ಯವಸ್ಥೆಯಲ್ಲಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಚಟುವಟಿಕೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡುತ್ತದೆ.

ಇ ಆಡಳಿತ ಬಳಿಸಿಕೊಂಡು ಬಾಧ್ಯಸ್ಥರಿಗೆ ನೀಡುವ ಸೇವೆಯನ್ನು ಉತ್ತಮಪಡಿಸುವತ್ತ ಗಮನ ಹರಿಸುವುದು ಈ ಮಸೂದೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ಇದರಲ್ಲಿ ಆನ್ ಲೈನ್ ಮೂಲಕ ಕಲಿಕಾ ಪರವಾನಗಿ, ವಾಹನ ಚಾಲನಾ ಪರವಾನಗಿಗಳ ಅವಧಿಯ ಹೆಚ್ಚಳ ಮೊದಲಾದವುಗಳು ಸೇರಿವೆ.
ಈ ಮಸೂದೆಯು ಅಪ್ರಾಪ್ತ ವಯಸ್ಕರು (ಬಾಲಾರೋಪಿಗಳು) ಎಸಗುವ ಅಪರಾಧಗಳಿಗೂ ಪ್ರಸ್ತಾವಗಳನ್ನು ಸೂಚಿಸುತ್ತದೆ. ಅಪ್ರಾಪ್ತ ವಯಸ್ಕರು ಎಸಗುವ ಅವಪಾಧಗಳ ಪ್ರಕರಣಗಳಲ್ಲಿ ಪಾಲಕರು /ವಾಹನ ಮಾಲೀಕರನ್ನು ತಪ್ಪಿತಸ್ಥರು ಎಂದು ಪರಿಗಣಿಸಲಾಗುತ್ತದೆ ಮತ್ತು ಅಪ್ರಾಪ್ತವಯಸ್ಕರನ್ನು ಜೆಜೆ ಕಾಯಿದೆ ಅಡಿಯಲ್ಲಿ ವಿಚಾರಣೆಗೆ ಒಳಪಡಿಸುತ್ತದೆ. ಮೋಟಾರು ವಾಹನದ ನೋಂದಣಿಯನ್ನು ರದ್ದು ಮಾಡಲಾಗುತ್ತದೆ.

ಹೊಸ ವಾಹನಗಳಿಗೆ ನೋಂದಣಿ ಪ್ರಕ್ರಿಯೆಯನ್ನು ಸುಧಾರಣೆ ಮಾಡಲು, ವಾಹನ ಮಾರಾಟಗಾರ ಕಡೆಯಿಂದಲೇ ನೋಂದಣಿ ಅವಕಾಶ ಮತ್ತು ತಾತ್ಕಾಲಿಕ ನೋಂದಣಿಯ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ.

ರಸ್ತೆ ಸುರಕ್ಷತೆ ಕ್ಷೇತ್ರದಲ್ಲಿ ಈ ಮಸೂದೆಯು ಸಂಚಾರ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡವನ್ನು ಹೆಚ್ಚಿಸಲು ಉದ್ದೇಶಿಸಿದೆ. ಪರವಾನಿಗೆ ಇಲ್ಲದೆ ವಾಹನ ಚಾಲನೆ, ಅಪ್ರಾಪ್ತ ವಯಸ್ಕರ ವಾಹನ ಚಾಲನೆ, ಕುಡಿದು ವಾಹನ ಚಾಲನೆ, ಅಪಾಯಕಾರಿ ಚಾಲನೆ, ಅತಿಯಾದ ವೇಗ, ಅತಿಯಾದ ಭಾರ ಸಾಗಣೆ, ಇತ್ಯಾದಿ ಅಪರಾಧಗಳಿಗೆ ಕಟ್ಟುನಿಟ್ಟಿನ ಕ್ರಮದ ಪ್ರಸ್ತಾಪ ಮಾಡಿದೆ. ನಿಯಮ ಉಲ್ಲಂಘನೆಯ ಪತ್ತೆಗೆ ವಿದ್ಯುನ್ಮಾನ ಬಳಕೆಯ ಜೊತೆಗೆ ಶಿರಸ್ತ್ರಾಣಕ್ಕೆ ಸಂಬಂಧಿಸಿದ ಅವಕಾಶಗಳನ್ನೂ ಸೇರಿಸಿದೆ. ರಸ್ತೆ ಅಪಘಾತಕ್ಕೆ ಈಡಾಗುವವರಿಗೆ ನೆರವಾಗಲು ಉತ್ತಮ ಸಮರ್ಥನ್ ಮಾರ್ಗಸೂಚಿಗಳನ್ನೂ ವಿಧೇಯಕದಲ್ಲಿ ಸೇರಿಸಲಾಗಿದೆ. ಸಾರಿಗೆ ವಾಹನಗಳಿಗೆ 2018ರ ಅಕ್ಟೋಬರ್ 1ರಿಂದ ಆಟೋಮೇಟೆಡ್ ಫಿಟ್ನೆಸ್ ಪರೀಕ್ಷೆಯನ್ನು ಕಡ್ಡಾಯ ಮಾಡಲೂ ಉದ್ದೇಶಿಸಲಾಗಿದೆ. ಇದು ಸಾರಿಗೆ ಇಲಾಕೆಯಲ್ಲಿನ ಭ್ರಷ್ಟಾಚಾರವನ್ನು ಕಡಿಮೆ ಮಾಡುವುದರಲ್ಲದೆ, ವಾಹನಗಳ ರಸ್ತೆಯ ಗೌರವಾರ್ಹ ಸ್ಥಿತಿಯನ್ನು ಉತ್ತಮಪಡಿಸುತ್ತದೆ. ವಾಹನಗಳ ಕವಚ ನಿರ್ಮಾಣ ಮತ್ತು ಬಿಡಿ ಭಾಗ ಪೂರೈಕೆದಾರರೂ ಸೇರಿದಂತೆ ಸುರಕ್ಷತೆ/ಪರಿಸರಾತ್ಮಕ ನಿಯಂತ್ರಣಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವುದಕ್ಕೂ ದಂಡವನ್ನು ಪ್ರಸ್ತಾಪಿಸಲಾಗಿದೆ.

