ಗೌರವಾನ್ವಿತ ಸಭಾಧ್ಯಕ್ಷರೆ,
ಮೊದಲನೆಯದಾಗಿ, ರಾಷ್ಟ್ರಪತಿ ಅವರ ಭಾಷಣಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ರಾಷ್ಟ್ರಪತಿಗಳ ಭಾಷಣಕ್ಕೆ ಈ ಹಿಂದೆ ಅನೇಕ ಬಾರಿ ಧನ್ಯವಾದಗಳನ್ನು ಸಲ್ಲಿಸುವ ಅವಕಾಶ ಪಡೆದಿರುವುದು ನನ್ನ ಪಾಲಿನ ಅದೃಷ್ಟ. ಆದರೆ ಈ ಬಾರಿ ರಾಷ್ಟ್ರಪತಿ ಅವರಿಗೆ ಧನ್ಯವಾದ ಹೇಳುವ ಜತೆಗೆ ಅವರನ್ನು ಅಭಿನಂದಿಸಲು ಬಯಸುತ್ತೇನೆ. ರಾಷ್ಟ್ರಪತಿಯವರು ತಮ್ಮ ದೂರದೃಷ್ಟಿಯ ಭಾಷಣದಲ್ಲಿ ನಮಗೆಲ್ಲರಿಗೂ ಮತ್ತು ಕೋಟ್ಯಂತರ ದೇಶವಾಸಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಪ್ರಜಾತಂತ್ರ ಗಣರಾಜ್ಯದ ಮುಖ್ಯಸ್ಥೆಯಾಗಿ ಅವರ ಉಪಸ್ಥಿತಿಯು ಐತಿಹಾಸಿಕವಾಗಿದೆ ಮತ್ತು ದೇಶದ ಕೋಟ್ಯಂತರ ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಸ್ಫೂರ್ತಿಯ ಸುಸಂದರ್ಭವಾಗಿದೆ.
ರಾಷ್ಟ್ರಪತಿ ಅವರು ಬುಡಕಟ್ಟು ಸಮುದಾಯದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂದು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೆ ಬುಡಕಟ್ಟು ಸಮಾಜದಲ್ಲಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಭಾವನೆ ಹೆಚ್ಚಿದ್ದು, ಆಕೆಯ ಈ ಸಾಧನೆಗೆ ಈ ಸದನ ಮತ್ತು ದೇಶವೂ ಕೃತಜ್ಞತೆ ಸಲ್ಲಿಸಲಿದೆ. ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ‘ಸಂಕಲ್ಪ’ (ಸಂಕಲ್ಪಗಳು)ದಿಂದ ‘ಸಿದ್ಧಿ’ (ಸಾಧನೆ) ವರೆಗಿನ ದೇಶದ ಪ್ರಯಾಣದ ನೀಲನಕ್ಷೆಯನ್ನು ಉತ್ತಮವಾಗಿ ರೂಪಿಸಿದ್ದಾರೆ. ಇದು ದೇಶಕ್ಕೆ ಉತ್ತರದಾಯಿತ್ವವಾಗಿದೆ ಮತ್ತು ಸ್ಫೂರ್ತಿದಾಯಕವಾಗಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಎಲ್ಲಾ ಗೌರವಾನ್ವಿತ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದರು, ಅವರವರ ಒಲವು ಮತ್ತು ಪ್ರವೃತ್ತಿಗೆ ಅನುಗುಣವಾಗಿ ತಮ್ಮದೇ ಆದ ಅಂಕಿಅಂಶಗಳು ಮತ್ತು ವಾದ ಮಂಡಿಸಿದರು. ಆ ಎಲ್ಲಾ ವಾದ ಮತ್ತು ಚರ್ಚೆಗಳನ್ನು ಆಲಿಸುವ ಮೂಲಕ ಸದಸ್ಯರ ಸಾಮರ್ಥ್ಯ, ತಿಳಿವಳಿಕೆ ಮತ್ತು ಉದ್ದೇಶದ ಬಗ್ಗೆಯೂ ತಿಳಿದುಕೊಂಡಂತಾಯಿತು. ಇವೆಲ್ಲವೂ ಸ್ಪಷ್ಟವಾಗಿವೆ. ಮತ್ತು ದೇಶವೂ ಇದನ್ನು ಗಮನಿಸಿದೆ. ಚರ್ಚೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಆದರೆ ನಿನ್ನೆ, ಕೆಲವು ಸದಸ್ಯರ ಬೆಂಬಲಿಗರು ತಮ್ಮ ಭಾಷಣದ ನಂತರ ಹರ್ಷಗೊಂಡಿದ್ದನ್ನು ನಾನು ಗಮನಿಸಿದೆ. ಅವರು ರಾತ್ರಿ ಚೆನ್ನಾಗಿ ನಿದ್ರೆ ಮಾಡಿರಬಹುದು ಮತ್ತು ಬಹುಶಃ ಅವರಲ್ಲಿ ಕೆಲವರು ಇಂದು ಎಚ್ಚರಗೊಳ್ಳಲು ಸಾಧ್ಯವಾಗದೇ ಇರಬಹುದು. ಅಂತಹ ಜನರಿಗೆ ಒಂದು ಒಳ್ಳೆಯ ಮಾತು ಇದೆ:
ये कह-कहकर हम दिल को बहला रहे हैं,
ये कह-कहकर के हम दिल को बहला रहे हैं, वो अब चल चुके हैं,
वो अब चल चुके हैं, वो अब आ रहे हैं।
ಗೌರವಾನ್ವಿತ ಸಭಾಧ್ಯಕ್ಷರೆ,
ಕೆಲವು ಸದಸ್ಯರು ರಾಷ್ಟ್ರಪತಿ ಭಾಷಣ ಮಾಡುವ ಮಧ್ಯದಲ್ಲೇ ಸದನದಿಂದ ಹೊರ ನಡೆದರು. ಅಲ್ಲದೆ, ಸದನದ ಪ್ರಮುಖ ನಾಯಕರೊಬ್ಬರು ಘನತೆವೆತ್ತ ರಾಷ್ಟ್ರಪತಿ ಅವರನ್ನು ಅವಮಾನಿಸಿದರು. ಬುಡಕಟ್ಟು ಸಮುದಾಯದ ಬಗ್ಗೆ ಅವರ ದ್ವೇಷ ಮತ್ತು ನಮ್ಮ ಬುಡಕಟ್ಟು ಸಮಾಜದ ಬಗ್ಗೆ ಅವರ ಆಲೋಚನೆ ಏನು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಟಿವಿ ಮುಂದೆ ಇಂತಹ ಟೀಕೆಗಳನ್ನು ಮಾಡಿದಾಗ, ಅವರ ನಿಜವಾದ ದ್ವೇಷದ ಭಾವನೆ ಸ್ಪಷ್ಟವಾಯಿತು. ಆದರೆ, ಪತ್ರ ಬರೆದು (ರಾಷ್ಟ್ರಪತಿ) ಪರಿಸ್ಥಿತಿ ಹೊರಹಾಕುವ ಪ್ರಯತ್ನ ನಡೆದಿರುವುದು ಸಂತಸದ ಮತ್ತು ಸಮಾಧಾನಕರ ಸಂಗತಿ.
ಮಾನ್ಯ ಸ್ಪೀಕರ್ ಸರ್,
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ನಾನು ಕೇಳುತ್ತಿದ್ದಾಗ, ಕೆಲವು ಸದಸ್ಯರು ಮೌನವಾಗಿರುವುದನ್ನು ಆಯ್ಕೆ ಮಾಡುವ ಮೂಲಕ ಅನೇಕ ವಿಷಯಗಳನ್ನು ಒಪ್ಪಿಕೊಂಡರು. ಅವರನ್ನು ಯಾರೂ ಟೀಕಿಸದ ಕಾರಣ ರಾಷ್ಟ್ರಪತಿ ಭಾಷಣದಲ್ಲಿ ಯಾವುದೇ ಸದಸ್ಯರಿಗೆ ಯಾವುದೇ ಸಮಸ್ಯೆ ಇಲ್ಲದಂತಾಗಿದೆ. ರಾಷ್ಟ್ರಪತಿ ಅವರು ಹೇಳಿದ್ದೇನು? ನಾನು ಅವರ ಭಾಷಣವನ್ನು ಉಲ್ಲೇಖಿಸುತ್ತಿದ್ದೇನೆ. ಒಂದು ಕಾಲದಲ್ಲಿ ತನ್ನ ಬಹುತೇಕ ಸಮಸ್ಯೆಗಳ ಪರಿಹಾರಕ್ಕಾಗಿ ಇತರರ ಮೇಲೆ ಅವಲಂಬಿತವಾಗಿದ್ದ ಭಾರತ ಇಂದು ಇಡೀ ವಿಶ್ವದ ಸಮಸ್ಯೆಗಳನ್ನು ಪರಿಹರಿಸುವ ಮಾಧ್ಯಮವಾಗುತ್ತಿದೆ ಎಂದು ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ಹೇಳಿದರು. ದೇಶದ ಬಹುಸಂಖ್ಯಾತ ಜನರು ದಶಕಗಳಿಂದ ಕಾಯುತ್ತಿದ್ದ ಮೂಲಸೌಕರ್ಯಗಳು ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಲಭ್ಯವಾಗಿವೆ ಎಂದು ರಾಷ್ಟ್ರಪತಿ ಹೇಳಿದರು. ತಾರತಮ್ಯದ ನೀತಿಗಳು, ಬೃಹತ್ ಹಗರಣಗಳು ಮತ್ತು ಸರ್ಕಾರಿ ಯೋಜನೆಗಳಲ್ಲಿನ ಭ್ರಷ್ಟಾಚಾರದಿಂದ ದೇಶವು ಅಂತಿಮವಾಗಿ ಸ್ವಾತಂತ್ರ್ಯ ಪಡೆಯುತ್ತಿದೆ. ಇಂದು ದೇಶವು ತ್ವರಿತ ಅಭಿವೃದ್ಧಿ ಮತ್ತು ದೂರದೃಷ್ಟಿಯ ನಿರ್ಧಾರಗಳಿಂದ ಗುರುತಿಸಲ್ಪಟ್ಟಿದೆ. ರಾಷ್ಟ್ರಪತಿ ಅವರ ಭಾಷಣದ ಈ ಪ್ಯಾರಾಗ್ರಾಫ್ ಅನ್ನು ನಾನು ಉಲ್ಲೇಖಿಸುತ್ತಿದ್ದೇನೆ. ಈ ಹಿಂದೆ, ರಾಷ್ಟ್ರಪತಿ ಅವರ ಇಂತಹ ಹೇಳಿಕೆಗಳನ್ನು ಇಲ್ಲಿ ಕೆಲವರು ಖಂಡಿತವಾಗಿಯೂ ವಿರೋಧಿಸುತ್ತಾರೆ ಎಂದು ನಾನು ಹೆದರುತ್ತಿದ್ದೆ. ಆದರೆ ರಾಷ್ಟ್ರಪತಿ ಅವರ ಹೇಳಿಕೆಯನ್ನು ಯಾರೂ ವಿರೋಧಿಸಲಿಲ್ಲ ಮತ್ತು ಸ್ವಾಗತಿಸಲಿಲ್ಲ ಎಂಬುದು ನನಗೆ ಸಂತೋಷವಾಗಿದೆ. ಮಾನ್ಯ ಸ್ಪೀಕರ್ ಸರ್, ರಾಷ್ಟ್ರಪತಿಗಳ ಭಾಷಣವನ್ನು ಸದನ ಅನುಮೋದಿಸಿದ್ದಕ್ಕಾಗಿ ನಾನು 140 ಕೋಟಿ ದೇಶವಾಸಿಗಳಿಗೆ ಕೃತಜ್ಞನಾಗಿದ್ದೇನೆ. ಇದಕ್ಕಿಂತ ದೊಡ್ಡ ಹೆಮ್ಮೆಯ ವಿಷಯ ಬೇರೇನಿದೆ?
ಗೌರವಾನ್ವಿತ ಸಭಾಧ್ಯಕ್ಷರೆ,
ಹಾಸ್ಯ, ಟೀಕೆ ಇತ್ಯಾದಿಗಳು ಸದನದ ಭಾಗವಾಗಿವೆ. ಆದರೆ ಒಂದು ರಾಷ್ಟ್ರವಾಗಿ ನಮ್ಮ ಮುಂದೆ ಹೆಮ್ಮೆಯ ಅವಕಾಶವಿದೆ ಮತ್ತು ನಾವು ಹೆಮ್ಮೆಯ ಕ್ಷಣಗಳನ್ನು ಆನಂದಿಸುತ್ತಿದ್ದೇವೆ ಎಂಬುದನ್ನು ನಾವು ಮರೆಯಬಾರದು. ರಾಷ್ಟ್ರಪತಿಗಳ ಸಂಪೂರ್ಣ ಭಾಷಣದಲ್ಲಿ ಉಲ್ಲೇಖಿಸಲಾದ ಎಲ್ಲಾ ಅಂಶಗಳು 140 ಕೋಟಿ ದೇಶವಾಸಿಗಳ ಸಂಭ್ರಮಾಚರಣೆಯ ಸಂದರ್ಭವಾಗಿದೆ ಮತ್ತು ದೇಶವು ಅದನ್ನು ಆಚರಿಸಿದೆ.
ಮಾನ್ಯ ಸ್ಪೀಕರ್ ಸರ್!
100 ವರ್ಷಗಳಲ್ಲೇ ಕಾಣಿಸಿಕೊಂಡ ಭೀಕರ ಸಾಂಕ್ರಾಮಿಕ ರೋಗ, ನಡೆಯುತ್ತಿರುವ ಯುದ್ಧ ಮತ್ತು ಒಡೆದುಹೋದ ವಿಶ್ವದಲ್ಲಿ ಉಂಟಾದ ವಿಷಮ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿದ ರೀತಿಯಿಂದ ದೇಶದಲ್ಲಿ ಆತ್ಮವಿಶ್ವಾಸ ಮತ್ತು ಹೆಮ್ಮೆಯ ಭಾವವಿದೆ.
ಮಾನ್ಯ ಸ್ಪೀಕರ್ ಸರ್!
