Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಿ

ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 25 ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ವಿಜೇತರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಅವರ ಶೌರ್ಯ ಕಾರ್ಯಗಳು ಅವರ ಧೈರ್ಯದಷ್ಟೇ ದೃಢತೆಯನ್ನೂ ಪ್ರಚುರಪಡಿಸುತ್ತದೆ ಎಂದರು. ಈ ಪ್ರಶಸ್ತಿಯು ಅವರ ಬದುಕಿನ ಉದ್ದೇಶದ ಕೊನೆಯಾಗದಂತೆ ಖಾತ್ರಿ ಪಡಿಸಿಕೊಳ್ಳುವಂತೆ ಅವರು ಮಕ್ಕಳಿಗೆ ಉತ್ತೇಜನ ನೀಡಿದರು ಮತ್ತು ಈ ಪ್ರಶಸ್ತಿಯು ಅವರ ಬದುಕಿನ ಆರಂಭದ ಸಂಕೇತವಾಗಬೇಕು ಎಂದರು.

ಈ ದಿನದ ಮಹತ್ವವನ್ನು ತಿಳಿಸಿದ ಪ್ರಧಾನಿ, 23 ಜನವರಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವೆಂಬುದನ್ನು ತಿಳಿಸಿ, ಸಾಧ್ಯವಾದಷ್ಟು ಓದುವಂತೆ ಅದರಲ್ಲೂ ನಾಯಕರ, ಕ್ರೀಡಾಪಟುಗಳು ಮತ್ತು ತಮ್ಮ ಜೀವನದಲ್ಲಿ ಶ್ರೇಷ್ಠ ಕಾರ್ಯ ಮಾಡಿದ ಇತರರ ಜೀವನಚರಿತ್ರೆ ಓದುವಂತೆ ತಿಳಿಸಿದರು.

ಶೌರ್ಯ ಎಂಬುದು ಮನಸ್ಸಿನ ಸ್ಥಿತಿ, ಆರೋಗ್ಯಪೂರ್ಣವಾದ ದೇಹವು ಸಹಕಾರಿ ನಿಜ ಆದರೆ, ನಿಜವಾದ ಶಕ್ತಿ ಮನಸ್ಸು ಎಂದರು. ಹೀಗಾಗಿ ನಾವು ನಮ್ಮ ಮನಸ್ಸನ್ನು ಬಲಗೊಳಿಸಬೇಕು ಎಂದರು. ಅವರು ಪಡೆಯುತ್ತಿರುವ ಕೀರ್ತಿ ಮತ್ತು ಖ್ಯಾತಿ ಅವರ ಭವಿಷ್ಯದ ಬದುಕಿಗೆ ಅಡ್ಡಿಯಾಗದ ರೀತಿಯಲ್ಲಿ ಖಚಿತಪಡಿಸಿಕೊಳ್ಳುವಂತೆ ಅವರು ಮಕ್ಕಳಿಗೆ ಒತ್ತಾಯಿಸಿದರು.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಮನೇಕಾ ಗಾಂಧಿಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಶೌರ್ಯ ಸಾಹಸ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮತ್ತು ಶ್ಲಾಘನೀಯ ಸೇವೆ ಮಾಡಿ, ಇತರ ಮಕ್ಕಳಿಗೆ ಸ್ಫೂರ್ತಿ ನೀಡುವಂಥ ಮಕ್ಕಳನ್ನು ಗುರುತಿಸಿ ಸೂಕ್ತ ಗೌರವ ನೀಡಲು ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಯೋಜನೆಯನ್ನು ಐಸಿಸಿಡಬ್ಲ್ಯು – ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ – ಸ್ಥಾಪಿಸಿದೆ.

***

AKT/NT 157606