ಹೊಸ ನೀತಿಯು 2030 ರ ವೇಳೆಗೆ ಶಾಲಾ ಶಿಕ್ಷಣದಲ್ಲಿ ಶೇ.100 ಒಟ್ಟು ದಾಖಲಾತಿ ಅನುಪಾತ (ಜಿಇಆರ್) ದೊಂದಿಗೆ ಪೂರ್ವ ಶಾಲಾ ಹಂತದಿಂದ ಪ್ರೌಢಶಾಲಾ ಹಂತದವರೆಗೆ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಗುರಿ ಹೊಂದಿದೆ
ರಾಷ್ಟ್ರೀಯ ಶಿಕ್ಷಣ ನೀತಿ 2020 ಶಾಲೆಯಿಂದ ಹೊರಗಿರುವ 2 ಕೋಟಿ ಮಕ್ಕಳನ್ನು ಮತ್ತೆ ಮುಖ್ಯ ವಾಹಿನಿಗೆ ತರುತ್ತದೆ
ಹೊಸ 5 + 3 + 3 + 4 ವ್ಯಾಸಂಗ ಕ್ರಮದೊಂದಿಗೆ 12 ವರ್ಷಗಳ ಶಾಲಾ ಶಿಕ್ಷಣ ಮತ್ತು 3 ವರ್ಷಗಳ ಅಂಗನವಾಡಿ/ ಪೂರ್ವ ಶಾಲಾ ಶಿಕ್ಷಣ
ತಳಹದಿಯ ಸಾಕ್ಷರತೆ ಮತ್ತು ಗಣಿತಜ್ಞತೆಗೆ ಒತ್ತು, ಶಾಲೆಗಳಲ್ಲಿ ಶೈಕ್ಷಣಿಕ, ಪಠ್ಯೇತರ, ವೃತ್ತಿಪರ ವಿಭಾಗಗಳ ನಡುವೆ ಕಟ್ಟುನಿಟ್ಟಿನ ಪ್ರತ್ಯೇಕತೆ ಇಲ್ಲ; 6 ನೇ ತರಗತಿಯಿಂದ ಇಂಟರ್ನ್ಶಿಪ್ನೊಂದಿಗೆ ವೃತ್ತಿ ಶಿಕ್ಷಣ ಪ್ರಾರಂಭವಾಗಲಿದೆ
ಕನಿಷ್ಠ 5 ನೇ ತರಗತಿಯವರೆಗೆ ಮಾತೃಭಾಷೆ/ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ
ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳ ಪ್ರಗತಿಯನ್ನು ಪತ್ತೆ ಮಾಡುವ ಸಮಗ್ರ ಪ್ರಗತಿ ಕಾರ್ಡ್ನೊಂದಿಗೆ ಮೌಲ್ಯಮಾಪನ ಸುಧಾರಣೆಗಳು
ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ 2035 ರ ವೇಳೆಗೆ ಶೇ.50ಕ್ಕೆ ಹೆಚ್ಚಳ; ಉನ್ನತ ಶಿಕ್ಷಣದಲ್ಲಿ 3.5 ಕೋಟಿ ಸೀಟುಗಳ ಸೇರ್ಪಡೆ
ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ವಿಷಯಗಳ ಆಯ್ಕೆಯಲ್ಲಿ ನಮ್ಯತೆ
ಸೂಕ್ತ ಪ್ರಮಾಣೀಕರಣದೊಂದಿಗೆ ಬಹು ಪ್ರವೇಶ/ ನಿರ್ಗಮನಕ್ಕೆ ಅನುಮತಿ
ಬಲವಾದ ಸಂಶೋಧನಾ ಸಂಸ್ಕೃತಿಯನ್ನು ಉತ್ತೇಜಿಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆ
ಉನ್ನತ ಶಿಕ್ಷಣದಲ್ಲಿ ಲಘುವಾದ ಆದರೆ ಬಿಗಿಯಾದ ನಿಯಂತ್ರ; ವಿಭಿನ್ನ ಕಾರ್ಯಗಳಿಗಾಗಿ ನಾಲ್ಕು ಪ್ರತ್ಯೇಕ ಅಂಗಗಳನ್ನು ಹೊಂದಿರುವ ಏಕ ನಿಯಂತ್ರಕ ವ್ಯವಸ್ಥೆ
ಕಾಲೇಜುಗಳಿಗೆ ಶ್ರೇಣೀಕೃತ ಸ್ವಾಯತ್ತತೆಯೊಂದಿಗೆ 15 ವರ್ಷಗಳಲ್ಲಿ ಸಹವರ್ತಿ ವ್ಯವಸ್ಥೆಯನ್ನು ಹಂತಹಂತವಾಗಿ ತೆಗೆದುಹಾಕಲಾಗುವುದು
ಹೊಸ ಶಿಕ್ಷಣ ನೀತಿ 2020 ಸಮಾನತೆಯೊಂದಿಗೆ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ; ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯನ್ನು ರಚಿಸಲಾಗುವುದು
ಹೊಸ ಶಿಕ್ಷಣ ನೀತಿಯು ಲಿಂಗ ಸೇರ್ಪಡೆ ನಿಧಿ, ಹಿಂದುಳಿದ ಪ್ರದೇಶಗಳು ಮತ್ತು ಗುಂಪುಗಳಿಗೆ ವಿಶೇಷ ಶಿಕ್ಷಣ ವಲಯಗಳನ್ನು ಸ್ಥಾಪಿಸಲು ಒತ್ತು ನೀಡುತ್ತದೆ
ಹೊಸ ನೀತಿಯು ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಹುಭಾಷಾ ಸಿದ್ಧಾಂತವನ್ನು ಉತ್ತೇಜಿಸುತ್ತದೆ; ಪಾಲಿ, ಪರ್ಷಿಯನ್ ಮತ್ತು ಪ್ರಾಕೃತ ರಾಷ್ಟ್ರೀಯ ಸಂಸ್ಥೆ, ಭಾರತೀಯ ಅನುವಾದ ಮತ್ತು ವ್ಯಾಖ್ಯಾನ ಸಂಸ್ಥೆ ಸ್ಥಾಪಿಸಲಾಗುವುದು