ಸವಾಲುಗಳಿಲ್ಲದ ಜೀವನ ಏನೂ ಅಲ್ಲ. ಸವಾಲುಗಳು ಜೀವನದ ಭಾಗವಾಗಿದೆ. ಆದರೆ 140 ಕೋಟಿ ದೇಶವಾಸಿಗಳ ಆತ್ಮವು ಸವಾಲುಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. 140 ಕೋಟಿ ದೇಶವಾಸಿಗಳ ಸಾಮರ್ಥ್ಯವು ಸವಾಲುಗಳಿಗಿಂತ ಪ್ರಬಲವಾಗಿದೆ. ಸಾಂಕ್ರಾಮಿಕ ರೋಗ, ವಿಭಜಿತ ಜಗತ್ತು ಮತ್ತು ಯುದ್ಧದಿಂದ ಉಂಟಾದ ವಿನಾಶದಿಂದಾಗಿ ಅನೇಕ ದೇಶಗಳಲ್ಲಿ ಅಸ್ಥಿರತೆಯ ವಾತಾವರಣವಿದೆ. ನಮ್ಮ ನೆರೆಹೊರೆಯ ಹಲವಾರು ದೇಶಗಳಲ್ಲಿ ಅತಿ ಹೆಚ್ಚು ಹಣದುಬ್ಬರ ಮತ್ತು ತೀವ್ರ ನಿರುದ್ಯೋಗವಿದೆ
ಮಾನ್ಯ ಸ್ಪೀಕರ್ ಸರ್,
ಈ ಪರಿಸ್ಥಿತಿಯಲ್ಲೂ ದೇಶವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಯಾವ ಭಾರತೀಯರು ಹೆಮ್ಮೆಪಡುವುದಿಲ್ಲ ಹೇಳಿ? ಇಂದು ಇಡೀ ವಿಶ್ವದಲ್ಲಿ ಭಾರತದ ಬಗ್ಗೆ ಸಕಾರಾತ್ಮಕತೆ, ಭರವಸೆ ಮತ್ತು ಆತ್ಮವಿಶ್ವಾಸವಿದೆ. ಮಾನ್ಯ ಸ್ಪೀಕರ್ ಸರ್, ಇಂದು ಭಾರತವು ವಿಶ್ವದ ಸಮೃದ್ಧ ರಾಷ್ಟ್ರಗಳ ಸಮೂಹವಾದ G-20ರ ಅಧ್ಯಕ್ಷತೆ ವಹಿಸುವ ಅವಕಾಶ ಪಡೆದಿರುವುದು ಸಂತೋಷದ ವಿಷಯವಾಗಿದೆ.
ಇದು ದೇಶಕ್ಕೆ ಹೆಮ್ಮೆಯ ವಿಚಾರ. ಇದು 140 ಕೋಟಿ ದೇಶವಾಸಿಗಳಿಗೆ ಹೆಮ್ಮೆಯ ವಿಷಯ. ಆದರೆ ನಾನು ಭಾವಿಸುತ್ತೇನೆ, ಬಹುಶಃ, ಕೆಲವರು ಸಂತೋಷವಾಗಿಲ್ಲ. ಈ ಬೆಳವಣಿಗೆಯ ಬಗ್ಗೆ 140 ಕೋಟಿ ದೇಶವಾಸಿಗಳಲ್ಲಿ ಯಾರೂ ಬೇಸರಿಸಿಕೊಳ್ಳಲು ಸಾಧ್ಯವಿಲ್ಲ. ನೊಂದವರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಗೌರವಾನ್ವಿತ ಸ್ಪೀಕರ್ ಸರ್,
ಇಂದು ವಿಶ್ವದ ಪ್ರತಿಯೊಂದು ವಿಶ್ವಾಸಾರ್ಹ ಸಂಸ್ಥೆಗಳು, ಜಾಗತಿಕ ವ್ಯವಹಾರಗಳ ಬಗ್ಗೆ ಆಳ ತಿಳುವಳಿಕೆ ಹೊಂದಿರುವ ಮತ್ತು ಭವಿಷ್ಯವನ್ನು ಊಹಿಸಬಲ್ಲ ಎಲ್ಲಾ ತಜ್ಞರು ಭಾರತದ ಬಗ್ಗೆ ಬಹಳಷ್ಟು ಭರವಸೆ, ನಂಬಿಕೆ ಮತ್ತು ಒಂದು ನಿರ್ದಿಷ್ಟ ಪ್ರಮಾಣದ ಉತ್ಸಾಹ ಹೊಂದಿದ್ದಾರೆ. ಇದರ ಹಿಂದಿನ ಕಾರಣವೇನು? ಇದು ಕೇವಲ ಹಾಗೆ ಅಲ್ಲ. ಇವತ್ತು ಇಡೀ ವಿಶ್ವವೇಕೆ ಇಷ್ಟು ದೊಡ್ಡ ಭರವಸೆಯಿಂದ ಭಾರತದತ್ತ ನೋಡುತ್ತಿದೆ? ಇದರ ಹಿಂದೆ ಒಂದು ಕಾರಣವಿದೆ. ಇದಕ್ಕೆ ಉತ್ತರ ಭಾರತದಲ್ಲಿ ಬಂದಿರುವ ಸ್ಥಿರತೆಯಲ್ಲಿ, ಭಾರತದ ಜಾಗತಿಕ ವಿಶ್ವಾಸಾರ್ಹತೆಯಲ್ಲಿ, ಭಾರತದ ಬೆಳೆಯುತ್ತಿರುವ ಸಾಮರ್ಥ್ಯದಲ್ಲಿ ಮತ್ತು ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಸಾಧ್ಯತೆಗಳಲ್ಲಿದೆ.
