Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರೈತರಿಗೆ ಅಗ್ಗದ ಬೆಲೆಯಲ್ಲಿ ಗುಣಮಟ್ಟದ ಯೂರಿಯಾ ಒದಗಿಸಲು ರೂ 10 ಲಕ್ಷ ಕೋಟಿ ಸಹಾಯಧನ ನೀಡಲಾಗಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ರೈತರಿಗೆ ನೀಡಿರುವ ಯೂರಿಯಾ ಸಹಾಯಧನದ ಮಾಹಿತಿ ತಿಳಿಸಿದ್ದಾರೆ.  “ಜಾಗತಿಕವಾಗಿ ಪ್ರತಿ ಚೀಲಕ್ಕೆ 3,000 ರೂಪಾಯಿ ಬೆಲೆಯ ಯೂರಿಯಾವನ್ನು ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಪ್ರತಿ ಚೀಲಕ್ಕೆ ರೂ.300ಯಲ್ಲಿ  (ಅಂದರೆ ಸರಿಸುಮಾರು 90% ರಷ್ಟು ರಿಯಾಯಿತಿಯಲ್ಲಿ) ನೀಡಲು ಕೇಂದ್ರ ಸರಕಾರವು ಯೂರಿಯಾ ಸಹಾಯಧನವಾಗಿ ರೂ. 10 ಲಕ್ಷ ಕೋಟಿ ನೀಡಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

PM India

ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ 3,000 ರೂ.ಗಿಂತ ಅಧಿಕ ಬೆಲೆಗೆ ಮಾರಾಟವಾಗುವ ಯೂರಿಯಾ ಚೀಲಗಳನ್ನು ಭಾರತೀಯ ರೈತರಿಗೆ ರೂಪಾಯಿ 300 ಗಿಂತ ನೀಡಲಾಗುತ್ತಿದೆ ಎಂದು ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ತಿಳಿಸಿದರು.  ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ರೂ 3,000ಕ್ಕಿಂತ ಅಧಿಕ ಬೆಲೆಯಲ್ಲಿ ಮಾರಾಟವಾಗುವ ಯೂರಿಯಾವನ್ನು, ಈಗ ಕೇಂದ್ರ ಸರಕಾರವು ನಮ್ಮ ರೈತರಿಗೆ ಕೇವಲ ರೂ. 300ಗಿಂತ ಹೆಚ್ಚಿಲ್ಲದಂತೆ ನೀಡುತ್ತಿದ್ದು , ಇದಕ್ಕಾಗಿ 10 ಲಕ್ಷ ಕೋಟಿ ರೂಪಾಯಿ ಸಹಾಯಧನವನ್ನು ನೀಡಲಾಗಿದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು
 

***