ಬಹುಭಾಷಾ ಸಿದ್ಧಾಂತದಲ್ಲಿ ಯಾವುದೇ ವಿದ್ಯಾರ್ಥಿಯ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಮೋದನೆ ನೀಡಿದೆ. ಇದು ಶಾಲೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ, ಪರಿವರ್ತನೆಯ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ ಮತ್ತು ಮೂವತ್ತನಾಲ್ಕು ವರ್ಷದಷ್ಟು ಹಳೆಯದಾದ 1986 ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಪಿಇ) ಗೆ ಬದಲಿಯಾಗಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಉತ್ತರದಾಯಿತ್ವದ ಅಡಿಪಾಯದ ಆಧಾರ ಸ್ತಂಭಗಳ ಮೇಲೆ ಈ ನೀತಿಯನ್ನು ರೂಪಿಸಲಾಗಿದೆ. 2030ಕ್ಕೆ ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿ ಮತ್ತು 21 ನೇ ಶತಮಾನದ ಅಗತ್ಯಗಳಿಗೆ ಸೂಕ್ತವಾದ ಮತ್ತು ಪ್ರತಿ ವಿದ್ಯಾರ್ಥಿಯ ವಿಶಿಷ್ಟ ಸಾಮರ್ಥ್ಯಗಳನ್ನು ಹೊರತೆಗೆಯುವ ಗುರಿಯನ್ನು ಇದು ಹೊಂದಿದೆ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಹೆಚ್ಚು ಸಮಗ್ರ, ಹೊಂದಿಕೊಳ್ಳುವ, ಬಹುಶಿಸ್ತೀಯವನ್ನಾಗಿ ಮಾಡುವ ಮೂಲಕ ಭಾರತವನ್ನು ರೋಮಾಂಚಕ ಜ್ಞಾನ ಸಮಾಜ ಮತ್ತು ಜಾಗತಿಕ ಜ್ಞಾನದ ನಾಯಕನಾಗಿ ಪರಿವರ್ತಿಸುವ ಗುರಿಯನ್ನು ಈ ನೀತಿಯು ಹೊಂದಿದೆ.
ಪ್ರಮುಖ ಅಂಶಗಳು
ಶಾಲಾ ಶಿಕ್ಷಣ
ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಾರ್ವತ್ರಿಕ ಪ್ರವೇಶವನ್ನು ಖಾತರಿಪಡಿಸುವುದು
ಹೊಸ ಶಿಕ್ಷಣ ನೀತಿ 2020 ಎಲ್ಲಾ ಹಂತಗಳಲ್ಲಿ –ಪೂರ್ವ ಶಾಲೆಯಿಂದ ಪ್ರೌಢಶಾಲೆಯವರೆಗೆ– ಶಾಲಾ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶವನ್ನು ಖಾತರಿಪಡಿಸುತ್ತದೆ. ಮೂಲಸೌಕರ್ಯ ಬೆಂಬಲ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ನಾವೀನ್ಯ ಶಿಕ್ಷಣ ಕೇಂದ್ರಗಳು, ವಿದ್ಯಾರ್ಥಿಗಳು ಮತ್ತು ಅವರ ಕಲಿಕೆಯ ಮಟ್ಟವನ್ನು ಪತ್ತೆಹಚ್ಚುವುದು, ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ವಿಧಾನಗಳನ್ನು ಒಳಗೊಂಡ ಕಲಿಕೆಗೆ ಹಾದಿ ಸುಗಮಗೊಳಿಸುವುದು, ಶಾಲೆಗಳೊಂದಿಗೆ ಸಮಾಲೋಚಕರು ಅಥವಾ ಸುಶಿಕ್ಷಿತ ಸಾಮಾಜಿಕ ಕಾರ್ಯಕರ್ತರ ಸಹಯೋಗ, ಎನ್ಐಒಎಸ್ ಮತ್ತು ರಾಜ್ಯ ಮುಕ್ತ ಶಾಲೆಗಳ ಮೂಲಕ 3,5 ಮತ್ತು 8 ನೇ ತರಗತಿಗಳಿಗೆ ಮುಕ್ತ ಕಲಿಕೆ, 10 ಮತ್ತು 12 ನೇ ತರಗತಿಗೆ ಸಮಾನವಾದ ಪ್ರೌಢಶಿಕ್ಷಣ ಶಿಕ್ಷಣ ಕಾರ್ಯಕ್ರಮಗಳು, ವೃತ್ತಿ ಶಿಕ್ಷಣ, ವಯಸ್ಕರ ಸಾಕ್ಷರತೆ ಮತ್ತು ಜೀವನ ಪುಷ್ಟೀಕರಣ ಕಾರ್ಯಕ್ರಮಗಳು ಇದನ್ನು ಸಾಧಿಸುವ ಕೆಲವು ಉದ್ದೇಶಿತ ಮಾರ್ಗಗಳಾಗಿವೆ. ಎನ್ಇಪಿ 2020 ರ ಅಡಿಯಲ್ಲಿ ಶಾಲೆಯಿಂದ ಹೊರಗಿರುವ ಸುಮಾರು 2 ಕೋಟಿ ಮಕ್ಕಳನ್ನು ಮತ್ತೆ ಮುಖ್ಯ ವಾಹಿನಿಗೆ ತರಲಾಗುವುದು.
ಹೊಸ ವ್ಯಾಸಂಗ ಕ್ರಮ ಮತ್ತು ಕಲಿಕಾ ರಚನೆಯೊಂದಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ
ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ, ಶಾಲಾ ವ್ಯಾಸಂಗ ಕ್ರಮದ 10 + 2 ರಚನೆಯನ್ನು 3-8, 8-11, 11-14 ಮತ್ತು 14- 18 ವಯಸ್ಸಿನವರಿಗೆ ಅನುಗುಣವಾದ 5 + 3 + 3 + 4 ವ್ಯಾಸಂಗ ರಚನೆಯಿಂದ ಬದಲಾಯಿಸಲಾಗುವುದು. ಇದು ಇಲ್ಲಿಯವರೆಗೆ ಸೇರಿರದ 3-6 ವರ್ಷ ವಯಸ್ಸಿನವರನ್ನು ಶಾಲಾ ಪಠ್ಯಕ್ರಮದ ಅಡಿಯಲ್ಲಿ ತರಲಿದೆ, ಇದು ಮಗುವಿನ ಮಾನಸಿಕ ಸಾಮರ್ಥ್ಯದ ಅಭಿವೃದ್ಧಿಯ ನಿರ್ಣಾಯಕ ಹಂತವೆಂದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಹೊಸ ವ್ಯವಸ್ಥೆಯು ಮೂರು ವರ್ಷಗಳ ಅಂಗನವಾಡಿ / ಪೂರ್ವ ಶಾಲಾ ಶಿಕ್ಷಣದೊಂದಿಗೆ 12 ವರ್ಷಗಳ ಶಾಲಾ ಶಿಕ್ಷಣವನ್ನು ಹೊಂದಿರುತ್ತದೆ.
