ಸಂಸತ್ತಿನಲ್ಲಿ ರಾಷ್ಟ್ರಪತಿಯವರು ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಉತ್ತರ ನೀಡಿದರು. “ಅಭಿವೃದ್ದಿ ಹೊಂದಿದ ಭಾರತ”ದ ದೃಷ್ಟಿಕೋನವನ್ನು ರಾಷ್ಟ್ರಪತಿ ಜೀ ಅವರು ತಮ್ಮ ಭಾಷಣದಲ್ಲಿ ಪ್ರತಿಬಿಂಬಿಸಿದ್ದು, ಅದಕ್ಕಾಗಿ ಪ್ರಧಾನಮಂತ್ರಿ ಅವರು ಧನ್ಯವಾದಗಳನ್ನು ಸಲ್ಲಿಸಿದರು.
“ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಿಸುವುದು ಮತ್ತು ಅವರನ್ನು ಸಬಲೀಕರಣಗೊಳಿಸುವುದು ಸರ್ಕಾರದ ಗುರಿ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಹಿಂದಿನ ಸಮಯದಲ್ಲಿ ವಿರೋಧಿಸುತ್ತಿದ್ದ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದು ಹಿಂದಿನ ಸಮಯದಲ್ಲಿ ಸರ್ಕಾರದ ಜವಾಬ್ದಾರಿಯಾಗಿತ್ತು, ಅವರು ವಿಭಿನ್ನ ಆದ್ಯತೆಗಳು ಮತ್ತು ಉದ್ದೇಶಗಳನ್ನು ಹೊಂದಿದ್ದರು. “ನಾವಿಂದು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಾಗಿದ್ದೇವೆ” ಎಂದು ಹೇಳಿದರು. ನೀರಿನ ವಿಷಯವನ್ನು ಪ್ರಧಾನಮಂತ್ರಿ ಅವರು ಉದಾಹರಣೆಯಾಗಿ ನೀಡಿದರು ಮತ್ತು ಸಾಂಕೇತಿಕ ಧೋರಣೆ ಬದಲಿಗೆ ನೀರಿನ ಮೂಲ ಸೌಕರ್ಯ, ಜಲ ಆಡಳಿತ, ಗುಣಮಟ್ಟದ ನಿಯಂತ್ರಣ, ಜಲ ಸಂರಕ್ಷಣೆ ಮತ್ತು ನೀರಾವರಿಯಲ್ಲಿ ನಾವೀನ್ಯತೆಯನ್ನು ಅಳವಡಿಸಿಕೊಂಡಿದ್ದೇವೆ” ಎಂದು ಹೇಳಿದರು. ಇದೇ ರೀತಿ ಹಣಕಾಸು ಒಳಗೊಳ್ಳುವಿಕೆ, ಜನ್ ಧನ್ – ಆಧಾರ್ – ಮೊಬೈಲ್ ಮೂಲಕ ಡಿಬಿಟಿ ಅಳವಡಿಸಿಕೊಂಡಿದ್ದೇವೆ ಮತ್ತು ಗತಿಶಕ್ತಿ ಮೇರು ಯೋಜನೆ ಮೂಲಕ ಮೂಲ ಸೌಕರ್ಯ ಯೋಜನೆಯನ್ನು ಜಾರಿಗೊಳಿಸಿದ್ದೇವೆ ಎಂದರು.
“ಸೌಕರ್ಯದ ಮಹತ್ವವನ್ನು ನಾವು ಅರಿತಿದ್ದು, ಸೂಕ್ತ ಪ್ರಮಾಣ ಮತ್ತು ವೇಗದ ಮೂಲಕ ಆಧುನಿಕ ಭಾರತ ನಿರ್ಮಾಣ” ಮಾಡುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೇಶದಲ್ಲಿ ದುಡಿಯುವ ಸಂಸ್ಕೃತಿ ಬದಲಾಗಿದೆ ಎಂದು ಒತ್ತಿ ಹೇಳಿದ ಅವರು, ತಂತ್ರಜ್ಞಾನದ ಶಕ್ತಿ ಮತ್ತು ಆಡಳಿತದ ವೇಗ ಹಾಗೂ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರ ತನ್ನ ಗಮನವನ್ನು ಕೇಂದ್ರೀಕರಿಸಿಕೊಂಡಿದೆ ಎಂದರು.
