ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ( ಅನಧಿಕೃತ ಕಾಲೋನಿಗಳಲ್ಲಿ ನಿವಾಸಿಗಳ ಆಸ್ತಿ ಹಕ್ಕುಗಳಿಗೆ ಮಾನ್ಯತೆ ) ಮಸೂದೆ 2019ರ ಪ್ರಸ್ತಾವನೆಯನ್ನು ಸದ್ಯ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಅನುಮೋದನೆ ನೀಡಿತು. ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿರುವ ನಿವಾಸಿಗಳು ಆಸ್ತಿ ನೋಂದಾಯಿಸಲು ಅನುಕೂಲವಾಗಲಿದೆ. ಜತೆಗೆ, ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಡ್ಯೂಟಿಯಿಂದಲೂ ಕೆಲವು ವಿನಾಯಿತಿಗಳು ಲಭ್ಯವಾಗಲಿವೆ.
ದೆಹಲಿಯ ಖಾಸಗಿ ಮತ್ತು ಸರ್ಕಾರಿ ಭೂಮಿಯಲ್ಲಿನ ಅನಧಿಕೃತ ಕಾಲೋನಿಗಳಲ್ಲಿ ಸುಮಾರು 40 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಜನರಲ್ ಪವರ್ ಆಫ್ ಅಟಾರ್ನಿ (ಅಧಿಕಾರಯುತ ಒಪ್ಪಂದ) ಮೂಲಕ) ನಿವೇಶನಗಳಲ್ಲಿ ಅಥವಾ ಕಟ್ಟಡಗಳನ್ನು ನಿರ್ಮಿಸಿಕೊಂಡು ಇಲ್ಲಿ ವಾಸಿಸುತ್ತಿದ್ದರು. ಕೆಲವನ್ನು ಮಾರಾಟಕ್ಕೂ ಸಹ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಕಾಲೋನಿಗಳಲ್ಲಿನ ಆಸ್ತಿಗಳನ್ನು ನೋಂದಣಿ ಅಧಿಕಾರಿಗಳು ನೋಂದಾಯಿಸುತ್ತಿರಲಿಲ್ಲ. ಹೀಗಾಗಿ, ಇಲ್ಲಿನ ನಿವಾಸಿಗಳಿಗೆ ಯಾವುದೇ ರೀತಿಯ ಹಕ್ಕು ಪತ್ರದ ದಾಖಲೆಗಳು ಇರಲಿಲ್ಲ. ಇಂತಹ ಆಸ್ತಿಗಳಿಗೆ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಯಾವುದೇ ರೀತಿಯ ಸಾಲ ಸೌಲಭ್ಯವನ್ನು ನೀಡುತ್ತಿರಲಿಲ್ಲ.
ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ವಿಶೇಷ ಅರ್ಜಿ 2009ರ 13917 ಸುರಜ್ ಲ್ಯಾಂಪ್ ಆ್ಯಂಡ್ ಇಂಡಸ್ಟ್ರೀಸ್ (ಪ್ರೈವೇಟ್ ) ಲಿಮಿಟೆಡ್ ಮತ್ತು ಹರಿಯಾಣ ರಾಜ್ಯ ಹಾಗೂ ಇತರರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಅಕ್ಟೋಬರ್ 11ರಂದು ನೀಡಿದ ತೀರ್ಪಿನಲ್ಲಿ ಮಾರಾಟ ಒಪ್ಪಂದ ಅಥವಾ ಜನರಲ್ ಪವರ್ ಆಫ್ ಅಟಾರ್ನಿ ಅಥವಾ ಉಯಿಲು ಅನ್ನು ವರ್ಗಾವಣೆ ಮಾಡಲು ಅವಕಾಶ ಇಲ್ಲ. ಇಂತಹ ವಹಿವಾಟನ್ನು ಸಂಪೂರ್ಣ ವರ್ಗಾವನೆಯಾಗಿದೆ ಎಂದು ಪರಿಗಣಿಸಬಾರದು. ಇವುಗಳನ್ನು ಸದ್ಯ ಜಾರಿಯಲ್ಲಿರುವ ಒಪ್ಪಂದ ಮಾರಾಟ ಎಂದೇ ಪರಿಗಣಿಸಿ ಮುಂದುವರಿಯಬಹುದು ಎಂದು ಹೇಳಿತ್ತು.
ಈ ಅನಧಿಕೃತ ಕಾಲೋನಿಗಳಲ್ಲಿದ್ದ ನಿವಾಸಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ವಾಸ್ತವ ಪರಿಸ್ಥಿತಿಗಳನ್ನು ಪರಿಗಣಿಸಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಪವರ್ ಆಫ್ ಅಟಾರ್ನಿ ಅಥವಾ ಮಾರಾಟ ಒಪ್ಪಂದದ ಮೂಲಕ ಹೊಂದಿದ ಆಸ್ತಿಗಳಿಗೆ ಮಾನ್ಯತೆ ನೀಡಲು ನಿರ್ಧರಿಸಲಾಯಿತು. ಉತ್ತಮ ಗುಣಮಟ್ಟದ ಜೀವನ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಇದರಿಂದ ಸಾಧ್ಯವಿದೆ.
ಉದ್ದೇಶಿತ ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ( ಅನಧಿಕೃತ ಕಾಲೋನಿಗಳಲ್ಲಿ ನಿವಾಸಿಗಳ ಆಸ್ತಿ ಹಕ್ಕುಗಳಿಗೆ ಮಾನ್ಯತೆ ) ಮಸೂದೆ– 2019 ಈ ಕೆಳಗಿನ ಅಂಶಗಳನ್ನು ಹೊಂದಿದೆ.
