Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರುಪೇ  ಕ್ರೆಡಿಟ್  ಕಾರ್ಡ್ ಮತ್ತು ಅಲ್ಪ ಮೌಲ್ಯದ ಭೀಮ್-ಯುಪಿಐ ವಹಿವಾಟು (ಪಿ2ಎಂ) ಉತ್ತೇಜಿಸುವ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ


ಪ್ರಧಾನ ಮಂತ್ರಿ ಶ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೂಪೇ  ಕ್ರೆಡಿಟ್  ಕಾರ್ಡ್ ಮತ್ತು ಅಲ್ಪ ಮೌಲ್ಯದ (2,000 ರೂ.ವರೆಗೆ) ಭೀಮ್-ಯುಪಿಐ ವಹಿವಾಟು (ಪಿ2ಎಂ_ಪರ್ಸನ್ ಟು ಮರ್ಚಂಟ್) ಉತ್ತೇಜಿಸುವ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ತನ್ನ ಅನುಮೋದನೆ ನೀಡಿದೆ.

ರುಪೇ ಮತ್ತು ಯುಪಿಐ ವಹಿವಾಟು ನಡೆಸುವ ಬ್ಯಾಂಕ್ ಗಳಿಗೆ ಕೇಂದ್ರ ಸರ್ಕಾರದ ಉತ್ತೇಜನಾ ಧನ ಸಿಗಲಿದೆ. ಗ್ರಾಹಕರು ರುಪೇ ಮತ್ತು ಭೀಮ್-ಯುಪಿಐ ಡಿಜಿಟಲ್ ಪಾವತಿ ಮಾದರಿಯಲ್ಲಿ ನಡೆಸುವ ವಹಿವಾಟು ಮೌಲ್ಯ ಆಧರಿಸಿ ಸರ್ಕಾರ ಉತ್ತೇಜನಾ ಧನ ನೀಡಲಿದೆ.

ಬ್ಯಾಂಕ್ ಗಳು ಉತ್ಕ್ರಷ್ಟ ದರ್ಜೆಯ ಡಿಜಿಟಲ್ ಪಾವತಿ ವ್ಯವಸ್ಥೆ ಹೊಂದುವುದನ್ನು ಈ ಯೋಜನೆ ಉತ್ತೇಜಿಸಲಿದೆ. ಅಲ್ಲದೆ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ವಲಯಗಳಲ್ಲೂ ರುಪೇ ಮತ್ತು ಭೀಮ್-ಯುಪಿಐ ವ್ಯಾಪಕ ಬಳಕೆಯನ್ನು ಸಹ ಉತ್ತೇಜಿಸಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಔಪಚಾರಿಕ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಿಂದ ಹೊರಗಿರುವ ಜನರಿಗೆ ಮತ್ತು ದೇಶದ ನಿರ್ಲಕ್ಷಿತ ಜನರಿಗೆ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಭಾರತ, ವಿಶ್ವದಲ್ಲೇ ಅತ್ಯಂತ ದಕ್ಷ ಪಾವತಿ ವ್ಯವಸ್ಥೆ ಅಳವಡಿಸಿಕೊಂಡಿರುವ ದೇಶವಾಗಿದೆ. ಹಣಕಾಸು ತಂತ್ರಜ್ಞಾನ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳು ಈ ಯೋಜನೆಯು ನೆರವಾಗಲಿದೆ. ದೇಶದ ವಿವಿಧ ಭಾಗಗಳಿಗೆ ಡಿಜಿಟಲ್ ಹಣಕಾಸು ಪಾವತಿ ವ್ಯವಸ್ಥೆಯನ್ನು ಜನಪ್ರಿಯಗೊಳಿಸುವುದು ಮತ್ತು ವ್ಯಾಪಕ ಬಳಕೆಯನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

2021-22ನೇ ಬಜೆಟ್ ಘೋಷಣೆಯಂತೆ ರುಪೇ ಮತ್ತು ಭೀಮ್ – ಯುಪಿಐ ಡಿಜಿಟಲ್ ಪಾವತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.

***