“ಮಹಾತ್ವಾ ಗಾಂಧಿ ಅವರು ‘ಶ್ರೇಯ್’ [ಅರ್ಹತೆ] ಮತ್ತು ‘ಪ್ರಿಯ್’ [ಪ್ರೀತಿ] ಬಗ್ಗೆ ಹೇಳುತ್ತಿದ್ದರು. ನಾವು ‘ಶ್ರೇಯ್’ [ಅರ್ಹತೆ] ಮಾರ್ಗವನ್ನು ಆಯ್ಕೆಮಾಡಿಕೊಂಡಿದ್ದೇವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸರ್ಕಾರ ಆಯ್ಕೆ ಮಾಡಿಕೊಂಡಿರುವ ಮಾರ್ಗ ವಿಶ್ರಾಂತಿಗೆ ಆದ್ಯತೆ ನೀಡುವ ಮಾರ್ಗವಲ್ಲ. ಆದರೆ ಸಾಮಾನ್ಯ ಜನರ ಆಶೋತ್ತರಗಳನ್ನು ಈಡೇರಿಸಲು ನಾವು ಹಗಲಿರುಳು ಶ್ರಮಿಸುವ ಮಾರ್ಗವನ್ನು ಅನುಸರಿಸಿದ್ದೇವೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಕಾಲದಲ್ಲಿ ಶುದ್ಧತ್ವವನ್ನು ಸಾಧಿಸುವ ಮಹತ್ವದ ಹೆಜ್ಜೆಯನ್ನು ಸರ್ಕಾರ ಇಟ್ಟಿದೆ ಎಂದು ಪ್ರಧಾನಮಂತ್ರಿ ಅವರು ವಿಶೇಷವಾಗಿ ಬೆಳಕು ಚೆಲ್ಲಿದರು. ದೇಶದ ಪ್ರತಿಯೊಬ್ಬ ಫಲಾನುಭವಿಗೆ ಶೇ 100 ರಷ್ಟು ಸೌಲಭ್ಯಗಳನ್ನು ತಲುಪಿಸಲು ಸರ್ಕಾರ ಪ್ರಯತ್ನಶೀಲವಾಗಿದೆ ಎಂದು ಪುನರುಚ್ಚರಿಸಿದರು. “ಇದು ನಿಜವಾದ ಜಾತ್ಯತೀತತೆ, ಇದು ತಾರತಮ್ಯ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕುತ್ತದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
“ದಶಕಗಳಿಂದ ಬುಡಕಟ್ಟು ಸಮುದಾಯದ ಅಭಿವೃದ‍್ದಿಯನ್ನು ನಿರ್ಲಕ್ಷಿಸಲಾಗಿತ್ತು” ನಾವು ಇವರ ಕಲ್ಯಾಣಕ್ಕಾಗಿ ಪ್ರಧಾನ ಆದ್ಯತೆ ನೀಡಿದ್ದೇವೆ.” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಪ್ರತ್ಯೇಕ ಬುಡಕಟ್ಟು ಕಲ್ಯಾಣ ಸಚಿವಾಲಯವನ್ನು ಸೃಜಿಸಲಾಗಿತ್ತು ಮತ್ತು ಬುಡಕಟ್ಟು ಕಲ್ಯಾಣಕ್ಕಾಗಿ ತಳಮಟ್ಟದ ಪ್ರಯತ್ನಗಳನ್ನು ಸಹ ಕೈಗೊಳ್ಳಲಾಗಿತ್ತು ಎಂದರು.
