Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ವಿಕೋಪ ನಿರ್ವಹಣೆ ಯೋಜನೆ ಬಿಡುಗಡೆ ಮಾಡಿದ ಪ್ರಧಾನಿ

ರಾಷ್ಟ್ರೀಯ ವಿಕೋಪ ನಿರ್ವಹಣೆ ಯೋಜನೆ ಬಿಡುಗಡೆ ಮಾಡಿದ ಪ್ರಧಾನಿ


ಭಾರತವನ್ನು ವಿಕೋಪ ತಾಳಿಕೊಳ್ಳುವ ಮತ್ತು ಜೀವಹಾನಿಯನ್ನು ತಗ್ಗಿಸುವ ಗುರಿ ಹೊಂದಿದ ಯೋಜನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಿಕೋಪ ನಿರ್ವಹಣೆ ಯೋಜನೆ (ಎನ್.ಡಿ.ಎಂ.ಪಿ.)ಯನ್ನು ಇಂದು ಬಿಡುಗಡೆ ಮಾಡಿದರು. ಇದು ದೇಶದಲ್ಲೇ ರೂಪಿಸಲಾಗಿರುವ ಇಂಥ ಮೊಟ್ಟ ಮೊದಲ ಯೋಜನೆಯಾಗಿದೆ.

ಇದು ಭಾರತ ದೇಶವನ್ನು ವಿಕೋಪ ತಾಳಿಕೊಳ್ಳುವ ಮತ್ತು ಜೀವಹಾನಿ ಮತ್ತು ಆಸ್ತಿ ಪಾಸ್ತಿಯ ಹಾನಿ ತಗ್ಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆ ನಾಲ್ಕು ಆದ್ಯತೆಯ ಧ್ಯೇಯಗಳಾದ “ಸೆಂಡೈ ಚೌಕಟ್ಟು’’, ಅವುಗಳೆಂದರೆ ವಿಕೋಪದ ಅಪಾಯವನ್ನು ಅರಿಯುವುದು, ವಿಕೋಪ ಅಪಾಯದ ಆಡಳಿತ ಸುಧಾರಣೆ ಮಾಡುವುದು, ವಿಕೋಪ ಅಪಾಯ ತಗ್ಗಿಸುವುದಕ್ಕೆ ಹೂಡಿಕೆ ಮಾಡುವುದು (ವಿನ್ಯಾಸಿತ ಮತ್ತು ವಿನ್ಯಾಸವಲ್ಲದ ಕ್ರಮಗಳ ಮೂಲಕ) ಮತ್ತು ವಿಕೋಪ ಎದುರಿಸಲು ಸಜ್ಜಾಗಿರುವುದು, ಮುಂಚಿತವಾಗಿಯೇ ಮುನ್ಸೂಚನೆ ನೀಡುವುದು ಮತ್ತು ವಿಕೋಪ ಸಂಭವಿಸಿದ ತರುವಾಯ ಉತ್ತಮ ನಿರ್ಮಾಣ ಮಾಡುವುದು.
ಯೋಜನೆಯ ಪ್ರಮುಖ ಲಕ್ಷಣಗಳು

