Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೈಲ್ವೆ ಉದ್ಯೋಗಿಗಳಿಗೆ 78 ದಿನಗಳವರೆಗೆ ಉತ್ಪಾದಕತೆ ಆಧಾರಿತ ಬೋನಸ್ (ಪಿ.ಎಲ್.ಬಿ) ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ ಮತ್ತು ಪ್ರಕಟಿಸಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ರೈಲ್ವೆ ಸಿಬ್ಬಂದಿಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ, 11,72,240 ರೈಲ್ವೆ ಉದ್ಯೋಗಿಗಳಿಗೆ  ರೂ. 2028.57 ಕೋಟಿ ಮೊತ್ತದ 78 ದಿನಗಳ ಉತ್ಪಾದಕತೆ ಆಧಾರಿತ ಬೋನಸ್ (ಪಿ.ಎಲ್.ಬಿ) ಅನ್ನು ಅನುಮೋದಿಸಿದೆ ಮತ್ತು ಪ್ರಕಟಿಸಿದೆ.

ಟ್ರ್ಯಾಕ್ ನಿರ್ವಾಹಕರು, ಲೋಕೋ ಪೈಲಟ್ ಗಳು, ರೈಲು ನಿರ್ವಾಹಕರು (ಗಾರ್ಡ್ ಗಳು), ಸ್ಟೇಷನ್ ಮಾಸ್ಟರ್ ಗಳು, ಮೇಲ್ವಿಚಾರಕರು, ಹಿರಿಯ ತಂತ್ರಜ್ಞರು, ತಂತ್ರಜ್ಞ ಸಹಾಯಕರು, ಪಾಯಿಂಟ್ಸ್ ಮನ್, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಎಕ್ಸ್.ಸಿ. ಶ್ರೇಣಿಯ ಸಿಬ್ಬಂದಿಯಂತಹ ವಿವಿಧ ವರ್ಗಗಳ ರೈಲ್ವೆ ಸಿಬ್ಬಂದಿಗೆ ಉತ್ಪಾದಕತೆ ಆಧಾರಿತ ಬೋನಸ್ (ಪಿ.ಎಲ್.ಬಿ) ಮೊತ್ತವನ್ನು ಪಾವತಿಸಲಾಗುತ್ತದೆ. ಈ ಉತ್ಪಾದಕತೆ ಆಧಾರಿತ ಬೋನಸ್ (ಪಿ.ಎಲ್.ಬಿ) ಪಾವತಿಯು,  ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಇನ್ನಷ್ಟು ಕೆಲಸ ಮಾಡಲು ರೈಲ್ವೆ ಉದ್ಯೋಗಿಗಳನ್ನು ಪ್ರೇರೇಪಿಸಲು ಪ್ರೋತ್ಸಾಹಕವಾಗಿ ಕಾರ್ಯನಿರ್ವಹಿಸುತ್ತದೆ.

ಅರ್ಹ ರೈಲ್ವೆ ಉದ್ಯೋಗಿಗಳಿಗೆ ಪಿ.ಎಲ್.ಬಿ.ಯ ಪಾವತಿಯನ್ನು ಪ್ರತಿ ವರ್ಷ ದುರ್ಗಾ ಪೂಜೆ / ದಸರಾ ರಜೆಗಳ ಮೊದಲು ಮಾಡಲಾಗುತ್ತದೆ. ಈ ವರ್ಷವೂ ಸುಮಾರು 11.72 ಲಕ್ಷ ಮಂದಿ ಗೆಜೆಟೆಡ್ ಅಲ್ಲದ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮನಾದ ಪಿ ಎಲ್ ಬಿ ಮೊತ್ತವನ್ನು ಪಾವತಿಸಲಾಗುತ್ತಿದೆ.

ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬೇಕಾದ ಗರಿಷ್ಠ ಮೊತ್ತವು 78 ದಿನಗಳವರೆಗೆ ರೂ.17,951/- ಆಗಿದೆ. ವಿವಿಧ ವರ್ಗಗಳ ರೈಲ್ವೆ ಸಿಬ್ಬಂದಿಗಳಾದ ಟ್ರ್ಯಾಕ್ ನಿರ್ವಾಹಕರು, ಲೊಕೊ ಪೈಲಟ್ಗಳು, ರೈಲು ವ್ಯವಸ್ಥಾಪಕರು (ಗಾರ್ಡ್ಗಳು), ಸ್ಟೇಷನ್ ಮಾಸ್ಟರ್ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ಪಾಯಿಂಟ್ಮನ್, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಗ್ರೂಪ್ ‘ಸಿ ಸಿಬ್ಬಂದಿಗಳಿಗೆ ಈ ಉನ್ನತ  ಮೊತ್ತವನ್ನು ಪಾವತಿಸಲಾಗುತ್ತದೆ.

2023-2024ರಲ್ಲಿ ರೈಲ್ವೆಯ ಕಾರ್ಯಕ್ಷಮತೆ ಉತ್ತಮವಾಗಿತ್ತು. ರೈಲ್ವೆಯು 1588 ಮಿಲಿಯನ್ ಟನ್ ಗಳ ದಾಖಲೆಯ ಸರಕುಗಳನ್ನು ಲೋಡ್ ಮಾಡಿ ಸಾಗಾಟ ಮಾಡಿತ್ತು,  ಮತ್ತು ಸುಮಾರು 6.7 ಬಿಲಿಯನ್ ಪ್ರಯಾಣಿಕರನ್ನು ಸಾಗಿಸಿತ್ತು.

ಈ ದಾಖಲೆಯ ಕಾರ್ಯಕ್ಷಮತೆಗೆ ರೈಲ್ವೇಯಲ್ಲಿ ಸರ್ಕಾರದಿಂದ ದಾಖಲೆಗಾತ್ರದಲ್ಲಿ ಹೆಚ್ಚುವರಿ ಹಣಕಾಸಿನ ಒಳಹರಿವಿನಿಂದಾಗಿ ಮೂಲಸೌಕರ್ಯದಲ್ಲಿನ ಸುಧಾರಣೆ, ಕಾರ್ಯಾಚರಣೆಗಳಲ್ಲಿ ದಕ್ಷತೆ ಮತ್ತು ಉತ್ತಮ ತಂತ್ರಜ್ಞಾನ ಇತ್ಯಾದಿಗಳು ಸೇರಿ, ಹಲವು ಅಂಶಗಳು ಕೊಡುಗೆ ನೀಡಿವೆ.
 

*****