ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವ ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಯುವ ಸಂಸತ್ ಉತ್ಸವ ಪ್ರಶಸ್ತಿ 2019 ಸಮಾರೋಪ ಸಮಾರಂಭದಲ್ಲಿ ಭಾಗಿಯಾದರು. ಅಲ್ಲಿ ಅವರು ರಾಷ್ಟ್ರೀಯ ಯುವ ಸಂಸತ್ ಉತ್ಸವ ಪ್ರಶಸ್ತಿ 2019 ಪ್ರದಾನ ಮಾಡಿ, ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಅವರು ಕ್ರೀಡಾ ಮಾಹಿತಿ ಒದಗಿಸುವ ಖೇಲೋ ಇಂಡಿಯಾ ಆಪ್ ಗೆ ಚಾಲನೆ ನೀಡಿದರು.
ರಾಷ್ಟ್ರೀಯ ಯುವ ಸಂಸತ್ ಉತ್ಸವ 2019ರಲ್ಲಿ ಭಾಗಿಯಾದವರು ಮತ್ತು ವಿಜೇತರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿಯವರು, ಅವರ ಚೈತನ್ಯ ಮತ್ತು ಶ್ರದ್ಧೆಯನ್ನು ಪ್ರಶಂಸಿಸಿದರು. ಈ ಉತ್ಸವ ನವ ಭಾರತದ ಚಿತ್ರಣವನ್ನು ಪ್ರತಿನಿಧಿಸುತ್ತದೆ ಎಂದರು. ನವ ಭಾರತದ ದೃಷ್ಟಿಕೋನದೊಂದಿಗೆ ಸಂಪರ್ಕಿತವಾಗುವಂತೆ ಯುವಜನರಿಗೆ ಅವರು ಕರೆ ನೀಡಿದರು. ದೇಶದ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ದೇಶದ ಯುವಜನರು ದೊಡ್ಡ ಪಾತ್ರ ನಿರ್ವಹಿಸಲು ಸಜ್ಜಾಗಬೇಕು ಎಂದು ಅವರು ಹೇಳಿದರು.
ಸಮಾಜದ ಒಳಿತಿಗಾಗಿ ಉತ್ತಮ ಸಂವಹನ ಕೌಶಲ ರೂಢಿಸಿಕೊಳ್ಳುವಂತೆ ದೇಶದ ಯುವಜನರಿಗೆ ಪ್ರಧಾನಿ ತಿಳಿಸಿದರು. ಒಬ್ಬರು ಆಡುವ ಮಾತುಗಳು ಹೃದಯಸ್ಪರ್ಶಿಯಾಗಿರಬಹುದು ಅಥವಾ ಆಗಿಲ್ಲದೆಯೂ ಇರಬಹುದು ಆದರೆ ಅದು ಖಂಡಿತಾ ಸ್ಫೂರ್ತಿದಾಯಕವಾಗಿರಬೇಕು ಎಂದರು. ವಿವಿಧ ವಿಚಾರಗಳ ಕುರಿತಂತೆ ಚರ್ಚಿಸುವಂತೆ ದೇಶದ ಯುವ ಜನರಿಗೆ ಅವರು ಕರೆ ನೀಡಿದರು. ಯುವಜನರಿಗೆ ತಾಜಾತನ ಮತ್ತು ಹೊಸ ಕಲ್ಪನೆಗಳ ಅವಕಾಶ ಇರುತ್ತದೆ, ಹೆಚ್ಚು ಸಮರ್ಥವಾಗಿ ಹೊಸ ಸವಾಲುಗಳನ್ನು ಎದುರಿಸಲು ಅವರನ್ನು ಅಣಿಗೊಳಿಸುತ್ತದೆ ಎಂದು ಪ್ರಧಾನಮಂತ್ರಿಗಳು ಹೇಳಿದರು.
ರಾಷ್ಟ್ರೀಯ ಯುವ ಸಂಸತ್ತು ಉತ್ಸವ ವೇದಿಕೆಯು ಯುವಜನರ ಚೈತನ್ಯಕ್ಕೆ ರೂಪ ನೀಡುತ್ತದೆ ಮತ್ತು ಉತ್ತಮ ಸಂವಾದದ ಪ್ರಕ್ರಿಯೆಗೆ ದಿಕ್ಕು ತೋರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇಂಥ ಕಾರ್ಯಕ್ರಮಗಳು ರಾಜಕಾರಣಿಗಳಾಗಬಯಸುವವರಿಗೆ ನೆರವಾಗುತ್ತವೆ ಎಂದರು.
ಇದಕ್ಕೂ ಮುನ್ನ ಪ್ರಶಸ್ತಿ ವಿಜೇತರಿಗೆ ತಮ್ಮ ಚಿಂತನೆಗಳನ್ನು ಪ್ರಧಾನಮಂತ್ರಿಯವರೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು. ಪ್ರಧಾನಮಂತ್ರಿಯವರು ಉತ್ಸವದಲ್ಲಿ ಭಾಗಿಯಾದವರೊಂದಿಗೆ ಸಂವಾದ ನಡೆಸಿದರು.
‘ನವ ಭಾರತದ ಧ್ವನಿ ನೀವಾಗಿ ಮತ್ತು ಪರಿಹಾರ ಹುಡುಕಿ ಮತ್ತು ನೀತಿಗೆ ಕೊಡುಗೆ ನೀಡಿ’ ಎಂಬ ಧ್ಯೇಯದೊಂದಿಗೆ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಯುವ ಸಂಸತ್ತು ಉತ್ಸವ 2019ನ್ನು ರಾಷ್ಟ್ರೀಯ ಸೇವಾ ಯೋಜನೆ ಮತ್ತು ನೆಹರೂ ಯುವ ಕೇಂದ್ರ ಸಂಘಟನ್ ಜಂಟಿಯಾಗಿ ಆಯೋಜಿಸಲಾಗಿತ್ತು..
*****
एक शायर ने कहा था कि:
— PMO India (@PMOIndia) February 27, 2019
उसे गुमाँ है कि मेरी उड़ान कुछ कम है
मुझे यक़ीं है कि ये आसमां कुछ कम है ।
युवा नए ideas से, freshness से भरा हुआ होता है।
उस पर अतीत का बोझ नहीं होता, ऐसे में चुनौतियों और समस्याओं से निपटने में वो अधिक सक्षम होता है: PM
द्वारिका प्रसाद द्विवेदी जी द्वारा रचित दो पंक्तियां मैं आपको बताना चाहता हूँ -
— PMO India (@PMOIndia) February 27, 2019
इतने ऊँचे उठो, कि, जितना उठा गगन है।
इतने मौलिक बनो, कि, जितना स्वयं सृजन है: PM