ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಷ್ಟ್ರೀಯ ಉಕ್ಕು ನೀತಿ (ಎಸ್.ಎಸ್.ಪಿ.) 2017ಕ್ಕೆ ತನ್ನ ಅನುಮೋದನೆ ನೀಡಿದೆ.
ಈ ಹೊಸ ಉಕ್ಕು ನೀತಿಯು, ಉಕ್ಕು ವಲಯಕ್ಕೆ ಚೈತನ್ಯ ನೀಡಲು ಸರ್ಕಾರದ ದೀರ್ಘ ಕಾಲೀನ ನೋಟವನ್ನು ಪ್ರಚುರಪಡಿಸುತ್ತದೆ. ದೇಶೀಯ ಉಕ್ಕು ಬಳಕೆ ಹೆಚ್ಚಿಸುವುದನ್ನು ಮತ್ತು ಉನ್ನತ ಗುಣಮಟ್ಟದ ಉಕ್ಕು ಉತ್ಪಾದನೆ ಖಾತ್ರಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಕೈಗಾರಿಕೆ ಮತ್ತು ಮುಂದುವರಿದ ತಂತ್ರಜ್ಞಾನ ಸೃಷ್ಟಿಯನ್ನು ಇದು ಬಯಸುತ್ತದೆ.
ಎನ್.ಎಸ್.ಪಿ. 2017ರ ಮುಖ್ಯಾಂಶಗಳು:
1. ಖಾಸಗಿ ಉತ್ಪಾದಕರಿಗೆ, ಎಂ.ಎಸ್.ಎಂ.ಇ. ಉಕ್ಕು ತಯಾರಕರಿಗೆ, ಸಿಪಿಎಸ್.ಇ.ಗಳಿಗೆ ನೀತಿಯ ಬೆಂಬಲ ಮತ್ತು ಮಾರ್ಗದರ್ಶನ ನೀಡುವ ಮೂಲಕ ಉಕ್ಕು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು.
2. ಸಾಕಷ್ಟು ಸಾಮರ್ಥ್ಯದ ಸೇರ್ಪಡೆಗೆ ಉತ್ತೇಜಿಸುವುದು.
3. ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಉತ್ಪಾದನೆಯ ಸಾಮರ್ಥ್ಯ ಅಭಿವೃದ್ಧಿಪಡಿಸುವುದು.
4. ವೆಚ್ಚ ಸಮರ್ಥ ಉತ್ಪಾದನೆ
5. ಕಬ್ಬಿಣದ ಅದಿರು, ಕೋಕಿಂಗ್ ಇದ್ದಿಲು ಮತ್ತು ನೈಸರ್ಗಿಕ ಅನಿಲದ ದೇಶೀಯ ಲಭ್ಯತೆ,
6. ವಿದೇಶೀ ಹೂಡಿಕೆಗೆ ಅವಕಾಶ
7. ಕಚ್ಚಾ ವಸ್ತುಗಳ ಆಸ್ತಿಗಳ ಸ್ವಾಧೀನ ಮತ್ತು
8. ದೇಶೀಯ ಉಕ್ಕು ಬೇಡಿಕೆ ಹೆಚ್ಚಿಸುವುದು.
ಈ ನೀತಿಯು ಕಚ್ಚಾ ಉಕ್ಕು ಸಾಮರ್ಥ್ಯವನ್ನು 300 ದಶಲಕ್ಷ ಟನ್ (ಎಂ.ಟಿ), 225 ಎಂ.ಟಿ. ಉಕ್ಕು ಉತ್ಪಾದನೆ ಮತ್ತು ಪ್ರಸ್ತುತ ಇರುವ ತಲಾ 61 ಕೆ.ಜಿ. ಉಕ್ಕು ಬಳಕೆಗೆ ವಿರುದ್ಧವಾಗಿ, 2030-31ರ ವೇಳೆಗೆ 158 ಕೆ.ಜಿ.ಗಳ ತಲಾ ಸದೃಢ ಉಕ್ಕಿನ ಬಳಕೆಯನ್ನು ಅಂದಾಜು ಮಾಡುತ್ತದೆ, ಈ ನೀತಿಯು ಉನ್ನತ ದರ್ಜೆಯ ವಾಹನಗಳ ಬಳಕೆಯ ಉಕ್ಕು, ವಿದ್ಯುತ್ ಕ್ಷೇತ್ರದಲ್ಲಿ ಬಳಸುವ ಉಕ್ಕು, ವಿಶೇಷ ಉಕ್ಕು ಮತ್ತು ಕಾರ್ಯತಂತ್ರದ ಅನ್ವಯಗಳಿಗೆ ಮಿಶ್ರಲೋಹಗಳ ಬೇಡಿಕೆಯನ್ನು ದೇಶೀಯವಾಗಿ ಪೂರೈಸಲು ಅವಕಾಶ ಕಲ್ಪಿಸುತ್ತದೆ ಮತ್ತು ಶುದ್ಧೀಕರಿಸಿದ ಕೂಕಿಂಗ್ ಕಲ್ಲಿದ್ದಲ ದೇಶೀಯ ಲಭ್ಯತೆಯ್ನು ಹೆಚ್ಚಿಸುತ್ತದೆ, ಇದು ಕೂಕಿಂಗ್ ಕಲ್ಲಿದ್ದಲು ಆಮದನ್ನು 2030-31ರ ಹೊತ್ತಿಗೆ ಶೇಕಡ 85ರಿಂದ 65ಕ್ಕೆ ಇಳಿಸುತ್ತದೆ.
ಹೊಸ ಉಕ್ಕು ನೀತಿಯ ಕೆಲವು ಮುಖ್ಯಾಂಶಗಳು
Øಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಉಕ್ಕು ಕ್ಷೇತ್ರ ವೇಗವಾಗಿ ಬೆಳೆದಿದೆ ಮತ್ತು ಪ್ರಸ್ತುತ ಭಾರತ ಜಾಗತಿಕವಾಗಿ ಮೂರನೇ ಅತಿ ದೊಡ್ಡ ಉಕ್ಕು ಉತ್ಪಾದಕ ರಾಷ್ಟ್ರವಾಗಿದ್ದು, ದೇಶದ ಜಿಡಿಪಿಗೆ ಶೇ.2ರಷ್ಟು ಕೊಡುಗೆ ನೀಡುತ್ತಿದೆ. 2016-17ರಲ್ಲಿ ಭಾರತ 100 ಎಂ.ಟಿ. ಉತ್ಪಾದನೆ ಗಡಿಯನ್ನು ದಾಟಿದೆ.
Ø ಹೊಸ ಉಕ್ಕು ನೀತಿ 2017, 2030ರ ವೇಳೆಗೆ 300 ಎಂ.ಟಿ. ಉಕ್ಕು ತಯಾರಿಕೆ ಸಾಮರ್ಥ್ಯದ ಆಶಯ ಹೊಂದಿದೆ. ಇದು 2030-31ರ ಹೊತ್ತಿಗೆ ಹೆಚ್ಚುವರಿಯಾಗಿ 10 ಲಕ್ಷ ಕೋಟಿ ರೂಪಾಯಿ ಹೂಡಿಕೆಗೂ ನಾಂದಿ ಹಾಡುತ್ತದೆ.
Ø ನೀತಿಯು ಹೆಚ್ಚಿನ ಉಕ್ಕು ಬಳಕೆಯನ್ನು ಅಪೇಕ್ಷಿಸುತ್ತದೆ, ವಸತಿ, ವಾಹನ ತಯಾರಿಕೆ, ಮೂಲಸೌಕರ್ಯ ಉಕ್ಕು ಬಳಕೆಯ ಪ್ರಮುಖ ಕ್ಷೇತ್ರಗಳಾಗಿವೆ. ಹೊಸ ಉಕ್ಕು ನೀತಿ ಪ್ರಸ್ತುತ ಇರುವ ಸುಮಾರು ತಲಾ 60 ಕೆ.ಜಿ. ಉಕ್ಕು ಬಳಕೆಯನ್ನು 2030ರ ಹೊತ್ತಿಗೆ 160 ಕೆ.ಜಿ. ಮಟ್ಟಕ್ಕೆ ಹೆಚ್ಚಿಸಲು ಬಯಸುತ್ತದೆ.
