ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಖನಿಜ ಪರಿಶೋಧನೆ ನೀತಿ (ಎನ್.ಎಂ.ಇ.ಪಿ.)ಗೆ ತನ್ನ ಅನುಮೋದನೆ ನೀಡಿದೆ.
ಎನ್.ಎಂ.ಇ.ಪಿ. ಪ್ರಾಥಮಿಕವಾಗಿ ಖಾಸಗಿ ವಲಯದ ಹೆಚ್ಚಿನ ಭಾಗವಹಿಸುವಿಕೆಯೊಂದಿಗೆ ದೇಶದಲ್ಲಿ ಪರಿಶೋಧನೆ ಚಟುವಟಿಕೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ. ಅತ್ಯುತ್ತಮ ಬಳಕೆಗಾಗಿ ದೇಶದ ಸಂಪೂರ್ಣ ಖನಿಜ ಸಾಮರ್ಥ್ಯವನ್ನು (ಇಂಧನೇತರ- ಕಲ್ಲಿದ್ದಲೇತರ) ಅನಾವರಣ ಮಾಡಲು ಸಮಗ್ರವಾದ ಖನಿಜ ಪರಿಶೋಧನೆಯ ಅಗತ್ಯವಿದೆ ಮತ್ತು ಆ ಮೂಲಕ ಈ ವಲಯದಿಂದ ದೇಶದ ಆರ್ಥಿಕತೆಗೆ ಗರಿಷ್ಠ ಕೊಡುಗೆ ಪಡೆಯಬಹುದಾಗಿದೆ.
ಈ ನೀತಿಯು ಸಾರ್ವಜನಿಕ – ಖಾಸಗಿ ಪಾಲುದಾರಿಕೆಯಲ್ಲಿ ಗುಣಮಟ್ಟದ ಸಂಶೋಧನೆ, ಸಾರ್ವಜನಿಕವಾಗಿ ವಿಶ್ವ ದರ್ಜೆಯ ಭೂ ವೈಜ್ಞಾನಿಕ ದತ್ತಾಂಶದ ಎಲ್ಲೆಗೆರೆ ಲಭ್ಯತೆಗೆ, ದೇಶದಲ್ಲಿ ಆಳದಲ್ಲಿ ಮತ್ತು ಅಂತಸ್ಥವಾದ ನಿಕ್ಷೇಪ ಶೋಧಕ್ಕೆ, ತ್ವರಿತವಾದ ವೈಮಾನಿಕ ಭೌಗೋಳಿಕ ಸಮೀಕ್ಷೆಗೆ ವಿಶೇಷ ಉಪಕ್ರಮಗಳಿಗೆ ಮತ್ತು ಇದಕ್ಕಾಗಿಯೇ ಮೀಸಲಾದ ಭೂ ವಿಜ್ಞಾನ ದತ್ತಾಂಶ ಇತ್ಯಾದಿಗೆ ಒತ್ತು ನೀಡುತ್ತದೆ.
ಎನ್.ಎಂ.ಇ.ಪಿ. ದೇಶದಲ್ಲಿ ಪರಿಶೋಧನೆಗೆ ಅವಕಾಶ ನೀಡಲು ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ:-
i. ಗಣಿ ಸಚಿವಾಲಯವು ಅವರ ಪರಿಶೋಧನೆಯು ಹರಾಜು ಸಂಪನ್ಮೂಲಕ್ಕೆ ಕಾರಣವಾಗುವುದಾದರೆ ಆದಾಯ ಹಂಚಿಕೆ ಆಧಾರದ ಮೇಲೆ ಖಾಸಗಿ ವಲಯಕ್ಕೆ ಗುರುತಿಸಲಾದ ಖನಿಜ ನಿಕ್ಷೇಪ ಪರಿಶೋಧನೆ ನಡೆಸಲು ಗುತ್ತಿಗೆ ಪ್ರಕ್ರಿಯೆ ಕೈಗೊಳ್ಳುತ್ತದೆ. ಹರಾಜು ಹಾಕಬಹುದಾದ ನಿಕ್ಷೇಪದ ಯಶಸ್ವೀ ಬಿಡ್ ದಾರರು ಈ ಆದಾಯವನ್ನು ಭರಿಸುತ್ತಾರೆ.
