ಹೂಡಿಕೆದಾರರಿಗೆ ಪೂರಕ ವಾತಾವರಣ ಸೃಷ್ಟಿಗೆ ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿಕೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಇಂದು ರೈಸಿಂಗ್ ಹಿಮಾಚಲ-ಜಾಗತಿಕ ಹೂಡಿಕೆದಾರರ ಸಮ್ಮೇಳನ 2019 ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಸಂಘಟಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.
ನಂತರ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಈ ಮೇಳಕ್ಕೆ ಸಂಪತ್ತು ಸೃಷ್ಟಿಕರ್ತರನ್ನು ಸ್ವಾಗತಿಸಲು ನನಗೆ ಸಂತಸವಾಗುತ್ತಿದೆ ಎಂದರು.
ಹಿಂದೆ ಹಲವು ರಾಜ್ಯಗಳಲ್ಲಿ ಬಂಡವಾಳ ಆಕರ್ಷಣೆಗೆ ಹಲವು ಬಗೆಯ ರಿಯಾಯಿತಿಗಳನ್ನು ಪ್ರಕಟಿಸುತ್ತಿದ್ದವು ಮತ್ತು ಹೂಡಿಕೆದಾರರು ರಾಜ್ಯಗಳ ಅಂತಹ ರಿಯಾಯಿತಿ ಅಥವಾ ವಿನಾಯ್ತಿಗಳಿಗೆ ಕಾಯುತ್ತಿದ್ದರು ಎಂದು ಪ್ರಧಾನಿ ಹೇಳಿದರು.
ಆ ರೀತಿ ಪೈಪೋಟಿಗೆ ಬಿದ್ದು ಕೈಗಾರಿಕೋದ್ಯಮಿಗಳಿಗೆ ರಿಯಾಯಿತಿ ಅಥವಾ ವಿನಾಯ್ತಿಗಳನ್ನು ನೀಡುವುದರಿಂದ ರಾಜ್ಯಕ್ಕಾಗಲಿ ಅಥವಾ ಕೈಗಾರಿಕೆಗಳಿಗಾಗಲಿ ಯಾರಿಗೂ ಅನುಕೂಲವಿಲ್ಲ ಎಂಬುದು ಕಳೆದ ಕೆಲವು ವರ್ಷಗಳಿಂದೀಚೆಗೆ ರಾಜ್ಯಗಳಿಗೆ ಅರ್ಥವಾಗಿದೆ ಎಂದು ಪ್ರಧಾನಿ ಹೇಳಿದರು.
ರಾಜ್ಯಗಳಲ್ಲಿ ಹೂಡಿಕೆದಾರರಿಗೆ ಬಂಡವಾಳ ಹೂಡಲು ಅಗತ್ಯ ಪೂರಕ ವಾತಾವರಣವಿರಬೇಕು, ಅಲ್ಲಿ ಇನ್ಸ್ ಪೆಕ್ಟರ್ ರಾಜ್ ಮುಕ್ತವಾಗಿರಬೇಕು ಮತ್ತು ಪ್ರತಿಯೊಂದು ಹಂತದಲ್ಲೂ ಪರ್ಮಿಟ್ ಗಳನ್ನು ಪಡೆಯುವಂತಿರಬಾರದು ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯಗಳು ಕೈಗಾರಿಕೋದ್ಯಮಿಗಳಿಗೆ ಅಗತ್ಯವಿರುವ ಅಂತಹ ಪೂರಕ ವಾತಾವರಣ ಸೃಷ್ಟಿಗೆ ರಾಜ್ಯಗಳು ಸ್ಪರ್ಧೆಗಳಿದಿವೆ ಎಂದರು.
ಕಳೆದ ಕೆಲವು ವರ್ಷಗಳೀಂದಿಚೆಗೆ ಹಳೆಯ ಕಾನೂನುಗಳ ರದ್ದತಿ, ಉದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿ ಸೇರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ರಾಜ್ಯಗಳ ನಡುವಿನ ಆರೋಗ್ಯಕರ ಸ್ಪರ್ಧೆ ನಮ್ಮ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡಲು ಸಹಕಾರಿಯಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಇದರಿಂದ ರಾಜ್ಯಗಳಿಗೆ, ಸ್ಥಳೀಯ ಜನರಿಗೆ ಮತ್ತು ಇಡೀ ದೇಶಕ್ಕೆ ಅನುಕೂಲವಾಗಲಿದ್ದು, ಭಾರತ ಅತ್ಯಂತ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಕೈಗಾರಿಕೆಗಳು ಕೂಡ ಸ್ವಚ್ಚ ಮತ್ತು ಪಾರರ್ದಶಕ ವ್ಯವಸ್ಥೆ ಮತ್ತು ಸರ್ಕಾರಗಳನ್ನು ಬಯಸುತ್ತವೆ ಎಂದರು.