ಮಾನ್ಯ ಸ್ಪೀಕರ್ ಸರ್,
ನಮ್ಮ ದೈನಂದಿನ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಉದಾಹರಣೆಗಳೊಂದಿಗೆ ವಿವರಿಸುತ್ತೇನೆ. ನೀವು ನೋಡಿ, ಭಾರತದಲ್ಲಿ 2-3 ದಶಕಗಳಿಂದ ಅಸ್ಥಿರತೆ ಇತ್ತು. ಆದರೆ ಇಂದು ಸ್ಥಿರತೆ ಬಂದಿದೆ, ರಾಜಕೀಯ ಸ್ಥಿರತೆ ಇದೆ, ಸ್ಥಿರ ಸರ್ಕಾರವೂ ಇದೆ ಮತ್ತು ನಿರ್ಣಾಯಕ ಸರ್ಕಾರವಿದೆ. ಹೀಗಾಗಿ ಜನರ ವಿಶ್ವಾಸ ಸಹಜ. ನಿರ್ಣಾಯಕ ಸರ್ಕಾರ, ಸಂಪೂರ್ಣ ಬಹುಮತ ಹೊಂದಿರುವ ಸರ್ಕಾರ, ರಾಷ್ಟ್ರದ ಹಿತದೃಷ್ಟಿಯಿಂದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಸರ್ಕಾರವು ಬಲವಂತದಿಂದ ಸುಧಾರಣೆಗಳನ್ನು ಕೈಗೊಳ್ಳುತ್ತಿಲ್ಲ. ಆದರೆ ಬಲವಾದ ನಂಬಿಕೆ ಮತ್ತು ಮನವರಿಕೆಗಳಿಂದ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ. ಈ ವಿಷಯದಲ್ಲಿ ನಾವು ಹಿಂದೆ ಸರಿಯುವುದಿಲ್ಲ, ಆದರೆ ಅದೇ ಕಾರ್ಯಸೂಚಿಯೊಂದಿಗೆ ಮುಂದುವರಿಯುತ್ತೇವೆ. ಕಾಲದ ಬೇಡಿಕೆಗೆ ಅನುಗುಣವಾಗಿ ದೇಶದ ಅಗತ್ಯಗಳನ್ನು ನಾವು ನೋಡಿಕೊಳ್ಳುತ್ತೇವೆ.
ಗೌರವಾನ್ವಿತ ಸ್ಪೀಕರ್ ಸರ್,
ನಾನು ಇನ್ನೊಂದು ಉದಾಹರಣೆ ಉಲ್ಲೇಖಿಸಲು ಬಯಸುತ್ತೇನೆ. ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಕೊರೊನಾ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಯಿತು. ಭಾರತವು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಪ್ರಾರಂಭಿಸಿತು. ಅದು ಮಾತ್ರವಲ್ಲದೆ, ತನ್ನ ಕೋಟಿಗಟ್ಟಲೆ ನಾಗರಿಕರಿಗೆ ಉಚಿತ ಲಸಿಕೆಗಳನ್ನು ಒದಗಿಸಿತು. ಇದಲ್ಲದೆ, ಈ ಬಿಕ್ಕಟ್ಟಿನ ಅವಧಿಯಲ್ಲಿ ಅಗತ್ಯವಿರುವ 150ಕ್ಕೂ ಹೆಚ್ಚು ದೇಶಗಳಿಗೆ ನಾವು ಔಷಧಿಗಳು ಮತ್ತು ಲಸಿಕೆಗಳನ್ನು ಒದಗಿಸಿದ್ದೇವೆ. ಇಂದು ಈ ಉಪಕ್ರಮಕ್ಕಾಗಿ ಭಾರತವನ್ನು ಹೆಮ್ಮೆಯಿಂದ ಧನ್ಯವಾದ ಮತ್ತು ಪ್ರಶಂಸಿಸುವ ವಿಶ್ವದ ಅನೇಕ ದೇಶಗಳಿವೆ. ಅಂತೆಯೇ, ನೀವು 3ನೇ ಅಂಶಕ್ಕೆ ಗಮನ ಕೊಡಬೇಕು. ಈ ಬಿಕ್ಕಟ್ಟಿನ ಅವಧಿಯಲ್ಲಿ ಭಾರತದ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಪಡಿಸಿದ ವೇಗವನ್ನು ಇಡೀ ಜಗತ್ತು ಗಮನಿಸುತ್ತಿದೆ, ದೇಶವು ಆಧುನಿಕತೆಯತ್ತ ಸಾಗಿದೆ. ಇತ್ತೀಚೆಗೆ ನಾನು ಜಿ-20 ಶೃಂಗಸಭೆಗಾಗಿ ಬಾಲಿಯಲ್ಲಿದ್ದೆ. ಡಿಜಿಟಲ್ ಇಂಡಿಯಾಗೆ ಎಲ್ಲೆಡೆ ಭಾರಿ ಚಪ್ಪಾಳೆ ಮೊಳಗಿತು. ದೇಶವು ಆ ವಿಷಯದಲ್ಲಿ ಹೇಗೆ ಹೋಗುತ್ತಿದೆ ಎಂಬ ಬಗ್ಗೆ ಸಾಕಷ್ಟು ಕುತೂಹಲವಿತ್ತು? ವಿಶ್ವದ ಪ್ರಮುಖ ದೇಶಗಳು, ವಿಶ್ವದ ಶ್ರೀಮಂತ ರಾಷ್ಟ್ರಗಳು, ಕೊರೊನಾ ಅವಧಿಯಲ್ಲಿ ತಮ್ಮ ನಾಗರಿಕರಿಗೆ ಆರ್ಥಿಕ ಸಹಾಯ ನೀಡಲು ಬಯಸಿದವು. ಅವರು ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದರು, ಆದರೆ ಆಗ ವಿತರಿಸಲು ಸಾಧ್ಯವಾಗಲಿಲ್ಲ. ದೇಶವಾಸಿಗಳ ಖಾತೆಗೆ ಕ್ಷಣಾರ್ಧದಲ್ಲಿ ಲಕ್ಷ ಕೋಟಿ ರೂಪಾಯಿ ಜಮಾ ಮಾಡುವ ಸಾಮರ್ಥ್ಯ ಭಾರತ ದೇಶಕ್ಕೆ ಸಾಧ್ಯವಾಯಿತು. ಕ್ಷಣಾರ್ಧದಲ್ಲಿ ಸಾವಿರಾರು ಕೋಟಿ ರೂ. ಕಳಿಸಲು ಸಾಧ್ಯವಾಯಿತು. ಇನ್ನೂ ಚಿಕ್ಕ ತಂತ್ರಜ್ಞಾನಕ್ಕಾಗಿ ದೇಶ ಹಾತೊರೆಯುತ್ತಿದ್ದ ಕಾಲವೊಂದಿತ್ತು. ಆದರೆ ದೇಶವು ಇಂದು ದೊಡ್ಡ ಬದಲಾವಣೆ ಅನುಭವಿಸುತ್ತಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಉತ್ತಮ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ವಿಶ್ವದ ಪ್ರಮುಖ ದೇಶಗಳು ಲಸಿಕಾ ಪ್ರಮಾಣಪತ್ರಗಳನ್ನು ನೀಡಲು ಸಾಧ್ಯವಾಗಲಿಲ್ಲ. ಇಂದು, ಕೊವಿನ್ ಕಾರಣದಿಂದಾಗಿ ನಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವು ನಮ್ಮ ಮೊಬೈಲ್ ಫೋನ್‌ನಲ್ಲಿ ಕೆಲವೇ ಸೆಕೆಂಡುಗಳಲ್ಲಿ ಲಭ್ಯವಾಗುತ್ತದೆ, ಇದೇ ನಮ್ಮ ಶಕ್ತಿ.
