Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಕಡಲ ಸಪ್ತಾಹ ಆರಂಭ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಮಂತ್ರಿ


ರಾಷ್ಟ್ರೀಯ ಕಡಲ ಸಪ್ತಾಹವು ಬಂದರು ಆಧಾರಿತ ಅಭಿವೃದ್ಧಿ ಮತ್ತು ಕರಾವಳಿಗಳನ್ನು ಆರ್ಥಿಕ ಸಮೃದ್ಧಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಹುರುಪು ತುಂಬಲಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು,  ಹಾರೈಸಿದ್ದಾರೆ.

ರಾಷ್ಟ್ರೀಯ ಕಡಲ ಸಪ್ತಾಹದ ಆರಂಭದ ಅಂಗವಾಗಿ ಪ್ರಧಾನಮಂತ್ರಿಯವರ ಕೋಟಿನ ಎದೆ ಭಾಗದ  (ಲಾಪೆಲ್) ಮೇಲೆ ಮೊದಲ ಕಡಲ ಧ್ವಜವನ್ನು ಪಿನ್ ಮಾಡಿರುವ  ಬಗ್ಗೆ ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರ ಟ್ವೀಟ್ ಗೆ ಉತ್ತರಿಸಿರುವ ಪ್ರಧಾನ ಮಂತ್ರಿ ಅವರು . ರಾಷ್ಟ್ರೀಯ ಕಡಲ ದಿನವಾದ ಏಪ್ರಿಲ್ 5, ಭಾರತದ ಕಡಲ ಸಂಪ್ರದಾಯದ ಅದ್ಭುತ, ಭವ್ಯ  ಇತಿಹಾಸವನ್ನು ಆಚರಿಸುವ ದಿನ ಎಂದಿದ್ದಾರೆ. .

ಈ ಬಗ್ಗೆ ಪ್ರಧಾನಮಂತ್ರಿಯವರು ತಮ್ಮ ಟ್ವೀಟ್ ನಲ್ಲಿ;

“ನಮ್ಮ ಶ್ರೀಮಂತ ಕಡಲ ಇತಿಹಾಸದೊಂದಿಗಿನ ನಮ್ಮ ಸಂಪರ್ಕವನ್ನು ಆಳಗೊಳಿಸಲು ರಾಷ್ಟ್ರೀಯ ಕಡಲ ವಾರವು ಒಂದು ಅವಕಾಶವಾಗಿ ಕಾರ್ಯನಿರ್ವಹಿಸಲಿ. ಇದು ಬಂದರು ಆಧಾರಿತ  ಅಭಿವೃದ್ಧಿಯತ್ತ ನಡೆಯುತ್ತಿರುವ ಪ್ರಯತ್ನಗಳಿಗೆ ಮತ್ತು ನಮ್ಮ ಕರಾವಳಿಯನ್ನು ಆರ್ಥಿಕ ಸಮೃದ್ಧಿಗಾಗಿ ಬಳಸಿಕೊಳ್ಳುವ ಪ್ರಯತ್ನಗಳಿಗೆ ಹುರುಪು ನೀಡಲಿ” ಎಂದು ಹಾರೈಸಿದ್ದಾರೆ.