ii.ಒಂದೊಮ್ಮೆ ಖನಿಜ ಹೊರ ತೆಗೆಯುವ ಸಂಸ್ಥೆಗಳು ಯಾವುದೇ ಹರಾಜು ಹಾಕಬಹುದಾದ ಮೂಲಗಳನ್ನು ಪತ್ತೆ ಮಾಡದಿದ್ದಲ್ಲಿ, ಅವರ ಪರಿಶೋಧನೆ ವೆಚ್ಚವನ್ನು ಪ್ರಮಾಣಕ ವೆಚ್ಚ ಆಧಾರದ ಮೇಲೆ ಹಿಂತಿರುಗಿಸಲಾಗುತ್ತದೆ.
iii. ಸಾರ್ವಜನಿಕರ ಒಳಿತಿಗಾಗಿ ಉಚಿತವಾಗಿ ಮುಕ್ತ ಪ್ರಸರಣಕ್ಕೆ ಭೂ ವೈಜ್ಞಾನಿಕ ದತ್ತಾಂಶದ ರಚನೆ.
iv. ಅಂತಸ್ಥ ಖನಿಜ ನಿಕ್ಷೇಪಕ್ಕಾಗಿ ಅತ್ಯಾಧುನಿಕ ಎಲ್ಲೆ ಗೆರೆ ದತ್ತಾಂಶ ಪಡೆಯುವ ಸಲುವಾಗಿ ರಾಷ್ಟ್ರೀಯ ವೈಮಾನಿಕ ಭೌಗೋಳಿಕ ಕಾರ್ಯಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ.
v. ವಿವಿಧ ಕೇಂದ್ರೀಯ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳು ಮತ್ತು ಖನಿಜಕ್ಕೆ ಸಂಬಂಧಿಸಿದ ಬಾಧ್ಯಸ್ಥರು ಸಂಗ್ರಹಿಸಿರುವ ಎಲ್ಲ ಎಲ್ಲೆರೇಖೆ ಮತ್ತು ಖನಿಜ ಪರಿಶೋಧನೆಯ ಮಾಹಿತಿ ರಾಷ್ಟ್ರೀಯ ಭೂ ವೈಜ್ಞಾನಿಕ ದತ್ತಾಂಶ ಸಂಪುಟವನ್ನು ಸ್ಥಾಪಿಸಲು ಮತ್ತು ಇವುಗಳನ್ನು ಭೌಗೋಳಿಕ ದತ್ತಾಂಶ ಆಧಾರವಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ.
vi. ಸರ್ಕಾರವು ದೇಶದಲ್ಲಿನ ಖನಿಜ ಪರಿಶೋಧನೆ ಸವಾಲುಗಳನ್ನು ಎದುರಿಸಲು ವೈಜ್ಞಾನಿಕ ಮತ್ತು ತಂತ್ರಜ್ಞಾನದ ಸಂಶೋಧನೆಗಾಗಿ ಖನಿಜ ಶೋಧನೆಯ ರಾಷ್ಟ್ರೀಯ ಕೇಂದ್ರ ಎಂಬ ಹೆಸರಿನಲ್ಲಿ (ಎನ್.ಸಿ.ಎಂ.ಟಿ.) ಮತ್ತು ವೈಜ್ಞಾನಿಕ ಮತ್ತು ಸಂಶೋಧನಾ ಕಾಯಗಳ, ವಿಶ್ವವಿದ್ಯಾಲಯಗಳ ಮತ್ತು ಕೈಗಾರಿಕೆಗಳ ಸಹಯೋಗದಲ್ಲಿ ಲಾಭ ರಹಿತ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಿದೆ.
