Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೋಮ್ಯ‍ನಲ್ಲಿ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಇಟಲಿಯ ಪ್ರಧಾನ ಮಂತ್ರಿ ಮಾರಿಯೋ ದ್ರಾಘಿ ಅವರನ್ನು ಭೇಟಿಯಾದರು

ರೋಮ್ಯ‍ನಲ್ಲಿ ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿಯವರು ಇಟಲಿಯ ಪ್ರಧಾನ ಮಂತ್ರಿ ಮಾರಿಯೋ ದ್ರಾಘಿ ಅವರನ್ನು ಭೇಟಿಯಾದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 29 ಅಕ್ಟೋಬರ್ 2021 ರಂದು ಇಟಲಿಯ ಪ್ರಧಾನಮಂತ್ರಿ ಶ್ರೀ ಮಾರಿಯೋ ದ್ರಾಘಿ ಅವರನ್ನು ರೋಮ್ನಲ್ಲಿ ಜಿ20 ಶೃಂಗಸಭೆಯ ಸಂದರ್ಭದಲ್ಲಿ . ಇದು ಅವರ ಮೊದಲ ವೈಯಕ್ತಿಕ ಭೇಟಿಯಾಗಿತ್ತು. ಜಾಗತಿಕ ಸಾಂಕ್ರಾಮಿಕದ ನಡುವೆ ಜಿ20ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಅವರು ಪ್ರಧಾನ ಮಂತ್ರಿ ದ್ರಾಘಿ ಅವರನ್ನು ಅಭಿನಂದಿಸಿದರು. ಗ್ಲ್ಯಾಸ್ಗೋದಲ್ಲಿ ಸಿಒಪಿ-26 ಅನ್ನು ಆಯೋಜಿಸುವಲ್ಲಿ ಇಟಲಿಯು ಯುಕೆಯೊಂದಿಗೆ ಜೊತೆಗೂಡುತ್ತಿದೆ.

ಹವಾಮಾನ ಬದಲಾವಣೆಯಿಂದ ಎದುರಾಗಿರುವ ಸವಾಲುಗಳು ಮತ್ತು ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯ ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು. ಹವಾಮಾನ ಬದಲಾವಣೆಯನ್ನು ಸುಧಾರಿಸಲು ಭಾರತ ಕೈಗೊಂಡ ಕ್ರಮಗಳನ್ನು ವಿವರಿಸುವಾಗ ಅಭಿವೃದ್ಧಿ ಹೊಂದಿದ ದೇಶಗಳ ಹವಾಮಾನ ಹಣಕಾಸು ಬದ್ಧತೆಗಳ ಬಗ್ಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಕಾಳಜಿಯನ್ನು ಪ್ರಧಾನಿ ಪ್ರಸ್ತಾಪಿಸಿದರು.

ಉಭಯ ನಾಯಕರು ಅಫ್ಘಾನಿಸ್ತಾನ ಮತ್ತು ಇಂಡೋ-ಪೆಸಿಫಿಕ್ ಸೇರಿದಂತೆ ಇತ್ತೀಚಿನ ಜಾಗತಿಕ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ-ಇಯು ಬಹು ಆಯಾಮದ ಸಹಕಾರವನ್ನು ಹೆಚ್ಚಿಸಲು ಒಟ್ಟಿಗೆ ಕೆಲಸ ಮಾಡುವ ತಮ್ಮ ಬಯಕೆಯನ್ನು ಅವರು ಪುನರುಚ್ಚರಿಸಿದರು.

ದ್ವಿಪಕ್ಷೀಯ ವಿಷಯದಲ್ಲಿ, ಉಭಯ ನಾಯಕರು ನವೆಂಬರ್ 2020 ರಲ್ಲಿ ಭಾರತ-ಇಟಲಿ ವರ್ಚುವಲ್ ಶೃಂಗಸಭೆಯ ನಂತರದ ಬೆಳವಣಿಗೆಗಳನ್ನು ಪರಿಶೀಲಿಸಿದರು ಮತ್ತು ಮುಂದಿನ ಐದು ವರ್ಷಗಳಲ್ಲಿ ರಾಜಕೀಯ, ಆರ್ಥಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಕಾರ್ಯತಂತ್ರದ ಗುರಿಗಳಿದ್ದ ವರ್ಚುವಲ್ ಶೃಂಗಸಭೆಯಲ್ಲಿ ಅಳವಡಿಸಿಕೊಂಡ 2020-2025 ಕ್ರಿಯಾ ಯೋಜನೆಯ ಅನುಷ್ಠಾನದ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಉಭಯ ದೇಶಗಳ ನಡುವೆ ವಿಶೇಷವಾಗಿ ಜವಳಿ, ಆಹಾರ ಸಂಸ್ಕರಣೆ, ವಾಹನ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ನವೀಕರಿಸಬಹುದಾದ ಮತ್ತು ಶುದ್ಧ ಇಂಧನದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ಉತ್ತೇಜನವನ್ನು ನೀಡಲು, ಭಾರತ ಮತ್ತು ಇಟಲಿ ಇಂಧನ ಪರಿವರ್ತನೆಯ ಮೇಲೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸುವ ಜಂಟಿ ಹೇಳಿಕೆಯನ್ನು ನೀಡಿತು ಮತ್ತು ದೊಡ್ಡ ಪ್ರಮಾಣದ ಹಸಿರು ಕಾರಿಡಾರ್ ಯೋಜನೆಗಳು, ಸ್ಮಾರ್ಟ್ ಗ್ರಿಡ್ಗಳು, ಇಂಧನ ಸಂಗ್ರಹ ಪರಿಹಾರಗಳು, ಅನಿಲ ಸಾಗಣೆ, ಸಮಗ್ರ ತ್ಯಾಜ್ಯ ನಿರ್ವಹಣೆ (ತ್ಯಾಜ್ಯದಿಂದ ಸಂಪತ್ತಿಗೆ), ಹಸಿರು ಜಲಜನಕದ ಅಭಿವೃದ್ಧಿ ಮತ್ತು ನಿಯೋಜನೆ ಮತ್ತು ಜೈವಿಕ ಇಂಧನಗಳ ಪ್ರಚಾರ ಮುಂತಾದ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಅನ್ವೇಷಿಸಲು ಒಪ್ಪಿಕೊಂಡಿವೆ. ಭಾರತ ಮತ್ತು ಇಟಲಿ ಕೂಡ ಸಭೆಯಲ್ಲಿ ಜವಳಿ ಸಹಕಾರದ ಉದ್ದೇಶದ ಹೇಳಿಕೆಗೆ ಸಹಿ ಹಾಕಿದವು.

ಪ್ರಧಾನಮಂತ್ರಿಯವರು ಪ್ರಧಾನಿ ದ್ರಾಘಿ ಅವರಿಗೆ ಭಾರತಕ್ಕೆ ಅಧಿಕೃತ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದರು.