ಏಷ್ಯಾದ ಅತಿದೊಡ್ಡ ವಿದ್ಯುತ್ ಯೋಜನೆಯಾದ ರೇವಾ ಅಲ್ಟ್ರಾ ಬೃಹತ್ ಸೌರ ವಿದ್ಯುತ್ ಯೋಜನೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ರೇವಾ ಯೋಜನೆಯು ಈ ದಶಕದಲ್ಲಿ ಇಡೀ ಪ್ರದೇಶವನ್ನು ಶುದ್ಧ ಮತ್ತು ಸ್ವಚ್ಛ ಇಂಧನದ ಪ್ರಮುಖ ಕೇಂದ್ರವನ್ನಾಗಿ ಮಾಡುತ್ತದೆ. ಸುತ್ತಮುತ್ತಲಿನ ಪ್ರದೇಶದೊಂದಿಗೆ ದೆಹಲಿ ಮೆಟ್ರೊಗೂ ವಿದ್ಯುತ್ ಸರಬರಾಜು ಮಾಡಲಿರುವ ರೇವಾ ಯೋಜನೆಯ ಬಗ್ಗೆ ಪ್ರಧಾನ ಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.
ನೀಮುಚ್, ಶಾಜಾಪುರ, ಛತ್ತರ್‌ಪುರ ಮತ್ತು ಓಂಕಾರೇಶ್ವರದಲ್ಲಿ ಇಂತಹ ಪ್ರಮುಖ ಯೋಜನೆಗಳು ಪ್ರಗತಿಯಲ್ಲಿರುವ ಕಾರಣ ಮಧ್ಯಪ್ರದೇಶವು ಭಾರತದ ಸೌರಶಕ್ತಿಯ ಮುಖ್ಯ ಕೇಂದ್ರವಾಗಲಿದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದ ಬಡವರು, ಮಧ್ಯಮ ವರ್ಗದವರು, ಬುಡಕಟ್ಟು ಜನಾಂಗದವರು ಹಾಗೂ ರೈತರು ಇದರ ದೊಡ್ಡ ಫಲಾನುಭವಿಗಳು ಎಂದು ಅವರು ಹೇಳಿದರು.
ಸೌರಶಕ್ತಿಯನ್ನು ‘ಖಚಿತ, ಶುದ್ಧ ಮತ್ತು ಸುರಕ್ಷಿತ’ಎಂದು ಬಣ್ಣಿಸಿದ ಪ್ರಧಾನಿಯವರು. ಸೂರ್ಯನಿಂದ ನಿರಂತರವಾಗಿ ಶಕ್ತಿಯ ಪೂರೈಕೆಯಿಂದಾಗಿ ಖಚಿತವಾಗಿ, ಇದು ಪರಿಸರ ಸ್ನೇಹಿಯಾಗಿರುವುದರಿಂದ ಶುದ್ದ ಮತ್ತು ಇದು ನಮ್ಮ ಶಕ್ತಿಯ ಅಗತ್ಯಗಳಿಗೆ ಸುರಕ್ಷಿತ ಮೂಲವಾಗಿರುವುದರಿಂದ ಸುರಕ್ಷಿತವಾದ್ದು ಎಂದರು.
ಇಂತಹ ಸೌರಶಕ್ತಿ ಯೋಜನೆಗಳು ಸ್ವಾವಲಂಬಿ ಭಾರತದ ನಿಜವಾದ ಪ್ರತಿನಿಧಿಗಳು. 21 ನೇ ಶತಮಾನದಲ್ಲಿ ಮಹತ್ವಾಕಾಂಕ್ಷೆಯ ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಸೌರಶಕ್ತಿ ಪ್ರಮುಖ ಮಾಧ್ಯಮವಾಗಲಿದೆ ಎಂದು ಪ್ರಧಾನಿ ಹೇಳಿದರು.
ಆರ್ಥಿಕತೆಯು ಸ್ವಾವಲಂಬನೆ ಮತ್ತು ಪ್ರಗತಿಯ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು. ಆರ್ಥಿಕತೆ ಅಥವಾ ಪರಿಸರದಲ್ಲಿ ಯಾವುದರ ಬಗ್ಗೆ ಗಮನ ಹರಿಸಬೇಕೆಂಬ ಸಂದಿಗ್ಧತೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಸೌರಶಕ್ತಿ ಯೋಜನೆಗಳು ಮತ್ತಿತರ ಪರಿಸರ ಸ್ನೇಹಿ ಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಭಾರತವು ಇಂತಹ ಸಂದಿಗ್ಧತೆಗಳನ್ನು ಬಗೆಹರಿಸಿದೆ ಎಂದು ಹೇಳಿದರು. ಆರ್ಥಿಕತೆ ಮತ್ತು ಪರಿಸರ ಪರಸ್ಪರ ವಿರೋಧಿಗಳಲ್ಲ. ಬದಲಿಗೆ ಪರಸ್ಪರ ಪೂರಕವಾದವು ಎಂದು ಶ್ರೀ ಮೋದಿ ಹೇಳಿದರು.
ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಗಮ ಜೀವನಕ್ಕೆ ಆದ್ಯತೆ ನೀಡಲಾಗುತ್ತಿದೆ. ಸ್ವಚ್ಛ ಭಾರತ, ಬಡವರ ಮನೆಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ, ಸಿಎನ್‌ಜಿ ಜಾಲದ ಅಭಿವೃದ್ಧಿ ಮುಂತಾದ ಕಾರ್ಯಕ್ರಮಗಳು ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಸುಧಾರಿಸಿವೆ ಎಮದು ಅವರು ಹೇಳಿದರು.
ಪರಿಸರದ ಸಂರಕ್ಷಣೆ ಕೇವಲ ಕೆಲವು ಯೋಜನೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಅದು ಜೀವನದ ಮಾರ್ಗವಾಗಿದೆ ಎಂದು ಪ್ರಧಾನಿ ಹೇಳಿದರು.
ನವೀಕರಿಸಬಹುದಾದ ಇಂಧನದ ಬೃಹತ್ ಯೋಜನೆಗಳು ಪ್ರಾರಂಭವಾಗುವಾಗ ಶುದ್ಧ ಇಂಧನದ ಬಗೆಗಿನ ದೃಢನಿಶ್ಚಯವು ಜೀವನದ ಪ್ರತಿಯೊಂದು ಕೋನಗಳಲ್ಲೂ ಕಂಡುಬರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಅದರ ಪ್ರಯೋಜನಗಳು ದೇಶದ ಮೂಲೆ ಮೂಲೆಯಲ್ಲಿ, ಸಮಾಜದ ಪ್ರತಿಯೊಂದು ವರ್ಗಕ್ಕೆ, ಪ್ರತಿಯೊಬ್ಬ ನಾಗರಿಕನಿಗೆ ತಲುಪುವಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಎಲ್‌ಇಡಿ ಬಲ್ಬ್‌ಗಳ ಪರಿಚಯವು ವಿದ್ಯುತ್ ಬಿಲ್ ಅನ್ನು ಹೇಗೆ ಕಡಿಮೆ ಮಾಡಿದೆ ಎಂಬುದು ಇದಕ್ಕೊಂದು ನಿದರ್ಶನ ಎಂದು ಅವರು ಹೇಳಿದರು. ಎಲ್ಇಡಿ ಬಲ್ಬ್‌ನಿಂದಾಗಿ ಸುಮಾರು 40 ದಶಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಪರಿಸರಕ್ಕೆ ಸೇರುವುದು ನಿಂತಿದೆ. ಇದು ಸುಮಾರು 6 ಬಿಲಿಯನ್ ಯೂನಿಟ್ ಗಳಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿದೆ ಮತ್ತು ಬೊಕ್ಕಸಕ್ಕೆ 24,000 ಕೋಟಿ ರೂ.ಉಳಿತಾಯ ತಂದಿದೆ ಎಂದು ಅವರು ವಿವರಿಸಿದರು.
ನಮ್ಮ ಪರಿಸರ, ನಮ್ಮ ಗಾಳಿ, ನಮ್ಮ ನೀರು ಶುದ್ಧವಾಗಿರಲು ಸರ್ಕಾರ ಕೆಲಸ ಮಾಡುತ್ತಿದೆ ಮತ್ತು ಈ ಚಿಂತನೆಯು ಸೌರಶಕ್ತಿ ಕುರಿತ ನೀತಿ ಮತ್ತು ಕಾರ್ಯತಂತ್ರದಲ್ಲೂ ಪ್ರತಿಫಲಿಸುತ್ತಿದೆ ಎಂದು ಅವರು ಹೇಳಿದರು.
ಸೌರಶಕ್ತಿ ಕ್ಷೇತ್ರದಲ್ಲಿ ಭಾರತದ ಮಾದರಿ ಪ್ರಗತಿಯು ವಿಶ್ವಕ್ಕೆ ಆಸಕ್ತಿಯ ಪ್ರಮುಖ ಮೂಲವಾಗಲಿದೆ ಎಂದ ಪ್ರಧಾನಿಯವರು, ಅಂತಹ ಪ್ರಮುಖ ಕ್ರಮಗಳಿಂದಾಗಿ, ಭಾರತವನ್ನು ಶುದ್ಧ ಇಂಧನದ ಅತ್ಯಂತ ಆಕರ್ಷಕ ಮಾರುಕಟ್ಟೆಯೆಂದು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.
ಸೌರಶಕ್ತಿಯ ವಿಷಯದಲ್ಲಿ ಇಡೀ ಜಗತ್ತನ್ನು ಒಂದುಗೂಡಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಸೌರ ಒಕ್ಕೂಟವನ್ನು (ಐಎಸ್‌ಎ) ಪ್ರಾರಂಭಿಸಲಾಗಿದೆ. ಒನ್ ವರ್ಲ್ಡ್, ಒನ್ ಸನ್, ಒನ್ ಗ್ರಿಡ್ ಇದರ ಹಿಂದಿರುವ ಸ್ಫೂರ್ತಿ ಎಂದು ಪ್ರಧಾನಿ ಹೇಳಿದರು.
ಮಧ್ಯಪ್ರದೇಶದ ರೈತರು ಸರ್ಕಾರದ ಕುಸುಮ್ ಕಾರ್ಯಕ್ರಮವನ್ನು ಸಹ ಬಳಸಿಕೊಳ್ಳುತ್ತಾರೆ ಮತ್ತು ಹೆಚ್ಚುವರಿ ಆದಾಯದ ಮೂಲವಾಗಿ ತಮ್ಮ ಭೂಮಿಯಲ್ಲಿ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಶೀಘ್ರದಲ್ಲೇ ಭಾರತವು ವಿದ್ಯುತ್ ರಫ್ತು ಮಾಡುವ ಪ್ರಮುಖ ದೇಶವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ದ್ಯುತಿವಿದ್ಯುಜ್ಜನಕ ಕೋಶಗಳು, ಬ್ಯಾಟರಿ ಮತ್ತು ಸಂಗ್ರಹಣೆಯಂತಹ ಸೌರ ಸ್ಥಾವರಗಳಿಗೆ ಅಗತ್ಯವಾದ ವಿವಿಧ ಯಂತ್ರಾಂಶಗಳ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಗಮನ ಹರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ಈ ನಿಟ್ಟಿನಲ್ಲಿ ಕೆಲಸವು ಪ್ರಗತಿಯಲ್ಲಿದೆ ಮತ್ತು ಉದ್ಯಮ, ಯುವಕರು, ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್ಅಪ್‌ಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸರ್ಕಾರ ಪ್ರೋತ್ಸಾಹಿಸುತ್ತಿದೆ ಮತ್ತು ಸೌರಶಕ್ತಿಗೆ ಅಗತ್ಯವಿರುವ ಸುಧಾರಣೆಯ ಬಗ್ಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಉಲ್ಲೇಖಿಸಿದ ಪ್ರಧಾನಿಯವರು, ಈ ಕಠಿಣ ಸವಾಲನ್ನು ಎದುರಿಸಲು ಸಹಾನುಭೂತಿ ಮತ್ತು ಜಾಗರೂಕತೆಯು ಸರ್ಕಾರ ಅಥವಾ ಸಮಾಜಕ್ಕೆ ಉತ್ತಮ ಪ್ರೇರಕವಾಗಿವೆ ಎಂದು ಹೇಳಿದರು. ಲಾಕ್‌ಡೌನ್‌ನ ಆರಂಭದಿಂದಲೇ ಬಡವರು ಮತ್ತು ನಿರ್ಗತಿಕರು ಆಹಾರ ಮತ್ತು ಇಂಧನ ಪೂರೈಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲಾಯಿತು ಎಂದರು. ಅದೇ ಮನೋಭಾವದಿಂದಲೇ, ಅನ್ಲಾಕ್ ಹಂತದಲ್ಲಿಯೂ ಸಹ ಈ ವರ್ಷದ ನವೆಂಬರ್ ವರೆಗೆ ಉಚಿತ ಆಹಾರ ಮತ್ತು ಎಲ್ಪಿಜಿಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು.
ಅಷ್ಟೇ ಅಲ್ಲ, ಲಕ್ಷಾಂತರ ಖಾಸಗಿ ವಲಯದ ಉದ್ಯೋಗಿಗಳ ಇಪಿಎಫ್ ಖಾತೆಗೆ ಸರ್ಕಾರ ಸಂಪೂರ್ಣ ಕೊಡುಗೆ ನೀಡುತ್ತಿದೆ. ಹಾಗೆಯೇ, ಪಿಎಂ-ಸ್ವನಿಧಿ ಯೋಜನೆಯ ಮೂಲಕ, ವ್ಯವಸ್ಥೆಯ ಕನಿಷ್ಠ ಲಭ್ಯತೆ ಹೊಂದಿರುವವರು ಪ್ರಯೋಜನ ಪಡೆಯುತ್ತಿದ್ದಾರೆ.
ಜನರು ತಮ್ಮ ಮನೆಯಿಂದ ಹೊರಬಂದಾಗ ಎರಡು ಗಜಗಳಷ್ಟು ಅಂತರವನ್ನು ಕಾಪಾಡಿಕೊಳ್ಳುವುದು, ಮುಖಗವಸು ಧರಿಸುವುದು ಮತ್ತು ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈ ತೊಳೆಯುವ ನಿಯಮಗಳನ್ನು ಪಾಲಿಸುವ ಮೂಲಕ ಮಧ್ಯಪ್ರದೇಶವನ್ನು ಮಾದರಿಯನ್ನಾಗಿ ಮಾಡಬೇಕು ಎಂದು ಪ್ರಧಾನಿಯವರು ಕರೆಕೊಟ್ಟರು.
आज रीवा ने वाकई इतिहास रच दिया है।
— PMO India (@PMOIndia) July 10, 2020
रीवा की पहचान मां नर्मदा के नाम से और सफेद बाघ से रही है।
अब इसमें एशिया के सबसे बड़े सोलर पावर प्रोजेक्ट का नाम भी जुड़ गया है: PM @narendramodi dedicating Rewa Ultra Mega Solar Power project to the Nation
इसके लिए मैं रीवा के लोगों को, मध्य प्रदेश के लोगों को, बहुत-बहुत बधाई देता हूं, शुभकामनाएं देता हूं।
— PMO India (@PMOIndia) July 10, 2020
रीवा का ये सोलर प्लांट इस पूरे क्षेत्र को, इस दशक में ऊर्जा का बहुत बड़ा केंद्र बनाने में मदद करेगा: PM @narendramodi
इस सोलर प्लांट से मध्य प्रदेश के लोगों को, यहां के उद्योगों को तो बिजली मिलेगी ही, दिल्ली में मेट्रो रेल तक को इसका लाभ मिलेगा।
— PMO India (@PMOIndia) July 10, 2020
इसके अलावा रीवा की ही तरह शाजापुर, नीमच और छतरपुर में भी बड़े सोलर पावर प्लांट पर काम चल रहा है: PM @narendramodi
ये तमाम प्रोजेक्ट जब तैयार हो जाएंगे, तो मध्य प्रदेश निश्चित रूप से सस्ती और साफ-सुथरी बिजली का HUB बन जाएगा।
— PMO India (@PMOIndia) July 10, 2020
इसका सबसे अधिक लाभ मध्य प्रदेश के गरीब, मध्यम वर्ग के परिवारों को होगा, किसानों को होगा, आदिवासियों को होगा: PM @narendramodi
सौर ऊर्जा आज की ही नहीं बल्कि 21वीं सदी की ऊर्जा ज़रूरतों का एक बड़ा माध्यम होने वाला है।
— PMO India (@PMOIndia) July 10, 2020
क्योंकि सौर ऊर्जा, Sure है, Pure है और Secure है: PM @narendramodi
जैसे-जैसे भारत विकास के नए शिखर की तरफ बढ़ रहा है, हमारी आशाएं-आकांक्षाएं बढ़ रही हैं, वैसे-वैसे हमारी ऊर्जा की, बिजली की ज़रूरतें भी बढ़ रही हैं।
— PMO India (@PMOIndia) July 10, 2020
ऐसे में आत्मनिर्भर भारत के लिए बिजली की आत्मनिर्भरता बहुत आवश्यक है: PM @narendramodi
जब हम आत्मनिर्भरता की बात करते हैं, प्रगति की बात करते हैं तो Economy उसका एक अहम पक्ष होता है।
— PMO India (@PMOIndia) July 10, 2020
पूरी दुनिया के नीति निर्माता बरसों से दुविधा में है, कि Economy की सोचें या Environment की: PM @narendramodi
आज आप देखेंगे कि सरकार के जितने भी कार्यक्रम हैं, उनमें पर्यावरण सुरक्षा और Ease of Living को प्राथमिकता दी जा रही है। हमारे लिए पर्यावरण की सुरक्षा सिर्फ कुछ प्रोजेक्ट्स तक सीमित नहीं हैं, बल्कि ये Way of Life है: PM @narendramodi
— PMO India (@PMOIndia) July 10, 2020
जब हम renewable energy के बड़े projects लॉन्च कर रहे हैं, तब हम ये भी सुनिश्चित कर रहे हैं कि साफ-सुथरी ऊर्जा के प्रति हमारा संकल्प जीवन के हर पहलू में दिखे।
— PMO India (@PMOIndia) July 10, 2020
हम कोशिश कर रहे हैं कि इसका लाभ देश के हर कोने, समाज के हर वर्ग, हर नागरिक तक पहुंचे: PM @narendramodi
LED बल्ब से बिजली का बिल कम हुआ है।
— PMO India (@PMOIndia) July 10, 2020
इसका एक और महत्वपूर्ण पहलू है।
LED बल्ब से करीब साढ़े 4 करोड़ टन कम कार्बनडाइअकसाइड पर्यावरण में जाने से रुक रही है, यानि प्रदूषण कम हो रहा है: PM @narendramodi