ಎನ್ಸಿಇಆರ್ಟಿ 8 ವರ್ಷ ವಯಸ್ಸಿನ ಮಕ್ಕಳಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಮತ್ತು ಕಲಿಕಾ ಚೌಕಟ್ಟನ್ನು (ಎನ್ಸಿಪಿಎಫ್ಇಸಿಇ) ಅಭಿವೃದ್ಧಿಪಡಿಸುತ್ತದೆ. ಇಸಿಸಿಇ ಕಲಿಕೆ ಮತ್ತು ಪಠ್ಯಕ್ರಮದಲ್ಲಿ ತರಬೇತಿ ಹೊಂದಿರುವ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಮಿಕರನ್ನು ಹೊಂದಿರುವ ಅಂಗನವಾಡಿಗಳು ಮತ್ತು ಪೂರ್ವ ಶಾಲೆಗಳು ಸೇರಿದಂತೆ ಗಮನಾರ್ಹವಾಗಿ ವಿಸ್ತರಿಸಿದ ಮತ್ತು ಬಲಪಡಿಸಿದ ಸಂಸ್ಥೆಗಳ ಮೂಲಕ ಇಸಿಸಿಇ ಅನ್ನು ವಿತರಿಸಲಾಗುವುದು. ಇಸಿಸಿಇ ಯೋಜನೆ ಮತ್ತು ಅನುಷ್ಠಾನವನ್ನು ಮಾನವ ಸಂಪನ್ಮೂಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ಎಚ್ಎಫ್ಡಬ್ಲ್ಯು) ಮತ್ತು ಬುಡಕಟ್ಟು ವ್ಯವಹಾರ ಸಚಿವಾಲಯಗಳು ಜಂಟಿಯಾಗಿ ಮಾಡುತ್ತವೆ.
ತಳಹದಿಯ ಸಾಕ್ಷರತೆ ಮತ್ತು ಗಣಿತಜ್ಞತೆಯನ್ನು ಸಾಧಿಸುವುದು
ತಳಹದಿಯ ಸಾಕ್ಷರತೆ ಮತ್ತು ಗಣಿತಜ್ಞತೆಯು ಕಲಿಕೆಗೆ ತುರ್ತು ಮತ್ತು ಅಗತ್ಯವೆಂದು ಗುರುತಿಸಿ, ಎನ್ಇಪಿ 2020 ಮಾನವ ಸಂಪನ್ಮೂಲ ಸಚಿವಾಲಯದಿಂದ ತಳಹದಿಯ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ರಾಷ್ಟ್ರೀಯ ಮಿಷನ್ ಸ್ಥಾಪಿಸಲು ಕರೆ ನೀಡಿದೆ. 2025 ರ ವೇಳೆಗೆ ಗ್ರೇಡ್ 3 ರೊಳಗೆ ಕಲಿಯುತ್ತಿರುವ ಎಲ್ಲರಿಗೂ ಸಾರ್ವತ್ರಿಕ ತಳಹದಿಯ ಸಾಕ್ಷರತೆ ಮತ್ತು ಗಣಿತಜ್ಞತೆಯನ್ನು ಪಡೆಯಲು ರಾಜ್ಯಗಳು ಅನುಷ್ಠಾನ ಯೋಜನೆಯನ್ನು ಸಿದ್ಧಪಡಿಸುತ್ತವೆ. ರಾಷ್ಟ್ರೀಯ ಪುಸ್ತಕ ಪ್ರೋತ್ಸಾಹ ನೀತಿಯನ್ನು ರೂಪಿಸಲಾಗುವುದು.
ಶಾಲಾ ಪಠ್ಯಕ್ರಮ ಮತ್ತು ಬೋಧನಾ ಕ್ರಮದಲ್ಲಿ ಸುಧಾರಣೆಗಳು
ಶಾಲಾ ಪಠ್ಯಕ್ರಮ ಮತ್ತು ಬೋಧನಾ ಕ್ರಮವು ಕಲಿಯುವವರಲ್ಲಿ 21 ನೇ ಶತಮಾನದ ಪ್ರಮುಖ ಕೌಶಲ್ಯಗಳು, ಅಗತ್ಯ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಹೆಚ್ಚಿಸಲು ಪಠ್ಯಕ್ರಮದ ವಿಷಯವನ್ನು ಕಡಿಮೆ ಮಾಡುವುದು ಮತ್ತು ಅನುಭವಿ ಕಲಿಕೆಯ ಮೇಲೆ ಹೆಚ್ಚಿನ ಗಮನವನ್ನು ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಿದೆ. ವಿದ್ಯಾರ್ಥಿಗಳಿಗೆ ವಿಷಯಗಳ ಆಯ್ಕೆಯಲ್ಲಿ ಹೆಚ್ಚಿನ ನಮ್ಯತೆ ಇರುತ್ತದೆ. ಕಲೆ ಮತ್ತು ವಿಜ್ಞಾನಗಳ ನಡುವೆ, ಪಠ್ಯಕ್ರಮ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ, ವೃತ್ತಿಪರ ಮತ್ತು ಶೈಕ್ಷಣಿಕ ವಿಭಾಗಗಳ ನಡುವೆ ಯಾವುದೇ ಕಟ್ಟುನಿಟ್ಟಿನ ಪ್ರತ್ಯೇಕತೆ ಇರುವುದಿಲ್ಲ.
6 ನೇ ತರಗತಿಯಿಂದ ಶಾಲೆಗಳಲ್ಲಿ ಇಂಟರ್ನ್ಶಿಪ್ ನೊಂದಿಗೆ ವೃತ್ತಿ ಶಿಕ್ಷಣ ಪ್ರಾರಂಭವಾಗಲಿದೆ.
ಶಾಲಾ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು, ಎನ್ಸಿಎಫ್ಎಸ್ಇ 2020-21 ಅನ್ನು ಎನ್ಸಿಇಆರ್ಟಿ ಅಭಿವೃದ್ಧಿಪಡಿಸಲಿದೆ.
