Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ನಾವಿಕ ದಿನಾಚರಣೆಗೆ ಪ್ರಧಾನ ಮಂತ್ರಿ ಶುಭಾಶಯ; ಜಲ ಶಕ್ತಿ ಆದ್ಯತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರೇರಣೆ ಸ್ಮರಣೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ನಾವಿಕ ದಿನದ ಶುಭಾಶಯ ಕೋರಿದ್ದಾರೆ.

“ಭಾರತದಲ್ಲಿ ಸಾಗರ ವಲಯ , ತನ್ನ ಶ್ರೀಮಂತ ಇತಿಹಾಸದೊಂದಿಗೆ ದೇಶವನ್ನು ಪರಿವರ್ತಿಸುವ ಶಕ್ತಿ ಹೊಂದಿದೆ. ರಾಷ್ಟ್ರೀಯ ನಾವಿಕ ದಿನದಂದು ರಾಷ್ಟ್ರದ ಸಮೃದ್ಧತೆಗಾಗಿ ನಮ್ಮ ಸಾಗರ, ನಾವಿಕ ಶಕ್ತಿಯನ್ನು ಪೋಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ “ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರೇರಣೆಯಿಂದಾಗಿ ನಮ್ಮ ಉತ್ಸಾಹಭರಿತ ರೋಮಾಂಚಕಾರೀ ಸಾಗರ ನಾವಿಕ ವಲಯಕ್ಕಾಗಿ ನಮ್ಮ ಪ್ರಯತ್ನಗಳು ಮುಂದುವರೆದಿವೆ. ಡಾ. ಬಾಬಾ ಸಹೇಬ್ ಅವರು ಜಲ್ ಶಕ್ತಿಗೆ ಗರಿಷ್ಟ ಆದ್ಯತೆ ನೀಡಿದ್ದರು. ಜಲಮಾರ್ಗಗಳು, ನೀರಾವರಿ, ಕಾಲುವೆ ಜಾಲ ಮತ್ತು ಬಂದರುಗಳು ಅವರ ಆದ್ಯತೆಯಾಗಿದ್ದವು. ಈ ವಲಯದಲ್ಲಿ ಅವರ ಕಾರ್ಯ ಭಾರತದ ಜನರಿಗೆ ಒಳಿತನ್ನುಂಟು ಮಾಡುವಂತಹದಾಗಿತ್ತು ಎಂದು ಪ್ರಧಾನ ಮಂತ್ರಿಯವರು ಅಭಿಪ್ರಾಯಪಟ್ಟಿದ್ದಾರೆ.