2025ರ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಉಲ್ಲೇಖಿಸಿಕೊಂಡು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ರೈತರ ಕಲ್ಯಾಣವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಸಂಪೂರ್ಣ ಬದ್ಧವಾಗಿದೆ” ಎಂದು ಇಂದು ಪುನರುಚ್ಚರಿಸಿದರು.
ತಮ್ಮ ‘ಎಕ್ಸ್’ ಖಾತೆಯ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಬರೆದಿದ್ದಾರೆ:
“ನಮ್ಮದು ರೈತರ ಕಲ್ಯಾಣಕ್ಕೆ ಸಂಪೂರ್ಣ ಬದ್ಧವಾಗಿರುವ ಸರ್ಕಾರ. ನಮ್ಮ ದೇಶವನ್ನು ಪೋಷಿಸಲು ಶ್ರಮಿಸುತ್ತಿರುವ ನಮ್ಮ ಎಲ್ಲಾ ರೈತ ಸಹೋದರ ಸಹೋದರಿಯರ ಬಗ್ಗೆ ನಮಗೆ ಹೆಮ್ಮೆ ಇದೆ. 2025 ರ ಮೊದಲ ಸಚಿವ ಸಂಪುಟ ಸಭೆಯನ್ನು ಸಂಪೂರ್ಣವಾಗಿ ನಮ್ಮ ರೈತರ ಸಮೃದ್ಧಿಯನ್ನು ಹೆಚ್ಚಿಸಲು ಸಮರ್ಪಿಸಲಾಗಿದೆ. ರೈತರ ಕ್ಷೇಮಾಭಿವೃದ್ದಿಯ ನಿಟ್ಟಿನಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ.”
*****
Ours is a Government fully committed to furthering welfare of farmers. We are proud of all our farmer sisters and brothers who work hard to feed our nation. The first Cabinet of 2025 is dedicated to enhancing prosperity for our farmers. I am glad that key decisions have been…
— Narendra Modi (@narendramodi) January 1, 2025