Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

ರಾಷ್ಟ್ರೀಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವಾನ್ವಿತ ಅತಿಥಿಯಾಗಿ ಎರಡು ದಿನಗಳ ಬಾಂಗ್ಲಾದೇಶದ ತಮ್ಮ ಭೇಟಿಯ ವೇಳೆಬಾಂಗ್ಲಾದೇಶದ ಅಧ್ಯಕ್ಷರಾದ ಘನತೆವೆತ್ತ ಶ್ರೀ ಮಹಮ್ಮದ್ ಅಬ್ದುಲ್ ಹಮೀದ್; ಬಾಂಗ್ಲಾದೇಶದ ಪ್ರಧಾನಮಂತ್ರಿ ಘನತೆವೆತ್ತ ಶೇಖ್ ಹಸೀನಾ; ಶೇಖ್ ಮುಜಿಬುರ್ ರೆಹಮಾನ್ ಅವರ ಕಿರಿಯ ಪುತ್ರಿ ಮಾನ್ಯ ಶೇಖ್ ರೆಹಾನಾ; ಮುಜೀಬ್ ಬೋರ್ಶೋ ಆಚರಣೆಯ ರಾಷ್ಟ್ರೀಯ ಅನುಷ್ಠಾನ ಸಮಿತಿಯ ಮುಖ್ಯ ಸಂಯೋಜಕ, ಡಾ. ಕಮಲ್ ಅಬ್ದುಲ್ ನಾಸರ್ ಚೌಧರಿ ಮತ್ತು ಇತರ ಗಣ್ಯರೊಂದಿಗೆ ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಬಾಂಗ್ಲಾದೇಶದ ಪಿತಾಮಹ ಬಂಗಬಂಧು ಶೇಖ್ ಮುಜಿಬರ್ ರೆಹಮಾನ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮ ತೇಜ್ ಗಾವ್ ರಾಷ್ಟ್ರೀಯ ಪರೇಡ್ ಚೌಕದಲ್ಲಿ ಜರುಗಿತು.

PM India

ಕುರಾನ್, ಭಗವದ್ಗೀತೆ, ತ್ರಿಪೀಠಕ ಮತ್ತು ಬೈಬಲ್ ಸೇರಿದಂತೆ ಪವಿತ್ರ ಗ್ರಂಥಗಳ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಅಂಗವಾಗಿ ಲಾಂಛನವನ್ನು ಅನಾವರಣಗೊಳಿಸಿದ ನಂತರದಿ ಎಟರ್ನಲ್ ಮುಜೀಬ್ಎಂಬ ಹೆಸರಿನ ಅನಿಮೇಷನ್ ವೀಡಿಯೊವನ್ನು ಪ್ರದರ್ಶಿಸಲಾಯಿತು. ವಿಶೇಷ ಸಂದರ್ಭವನ್ನು ಆಚರಿಸಲು ವಿಷಯಾಧಾರಿತ ಗೀತೆಯನ್ನು  ಸಹ ಪ್ರಸ್ತುತಪಡಿಸಲಾಯಿತುಬಾಂಗ್ಲಾದೇಶದ ಸಶಸ್ತ್ರ ಪಡೆಗಳ ವಿಶೇಷ ಪ್ರದರ್ಶನ, ಬಾಂಗ್ಲಾದೇಶದ ರಾಷ್ಟ್ರ ನಿರ್ಮಾಣದಲ್ಲಿ ಸಶಸ್ತ್ರ ಪಡೆಗಳ ಪಾತ್ರವನ್ನು ಪ್ರದರ್ಶಿಸಿತು.

ಡಾ. ಕಮಲ್ ಅಬ್ದುಲ್ ನಾಸೆರ್ ಚೌಧರಿ ಅವರು ಸ್ವಾಗತ ಭಾಷಣ ಮಾಡಿದರು. 1971 ಬಾಂಗ್ಲಾದೇಶದ ವಿಮೋಚನಾ ಹೋರಾಟದಲ್ಲಿ ನೇರವಾಗಿ ಭಾಗಿಯಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಹಿರಿಯರ ಉಪಸ್ಥಿತಿಯನ್ನು ಅವರು ಉಲ್ಲೇಖಿಸಿದರು. ವಿವಿಧ ರಾಷ್ಟ್ರಗಳ ಮುಖ್ಯಸ್ಥರು, ಸರ್ಕಾರದ ಮುಖ್ಯಸ್ಥರು ಮತ್ತು ವಿಶೇಷ ವ್ಯಕ್ತಿಗಳ ಅಭಿನಂದನಾ ಸಂದೇಶಗಳನ್ನು ಪ್ರಸ್ತುತಪಡಿಸಲಾಯಿತು.