ಗೌರವಾನ್ವಿತ ಸಭಾಧ್ಯಕ್ಷರೆ,
ಭಾರತದಲ್ಲಿ ಹೊಸ ಸಾಧ್ಯತೆಗಳು ಹೊರಹೊಮ್ಮುತ್ತಿವೆ. ಕೊರೊನಾ ಅವಧಿಯಲ್ಲಿ ಪೂರೈಕೆ ಸರಪಳಿಯ ಅಡೆತಡೆಗಳಿಂದಾಗಿ ಇಡೀ ಜಗತ್ತು ತತ್ತರಿಸಿತು. ಆ ಕೊರತೆಯನ್ನು ತುಂಬಲು ಇಂದು ಭಾರತ ಪೂರ್ಣ ಬಲದೊಂದಿಗೆ ಸಾಗುತ್ತಿದೆ. ಮಾನ್ಯ ಸ್ಪೀಕರ್ ಸರ್, ಈ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ಅನೇಕರಿಗೆ ಬಹಳ ಸಮಯ ಬೇಕಾಗುತ್ತದೆ. ಇಂದು ಭಾರತವು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ, ಜಗತ್ತು ಭಾರತದ ಏಳಿಗೆಯಲ್ಲಿ ತನ್ನ ಏಳಿಗೆಯನ್ನು ನೋಡುತ್ತಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಹತಾಶೆಯಲ್ಲಿ ಮುಳುಗಿರುವ ಕೆಲವರಿಗೆ ಈ ದೇಶದ ಪ್ರಗತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರಿಗೆ ಭಾರತೀಯರ ಸಾಧನೆಗಳು ಕಾಣಿಸುತ್ತಿಲ್ಲ. 140 ಕೋಟಿ ದೇಶವಾಸಿಗಳ ಶ್ರಮದ ಮೇಲಿನ ನಂಬಿಕೆಯ ಫಲವೇ ಭಾರತ ವಿಶ್ವದಲ್ಲಿ ತನ್ನ ಛಾಪು ಮೂಡಿಸುತ್ತಿರುವುದು. ಭಾರತದ ಜನರ ಪರಿಶ್ರಮದ ಫಲವಾದ ಸಾಧನೆಗಳನ್ನು ನೋಡಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ.
ಗೌರವಾನ್ವಿತ ಸಭಾಧ್ಯಕ್ಷರೆ,
ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಸುಮಾರು 90,000 ಸ್ಟಾರ್ಟಪ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಇಂದು ನಾವು ಸ್ಟಾರ್ಟಪ್‌ಗಳ ಜಗತ್ತಿನಲ್ಲಿ 3ನೇ ಸ್ಥಾನ ತಲುಪಿದ್ದೇವೆ. ಇಂದು ದೇಶದ 2ನೇ ಶ್ರೇಣಿ ಮತ್ತು 3ನೇ ಶ್ರೇಣಿ ನಗರಗಳಲ್ಲೂ ಬೃಹತ್ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಪ್ರಚಲಿತದಲ್ಲಿದೆ, ಇದು ಭಾರತದ ಮೂಲೆ ಮೂಲೆಗೂ ತಲುಪಿದೆ. ಇದು ಭಾರತದ ಅತ್ಯಮೂಲ್ಯ ಪ್ರತಿಭಾವಂತ ಯುವ ಸಮುದಾಯದ ಗುರುತಾಗುತ್ತಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಕೊರೊನಾ ನಿರ್ಣಾಯಕ ಅವಧಿಯಲ್ಲಿ ಅತಿ ಕಡಿಮೆ ಸಮಯದಲ್ಲಿ 108 ಯುನಿಕಾರ್ನ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಯುನಿಕಾರ್ನ್ ಮೌಲ್ಯ 6-7 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಇದನ್ನು ಈ ದೇಶದ ಯುವಕರು ಸಾಧಿಸಿದ್ದಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಇಂದು ಭಾರತವು ಮೊಬೈಲ್ ಫೋನ್ ಉತ್ಪಾದನೆಯಲ್ಲಿ ವಿಶ್ವದ 2ನೇ ಅತಿದೊಡ್ಡ ದೇಶವಾಗಿದೆ. ದೇಶೀಯ ವಿಮಾನ ಸಂಚಾರ ವಿಶ್ವದಲ್ಲಿ 3ನೇ ಸ್ಥಾನಕ್ಕೆ ತಲುಪಿದೆ. ಇಂಧನ ಬಳಕೆಯನ್ನು ಪ್ರಗತಿಯ ನಿಯತಾಂಕವೆಂದು ಪರಿಗಣಿಸಲಾಗುತ್ತದೆ. ಇಂದು ಭಾರತ ವಿಶ್ವದಲ್ಲಿ ಇಂಧನ ಬಳಕೆಯಲ್ಲಿ 3ನೇ ಸ್ಥಾನಕ್ಕೆ ತಲುಪಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ವಿಷಯದಲ್ಲಿ ನಾವು ವಿಶ್ವದಲ್ಲಿ 4ನೇ ಸ್ಥಾನ ತಲುಪಿದ್ದೇವೆ. ಕ್ರೀಡೆಗೆ ಸಂಬಂಧಪಟ್ಟಂತೆ ಯಾರೂ ನಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇಂದು ಭಾರತೀಯ ಆಟಗಾರರು ಕ್ರೀಡಾ ಜಗತ್ತಿನಲ್ಲಿ ಪ್ರತಿ ಹಂತದಲ್ಲೂ ತಮ್ಮ ಸಾಮರ್ಥ್ಯ ಮೆರೆಯುತ್ತಿದ್ದಾರೆ.
