Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ) ಸಿಬ್ಬಂದಿಗಳಿಗೆ ಅವರ ಸಂಸ್ಥಾಪನಾ (ರೈಸಿಂಗ್ ) ದಿನದಂದು ಪ್ರಧಾನಮಂತ್ರಿಯವರು ಶುಭಾಶಯ ಕೋರಿದರು


ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ) ಸಿಬ್ಬಂದಿಯ ಸಂಸ್ಥಾಪನಾ (ರೈಸಿಂಗ್) ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ತಮ್ಮ ಕರ್ತವ್ಯದ ಸಂದರ್ಭದಲ್ಲಿ, ಅಚಲವಾದ ವೃತ್ತಿಪರತೆ, ನಮ್ಮ ರಾಷ್ಟ್ರದ ಬಗ್ಗೆ ಆಳವಾದ ಪ್ರೀತಿ ಮತ್ತು ಅದಮ್ಯ ಧೈರ್ಯವನ್ನು ಪ್ರದರ್ಶಿಸಿದ ಪಡೆಯ ಎಲ್ಲಾ ಕೆಚ್ಚೆದೆಯ ಸಿಬ್ಬಂದಿಯನ್ನು ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ  ಶ್ಲಾಘಿಸಿದರು.

ಪ್ರಧಾನಮಂತ್ರಿಯವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹೀಗೆ ಹೇಳಿದ್ದಾರೆ;

“ರಾಷ್ಟ್ರೀಯ ಭದ್ರತಾ ಪಡೆ (ಎನ್.ಎಸ್.ಜಿ) ಸಿಬ್ಬಂದಿಗಳು ತಮ್ಮ ಸಂಸ್ಥಾಪನಾ (ರೈಸಿಂಗ್)  ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಅವರಿಗೆಲ್ಲರಿಗೂ  ಶುಭಾಶಯಗಳು.

@nsgblackcats ದೃಢವಾಗಿ ತಮ್ಮನ್ನು ಒಂದು ವಿಶಿಷ್ಟ ಶಕ್ತಿಯಾಗಿ ಸ್ಥಾಪಿಸಿಕೊಂಡಿವೆ, ವಿವಿಧ ಬೆದರಿಕೆಗಳಿಂದ ನಮ್ಮನ್ನು ರಕ್ಷಿಸುತ್ತವೆ.

ತಮ್ಮ ಕರ್ತವ್ಯದ ಸಂದರ್ಭದಲ್ಲಿ, ಅಚಲವಾದ ವೃತ್ತಿಪರತೆ, ನಮ್ಮ ರಾಷ್ಟ್ರದ ಬಗ್ಗೆ ಆಳವಾದ ಪ್ರೀತಿ ಮತ್ತು ಅದಮ್ಯ ಧೈರ್ಯವನ್ನು ಪ್ರದರ್ಶಿಸಿದ ಪಡೆಯ ಎಲ್ಲಾ ಕೆಚ್ಚೆದೆಯ ಸಿಬ್ಬಂದಿಯನ್ನು ನಾನು ಈ ವಿಶೇಷ ಸಂದರ್ಭದಲ್ಲಿ ಶ್ಲಾಘಿಸುತ್ತೇನೆ. “

 

***