ಮರಣೋತ್ತರವಾಗಿ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ನೀಡಲಾಗಿರುವ 2020 ಸಾಲಿನ ಗಾಂಧೀ ಶಾಂತಿ ಪ್ರಶಸ್ತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶೇಖ್ ಮುಜಬುರ್ ರೆಹಮಾನ್ ಅವರ ಕಿರಿಯ ಪುತ್ರಿ ಶೇಖ್ ರೆಹಾನಾ ಅವರಿಗೆ ಪ್ರದಾನ ಮಾಡಿದರು, ಅವರ ಸೋದರಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ಉಪಸ್ಥಿತರಿದ್ದರು. ಅಹಿಂಸಾತ್ಮಕವಾಗಿ ಮತ್ತು ಇತರ ಗಾಂಧೀ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗಾಗಿ ನೀಡಿದ ಅದ್ಭುತ ಕೊಡುಗೆಗಾಗಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ

PM India

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿ, ಎಲ್ಲ ಗಣ್ಯರಿಗೂ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸಂದರ್ಭದ ಮಹತ್ವವನ್ನು ಒತ್ತಿ ಹೇಳಿ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದ ವಿವಿಧ ಅಂಶಗಳ ಬಗ್ಗೆ ತಿಳಿಸಿದರು. ಭಾಷಣದ ಬಳಿಕ, ಶೇಖ್ ರೆಹನಾ, ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ  ‘ಎಟರ್ನಲ್ ಮುಜೀಬ್ ಸ್ಮರಣಿಕೆನೀಡಿ ಗೌರವಿಸಿದರು.

PM India

ಬಾಂಗ್ಲಾದೇಶದ ಅಧ್ಯಕ್ಷ ಶ್ರೀ ಮೊಹಮ್ಮದ್ ಅಬ್ದುಲ್ ಹಮೀದ್ ಮಾತನಾಡಿ ಪ್ರಧಾನಮಂತ್ರಿ ಮತ್ತು ಭಾರತದ ಜನರಿಗೆ ಧನ್ಯವಾದ ಅರ್ಪಿಸಿದರು ಮತ್ತು 1971 ಬಾಂಗ್ಲಾದೇಶದ ವಿಮೋಚನಾ ಹೋರಾಟದಲ್ಲಿ ಭಾರತ ನಿರ್ವಹಿಸಿದ ಪಾತ್ರ ಮತ್ತು ಪ್ರಯತ್ನಗಳನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿ ಶೇಖ್ ಹಸೀನಾ, ತಮ್ಮ ಭಾಷಣದಲ್ಲಿ, ಕೋವಿಡ್ 19 ಸಾಂಕ್ರಾಮಿಕದ ನಡುವೆಯೂ ಖುದ್ದು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಎಲ್ಲ ಕಾಲದಲ್ಲೂ ಬಾಂಗ್ಲಾದೇಶ ಸರ್ಕಾರಕ್ಕೆ ಭಾರತ ಸರ್ಕಾರ ನೀಡುತ್ತಿರುವ ಬೆಂಬಲಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಔಪಚಾರಿಕ ಕಾರ್ಯಕ್ರಮಗಳ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂಡಿತ್ ಅಜೋಯ್ ಚಕ್ರವರ್ತಿ ಅವರು ಸಂಯೋಜಿಸಿದ ಮತ್ತು ಬಂಗಬಂಧು ಅವರಿಗೆ ಸಮರ್ಪಿಸಿದ ರಾಗದಿಂದ ಗಣ್ಯರು ಮತ್ತು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. .ಆರ್. ರೆಹಮಾನ್ ಅವರ ಸುಮಧುರ ಪ್ರಸ್ತುತಿ ಅನೇಕ ಹೃದಯಗಳನ್ನು ಗೆದ್ದಿತು. ಸಾಂಸ್ಕೃತಿಕ ವಿಭಾಗವು ಅನೇಕ ಸಂಗೀತ, ನೃತ್ಯ ಮತ್ತು ನಾಟಕೀಯ ಪ್ರದರ್ಶನಗಳೊಂದಿಗೆ ಸಮಾರೋಪಗೊಂಡಿತು.

***