ನೋಂದಣಿ ಮತ್ತು ಪರವಾನಗಿ ಪ್ರಕ್ರಿಯೆಯಲ್ಲಿ ಸೌಹಾರ್ದತೆ ತರುವ ನಿಟ್ಟಿನಲ್ಲಿ, ವಾಹನ ಚಾಲನೆ ಪರವಾನಗಿಯ ರಾಷ್ಟ್ರೀಯ ರಿಜಿಸ್ಟರ್ ಮತ್ತು ವಾಹನಗಳ ನೋಂದಣಿಗೂ ರಾಷ್ಟ್ರೀಯ ರಿಜಿಸ್ಟರ್ ಅನ್ನು “ವಾಹನ್ ಮತ್ತು ಸಾರಥಿ’’ ವೇದಿಕೆಗಳಲ್ಲಿ ಸೃಷ್ಟಿಸಲು ಉದ್ದೇಶಿಸಲಾಗಿದೆ. ಇದು ದೇಶಾದ್ಯಂತ ಏಕರೂಪತೆಗೆ ಅವಕಾಶ ಕಲ್ಪಿಸಲಿದೆ.

ಆಟೋಮೊಬೈಲ್ ಗಳ ಪ್ರಮಾಣೀಕರಣ ಮತ್ತು ಪರೀಕ್ಷೆಯ ಪ್ರಕ್ರಿಯೆಯನ್ನು ಹೆಚ್ಚು ಸಮರ್ಥಗೊಳಿಸಲೂ ಉದ್ದೇಶಿಸಲಾಗಿದೆ. ಆಟೋಮೊಬೈಲ್ ಅನುಮೋದನೆ ನೀಡುವ ಪರೀಕ್ಷಾ ಸಂಸ್ಥೆಗಳನ್ನು ಕಾಯಿದೆಯ ವ್ಯಾಪ್ತಿಗೆ ತರಲಾಗಿದೆ.

ಚಾಲನಾ ತರಬೇತಿ ಪ್ರಕ್ರಿಯೆಯನ್ನು ಬಲಪಡಿಸಲಾಗಿದ್ದು, ತ್ವರಿತವಾಗಿ ಸಾರಿಗೆ ಪರವಾನಗಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದು ದೇಶದಲ್ಲಿ ಇರುವ ವಾಣಿಜ್ಯ ವಾಹನ ಚಾಲಕರ ಕೊರತೆಯನ್ನು ತಗ್ಗಿಸಲಿದೆ.

ದಿವ್ಯಾಂಗದವರಿಗೆ ವಾಹನ ಚಾಲನೆ ಪರವಾನಗಿ ನೀಡಿಕೆ ಮತ್ತು ದಿವ್ಯಾಂಗದವರ ಬಳಕೆಗೆ ಯೋಗ್ಯವಾಗುವಂತೆ ವಾಹನಗಳ ಪರಿವರ್ತನೆಯ ಸಾರಿಗೆ ಪರಿಹಾರ ಒದಗಿಸುವಲ್ಲಿ ಇದ್ದ ತೊಡಕುಗಳನ್ನು ಪರಿಹರಿಸಲಾಗಿದೆ.

ಸಂಪುಟ ಅನುಮೋದನೆ ನೀಡಿರುವ ಮೋಟಾರು ವಾಹನ (ತಿದ್ದುಪಡಿ) ವಿಧೇಯಕ 2016 ರಸ್ತೆ ಸುರಕ್,ತೆ ಮತ್ತು ಸಾರಿಗೆ ವಲಯದಲ್ಲಿ ಅತಿ ದೊಡ್ಡ ಸುಧಾರಣೆ ಎಂದು ಮಾನ್ಯ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಬಣ್ಣಿಸಿದ್ದಾರೆ. ಗೌರವಾನ್ವಿತ ಪ್ರಧಾನಮಂತ್ರಿಯವರ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಅವರು ತಮ್ಮ ಕೃತಜ್ಞತೆ ಅರ್ಪಿಸಿದ್ದಾರೆ. ಈ ತಿದ್ದುಪಡಿಗಳನ್ನು ರೂಪಿಸಲು ಸಹಕರಿಸಿದ ರಾಜ್ಯಗಳ ಸಾರಿಗೆ ಸಚಿವರುಗಳ ಗುಂಪಿನ ಪ್ರಯತ್ನವನ್ನೂ ಅವರು ವಿಶೇಷವಾಗಿ ಪ್ರಶಂಸಿಸಿದ್ದಾರೆ. ಸಂಸತ್ತು ಮುಂದಿನವಾರ ಈ ತಿದ್ದುಪಡಿ ವಿಧೇಯಕವನ್ನು ಕೈಗೆತ್ತಿಕೊಳ್ಳಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ ಮತ್ತು ಸುರಕ್ಷಿತ ಮತ್ತು ಸಾರ್ವಜನಿಕ ಸ್ನೇಹಿ ಸಾರಿಗೆ ಪರಿಸರ ವ್ಯವಸ್ಥೆ ಒದಗಿಸುವ ಈ ಮಸೂದೆಗೆ ಬೆಂಬಲ ಸೂಚಿಸುವಂತೆ ಎಲ್ಲ ಪಕ್ಷಗಳಿಗೂ ಅವರು ಮನವಿ ಮಾಡಿದ್ದಾರೆ.