ಬಹುಭಾಷೆ ಮತ್ತು ಭಾಷೆಯ ಶಕ್ತಿ
ಹೊಸ ಶಿಕ್ಷಣ ನೀತಿಯು ಮಾತೃಭಾಷೆ / ಸ್ಥಳೀಯ ಭಾಷೆ / ಪ್ರಾದೇಶಿಕ ಭಾಷೆಯು ಕನಿಷ್ಠ 5 ನೇ ತರಗತಿಯವರೆಗೆ, ಸಾಧ್ಯವಾದರೆ 8 ನೇ ತರಗತಿ ಮತ್ತು ಅದಕ್ಕೂ ಹೆಚ್ಚಿನ ತರಗತಿಗಳವರೆಗೆ ಬೋಧನಾ ಮಾಧ್ಯಮವಾಗಿ ಇರಬೇಕೆಂದು ಒತ್ತಿಹೇಳಿದೆ. ತ್ರಿಭಾಷಾ ಸೂತ್ರವನ್ನು ಒಳಗೊಂಡಂತೆ ವಿದ್ಯಾರ್ಥಿಗಳಿಗೆ ಒಂದು ಆಯ್ಕೆಯಾಗಿ ಎಲ್ಲಾ ಹಂತದ ಶಾಲಾ ಮತ್ತು ಉನ್ನತ ಶಿಕ್ಷಣದಲ್ಲಿ ಸಂಸ್ಕೃತ ಇರಲಿದೆ. ಇತರ ಶಾಸ್ತ್ರೀಯ ಭಾಷೆಗಳು ಮತ್ತು ಭಾರತದ ಇತರ ಭಾಷೆಗಳು ಸಹ ಆಯ್ಕೆಗಳಾಗಿ ಲಭ್ಯವಿವೆ. ‘ಏಕ್ ಭಾರತ್ ಶ್ರೇಷ್ಠ ಭಾರತ್’ಉಪಕ್ರಮದಡಿಯಲ್ಲಿ 6-8 ತರಗತಿಯ ವಿದ್ಯಾರ್ಥಿಗಳು ‘ಭಾರತದ ಭಾಷೆಗಳು’ಕುರಿತು ಒಂದು ಮೋಜಿನ ಯೋಜನೆ / ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ. ಪ್ರೌಢಶಾಲಾ ಮಟ್ಟದಲ್ಲಿ ಹಲವಾರು ವಿದೇಶಿ ಭಾಷೆಗಳನ್ನು ಸಹ ನೀಡಲಾಗುವುದು. ಭಾರತೀಯ ಸಂಕೇತ ಭಾಷೆ (ಐಎಸ್ಎಲ್) ಅನ್ನು ದೇಶಾದ್ಯಂತ ಪರಿಚಯಿಸಲಾಗುವುದು ಮತ್ತು ಶ್ರವಣದೋಷವುಳ್ಳ ವಿದ್ಯಾರ್ಥಿಗಳ ಬಳಕೆಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯ ವಸ್ತುಗಳನ್ನು ಅಭಿವೃದ್ಧಿಪಡಿಸಲಾಗುವುದು.
ಮೌಲ್ಯಮಾಪನ ಸುಧಾರಣೆಗಳು
ಎನ್ಇಪಿ 2020 ಸಾರಾಂಶ ಮೌಲ್ಯಮಾಪನದಿಂದ ನಿಯಮಿತ ಮತ್ತು ರಚನಾತ್ಮಕ ಮೌಲ್ಯಮಾಪನಕ್ಕೆ ಬದಲಾಗುತ್ತದೆ. ಇದು ಹೆಚ್ಚು ಸಾಮರ್ಥ್ಯ–ಆಧಾರಿತವಾಗಿದೆ, ಕಲಿಕೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಮತ್ತು ವಿಶ್ಲೇಷಣೆ, ವಿಮರ್ಶಾತ್ಮಕ ಚಿಂತನೆ ಮತ್ತು ಪರಿಕಲ್ಪನಾ ಸ್ಪಷ್ಟತೆಯಂತಹ ಉನ್ನತ–ಕ್ರಮಾಂಕದ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಎಲ್ಲಾ ವಿದ್ಯಾರ್ಥಿಗಳು 3, 5 ಮತ್ತು 8 ನೇ ತರಗತಿಗಳಲ್ಲಿ ಶಾಲಾ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ, ಇದನ್ನು ಸೂಕ್ತ ಪ್ರಾಧಿಕಾರವು ನಡೆಸುತ್ತದೆ. 10 ಮತ್ತು 12 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ಮುಂದುವರಿಸಲಾಗುವುದು, ಆದರೆ ಸಮಗ್ರ ಅಭಿವೃದ್ಧಿಯೊಂದಿಗೆ ಮರುವಿನ್ಯಾಸಗೊಳಿಸಲಾಗುತ್ತದೆ. ಪ್ರಮಾಣೀಕರಣ ಸಂಸ್ಥೆಯಾಗಿ ಹೊಸ ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ PARAKH (ಕಾರ್ಯಕ್ಷಮತೆಯ ಮೌಲ್ಯಮಾಪನ, ವಿಮರ್ಶೆ ಮತ್ತು ಜ್ಞಾನದ ವಿಶ್ಲೇಷಣೆಯ ಸಮಗ್ರ ಮೌಲ್ಯಮಾಪನಕ್ಕಾಗಿ) ವನ್ನು ಸ್ಥಾಪಿಸಲಾಗುವುದು.