vii. ಆಕರ್ಷಕ ಆದಾಯ ಹಂಚಿಕೆ ಮಾದರಿಯ ಮೂಲಕ ಪರಿಶೋಧನೆಗೆ ಖಾಸಗಿ ಬಂಡವಾಳ ಆಹ್ವಾನಿಸಲು ಅವಕಾಶ.
viii. ಆಸ್ಟ್ರೇಲಿಯಾದ ಅನ್ ಕವರ್ (UNCOVER) ಮಾದರಿಯಲ್ಲಿ, ಸರ್ಕಾರವು ದೇಶದಲ್ಲಿ ಆಳದಲ್ಲಿ ಅಡಗಿರುವ / ಅಂತಸ್ಥ ಖನಿಜ ನಿಕ್ಷೇಪವನ್ನು ಹುಡುಕಲು ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಮತ್ತು ಉದ್ದೇಶಿತ ಎನ್.ಸಿ.ಎಂ.ಟಿ. ಮತ್ತು ಆಸ್ಟ್ರೇಲಿಯಾದ ಭೂ ವಿಜ್ಞಾನ ಸಂಸ್ಥೆಗಳ ಸಹಯೋಗದಲ್ಲಿ ವಿಶೇಷ ಉಪಕ್ರಮ ಆರಂಭಿಸಲು ಉದ್ದೇಶಿಸಿದೆ.
ಎನ್.ಎಂ.ಇ.ಪಿ.ಯ ಶಿಫಾರಸುಗಳನ್ನು ಜಾರಿ ಮಾಡುವ ಸಲುವಾಗಿ, ಆರಂಭದಲ್ಲಿ 5 ವರ್ಷಗಳಲ್ಲಿ ಸುಮಾರು 2116 ಕೋಟಿ ರೂಪಾಯಿಗಳ ಅಗತ್ಯವಿದೆ. ಇದು ಗಣಿ ಸಚಿವಾಲಯದ ಅಡಿ ಬರುವ ಭಾರತದ ಭೂ ಸರ್ವೇಕ್ಷಣಾಯಲದ ವಾರ್ಷಿಕ ಯೋಜಿತ ಆಯವ್ಯಯಕ್ಕಿಂತ ಹೆಚ್ಚಾಗಿದೆ.
ಎನ್.ಎಂ.ಇ.ಪಿ.ಯ ಪ್ರಮುಖ ಪರಿಣಾಮಗಳು:-
1) ಪೂರ್ವ ಸ್ಪರ್ಧಾತ್ಮಕ ಎಲ್ಲೆ ರೇಖೆ ಭೂ ವೈಜ್ಞಾನಿಕ ದತ್ತಾಂಶವನ್ನು ಸಾರ್ವಜನಿಕ ಒಳಿತಿಗಾಗಿ ರಚಿಸಲಾಗುತ್ತಿದೆ ಮತ್ತು ಅದನ್ನುಸಂಪೂರ್ಣವಾಗಿ ಹಾಗೂ ಉಚಿತವಾಗಿ ಲಭ್ಯವಾಗುವಂತೆ ಪ್ರಸರಣ ಮಾಡಲಾಗುತ್ತದೆ. ಇದು ಸಾರ್ವಜನಿಕರಿಗೆ ಮತ್ತು ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ ಲಾಭ ತರಲಿದೆ.
2) ಖಾಸಗಿ ಮತ್ತು ಸಾರ್ವಜನಿಕ ಪಾಲುದಾರಿಕೆಯಲ್ಲಿ ಪರಿಶೋಧನೆಗೆ ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಒಳಗೊಂಡ ವೈಜ್ಞಾನಿಕ ಮತ್ತು ಸಂಶೋಧನಾ ಕಾಯಗಳ, ವಿಶ್ವವಿದ್ಯಾಲಯ ಮತ್ತು ಕೈಗಾರಿಕೆಗಳ ಸಹಯೋಗದ ಅವಶ್ಯವಾಗಿದೆ.