ಅನಗತ್ಯ ಕಾನೂನುಗಳು ಮತ್ತು ಸರ್ಕಾರದ ಹಸ್ತಕ್ಷೇಪಗಳು, ಕೈಗಾರಿಕೆಗಳ ಪ್ರಗತಿಯನ್ನು ತಡೆಯುತ್ತಿವೆ ಎಂದು ಹೇಳಿದರು.
ಅಂತಹ ಹಲವು ಬದಲಾವಣೆಗಳಿಂದಾಗಿ ಇಂದು ಭಾರತ, ವಾಣಜ್ಯ ಸ್ನೇಹಿ ತಾಣವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.
ಇಂದು ಭಾರತದ ಅಭಿವೃದ್ಧಿಯ ಗಾಥೆಯ ವಾಹನ ಹೊಸ ಆಲೋಚನೆ ಮತ್ತು ಹೊಸ ದೃಷ್ಟಿಕೋನದೊಂದಿಗೆ ಅತ್ಯಂತ ವೇಗದಲ್ಲಿ ಮುನ್ನುಗುತ್ತಿದೆ, ಅದು ನಾಲ್ಕು ಚಕ್ರಗಳಿಂದ ಸಾಗುತ್ತಿದ್ದು, ಅವುಗಳೆಂದರೆ –“ಸಮಾಜ, ನವಭಾರತವನ್ನು ಉತ್ತೇಜಿಸುತ್ತಿರುವ ಸರ್ಕಾರ, ಧೈರ್ಯದಿಂದ ಮುನ್ನುಗುತ್ತಿರುವ ಕೈಗಾರಿಕೆ ಮತ್ತು ಹಂಚಿಕೆ ಮನೋಭಾವದ ಜ್ಞಾನ’’ ಎಂದು ಅವರು ಹೇಳಿದರು.
ಕೈಗಾರಿಕೆಗಳಿಗೆ ಪೂರಕ ವಾತಾವರಣ ಶ್ರೇಯಾಂಕದಲ್ಲಿ ಭಾರತದ ಸ್ಥಾನ 2014ರಿಂದ 2019ರ ನಡುವೆ 79 ಸ್ಥಾನಗಳು ವೃದ್ಧಿಯಾಗಿವೆ ಎಂದು ಪ್ರಧಾನಿ ಹೇಳಿದರು. ಅವರು “ನಾವು ಪ್ರತಿವರ್ಷ ಅಂತಹ ಮಾನದಂಡಗಳನ್ನು ಸುಧಾರಿಸುತ್ತಿದ್ದೇವೆ. ಕೈಗಾರಿಕೆಗಳಿಗೆ ತಳಮಟ್ಟದಲ್ಲಿ ಬೇಕಾಗಿರುವ ಅಗತ್ಯತೆಗಳನ್ನು ಗುರ್ತಿಸಿ, ಅವುಗಳನ್ನು ಅರ್ಥಮಾಡಿಕೊಂಡು ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ನಮ್ಮ ಸರ್ಕಾರ ಶ್ರೇಯಾಂಕದಲ್ಲಿ ಸುಧಾರಣೆಗಳನ್ನು ತರುತ್ತಿದೆ ಎಂದರ್ಥ’’ ಎಂದರು.
“ಇದು ಕೇವಲ ಶ್ರೇಯಾಂಕಗಳ ಸುಧಾರಣೆಯಲ್ಲ, ಭಾರತದ ಉದ್ಯಮದಲ್ಲಿ ಬಹುದೊಡ್ಡ ಕ್ರಾಂತಿಯಾಗಿದೆ. ಇಂದಿನ ಜಾಗತಿಕ ಸನ್ನಿವೇಶದಲ್ಲಿ, ಭಾರತ ಸದೃಢವಾಗಿ ಮುನ್ನಡೆಯುತ್ತಿದೆ, ನಾವು ನಮ್ಮ ಆರ್ಥಿಕ ಮೂಲತತ್ವಗಳನ್ನು ದುರ್ಬಲವಾಗಲು ಬಿಟ್ಟಿಲ್ಲ’’ ಎಂದು ಹೇಳಿದರು.