Ø ಸಾಮರ್ಥ್ಯವಿರುವ ಎಂ.ಎಸ್.ಎಂ.ಇ. ಉಕ್ಕು ವಲಯವನ್ನು ಪುನರ್ ಸಂಘಟಿಸಲಾಗಿದೆ. ನೀತಿಯು ಎಂ.ಎಸ್.ಎಂ.ಇ. ಉಕ್ಕು ವಲಯದಲ್ಲಿ ಒಟ್ಟಾರೆಯಾಗಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಇಂಧನದ ಬಳಕೆಯ ಪ್ರಮಾಣ ತಗ್ಗಿಸಲು ಇಂಧನ ದಕ್ಷತೆಯ ತಂತ್ರಜ್ಞಾನ ಅಳವಡಿಕೆಗೆ ನಿಬಂಧನೆಗಳನ್ನು ವಿಧಿಸುತ್ತದೆ.
Ø ಉಕ್ಕು ಸಚಿವಾಲಯವು ಭಾರತೀಯ ಉಕ್ಕು ಸಂಶೋಧನಾ ಮತ್ತು ತಂತ್ರಜ್ಞಾನ ಅಭಿಯಾನ (ಎಸ್.ಆರ್.ಟಿ.ಎಂ.ಐ) ಸ್ಥಾಪಿಸುವ ಮೂಲಕ ಉಕ್ಕು ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಅವಕಾಶ ಕಲ್ಪಿಸುತ್ತದೆ. ಈ ಉಪಕ್ರಮವು ಕೈಗಾರಿಕೆಗಳು, ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ ಹಾಗೂ ಶೈಕ್ಷಣಿಕ ಸಂಸ್ಥೆಗಳ ತ್ರಿಪಕ್ಷೀಯ ಸಹಕಾರದಿಂದ ಕಬ್ಬಿಣ ಮತ್ತು ಉಕ್ಕು ವಲಯದಲ್ಲಿ ರಾಷ್ಟ್ರೀಯ ಮಹತ್ವದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುಂಚೂಣಿಗೆ ತರುವ ಉದ್ದೇಶ ಹೊಂದಿದೆ.
Ø ಸಚಿವಾಲಯವು ನೀತಿಯ ಕ್ರಮಗಳ ಮೂಲಕ ಕಚ್ಚಾ ಸಾಮಗ್ರಿಗಳಾದ ಕಬ್ಬಿಣದ ಅದಿರು, ಕೂಕಿಂಗ್ ಕಲ್ಲಿದ್ದಲು ಮತ್ತು ಕೂಕಿಂಗೇತರ ಕಲ್ಲಿದ್ದಲು, ನೈಸರ್ಗಿಕ ಅನಿಲ ಇತ್ಯಾದಿಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗುವುದನ್ನು ಖಾತ್ರಿ ಪಡಿಸುತ್ತದೆ.
Ø ರಾಷ್ಟ್ರೀಯ ಉಕ್ಕು ನೀತಿ 2017ರ ಜಾರಿಯೊಂದಿಗೆ, ಕೈಗಾರಿಕೆಗಳು ದೇಶೀಯ ಉಕ್ಕು ಉತ್ತೇಜನಕ್ಕೆ ವಾತಾವರಣ ನಿರ್ಮಾಣ ಮಾಡುವುದಕ್ಕೆ ಮುಂದಾಗುವುದಕ್ಕೆಅವಕಾಶ ನೀಡುತ್ತದೆ ಮತ್ತು ಆ ಮೂಲಕ ಜಾಗತಿಕವಾಗಿ ಸ್ಪರ್ಧಾತ್ಮಕವಾದ ಉಕ್ಕು ಕಾರ್ಖಾನೆ ಮತ್ತು ಮುಂದುವರಿದ ತಂತ್ರಜ್ಞಾನದ ಮೂಲಕ ಬಳಕೆಯಲ್ಲಿನ ನಿರೀಕ್ಷಿತ ವೇಗದ ಪ್ರಗತಿಯನ್ನು ಸಾಧಿಸಲು ಅವಕಾಶ ಮಾಡುತ್ತದೆ. ಇದನ್ನು ಉಕ್ಕು ಸಚಿವಾಲಯವು ಅಗತ್ಯವಾದ ಸೂಕ್ತ ಸಚಿವಾಲಯಗಳ ಸಹಯೋಗದಲ್ಲಿ ನಿರ್ಮಾಣ ಮಾಡುತ್ತದೆ.