“ಭಾರತದ ಕೃಷಿ ವಲಯಕ್ಕೆ ಸಣ್ಣ ರೈತರು ಬೆನ್ನೆಲುಬಾಗಿದ್ದಾರೆ ನಾವು ಅವರ ಕೈ ಬಲಪಡಿಸಲು ಕೆಲಸ ಮಾಡುತ್ತಿದ್ದೇವೆ” ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಪ್ರಸ್ತುತ ಸರ್ಕಾರ ಅವರ ಅಗತ್ಯಗಳ ಮೇಲೆ ಕೇಂದ್ರೀಕರಿಸಿದೆ ಮತ್ತು ಸಣ್ಣ ರೈತರು, ಸಣ್ಣ ಮಾರಾಟಗಾರರು ಮತ್ತು ಕುಶಲಕರ್ಮಿಗಳಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸಿದೆ. ಮಹಿಳಾ ಸಬಲೀಕರಣಕ್ಕಾಗಿ ನಾವು ವಿಸ್ತೃತವಾದ ಹೆಜ್ಜೆ ಇರಿಸಿದ್ದು, ಸರ್ಕಾರದ ಕ್ರಮಗಳು ಅವರ ಘನತೆ ಹೆಚ್ಚಿಸುವ ಮತ್ತು ಭಾರತದಲ್ಲಿ ಮಹಿಳೆಯರು ಪ್ರತಿಯೊಂದು ಹಂತದಲ್ಲಿ ಸುಗಮ ಜೀವನ ನಡೆಸುವಂತಹ ವಾತಾವರಣವನ್ನು ಸೃಜಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
“ನಮ್ಮ ವಿಜ್ಞಾನಿಗಳು ಮತ್ತು ನಾವೀನ್ಯತೆಯ ತಜ್ಞರಿಂದ ಭಾರತ ಜಗತ್ತಿನ ಔಷಧ ವಲಯದ ತಾಣವಾಗಿದೆ” ದುರದೃಷ್ಟವೆಂದರೆ ಕೆಲವು ಜನ ಭಾರತದ ವಿಜ್ಞಾನಿಗಳು, ನಾವೀನ್ಯತೆ ಹೊಂದಿರುವವರು ಮತ್ತು ಲಸಿಕೆ ಉತ್ಪಾದಕರನ್ನು ಕಡೆಗಣಿಸಿತು ಎಂದರು. ಅಟಲ್ ಇನೋವೇಶನ್ ಮಿಷನ್ ಮತ್ತು ಟಿಂಕರಿಂಗ್ ಲ್ಯಾಬ್ ನಂತಹ ಕ್ರಮಗಳ ಮೂಲಕ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಕುರಿತು ಪ್ರಧಾನಮಂತ್ರಿ ಅವರು ಮಾತನಾಡಿದರು. ಸರ್ಕಾರ ಸೃಜಿಸಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಖಾಸಗಿ ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವ ಯುವ ಸಮೂಹ ಮತ್ತು ವಿಜ್ಞಾನಿಗಳನ್ನು ಶ‍್ಲಾಘಿಸಿದರು. “ನಾವು ಸಾಮಾನ್ಯ ನಾಗರಿಕರನ್ನು ಸಬಲೀಕರಣಗೊಳಿಸಲು ತಂತ್ರಜ್ಞಾನ ವನ್ನು ಬಳಸುತ್ತಿದ್ದೇವೆ ಮತ್ತು ಯಶಸ್ವಿಯಾಗಿದ್ದೇವೆ” ಎಂದು ಹೇಳಿದರು.
“ಡಿಜಿಟಲ್ ವಹಿವಾಟಿನಲ್ಲಿ ಭಾರತ ಜಗತ್ತಿನ ನಾಯಕನಾಗಿದೆ. ಡಿಜಿಟಲ್ ಇಂಡಿಯಾದ ಯಶಸ್ಸು ಇಡೀ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಭಾರತ ಮೊಬೈಲ್ ಫೋನ್ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಸಮಯವನ್ನು ಸ್ಮರಿಸಿಕೊಂಡರು, ಆದರೆ ಇಂದು ನಾವು ಮೊಬೈಲ್ ಫೋನ್ ಗಳನ್ನು ಇತರೆ ದೇಶಗಳಿಗೆ ರಫ್ತು ಮಾಡುತ್ತಿರುವುದಕ್ಕೆ ಹೆಮ್ಮೆಪಡುತ್ತವೆ ಎಂದರು.
