Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರೀಯ ಕಡಲ ದಿನದಂದು ಸಾಗರ ವಲಯ ಮತ್ತು ಬಂದರುಗಳನ್ನು ಬಲಪಡಿಸುವ ಸರ್ಕಾರದ ಬದ್ಧತೆ ಪ್ರಧಾನಮಂತ್ರಿಗಳಿಂದ ಪುನರುಚ್ಚಾರ 


ರಾಷ್ಟ್ರೀಯ ಕಡಲ ದಿನದ ಅಂಗವಾಗಿ ಎಲ್ಲರಿಗೂ ಶುಭಾಶಯ ಕೋರುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಪ್ರಗತಿಗಾಗಿ ಸಾಗರ ವಲಯ ಮತ್ತು ಬಂದರುಗಳನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

 ಅವರ ಎಕ್ಸ್ ಪೋಸ್ಟ್ ಹೀಗಿದೆ:

“ಇಂದು, ರಾಷ್ಟ್ರೀಯ ಕಡಲ ದಿನದಂದು, ನಾವು ಭಾರತದ ಶ್ರೀಮಂತ ಕಡಲ ಇತಿಹಾಸವನ್ನು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಈ ವಲಯದ ಪಾತ್ರವನ್ನು ನೆನಪಿಸಿಕೊಳ್ಳುತ್ತೇವೆ.  

ಭಾರತದ ಪ್ರಗತಿಗಾಗಿ ಸಮುದ್ರ ವಲಯ ಮತ್ತು ನಮ್ಮ ಬಂದರುಗಳನ್ನು ಸದೃಢಗೊಳಿಸುವುದನ್ನು ಮುಂದುವರಿಸುತ್ತೇವೆ.”

 

 

*****