ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಯಾದ ಮೇ. ರಿಚರ್ಡ್ ಸನ್ ಮತ್ತು ಕ್ರುದ್ದಾಸ್ (1972) ಲಿಮಿಟೆಡ್ (ಆರ್.ಅಂಡ್ ಸಿ), ಕೈಗಾರಿಕಾ ಮತ್ತು ಹಣಕಾಸು ಪುನರ್ನಿರ್ಮಾಣ ಮಂಡಳಿ (ಬಿ.ಐ.ಎಫ್.ಆರ್)ನ ಪರಿಧಿಯಿಂದ ಹೊರಬರಲು ಅನುವಾಗುವಂತೆ ಭಾರೀ ಕೈಗಾರಿಕಾ ಇಲಾಖೆಯ ಪ್ರಸ್ತಾವನೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆ ತನ್ನ ಅನುಮೋದನೆ ನೀಡಿದೆ. ಈ ಉದ್ದೇಶಕ್ಕಾಗಿ ಭಾರತ ಸರ್ಕಾರ ಕಂಪನಿಗೆ ನೀಡಿದ್ದ ಸಾಲಕ್ಕೆ ಸಂಚಯಿತವಾಗಿದ್ದ 424.81 ಕೋಟಿ ರೂಪಾಯಿ ಬಡ್ಡಿಯೂ ಸೇರಿದಂತೆ 101.78 ಕೋಟಿ ರೂಪಾಯಿಗಳ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸಲು ಸಂಪುಟವು ಅನುಮೋದನೆ ನೀಡಿದೆ.
ಅಲ್ಲದೆ ಕಂಪನಿಯ ನಾಗಪುರ ಮತ್ತು ಚೆನ್ನೈ ಘಟಕಗಳ ಬಂಡವಾಳ ಹಿಂತೆಗೆತಕ್ಕೆ ಮತ್ತು ಮುಂಬೈ ನೆಲದಿಂದ ಕಾರ್ಯಾಚರಣೆಯನ್ನು ಕಂಪನಿಯ ಇತರ ಪ್ರದೇಶಕ್ಕೆ ವರ್ಗಾಯಿಸಲೂ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಆದಾಗ್ಯೂ ಮುಂಬೈನಲ್ಲಿನ ಕಂಪನಿಯ ಭೂಮಿಯನ್ನು ಲೀಸ್ ಹೋಲ್ಡ್ ನಿಂದ ಅಕ್ಯುಪೇಷನ್ ವರ್ಗ IIಕ್ಕೆ ಪರಿವರ್ತಿಸುವ ಮೂಲಕ ಈ ಜಮೀನನ್ನು ಸರ್ಕಾರದ ಮಾರ್ಗದರ್ಶನದ ರೀತ್ಯ ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಕಂಪನಿ ಗುರುತಿಸಲು ಅವಕಾಶ ನೀಡಿದೆ.
AKT/VBA/SH