बिजली सबतक पहुंचे, पर्याप्त बिजली पहुंचे। हमारा वातावरण, हमारी हवा, हमारा पानी भी शुद्ध बना रहे, इसी सोच के साथ हम निरंतर काम कर रहे हैं।
— PMO India (@PMOIndia) July 10, 2020
यही सोच सौर ऊर्जा को लेकर हमारी नीति और रणनीति में भी स्पष्ट झलकती है: PM @narendramodi
जिस तरह से भारत में सोलर पावर पर काम हो रहा है, ये चर्चा और बढ़ने वाली है।
— PMO India (@PMOIndia) July 10, 2020
ऐसे ही बड़े कदमों के कारण भारत को क्लीन एनर्जी का सबसे Attractive market माना जा रहा है: PM @narendramodi
दुनिया की, मानवता की, भारत से इसी आशा, इसी अपेक्षा को देखते हुए, हम पूरे विश्व को जोड़ने में जुटे हुए हैं।
— PMO India (@PMOIndia) July 10, 2020
इसी सोच का परिणाम आइसा यानि इंटरनेशनल सोलर अलायंस है।
वन वर्ल्ड, वन सन, वन ग्रिड, के पीछे की यही भावना है: PM @narendramodi
एक प्रकार से सौर ऊर्जा ने आम ग्राहक को उत्पादक भी बना दिया है, पूरी तरह से बिजली के बटन पर कंट्रोल दे दिया है।
— PMO India (@PMOIndia) July 10, 2020
बिजली पैदा करने वाले बाकी माध्यमों में सामान्य जन की भागीदारी ना के बराबर रहती है: PM @narendramodi
जो पहला प्लांट है, जो पारंपरिक खेती है, वो हमारा किसान ऐसी जमीन पर लगाता है जो उपजाऊ होती है।
— PMO India (@PMOIndia) July 10, 2020
लेकिन ये जो दूसरा सोलर एनर्जी प्लांट है, ये ऐसी जमीन पर भी लगेगा जो उपजाऊ नहीं है, फसल के लिहाज से अच्छी नहीं है: PM @narendramodi
मुझे पूरा विश्वास है कि मध्य प्रदेश के किसान साथी भी अतिरिक्त आय के इस साधन को अपनाने और भारत को Power Exporter बनाने के इस व्यापक अभियान को ज़रूर सफल बनाएंगे।
— PMO India (@PMOIndia) July 10, 2020
ये विश्वास इसलिए अधिक है क्योंकि मध्य प्रदेश के किसानों ने संकल्प को सिद्धि में बदलकर दिखाया है: PM @narendramodi
सोलर पावर की ताकत को हम तब तक पूरी तरह से उपयोग नहीं कर पाएंगे, जब तक हमारे पास देश में ही बेहतर सोलर पैनल, बेहतर बैटरी, उत्तम क्वालिटी की स्टोरेज कैपेसिटी का निर्माण ना हो।
— PMO India (@PMOIndia) July 10, 2020
अब इसी दिशा में तेज़ी से काम चल रहा है: PM @narendramodi
अब गरीब परिवारों को नवंबर तक मुफ्त राशन मिलता रहेगा।
— PMO India (@PMOIndia) July 10, 2020
इतना ही नहीं, निजी क्षेत्र के लाखों कर्मचारियों के EPF खाते में भी सरकार पूरा अंशदान दे रही है।
इसी तरह, पीएम-स्वनिधि योजना के माध्यम से उन साथियों की सुध ली गई, जिनकी सिस्टम तक सबसे कम पहुंच होती है: PM @narendramodi
सरकार हो या समाज, संवेदना और सतर्कता इस मुश्किल चुनौती से निपटने के लिए हमारे सबसे बड़े प्रेरणास्रोत हैं।
— PMO India (@PMOIndia) July 10, 2020
आज जब आप मध्य प्रदेश को, पूरे देश को आगे बढ़ाने के लिए घर से बाहर निकल रहे हैं, तो अपनी एक और जिम्मेदारी भी हमेशा याद रखिए: PM @narendramodi
दो गज़ की दूरी, चेहरे पर मास्क और हाथ को 20 सेकेंड तक साबुन से धुलना, इन नियमों का हमें हमेशा पालन करना है: PM @narendramodi
— PMO India (@PMOIndia) July 10, 2020