ಈ ಯೋಜನೆಯು ವಿಕೋಪ ನಿರ್ವಹಣೆಯ ಎಲ್ಲ ಹಂತಗಳನ್ನೂ ನಿರ್ವಹಿಸುತ್ತದೆ: ತಡೆಗಟ್ಟುವುದು, ಕಡಿಮೆ ಮಾಡುವುದು, ಸ್ಪಂದಿಸುವುದು ಮತ್ತು ಪುನರ್ ಸಂಪಾದನೆ. ಇದು ಎಲ್ಲ ಸಂಸ್ಥೆ ಮತ್ತು ಸರ್ಕಾರದ ಇಲಾಖೆಗಳೊಂದಿಗೆ ಸಮಗ್ರ ಸಮನ್ವಯತೆ ಒದಗಿಸುತ್ತದೆ. ಈ ಯೋಜನೆ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಿಂದ ಹಿಡಿದು ಎಲ್ಲ ಹಂತಗಳ ಜವಾಬ್ದಾರಿ ಮತ್ತು ಪಾತ್ರವನ್ನು ಮ್ಯಾಟ್ರಿಕ್ಸ್ ಸ್ವರೂಪದಲ್ಲಿ ತಿಳಿಸುತ್ತದೆ. ಈ ಯೋಜನೆಯು ಪ್ರಾದೇಶಿಕ ನಿಲುವು ಹೊಂದಿದ್ದು, ಇದು ವಿಕೋಪ ನಿರ್ವಹಣೆಗೆ ಮಾತ್ರವಲ್ಲ, ಅಭಿವೃದ್ಧಿ ಯೋಜನೆಗೂ ನೆರವಾಗಲಿದೆ.

ವಿಕೋಪ ನಿರ್ವಹಣೆಯ ಎಲ್ಲ ಹಂತಗಳಲ್ಲೂ ಆರೋಹಣ ಸ್ವರೂಪದಲ್ಲಿ ಜಾರಿಮಾಡುವಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಪ್ರಮುಖ ಚಟುವಟಿಕೆಗಳಾದ ಮೊದಲೇ ಮುನ್ನೆಚ್ಚರಿಕೆ ನೀಡುವುದು, ಮಾಹಿತಿಯ ಪ್ರಸರಣ, ವೈದ್ಯಕೀಯ ರಕ್ಷಣೆ, ಇಂಧನ, ಸಾಗಣೆ, ಶೋಧ ಮತ್ತು ಹುಡುಕಾಟ, ತೆರವುಗೊಳಿಸುವುದು ಇತ್ಯಾದಿಯನ್ನು ಗುರುತಿಸುತ್ತದೆ. ಜೊತೆಗೆ ಪ್ರಕೋಪಕ್ಕೆ ಸ್ಪಂದಿಸುವ ಸಂಸ್ಥೆಗಳಿಗೆ ಪರಿಶೀಲನಾ ಪಟ್ಟಿಯಂತೆಯೂ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು ಮರು ಸಂಪಾದನೆಗಾಗಿ ಸಾಮಾನ್ಯವೆನಿಸುವಂಥ ಚೌಕಟ್ಟನ್ನು ಒದಗಿಸುತ್ತದೆ ಮತ್ತು ಪರಿಸ್ಥಿತಿಯನ್ನು ನಿರ್ಧರಿಸಲು ನಮ್ಯತೆ ಒದಗಿಸುತ್ತದೆ ಹಾಗೂ ಉತ್ತಮ ಪುನರ್ ನಿರ್ಮಾಣ ಮಾಡುತ್ತದೆ.

ಪ್ರಕೋಪ ಸಂದರ್ಭದಲ್ಲಿ ಸಹಕರಿಸಲು ಸಮುದಾಯವನ್ನು ಸಜ್ಜುಗೊಳಿಸುತ್ತದೆ, ಇದು ಮಾಹಿತಿಯ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳ ಬೃಹತ್ ಅಗತ್ಯವನ್ನು ಪ್ರತಿಪಾದಿಸುತ್ತದೆ.

ಕೇಂದ್ರ ಗೃಹ ವ್ಯವಹಾರಗಳ ಖಾತೆ ಸಚಿವ ಶ್ರೀ ರಾಜನಾಥಸಿಂಗ್, ಕೇಂದ್ರ ಗೃಹ ವ್ಯವಹಾರಗಳ ಖಾತೆ ಸಹಾಯಕ ಸಚಿವ ಶ್ರೀ ಕಿರೆಣ್ ರಿಜಿಜು ಮತ್ತು ಪ್ರಧಾನಮಂತ್ರಿಗಳ ಕಾರ್ಯಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.