ಸುರಜ್ ಲ್ಯಾಂಪ್ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ), ಉಯಿಲು, ಮಾರಾಟಕ್ಕೆ ಒಪ್ಪಂದ, ಖರೀದಿ ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆಗಳಿಗೆ ಮಾನ್ಯತೆ ದೊರೆಯಲಿದೆ. ಇದು ಒಂದು ಬಾರಿ ವಿನಾಯಿತಿ ನೀಡುವ ವಿಶೇಷ ಪ್ರಕರಣವಾಗಿದೆ. ಇದರಿಂದ ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿರು ನಿವಾಸಿಗಳಿಗೆ ಅನುಕೂಲವಾಗಲಿದೆ.
ಕೊನೆಯ ವಹಿವಾಟು ಪರಿಗಣಿಸಿ ನೋಂದಣಿ ಶುಲ್ಕ ಮತ್ತು ಸ್ಟ್ಯಾಂಪ್ ಡ್ಯೂಟಿಗೆ ವಿನಾಯಿತಿ ನೀಡುವುದು
ಈ ಮೇಲಿನ ಪರಿಹಾರಗಳಿಂದ ದೆಹಲಿಯಲ್ಲಿನ 1731 ಅನಧಿಕೃತ ಕಾಲೋನಿಗಳಲ್ಲಿನ 40 ಲಕ್ಷ ಜನರಿಗೆ ಅನುಕೂಲವಾಗಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ (ಅನಧಿಕೃತ ಕಾಲೋನಿಗಳಲ್ಲಿರುವವರ ಆಸ್ತಿ ಹಕ್ಕುಗಳಿಗೆ ಮಾನ್ಯತೆ) ನಿಯಂತ್ರಣ–2019ರ ಅನ್ವಯ ಇವುಗಳನ್ನು ಅನಧಿಕೃತ ಕಾಲೋನಿಗಳನ್ನು ಎಂದು ಪರಿಗಣಿಸಿ 2019ರ ಅಕ್ಟೋಬರ್ 29ರಂದು ಹೊರಡಿಸಿದ ಅಧಿಸೂಚನೆ ಹೊರಡಿಸಲಾಗಿತ್ತು.
ಹಿನ್ನೆಲೆ
ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ಕೇಂದ್ರ ಸಚಿವ ಸಂಪುಟಕ್ಕೆ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ದೆಹಲಿಯ ಅನಧಿಕೃತ ಕಾಲೋನಿಗಳಿಗೆ ಸಂಬಂಧಿಸಿದಂತೆ ಮಾಲೀಕತ್ವದ ಹಕ್ಕು ನೀಡುವುದು ಅಥವಾ ವರ್ಗಾವಣೆ ಅಥವಾ ಆಸ್ತಿಗಳನ್ನು ಅಡವಿಟ್ಟುಕೊಳ್ಳುವ ಕುರಿತು ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಸಮಿತಿಯು ಸಲ್ಲಿಸಿದ್ದ ವರದಿ ಅನ್ವಯ ಸಚಿವಾಲಯ ಪ್ರಸ್ತಾವನೆಯನ್ನು ಮಂಡಿಸಿತ್ತು. 23.10.2019ರಂದು ನಡೆದ ಸಚಿವ ಸಂಪುಟ ಸಮಿತಿಯು ಈ ಪ್ರಸ್ತಾಚನೆಗೆ ಅನುಮೋದನೆ ನೀಡಿತು. ಇದರ ಅನ್ವಯ 23.10.2019ರಂದು ಅಧಿಸೂಚನೆ ಹೊರಡಿಸಲಾಯಿತು.
ಅನಧಿಕೃತ ಕಾಲೋನಿಗಳಲ್ಲಿನ ಆಸ್ತಿಗಳ ಮಾಲೀಕತ್ವವು ಹಲವು ಬಾರಿ ವರ್ಗಾವಣೆಯಾಗಿವೆ. ನೋಂದಣಿ ಮೂಲಕ ಅಥವಾ ನೋಂದಣಿಯಾಗದೆ ಅಥವಾ ನೋಟರಿಯಲ್ಲಿ ನೋಂದಾಯಿಸಿ ಪವರ್ ಆಫ್ ಅಟಾರ್ನಿ ಮೂಲಕ ಮತ್ತು ಮಾರಾಟದ ಒಪ್ಪಂದ, ಉಯಿಲು ಮೂಲಕ, ಹಣ ಪಾವತಿಸಿ ಒಪ್ಪಂದದ ಪತ್ರದ ಮೂಲಕ ವರ್ಗಾವಣೆಯಾಗಿವೆ. ಆದರೆ, ಈ ವಹಿವಾಟು ಅಥವಾ ವರ್ಗಾವಣೆ ಸಂದರ್ಭದಲ್ಲಿ ಸ್ಟ್ಯಾಂಪ್ ಡ್ಯೂಟಿಯನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ ಮತ್ತು ಪಾವತಿಯಾಗದ ಸಂದರ್ಭಗಳು ಸಹ ಇವೆ.
ಸರ್ಕಾರವು 2014ರ ಸೆಪ್ಟೆಂಬರ್ 22ರಂದು ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಅಧಿಸೂಚನೆ ಅನ್ವಯ ಕನಿಷ್ಠ ದರಗಳು ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತ ಚೀಟಿ ಮೇಲಿನ ಸ್ಟ್ಯಾಂಪ್ ಡ್ಯೂಟಿ ಅನ್ವಯವಾಗಲಿದೆ. ಮಾರಾಟದ ಒಪ್ಪಂದವೂ ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಯಾವುದು ಹೆಚ್ಚಿನದು ಅದು ಅನ್ವಯವಾಗಲಿದೆ.