ದಿವಾಳಿತನ ಮತ್ತು ದೀವಾಳಿ ಸಂಹಿತೆ ಮೂಲಕ ನಷ್ಟದಲ್ಲಿರುವ ಕೈಗಾರಿಕೆಗಳು ಹೊರ ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪುನಾರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಮಧ್ಯಮ ವರ್ಗಕ್ಕೆ ಅನುಕೂಲವಾಗುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ. ಇದರಿಂದ ದೇಶಾದ್ಯಂತ ಮನೆಗಳಾಗಿ ತಮ್ಮ ಹಣ ಹೂಡಿಕೆ ಮಾಡಿದ್ದ 4.58 ಲಕ್ಷ ಕುಟುಂಬಗಳಿಗೆ ನೆರವಾಗಲಿದ್ದು, ಆ ಕುಟುಂಬಗಳಿಗೆ ತಮ್ಮ ಮನೆಗಳು ದೊರಕಲಿವೆ.
ಹೊಸ ದೇಶಿಯ ಕಂಪನಿಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಕಾರ್ಪೋರೇಟ್ ತೆರಿಗೆಯನ್ನು ಶೇ.15 ರಷ್ಟು ಕಡಿತಗೊಳಿಸಿದೆ ಎಂದರು.
ಜಾಗತಿಕ ಪ್ರತಿನಿಧಿಗಳು ಮತ್ತು ಉದ್ಯಮ, ಭಾರತವನ್ನು ಬಂಡವಾಳ ಹೂಡಿಕೆಗೆ ಒಂದು ಅತ್ಯಂತ ಪ್ರಶಸ್ತ ಮತ್ತು ಸೂಕ್ತ ತಾಣವೆಂಬ ದೃಷ್ಟಿಯಿಂದ ನೋಡಬೇಕು ಎಂದು ಪ್ರಧಾನಿ ಮನವಿ ಮಾಡಿದರು.
ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಲಾಗಿದ್ದು, ಅದರಿಂದ ಹಿಮಾಚಲ ಪ್ರದೇಶ ರಾಜ್ಯಕ್ಕೂ ಅನುಕೂಲವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಹಿಮಾಚಲ ಪ್ರದೇಶ ಸರ್ಕಾರ ತನ್ನ ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸ್ನೇಹಿ ವಾತಾವರಣ ಸೃಷ್ಟಿಗೆ ಹಲವು ಕ್ರಮಗಳನ್ನು ಕೈಗೊಂಡಿರುವುದಕ್ಕೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯವನ್ನು ಬಂಡವಾಳ ಹೂಡಿಕೆದಾರರ ಸ್ನೇಹಿ ಮಾಡುವ ನಿಟ್ಟಿನಲ್ಲಿ ಏಕಗವಾಕ್ಷಿ ಯೋಜನೆ, ವಲಯವಾರು ನೀತಿಗಳು, ಭೂ ಹಂಚಿಕೆಗೆ ಪಾರದರ್ಶಕ ವ್ಯವಸ್ಥೆ ಮತ್ತಿತರ ರಾಜ್ಯ ಸರ್ಕಾರ ಕೈಗೊಂಡಿರುವ ಅಂಶಗಳನ್ನು ಪ್ರಧಾನಿ ಉಲ್ಲೇಖಿಸಿದರು.
ಹಿಮಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ ಎಂದು ಪ್ರಧಾನಿ ಬಣ್ಣಿಸಿದರು.
ಹಿಮಾಚಲ ಪ್ರದೇಶದಲ್ಲಿ ಲಭ್ಯವಿರುವ ಬಂಡವಾಳ ಹೂಡಿಕೆ ಅವಕಾಶಗಳು ಮತ್ತು ಸಾಮರ್ಥ್ಯಗಳನ್ನು ಬಿಂಬಿಸುವ ಪ್ರದರ್ಶನಕ್ಕೂ ಪ್ರಧಾನಮಂತ್ರಿ ಭೇಟಿ ನೀಡಿದ್ದರು.
ಪ್ರಧಾನಮಂತ್ರಿ ಅವರು ಮೇಳದ ಅಂಗವಾಗಿ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿದರು.
ಈ ಜಾಗತಿಕ ಹೂಡಿಕೆದಾರರ ಸಮ್ಮೇಳನಕ್ಕೆ ಯುಎಇ ಪಾಲುದಾರ ರಾಷ್ಟ್ರವಾಗಿದೆ. ಮೇಳದಲ್ಲಿ 200 ಅಂತಾರಾಷ್ಟ್ರೀಯ ಪ್ರತಿನಿಧಿಗಳೂ ಸೇರಿ ಸುಮಾರು 1700 ವಾಣಿಜ್ಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು.I
धर्मशाला में ग्लोबल इन्वेस्टर समिट !