ಹಿನ್ನೆಲೆ:
ಆಧುನಿಕ ಜಗತ್ತಿನಲ್ಲಿ ಉಕ್ಕು ಅತ್ಯಂತ ಮಹತ್ವದ ಒಂದು ಉತ್ಪನ್ನವಾಗಿದೆ ಮತ್ತು ಯಾವುದೇ ಕೈಗಾರಿಕೆಯ ಆರ್ಥಿಕತೆಗೆ ಇದು ಬೆನ್ನೆಲುಬಾಗಿದೆ. ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತದಲ್ಲಿ, ನಿರ್ಮಾಣ, ಮೂಲಸೌಕರ್ಯ, ವಿದ್ಯುಚ್ಛಕ್ತಿ, ಬಾಹ್ಯಾಕಾಶ ಮತ್ತು ಕೈಗಾರಿಕಾ ಯಂತ್ರೋಪಕರಣದಿಂದ ಗ್ರಾಹಕ ಉತ್ಪನ್ನಗಳವರೆಗೆ ಉಕ್ಕು ಮಹತ್ವ ಪಡೆದುಕೊಂಡಿದೆ. ಭಾರತೀಯ ಉಕ್ಕು ವಲಯ ಕಳೆದ ಕೆಲವು ವರ್ಷಗಳಲ್ಲಿ ವೇಗವಾಗಿ ಬೆಳೆದಿದ್ದು, ವಿಶ್ವದ ಮೂರನೇ ಅತಿ ದೊಡ್ಡ ಉಕ್ಕು ಉತ್ಪಾದನಾ ರಾಷ್ಟ್ರವಾಗಿದೆ. ಇದು ನಮ್ಮ ಜಿಡಿಪಿಗೆ ಶೇ.2ರಷ್ಟು ಕೊಡುಗೆ ನೀಡುತ್ತಿದೆ ಮತ್ತು ಪ್ರತ್ಯಕ್ಷವಾಗಿ 5 ಲಕ್ಷ ಜನರಿಗೆ ಹಾಗೂ ಪರೋಕ್ಷವಾಗಿ 20 ಲಕ್ಷ ಜನರಿಗೆ ಉದ್ಯೋಗ ಒದಗಿಸಿದೆ.
ಬಲವಾದ ನೀತಿಯ ಬೆಂಬಲದೊಂದಿಗೆ ಈವರೆಗೆ ಬಳಸಿಕೊಳ್ಳದ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಪ್ರಗತಿಯ ಉತ್ತಮ ವೇದಿಕೆಯಾಗಿದೆ. ವಲಯದ ಕಾರ್ಯತಂತ್ರಾತ್ಮಕವಾದ ಮಹತ್ವ ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಚೈತನ್ಯದಾಯಕ ಮತ್ತು ಪುನರ್ ರೂಪಿತ ನೀತಿಯ ಅಗತ್ಯದ ಹಿನ್ನೆಲೆಯಲ್ಲಿ ಹೊಸ ರಾಷ್ಟ್ರೀಯ ಉಕ್ಕು ನೀತಿ 2017 ಮಹತ್ವದ್ದಾಗಿದೆ. ರಾಷ್ಟ್ರೀಯ ಉಕ್ಕು ನೀತಿ 2005 (ಎನ್.ಎಸ್.ಪಿ. 2005) ಆರ್ಥಿಕ ಕ್ರಮದಿಂದ ಹರಿಯುವ ಲಾಭಗಳನ್ನು ಏಕೀಕರಿಸುವ ಮತ್ತು ಭಾರತೀಯ ಉಕ್ಕು ಉದ್ಯಮದ ನಿರಂತರ ಮತ್ತು ಸಮರ್ಥ ಬೆಳವಣಿಗೆಗೆ ಮಾರ್ಗಸೂಚಿಯನ್ನು ನಿಗದಿಪಡಿಸುವ ವಿಧಾನಗಳನ್ನು ಸೂಚಿಸಲು ಪ್ರಯತ್ನಿಸಿದೆ, ಇದಕ್ಕೆ ಅನುಗುಣವಾಗಿ ಇತ್ತೀಚಿನ ಬೆಳವಣಿಗೆಗಳು ಉಕ್ಕು ಮಾರುಕಟ್ಟೆಯ ಬೇಡಿಕೆಯ ಮತ್ತು ಸರಬರಾಜು ಎರಡರಲ್ಲೂ ಭಾರತವು ವಿಶ್ವದಾದ್ಯಂತ ಪ್ರಕಾಶಕ್ಕೆ ಬರುತ್ತದೆ.
AKT/VBA/SH