ಸಮಾನ ಮತ್ತು ಅಂತರ್ಗತ ಶಿಕ್ಷಣ
ಜನನ ಅಥವಾ ಹಿನ್ನೆಲೆಯ ಕಾರಣಗಳಿಂದಾಗಿ ಯಾವುದೇ ಮಗು ಕಲಿಯುವ ಅವಕಾಶವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಎನ್ಇಪಿ 2020ರ ಗುರಿಯಾಗಿದೆ. ಲಿಂಗ, ಸಾಮಾಜಿಕ–ಸಾಂಸ್ಕೃತಿಕ ಮತ್ತು ಭೌಗೋಳಿಕ ಗುರುತುಗಳು ಮತ್ತು ವಿಕಲಾಂಗತೆಗಳನ್ನು ಒಳಗೊಂಡಿರುವ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ (ಎಸ್ಇಡಿಜಿ) ವಿಶೇಷ ಒತ್ತು ನೀಡಲಾಗುವುದು. ಲಿಂಗ ಸೇರ್ಪಡೆ ನಿಧಿ ಮತ್ತು ಹಿಂದುಳಿದ ಪ್ರದೇಶಗಳು ಮತ್ತು ಗುಂಪುಗಳಿಗೆ ವಿಶೇಷ ಶಿಕ್ಷಣ ವಲಯಗಳನ್ನು ಸ್ಥಾಪಿಸುವುದು ಇದರಲ್ಲಿ ಸೇರಿದೆ. ಅಂಗವೈಕಲ್ಯ ತರಬೇತಿ, ಸಂಪನ್ಮೂಲ ಕೇಂದ್ರಗಳು, ವಸತಿ, ಸಹಾಯಕ ಸಾಧನಗಳು, ಸೂಕ್ತವಾದ ತಂತ್ರಜ್ಞಾನ ಆಧಾರಿತ ಪರಿಕರಗಳು ಮತ್ತು ಇತರ ಕಾರ್ಯವಿಧಾನಗಳನ್ನು ಹೊಂದಿರುವ ಶಿಕ್ಷಣತಜ್ಞರ ಬೆಂಬಲದೊಂದಿಗೆ ವಿಕಲಾಂಗ ಮಕ್ಕಳು ತಳಮಟ್ಟದಿಂದ ಉನ್ನತ ಶಿಕ್ಷಣದವರೆಗೆ ನಿಯಮಿತ ಶಾಲಾ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ. ಕಲೆ–ಸಂಬಂಧಿ, ವೃತ್ತಿ–ಸಂಬಂಧಿ ಮತ್ತು ಆಟ–ಸಂಬಂಧಿತ ಚಟುವಟಿಕೆಗಳಲ್ಲಿ ಭಾಗವಹಿಸಲು ವಿಶೇಷ ಹಗಲಿನ ಬೋರ್ಡಿಂಗ್ ಶಾಲೆ “ಬಾಲ ಭವನ”ವನ್ನು ಸ್ಥಾಪಿಸಲು ಪ್ರತಿ ರಾಜ್ಯ / ಜಿಲ್ಲೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಉಚಿತ ಶಾಲಾ ಮೂಲಸೌಕರ್ಯವನ್ನು ಸಾಮಾಜಿಕ ಚೇತನಾ ಕೇಂದ್ರಗಳಾಗಿ ಬಳಸಬಹುದು.
ಶಿಕ್ಷಕರ ನೇಮಕಾತಿ ಮತ್ತು ವೃತ್ತಿ ಮಾರ್ಗ
ದೃಢವಾದ, ಪಾರದರ್ಶಕ ಪ್ರಕ್ರಿಯೆಗಳ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಬಡ್ತಿ ಅರ್ಹತೆ ಆಧಾರಿತವಾಗಿರುತ್ತವೆ. ಶೈಕ್ಷಣಿಕ ನಿರ್ವಾಹಕರು ಅಥವಾ ಶಿಕ್ಷಕರ ಬೋಧಕರಾಗಲು ಲಭ್ಯವಿರುವ ಪ್ರಗತಿಯ ಮಾರ್ಗಗಳ ವ್ಯವಸ್ಥೆಯೊಂದಿಗೆ ಬಹು–ಮೂಲಗಳ ಕಾರ್ಯಕ್ಷಮತೆ ಮೌಲ್ಯಮಾಪನಗಳು ಇರುತ್ತವೆ. ಶಿಕ್ಷಕರ ಸಾಮಾನ್ಯ ರಾಷ್ಟ್ರೀಯ ವೃತ್ತಿಪರ ಮಾನದಂಡಗಳನ್ನು (ಎನ್ಪಿಎಸ್ಟಿ) 2022 ರ ವೇಳೆಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು ಎನ್ಸಿಇಆರ್ಟಿ, ಎಸ್ಸಿಇಆರ್ಟಿಗಳು, ಶಿಕ್ಷಕರು ಮತ್ತು ತಜ್ಞರ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಎಲ್ಲಾ ಮಟ್ಟಗಳು ಮತ್ತು ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸುತ್ತದೆ.
ಶಾಲಾ ಆಡಳಿತ
ಶಾಲೆಗಳನ್ನು ಸಂಕೀರ್ಣಗಳು ಅಥವಾ ಕ್ಲಸ್ಟರ್ಗಳಾಗಿ ಆಯೋಜಿಸಬಹುದು, ಅದು ಆಡಳಿತದ ಮೂಲ ಘಟಕವಾಗಿರುತ್ತದೆ ಮತ್ತು ಮೂಲಸೌಕರ್ಯ, ಶೈಕ್ಷಣಿಕ ಗ್ರಂಥಾಲಯಗಳು ಮತ್ತು ಬಲವಾದ ವೃತ್ತಿಪರ ಶಿಕ್ಷಕ ಸಮುದಾಯ ಸೇರಿದಂತೆ ಎಲ್ಲಾ ಸಂಪನ್ಮೂಲಗಳ ಲಭ್ಯತೆಯನ್ನು ಖಚಿತಪಡಿಸುತ್ತದೆ.
ಶಾಲಾ ಶಿಕ್ಷಣಕ್ಕಾಗಿ ಗುಣಮಟ್ಟ ನಿರ್ಧಾರ ಮತ್ತು ಮಾನ್ಯತೆ
ನೀತಿ ನಿರೂಪಣೆ, ನಿಯಂತ್ರಣ, ಕಾರ್ಯಾಚರಣೆಗಳು ಮತ್ತು ಶೈಕ್ಷಣಿಕ ವಿಷಯಗಳಿಗಾಗಿ ಎನ್ಇಪಿ 2020 ಸ್ಪಷ್ಟವಾದ, ಪ್ರತ್ಯೇಕವಾದ ವ್ಯವಸ್ಥೆಗಳನ್ನು ರೂಪಿಸಿದೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸ್ವತಂತ್ರ ರಾಜ್ಯ ಶಾಲಾ ಗುಣಮಟ್ಟ ಪ್ರಾಧಿಕಾರವನ್ನು (ಎಸ್ಎಸ್ಎಸ್ಎ) ಸ್ಥಾಪಿಸುತ್ತವೆ. ಎಸ್ಸಿಇಆರ್ಟಿ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಸಿ ಶಾಲಾ ಗುಣಮಟ್ಟ ಮೌಲ್ಯಮಾಪನ ಮತ್ತು ಮಾನ್ಯತೆ ಚೌಕಟ್ಟನ್ನು (ಎಸ್ಕ್ಯೂಎಎಎಫ್) ಅಭಿವೃದ್ಧಿಪಡಿಸುತ್ತದೆ.