ಮೋಟಾರು ವಾಹನ ತಿದ್ದುಪಡಿ ವಿಧೇಯಕ 2016ರಲ್ಲಿ ವಿವಿಧ ದಂಡಗಳಿಗೆ ಪ್ರಸ್ತಾಪಿಸಿರುವ ತಿದ್ದುಪಡಿ

ಸೆಕ್ಷನ್

ಹಿಂದೆ ಇದ್ದ ದಂಡ/ನಿಬಂಧನೆ

ಹೊಸ ಉದ್ದೇಶಿದ ನಿಬಂಧನೆ / ಕನಿಷ್ಠ ದಂಡ

177

ಸಾಮಾನ್ಯ

ರೂ. 100

Rs 500

ಹೊಸದು 177ಎ

ರಸ್ತೆ ನಿಯಮ ಉಲ್ಲಂಘನೆ

ರೂ. 100

Rs 500

178

ಟಿಕೆಟ್ ರಹಿತ ಪ್ರಯಾಣ

ರೂ. 200

ರೂ. 500

179

ಪ್ರಾಧಿಕಾರಿಗಳ ಆದೇಶಗಳಿಗೆ ಅಗೌರವ

ರೂ. 500

ರೂ. 2000

180

ಪರವಾನಗಿ ಇಲ್ಲದೆ ಅನಧಿಕೃತವಾಗಿ ವಾಹನ ಬಳಕೆ

ರೂ. 1000

ರೂ. 5000

181

ಚಾಲನಾ ಪರವಾನಗಿ ಇಲ್ಲದೆ ವಾಹನ ಓಡಿಸುವುದು

ರೂ. 500

ರೂ. 5000

182

ಅನರ್ಹಗೊಂಡಿದ್ದರೂ ವಾಹನ ಓಡಿಸುವುದು

ರೂ. 500

ರೂ. 10,000

182 ಬಿ

ದೊಡ್ಡ ಗಾತ್ರದ (ಓವರ್ ಸೈಜ್) ವಾಹನಗಳು

ಹೊಸತು

ರೂ. 5000

183

ಅತಿಯಾದ ವೇಗ

ರೂ. 400

ಎಲ್.ಎಂ.ವಿ.ಗೆರೂ. 1000 ಮಧ್ಯಮ ಪ್ರಯಾಣಿಕರ ವಾಹನಕ್ಕೆ ರೂ. 2000

184

ಅಪಾಯಕಾರಿ ಚಾಲನೆ ದಂಡ

ರೂ. 1000

5000 ರೂ.ವರೆಗೆ

185

ಕುಡಿದು ವಾಹನ ಚಾಲನೆ

ರೂ. 2000

ರೂ. 10,000

189

ವೇಗ / ರೇಸ್ ಮಾಡುವುದು

ರೂ. 500

ರೂ. 5,000

192 ಎ

ರಹದಾರಿ ಇಲ್ಲದ ವಾಹನ

5000 ರೂ.ವರೆಗೆ

10,000ರೂ.ವರೆಗೆ

193

ಅಗ್ರಿಗೇಟರ್(ಪರವಾನಗಿ ಪರಿಸ್ಥಿತಿಗಳ ಉಲ್ಲಂಘನೆ)

ಹೊಸತು

ರೂ. 25,000 ದಿಂದ

ರೂ. 1,00,000

194

ಮಿತಿ ಮೀರಿದ ಭಾರ

ರೂ 2000 ಮತ್ತು

ರೂ. 1000 ಪ್ರತಿ ಹೆಚ್ಚುವರಿ ಟನ್ ಗೆ

ರೂ. 20,000 ಮತ್ತು

ರೂ. 2000 ಪ್ರತಿ ಹೆಚ್ಚುವರಿ ಟನ್ ಗೆ

194 ಎ

ಮಿತಿಗಿಂತ ಹೆಚ್ಚಿನ ಪ್ರಯಾಣಿಕರು

ರೂ 1000 ಪ್ರತಿ ಹೆಚ್ಚುವರಿ ಪ್ರಯಾಣಿಕರಿಗೆ

194 ಬಿ

ಸೀಟ್ ಬೆಲ್ಟ್

ರೂ. 100

ರೂ. 1000

194 ಸಿ

ದ್ವಿಚಕ್ರ ವಾಹನದಲ್ಲಿ ಅತಿಯಾದ ಭಾರ

ರೂ. 100

ರೂ. 2000,

3 ತಿಂಗಳವರೆಗೆ ಪರವಾನಗಿ ಅನರ್ಹತೆ

194 ಡಿ

ಹೆಲ್ಮೆಟ್

ರೂ. 100

ರೂ. 1000 3 ತಿಂಗಳವರೆಗೆ ಪರವಾನಗಿ ಅನರ್ಹತೆ

194 ಇ

ತುರ್ತು ವಾಹನಗಳಿಗೆ ದಾರಿ ಮಾಡಿಕೊಡದೇ ಇರುವುದು

ಹೊಸತು

ರೂ 10,000

196

ವಿಮೆ ಇಲ್ಲದೆ ವಾಹನ ಓಡಿಸುವುದು

ರೂ. 1000

ರೂ 2000

199

ಅಪ್ರಾಪ್ತ ವಯಸ್ಕರಿಂದ ಆಗುವ ಅಪರಾಧಗಳು

ಹೊಸತು

ಪಾಲಕರು /ವಾಹನ ಮಾಲೀಕರೇ ತಪ್ಪಿತಸ್ಥರೆಂದು ಪರಿಗಣನೆ. ರೂ 25,000 ಜೊತೆಗೆ 3 ವರ್ಷಸೆರೆವಾಸ. ಬಾಲಾರೋಪಿಗಳಿಗೆ ಜೆಜೆ ಕಾಯಿದೆ ಅಡಿ ವಿಚಾರಣೆ. ಮೋಟಾರು ವಾಹನದ ನೋಂದಣಿ ರದ್ದು.

206

ದಾಖಲೆ ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಅಧಿಕಾರ

183, 184, 185, 189, 190, 194ಸಿ, 194ಡಿ,194ಇ ಸೆಕ್ಷನ್ ಅಡಿಯಲ್ಲಿ ವಾಹನ ಚಾಲನೆ ಪರವಾನಗಿ ಅಮಾನತು
210 ಬಿ

ಜಾರಿ ಪ್ರಾಧಿಕಾರಗಳಿಂದ ಆದ ಅಪರಾಧಗಳು

ಸೂಕ್ತ ಸೆಕ್ಷನ್ ಗಳ ಅಡಿಯಲ್ಲಿ ದುಪ್ಪಟ್ಟು ದಂಡ

***

AD/VBA/SH