— PMO India (@PMOIndia) November 7, 2019
ये कल्पना नहीं, सच्चाई है, अभूतपूर्व है, अद्भुत है।ये हिमाचल प्रदेश का एक स्टेटमेंट है, पूरे देश को, पूरी दुनिया को, कि हम भी अब कमर कस चुके हैं।
आज हिमाचल कह रहा है- Yes, We Have Arrived: PM @narendramodi pic.twitter.com/q0IOGSBPPj
पहले इस प्रकार के Investors Summits देश के कुछ ही राज्यों में हुआ करते थे।यहां अनेक ऐसे साथी मौजूद हैं जिन्होंने पहले की स्थितियां देखी हैं।
— PMO India (@PMOIndia) November 7, 2019
लेकिन अब स्थितियां बदल रही हैं और इसकी एक गवाह यहां हिमाचल में हो रही ये समिट भी है: PM @narendramodi pic.twitter.com/16lgtHZpYS
बेवजह के नियम कायदे, सरकार का बहुत ज्यादा दखल कहीं न कहीं उद्योगों के बढ़ने की रफ्तार को रोकता है।मुझे खुशी है कि इसी सोच के साथ हिमाचल प्रदेश सरकार भी काम कर रही है: PM @narendramodi pic.twitter.com/a06UglwpYM
— PMO India (@PMOIndia) November 7, 2019
आज भारत में विकास की गाड़ी नई सोच, नई अप्रोच के साथ 4 Wheels पर चल रही है।एक Wheel सोसायटी का, जो Aspiring है।एक Wheel सरकार का, जो नए भारत के लिए Encouraging है।
— PMO India (@PMOIndia) November 7, 2019
एक Wheel Industry का, जो Daring है।और एक Wheel ज्ञान का, जो Sharing है: PM @narendramodi pic.twitter.com/M8fnsXGCa8
आज के ग्लोबल सीनेरियो में, भारत अगर आज मजबूती से खड़ा है, तो इसलिए, क्योंकि हमने अपनी अर्थव्यवस्था के फंडामेंटल्स को कमजोर नहीं पड़ने दिया है।हमने Macro-economic में अपनी प्रतिबद्धता निरंतर बनाए रखी है और Fiscal Discipline का कड़ाई से पालन किया है: PM @narendramodi pic.twitter.com/Z9OBPADZ68
— PMO India (@PMOIndia) November 7, 2019
कल ही हमने देश के मध्यम वर्ग को ध्यान में रखते हुए एक और बड़ा फैसला लिया है। इस फैसले से साढ़े चार लाख से ज्यादा परिवारों के, अपने घर के सपनों को, उनके बरसों से अधूरे सपनों को पूरा करने में मदद मिलेगी: PM @narendramodi pic.twitter.com/AkFkESKCmM
— PMO India (@PMOIndia) November 7, 2019
हमारे यहां हर राज्य में अनेक संभावनाएं हैं, राज्य के हर जिले में अनेक संभावनाएं हैं, बहुत Potential है।इस Potential का जितना ज्यादा लाभ सरकारें, हमारा उद्योग जगत, हमारे लघु उद्योग, हमारा सर्विस सेक्टर उठाएगा, उतनी ही तेजी से हम आगे बढ़ेंगे: PM @narendramodi pic.twitter.com/Y7EKZ3gW2A
— PMO India (@PMOIndia) November 7, 2019
पहले हिमाचल में एक Gap महसूस होता था।ये Gap था Quality Infrastructure और सरकारी प्रक्रियाओं के सरलीकरण का।केंद्र सरकार ने राज्य सरकार के साथ मिलकर इस Gap को भरने की पूरी कोशिश की है: PM @narendramodi pic.twitter.com/f8fQd8BsjW
— PMO India (@PMOIndia) November 7, 2019
हिमाचल प्रदेश देश के रक्षा क्षेत्र की भी बहुत बड़ी ताकत है। यहां का कोई परिवार ऐसा नहीं है जो सैन्य बल न जुड़ा हो।हमारे रिटायर्ड फौजियों के तौर पर हिमाचल प्रदेश के पास उनका अनुभव, बहुत बड़ा Skill-Set है: PM @narendramodi pic.twitter.com/JLrVcJHbhb
— PMO India (@PMOIndia) November 7, 2019
हिमाचल की Community और यहां का Potential, आपकी Capital, और यहां की Policy में Clarity, बहुत बड़े परिवर्तन का माध्यम बनेगी।और जब आप यहां के युवाओं को अधिक से अधिक अवसर देंगे, उनके Talent का उपयोग करेंगे, तो ये लाभ कई गुना बढ़ जाएगा: PM @narendramodi pic.twitter.com/ybuczWSTa0
— PMO India (@PMOIndia) November 7, 2019