3) ದೇಶದಲ್ಲಿ ಆಳದಲ್ಲಿ ಹುದುಗಿರುವ/ಅಂತಸ್ಥವಾದ ಖನಿಜ ನಿಕ್ಷೇಪಗಳ ಪತ್ತೆಗೆ ಸರ್ಕಾರ ವಿಶೇಷ ಉಪಕ್ರಮ ಆರಂಭಿಸಲಿದೆ. ಭಾರತದ ಭೌಗೋಳಿಕ ವ್ಯಾಪ್ತಿಯ ಲಕ್ಷಣೀಕರಿಸುವ, ಭಾರತದ ಭೂ ಹೊರಪದರ ವಾಸ್ತುಶಿಲ್ಪ ಶೋಧನೆ, 4ಡಿ ಭೂ ಕ್ರಿಯಾತ್ಮಕ ಮತ್ತು ಅದಿರು ನಿಕ್ಷೇಪದ ಜಾಡು ಗುರುತಿಸುವುದು, ಖನಿಜ ವಿಕಾಸ ಮತ್ತು ಹುಡುಕುವುದು ಮತ್ತು ಲಕ್ಷಣೀಕರಿಸುವುದು ಈ ಉಪಕ್ರಮದ ಮುಖ್ಯ ಅಂಶಗಳಾಗಿವೆ,
4) ಇಡೀ ದೇಶದ ತಳದಲ್ಲಿ ಮತ್ತು ಅಂತಸ್ಥವಾದ ಖನಿಜ ನಿಕ್ಷೇಪ ಶೋಧಕ್ಕಾಗಿ ಕಡಿಮೆ ಎತ್ತರದಲ್ಲಿ ಮತ್ತು ಹತ್ತಿರ ಪ್ರದೇಶದಲ್ಲಿ ಚಿತ್ರೀಕರಿಸುವ ರಾಷ್ಟ್ರೀಯ ವೈಮಾನಿಕ ಭೌಗೋಳಿಕ ಶೋಧನಾ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ.
5) ಸರ್ಕಾರವು ಖಾಸಗಿ ಸಂಸ್ಥೆಗಳನ್ನು ಗುರುತಿಸಲಾದ ಬ್ಲಾಕ್ ಗಳಲ್ಲಿ /ಪ್ರದೇಶದಲ್ಲಿ ಪರಿಶೋಧನಾ ಕಾರ್ಯ ಕೈಗೊಳ್ಳಲು ತೊಡಗಿಸಲಿದೆ. ಅವುಗಳಿಗೆ ಹರಾಜಿನ ಮೂಲಕ ರಾಜ್ಯ ಸರ್ಕಾರಗಳಿಗೆ ಪಡೆದ ಆದಾಯದಲ್ಲಿ ನಿರ್ದಿಷ್ಟ ಪಾಲು ದೊರೆಯಲಿದೆ.
6) ಪ್ರಾದೇಶಿಕ ಮತ್ತು ವಿವರವಾದ ಪರಿಶೋಧನೆಯ ಸಾರ್ವಜನಿಕ ವೆಚ್ಚವನ್ನು ಆದ್ಯತೆಗೊಳಿಸಲಾಗಿದೆ ಮತ್ತು ಇದಕ್ಕೆ ಕಾಲಕಾಲದ ಪ್ರಮುಖ ಮತ್ತು ಕಾರ್ಯತಂತ್ರಾತ್ಮಕ ಹಿತದ ಪರಾಮರ್ಶೆ ಆಧಾರಿತ ನಿರ್ಧರಣೆ ಇರುತ್ತದೆ.
ಹಿನ್ನೆಲೆ:
ಗಣಿ ಸಚಿವಾಲಯವು, ಇತ್ತೀಚೆಗೆ ಗಣಿ ವಲಯದ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಶೇ.100 ವಿದೇಶೀ ನೇರ ಬಂಡವಾಳವೂ ಸೇರಿದೆ. ಆದಾಗ್ಯೂ, ಈ ಉಪಕ್ರಮಗಳು ಅಲ್ಪ ಯಶಸ್ಸು ಮಾತ್ರ ತಂದಿವೆ. ತರುವಾಯ, ಗಣಿ ಕ್ಷೇತ್ರದಲ್ಲಿ ಕೆಲವು ವರ್ಷಗಳ ಕ್ರಿಯಾತ್ಮಕತೆಯ ಮೂಲಕ ಬದಲಾವಣೆ ತರುವ ಪ್ರಯತ್ನ ನಡೆದಿದೆ ಆ ಮೂಲಕ ಅಗತ್ಯಗಳಿಗೆ ಹೊಸ ಬೇಡಿಕೆ ತರಲಾಗುತ್ತಿದೆ. ದೇಶದಲ್ಲಿ ಪರಿಶೋಧನೆ ಚಟುವಟಿಕೆ ಒಂದು ಪ್ರಚೋದನೆಯನ್ನು ನೀಡುವ ಬಲವಾದ ಅಗತ್ಯವಿದೆ. ಇದು ಸರ್ಕಾರಕ್ಕೆ ತನ್ನ ಪರಿಶೋಧನೆಯ ನೀತಿ ಮತ್ತು ನೀತಿಯ ಒಂದು ವ್ಯಾಪಕ ಅವಲೋಕನ ಕೈಗೊಳ್ಳಲು ಪ್ರೇರೇಪಿಸಿದೆ. ಈ ನಿಟ್ಟಿನಲ್ಲಿ ಎಂ.ಎಂ.ಡಿ.ಆರ್. ಕಾಯಿದೆಗೆ 2015ರಲ್ಲಿ ಕೆಲವು ತಿದ್ದುಪಡಿ ತರಲಾಗಿದೆ. ಇದರಲ್ಲಿ ಬಹಳ ಪ್ರಮುಖವಾದ ತಿದ್ದುಪಡಿ ಗಣಿಯ ಗುತ್ತಿಗೆ (ಎಂ.ಎಲ್.) ಮತ್ತು ಪರಿವೀಕ್ಷಣೆ ಪರವಾನಗಿ ಸಹಿತವಾದ ಗಣಿಗಾರಿಕೆ ಗುತ್ತಿಗೆ (ಪಿ.ಎಲ್ – ಕಮ್ – ಎಂ.ಎಲ್) ಇದನ್ನು ಹರಾಜು ಪ್ರಕ್ರಿಯೆಯ ಮೂಲಕ ಮಾತ್ರನೇ ನೀಡಲಾಗುತ್ತದೆ. ಇದು ಪಾರದರ್ಶಕತೆಯನ್ನು ತರುತ್ತದೆ, ಜೊತೆಗೆ ಖನಿಜ ಮಂಜೂರಾತಿ ಪ್ರಕ್ರಿಯೆಯಲ್ಲಿ ಸರಳೀಕರಣ ಮತ್ತು ತ್ವರಿತ ವೇಗ ತರಲಿದೆ. ಈ ಹಿನ್ನೆಲೆಯಲ್ಲಿ, ತಿದ್ದುಪಡಿ ಕಾನೂನು ಚೌಕಟ್ಟಿನೊಳಗೆ ಅನ್ವೇಷಣೆಗೆ ಉದ್ದೇಶಗಳನ್ನು, ಉದ್ದೇಶ ಮತ್ತು ಆ ನಿಟ್ಟಿನಲ್ಲಿನ ಅರ್ಥದಲ್ಲಿ ಪರಿಶೋಧನೆಗಾಗಿ ಎನ್.ಎಂ.ಇ.ಪಿ. ಯನ್ನು ರಚಿಸಲಾಗಿದೆ.
National Mineral Exploration Policy approved by the Cabinet will spearhead sectoral growth & accelerate development. https://t.co/VG7iqslqGc
— Narendra Modi (@narendramodi) June 29, 2016