ಉನ್ನತ ಶಿಕ್ಷಣ
2035 ರ ವೇಳೆಗೆ ಜಿಇಆರ್ ಅನ್ನು ಶೇ.50 ಕ್ಕೆ ಹೆಚ್ಚಿಸುವುದು
ಎನ್ಇಪಿ 2020 ವೃತ್ತಿಪರ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು 2035 ರ ವೇಳೆಗೆ ಶೇ.26.3 (2018) ರಿಂದ ಶೇ.50 ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ 3.5 ಕೋಟಿ ಸೀಟುಗಳನ್ನು ಸೇರಿಸಲಾಗುವುದು.
ಸಮಗ್ರ ಬಹುಶಿಸ್ತೀಯ ಶಿಕ್ಷಣ
ನಮ್ಯತೆಯ ಪಠ್ಯಕ್ರಮದೊಂದಿಗೆ ವಿಶಾಲ ಆಧಾರಿತ, ಬಹು–ಶಿಸ್ತಿನ, ಸಮಗ್ರ ಪದವಿ ಶಿಕ್ಷಣ, ವಿಷಯಗಳ ಸೃಜನಶೀಲ ಸಂಯೋಜನೆಗಳು, ವೃತ್ತಿಪರ ಶಿಕ್ಷಣದ ಏಕೀಕರಣ ಮತ್ತು ಸೂಕ್ತ ಪ್ರಮಾಣೀಕರಣದೊಂದಿಗೆ ಬಹು ಪ್ರವೇಶ ಮತ್ತು ನಿರ್ಗಮನ ಅಂಕಗಳನ್ನು ಈ ನೀತಿಯು ರೂಪಿಸಿದೆ. ಪದವಿ ಶಿಕ್ಷಣವು 3 ಅಥವಾ 4 ವರ್ಷಗಳಲ್ಲಿ ಬಹು ನಿರ್ಗಮನ ಆಯ್ಕೆಗಳು ಮತ್ತು ಸೂಕ್ತ ಪ್ರಮಾಣೀಕರಣವನ್ನು ಹೊಂದಿರಬಹುದು. ಉದಾಹರಣೆಗೆ, 1 ವರ್ಷದ ನಂತರ ಪ್ರಮಾಣ ಪತ್ರ, 2 ವರ್ಷಗಳ ನಂತರ ಸುಧಾರಿತ ಡಿಪ್ಲೊಮಾ, 3 ವರ್ಷಗಳ ನಂತರ ಬ್ಯಾಚುಲರ್ ಪದವಿ ಮತ್ತು 4 ವರ್ಷಗಳ ನಂತರ ಸಂಶೋಧನೆಯೊಂದಿಗೆ ಬ್ಯಾಚುಲರ್ ಪದವಿ.
ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಗಳಿಸಿದ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಅನ್ನು ಸ್ಥಾಪಿಸಬೇಕು. ಗಳಿಸಿದ ಪ್ರಮಾಣಪತ್ರಗಳನ್ನು ಈ ಬ್ಯಾಂಕ್ ಗೆ ವರ್ಗಾಯಿಸಬಹುದು ಮತ್ತು ಅಂತಿಮ ಪದವಿಗೆ ಇವುಗಳನ್ನು ಪರಿಗಣಿಸಬಹುದು.
ಐಐಟಿಗಳು, ಐಐಎಂಗಳಿಗೆ ಸಮನಾಗಿರುವ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ವಿಶ್ವವಿದ್ಯಾಲಯಗಳು (ಎಂಇಆರ್ಯು) ದೇಶದ ಜಾಗತಿಕ ಮಾನದಂಡಗಳ ಅತ್ಯುತ್ತಮ ಬಹುಶಿಸ್ತೀಯ ಶಿಕ್ಷಣದ ಮಾದರಿಗಳಾಗಿ ಸ್ಥಾಪನೆಯಾಗಲಿವೆ.
ಬಲವಾದ ಸಂಶೋಧನಾ ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಉನ್ನತ ಶಿಕ್ಷಣದಾದ್ಯಂತ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲಾಗುವುದು.
ನಿಯಂತ್ರಣ
ವೈದ್ಯಕೀಯ ಮತ್ತು ಕಾನೂನು ಶಿಕ್ಷಣವನ್ನು ಹೊರತುಪಡಿಸಿ ಸಂಪೂರ್ಣ ಉನ್ನತ ಶಿಕ್ಷಣಕ್ಕಾಗಿ ಉನ್ನತ ಶಿಕ್ಷಣ ಆಯೋಗವನ್ನು (ಎಚ್ಇಸಿಐ) ಸ್ಥಾಪಿಸಲಾಗುವುದು. ಎಚ್ಇಸಿಐ ನಾಲ್ಕು ಸ್ವತಂತ್ರ ಅಂಗಗಳನ್ನುಗಳನ್ನು ಹೊಂದಿರುತ್ತದೆ – ನಿಯಂತ್ರಣಕ್ಕಾಗಿ ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಮಂಡಳಿ (ಎನ್ಎಚ್ಇಆರ್ಸಿ), ಗುಣಮಟ್ಟದ ನಿರ್ಧಾರಕ್ಕಾಗಿ ಸಾಮಾನ್ಯ ಶಿಕ್ಷಣ ಮಂಡಳಿ (ಜಿಇಸಿ), ಧನಸಹಾಯಕ್ಕಾಗಿ ಉನ್ನತ ಶಿಕ್ಷಣ ಧನಸಹಾಯ ಮಂಡಳಿ (ಎಚ್ಇಜಿಸಿ) ಮತ್ತು ಮಾನ್ಯತೆಗಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್ಎಸಿ). ತಂತ್ರಜ್ಞಾನದ ಮೂಲಕ ಮುಖರಹಿತವಾಗಿ ಎಚ್ಇಸಿಐ ಕಾರ್ಯನಿರ್ವಹಿಸುತ್ತದೆ ಮತ್ತು ಗುಣಮಟ್ಟ ಮತ್ತು ಮಾನದಂಡಗಳಿಗೆ ಅನುಗುಣವಾಗಿರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ದಂಡ ವಿಧಿಸುವ ಅಧಿಕಾರವನ್ನು ಹೊಂದಿರುತ್ತದೆ. ನಿಯಂತ್ರಣ, ಮಾನ್ಯತೆ ಮತ್ತು ಶೈಕ್ಷಣಿಕ ಮಾನದಂಡಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಂದೇ ರೀತಿಯ ಮಾನದಂಡಗಳಿಂದ ನಿಯಂತ್ರಿಸಲಾಗುತ್ತದೆ.