“2047 ರ ವೇಳೆಗೆ ಭಾರತ “ಅಭಿವೃದ್ಧಿ ಹೊಂದಿದ ಭಾರತ” ಆಗುವುದು ನಮ್ಮ ಸಂಕಲ್ಪವಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ನಾವು ಎದುರು ನೋಡುತ್ತಿದ್ದ ಅವಕಾಶಗಳನ್ನು ಪಡೆದುಕೊಳ್ಳಲು ಸರ್ಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಪುನರುಚ್ಚರಿಸಿದರು. “ಭಾರತ ದೈತ್ಯ ಜಿಗಿತಕ್ಕೆ ಸನ್ನದ್ಧವಾಗಿದೆ ಮತ್ತು ಭವಿಷ್ಯದಲ್ಲಿ ಹಿಂದೆ ತಿರುಗಿ ನೋಡುವುದಿಲ್ಲ” ಎಂದು ಪ್ರಧಾನಮತ್ರಿ ಅವರು ತಮ್ಮ ಉತ್ತರವನ್ನು ಕೊನೆಗೊಳಿಸಿದರು.
*****
Addressing the Rajya Sabha. https://t.co/XO3F8kfkfY
— Narendra Modi (@narendramodi) February 9, 2023
PM @narendramodi begins his address in Rajya Sabha by thanking Hon'ble Rashtrapati Ji for guiding both the Houses. pic.twitter.com/ge3KQmIXYc
— PMO India (@PMOIndia) February 9, 2023
Our government's aim is to provide permanent solution for the citizens and empower them. pic.twitter.com/DLJgDC5m1T
— PMO India (@PMOIndia) February 9, 2023
आधुनिक भारत के निर्माण के लिए Infrastructure, Scale और Speed का महत्व हम समझते हैं। pic.twitter.com/G6sEnNEnvh
— PMO India (@PMOIndia) February 9, 2023
महात्मा गांधी जी कहते थे- श्रेय और प्रिय। हमने श्रेय का रास्ता चुना है। pic.twitter.com/i4wsOLIDHf
— PMO India (@PMOIndia) February 9, 2023
आजादी के अमृतकाल में बहुत बड़ा जो कदम उठाया है, वह है सैचुरेशन का। हमारी सरकार का प्रयास है कि हमारे देश में लाभार्थियों को शत-प्रतिशत लाभ पहुंचे। pic.twitter.com/wFOiDn2tFr
— PMO India (@PMOIndia) February 9, 2023
For decades, development of tribal communities was neglected. We gave top priority to their welfare. pic.twitter.com/CjNoy1YftJ
— PMO India (@PMOIndia) February 9, 2023
Small farmers are the backbone of India's agriculture sector. We are working to strengthen their hands. pic.twitter.com/x74lWsmSe6
— PMO India (@PMOIndia) February 9, 2023
With the expertise of our scientists and innovators, India is becoming a pharma hub of the world. pic.twitter.com/sGfN2LI7ha
— PMO India (@PMOIndia) February 9, 2023
डिजिटल लेनदेन में देश आज दुनिया का लीडर बना हुआ है। Digital India की सफलता ने आज पूरी दुनिया को प्रभावित किया है। pic.twitter.com/MPTDIQaDfD
— PMO India (@PMOIndia) February 9, 2023
2047 में यह देश विकसित भारत बने, ये हम सबका संकल्प है। pic.twitter.com/mZXkYKHtCi
— PMO India (@PMOIndia) February 9, 2023
The hallmark of our Government is to find long lasting and people-friendly solutions to challenges that have affected our nation for decades. pic.twitter.com/W15vfqswbJ
— Narendra Modi (@narendramodi) February 9, 2023
Integrating technology in the working of Government has turned out to be very beneficial. pic.twitter.com/Dd897KxZNm
— Narendra Modi (@narendramodi) February 9, 2023
Our approach is…100% coverage in every government scheme. pic.twitter.com/aeozBD10Lm
— Narendra Modi (@narendramodi) February 9, 2023
आज मोटे अनाज की खेती पर भी हमारा फोकस है। दुनियाभर में श्री अन्न का माहात्म्य बने, छोटे किसानों को उनकी पैदावार के उचित दाम के साथ ही ग्लोबल मार्केट भी मिले, इस दिशा में तेज गति से प्रयास हो रहे हैं। pic.twitter.com/mbBjFhRPLm
— Narendra Modi (@narendramodi) February 9, 2023
हम माताओं, बहनों और बेटियों के सशक्तिकरण के लिए कितने संवेदनशील हैं, यह हमारी योजनाओं में दिखता है। pic.twitter.com/SPZbtfK5gl
— Narendra Modi (@narendramodi) February 9, 2023