ಸಾಂಸ್ಥಿಕ ರಚನೆಯ ಸುಧಾರಣೆ
ಉನ್ನತ ಶಿಕ್ಷಣ ಸಂಸ್ಥೆಗಳನ್ನು ಉತ್ತಮ ಗುಣಮಟ್ಟದ ಬೋಧನೆ, ಸಂಶೋಧನೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಒದಗಿಸುವ ದೊಡ್ಡ, ಉತ್ತಮ ಸಂಪನ್ಮೂಲ, ರೋಮಾಂಚಕ ಬಹುಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸಲಾಗುವುದು. ವಿಶ್ವವಿದ್ಯಾನಿಲಯದ ವ್ಯಾಖ್ಯಾನವು ಸಂಶೋಧನೆಗೆ ಒತ್ತು ನೀಡುವ ವಿಶ್ವವಿದ್ಯಾಲಯಗಳಿಂದ ಬೋಧನೆಗೆ ಒತ್ತು ನೀಡುವ ವಿಶ್ವವಿದ್ಯಾಲಯಗಳು ಮತ್ತು ಸ್ವಾಯತ್ತ ಪದವಿ ನೀಡುವ ಕಾಲೇಜುಗಳವರೆಗೆ ಇರುತ್ತದೆ.
ಕಾಲೇಜುಗಳ ಸಹವರ್ತಿ ವ್ಯವಸ್ಥೆಯನ್ನು 15 ವರ್ಷಗಳಲ್ಲಿ ಹಂತಹಂತವಾಗಿ ತೆಗೆದುಹಾಕಲಾಗುವುದು ಮತ್ತು ಕಾಲೇಜುಗಳಿಗೆ ಶ್ರೇಣೀಕೃತ ಸ್ವಾಯತ್ತತೆಯನ್ನು ನೀಡಲು ಹಂತವಾರು ವ್ಯವಸ್ಥೆಯನ್ನು ಸ್ಥಾಪಿಸಬೇಕಾಗಿದೆ. ಕಾಲಾನಂತರದಲ್ಲಿ, ಪ್ರತೀ ಕಾಲೇಜು ಸ್ವಾಯತ್ತ ಪದವಿ ನೀಡುವ ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಒಂದು ಕಾಲೇಜಾಗಿ ಅಭಿವೃದ್ಧಿ ಹೊಂದುತ್ತದೆ.
ಪ್ರೇರಿತ, ಶಕ್ತಿಯುತ ಮತ್ತು ಸಮರ್ಥ ಬೋಧಕ ವರ್ಗ
ಸ್ವತಂತ್ರ, ಪಾರದರ್ಶಕ ನೇಮಕಾತಿಯ ಬೋಧಕವರ್ಗದ ಸಾಮರ್ಥ್ಯವನ್ನು ಪ್ರೇರೇಪಿಸುವ, ಶಕ್ತಿಯುತಗೊಳಿಸುವ ಮತ್ತು ನಿರ್ಮಿಸುವ, ಪಠ್ಯಕ್ರಮ / ಬೋಧನೆಯನ್ನು ವಿನ್ಯಾಸಗೊಳಿಸುವ ಸ್ವಾತಂತ್ರ್ಯವನ್ನು ಉತ್ತೇಜಿಸುವುದನ್ನು ಎನ್ಇಪಿ ಸ್ಪಷ್ಟವಾಗಿ ಹೇಳಿದೆ. ಮೂಲಭೂತ ಮಾನದಂಡಗಳನ್ನು ತಲುಪದ ಅಧ್ಯಾಪಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಶಿಕ್ಷಕರಿಗೆ ಶಿಕ್ಷಣ
ಶಿಕ್ಷಕರ ಶಿಕ್ಷಣಕ್ಕಾಗಿ ಹೊಸ ಮತ್ತು ಸಮಗ್ರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು, ಎನ್ಸಿಎಫ್ಟಿಇ 2021 ಅನ್ನು ಎನ್ಸಿಇಟಿಇಯೊಂದಿಗೆ ಸಮಾಲೋಚಿಸಿ ಎನ್ಸಿಟಿಇ ರೂಪಿಸುತ್ತದೆ. 2030 ರ ವೇಳೆಗೆ, ಬೋಧನೆಗೆ ಕನಿಷ್ಠ ಪದವಿ ಅರ್ಹತೆಯು 4 ವರ್ಷಗಳ ಸಂಯೋಜಿತ ಬಿ.ಎಡ್. ಪದವಿಯಾಗಿರುತ್ತದೆ. ಕಳಪೆ ಶಿಕ್ಷಕರ ಶಿಕ್ಷಣ ಸಂಸ್ಥೆಗಳ (ಟಿಇಐ) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಮಾರ್ಗದರ್ಶನ ಮಿಷನ್
ಮಾರ್ಗದರ್ಶನಕ್ಕಾಗಿ ರಾಷ್ಟ್ರೀಯ ಮಿಷನ್ ಸ್ಥಾಪಿಸಲಾಗುವುದು. ವಿಶ್ವವಿದ್ಯಾಲಯ / ಕಾಲೇಜಿನ ಶಿಕ್ಷಕರಿಗೆ ಅಲ್ಪ ಮತ್ತು ದೀರ್ಘಕಾಲೀನ ಮಾರ್ಗದರ್ಶನ / ವೃತ್ತಿಪರ ಬೆಂಬಲವನ್ನು ನೀಡಲು ಸಿದ್ಧರಿರುವ, ಭಾರತೀಯ ಭಾಷೆಗಳಲ್ಲಿ ಕಲಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ಹಿರಿಯ / ನಿವೃತ್ತ ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಇರುತ್ತಾರೆ.
ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಎಸ್ಸಿ, ಎಸ್ಟಿ, ಒಬಿಸಿ, ಮತ್ತು ಇತರ ಎಸ್ಇಡಿಜಿಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುವುದು. ವಿದ್ಯಾರ್ಥಿವೇತನವನ್ನು ಪಡೆಯುವ ವಿದ್ಯಾರ್ಥಿಗಳ ಪ್ರಗತಿಯನ್ನು ಬೆಂಬಲಿಸಲು, ಬೆಳೆಸಲು ಮತ್ತು ಟ್ರ್ಯಾಕ್ ಮಾಡಲು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ಅನ್ನು ವಿಸ್ತರಿಸಲಾಗುವುದು. ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನವನ್ನು ನೀಡಲು ಪ್ರೋತ್ಸಾಹಿಸಲಾಗುತ್ತದೆ.
ಮುಕ್ತ ಮತ್ತು ದೂರಶಿಕ್ಷಣ
ಒಟ್ಟು ದಾಖಲಾತಿ ಅನುಪಾತವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲು ಇದನ್ನು ವಿಸ್ತರಿಸಲಾಗುವುದು. ಆನ್ಲೈನ್ ಕೋರ್ಸ್ಗಳು ಮತ್ತು ಡಿಜಿಟಲ್ ರೆಪೊಸಿಟರಿಗಳು, ಸಂಶೋಧನೆಗೆ ಧನಸಹಾಯ, ಸುಧಾರಿತ ವಿದ್ಯಾರ್ಥಿ ಸೇವೆಗಳು, MOOC ಗಳ ಕ್ರೆಡಿಟ್ ಆಧಾರಿತ ಗುರುತಿಸುವಿಕೆ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದು ಉತ್ತಮ ಗುಣಮಟ್ಟದ ತರಗತಿ ಕಾರ್ಯಕ್ರಮಗಳಿಗೆ ಸಮನಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.
ಆನ್ಲೈನ್ ಶಿಕ್ಷಣ ಮತ್ತು ಡಿಜಿಟಲ್ ಶಿಕ್ಷಣ:
ಇತ್ತೀಚಿನ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಸಾಂಪ್ರದಾಯಿಕ ಮತ್ತು ವೈಯಕ್ತಿಕ ಶಿಕ್ಷಣ ವಿಧಾನಗಳು ಸಾಧ್ಯವಾಗದಿದ್ದಾಗಲೆಲ್ಲಾ ಗುಣಮಟ್ಟದ ಶಿಕ್ಷಣದ ಪರ್ಯಾಯ ವಿಧಾನಗಳನ್ನು ಖಚಿತಪಡಿಸಿಕೊಳ್ಳಲು ಆನ್ಲೈನ್ ಶಿಕ್ಷಣವನ್ನು ಉತ್ತೇಜಿಸಲು ಸಮಗ್ರವಾದ ಶಿಫಾರಸುಗಳನ್ನು ಒಳಗೊಂಡಿದೆ. ಶಾಲೆ ಮತ್ತು ಉನ್ನತ ಶಿಕ್ಷಣದ ಇ–ಶಿಕ್ಷಣದ ಅಗತ್ಯತೆಗಳನ್ನು ನೋಡಿಕೊಳ್ಳಲು ಡಿಜಿಟಲ್ ಮೂಲಸೌಕರ್ಯ, ಡಿಜಿಟಲ್ ವಿಷಯ ಮತ್ತು ಸಾಮರ್ಥ್ಯ ವೃದ್ಧಿಯ ಉದ್ದೇಶಕ್ಕೆ ಮೀಸಲಾದ
I wholeheartedly welcome the approval of the National Education Policy 2020! This was a long due and much awaited reform in the education sector, which will transform millions of lives in the times to come! #NewEducationPolicyhttps://t.co/N3PXpeuesG
— Narendra Modi (@narendramodi) July 29, 2020
NEP 2020 is based on the pillars of:
— Narendra Modi (@narendramodi) July 29, 2020
Access.
Equity.
Quality.
Affordability.
Accountability.
In this era of knowledge, where learning, research and innovation are important, the NEP will transform India into a vibrant knowledge hub.
NEP 2020 gives utmost importance towards ensuring universal access to school education. There is emphasis on aspects such as better infrastructure, innovative education centres to bring back dropouts into the mainstream, facilitating multiple pathways to learning among others.
— Narendra Modi (@narendramodi) July 29, 2020
Replacing 10+2 structure of school curricula with a 5+3+3+4 curricular structure will benefit the younger children. It will also be in tune with global best practices for development of mental faculties of a child. There are reforms in school curricula and pedagogy too.
— Narendra Modi (@narendramodi) July 29, 2020
NEP 2020 has provisions to set up a Gender Inclusion Fund and also Special Education Zones. These will specially focus on making education more inclusive. NEP 2020 would improve the education infrastructure and opportunities for persons with disabilities.
— Narendra Modi (@narendramodi) July 29, 2020
Thanks to NEP 2020, the Indian Higher Education sector will have a holistic and multi-disciplinary approach. UG education will offer flexible curricula, creative combinations of subjects, integration of vocational education.
— Narendra Modi (@narendramodi) July 29, 2020
UG education would also include multiple entry and exit points with appropriate certification. An Academic Bank of Credit will be set up to enable digital storage of credits earned from different HEIs, which can also be transferred and counted as a part of the final degree.
— Narendra Modi (@narendramodi) July 29, 2020
Respecting the spirit ‘Ek Bharat Shreshtha Bharat’, the NEP 2020 includes systems to promote Indian languages, including Sanskrit. Many foreign languages will also be offered at the secondary level.
— Narendra Modi (@narendramodi) July 29, 2020
Indian Sign Language (ISL) will be standardised across the country.
Aspects such as widening the availability of scholarships, strengthening infrastructure for Open and Distance Learning, Online Education and increasing the usage of technology have received great attention in the NEP. These are vital reforms for the education sector.
— Narendra Modi (@narendramodi) July 29, 2020
Framing of NEP 2020 will be remembered as a shining example of participative governance. I thank all those who have worked hard in the formulation of the NEP 2020.
— Narendra Modi (@narendramodi) July 29, 2020
May education brighten our nation and lead it to prosperity.