ಇಂದು ಭಾರತ ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಮಾನ್ಯ ಸಭಾಧ್ಯಕ್ಷರೇ, ದೇಶದಲ್ಲೇ ಪ್ರಥಮ ಬಾರಿಗೆ ಉನ್ನತ ಶಿಕ್ಷಣಕ್ಕೆ ದಾಖಲಾದವರ ಸಂಖ್ಯೆ 4 ಕೋಟಿ ದಾಟಿರುವುದು ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲ, ಹೆಣ್ಣು ಮಕ್ಕಳ ಪಾಲ್ಗೊಳ್ಳುವಿಕೆಯಲ್ಲೂ ಸಮಾನತೆ ಇದೆ. ದೇಶದಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಅಥವಾ ವೃತ್ತಿಪರ ಕಾಲೇಜುಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ನಮ್ಮ ಪುತ್ರರು ಮತ್ತು ಪುತ್ರಿಯರು ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಮಾನ್ಯ ಸ್ಪೀಕರ್ ಸರ್,
ಇತರರು ಲೆಕ್ಕ ಹಾಕಬಹುದಾದ ನಮ್ಮ ಹಲವಾರು ಸಾಧನೆಗಳಿವೆ. ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ಇಂತಹ ಹಲವಾರು ಸಾಧನೆಗಳನ್ನು ಪ್ರಸ್ತಾಪಿಸಿದ್ದಾರೆ. ದೇಶದೆಲ್ಲೆಡೆ ಭರವಸೆಯಿದೆ, ದೇಶವು ಆತ್ಮವಿಶ್ವಾಸದಿಂದ ತುಂಬಿದೆ. ಇದು ಕನಸುಗಳು ಮತ್ತು ನಿರ್ಣಯಗಳೊಂದಿಗೆ ಸಾಗುವ ದೇಶವಾಗಿದೆ. ಆದರೆ ಇಲ್ಲಿ ಕೆಲವರು ಹತಾಶೆಯಲ್ಲಿ ಮುಳುಗಿದ್ದಾರೆ. ಅಂಥವರಿಗೆ ಕಾಕಾ ಹತ್ರಸಿ ಬಹಳ ಮುಖ್ಯವಾದ ಕಾಮೆಂಟ್ ಮಾಡಿದ್ದಾರೆ:
‘आगा-पीछा देखकर क्यों होते गमगीन, जैसी जिसकी भावना वैसा दीखे सीन’।
ಮಾನ್ಯ ಶ್ರೀ ಸ್ಪೀಕರ್ ಸರ್,
ಎಲ್ಲಕ್ಕಿಂತ ಹೆಚ್ಚಾಗಿ, ಈ ನಿರಾಶೆ ಯಾವುದೇ ಕಾರಣವಿಲ್ಲದೆ ಅಲ್ಲ. ಅದರ ಹಿಂದೆ ಒಂದು ಕಾರಣವಿದೆ. ಮೊದಲನೆಯದಾಗಿ, ಜನರ ಪುನರಾವರ್ತಿತ ತೀರ್ಪುಗಳು! ಅವರನ್ನು ನೆಮ್ಮದಿಯಿಂದ ಮಲಗಲು ಬಿಡದ ಈ ಹತಾಶೆಯ ಹಿಂದಿನ ಕಾರಣವೇನು? ಭಾರತದ ಆರ್ಥಿಕತೆಯು 2014ರ ಮೊದಲು ಅಂದರೆ 2004-2014ರ ಅವಧಿಯಲ್ಲಿ ಹದಗೆಟ್ಟಿತ್ತು. 10 ವರ್ಷಗಳಲ್ಲಿ ಹಣದುಬ್ಬರ ಎರಡಂಕಿಯಲ್ಲೇ ಇತ್ತು. ಆದ್ದರಿಂದ, ಏನಾದರೂ ಒಳ್ಳೆಯದು ಸಂಭವಿಸಿದರೆ, ನಿರುದ್ಯೋಗವನ್ನು ತೊಡೆದುಹಾಕಲು ಭರವಸೆ ನೀಡಿದವರಲ್ಲಿ ಹತಾಶೆ ಪ್ರತಿಫಲಿಸುತ್ತಿದೆ.
ಮಾನ್ಯ ಸ್ಪೀಕರ್ ಸರ್,
ಒಮ್ಮೆ ಇಬ್ಬರು ಸ್ನೇಹಿತರು ಕಾಡಿನಲ್ಲಿ ಬೇಟೆಯಾಡಲು ಹೋದರು ಮತ್ತು ಅವರು ತಮ್ಮ ವಾಹನದಲ್ಲಿ ಬಂದೂಕುಗಳನ್ನು ಇಟ್ಟುಕೊಂಡು ಅಡ್ಡಾಡಲು ಪ್ರಾರಂಭಿಸಿದರು. ಕಾಡಿನಲ್ಲಿ ಮುಂದೆ ಹೋಗಲು ಪ್ರರಂಭಿಸಿದರು. ಅವರು ಕಾಡಿನಲ್ಲಿ ಮುಂದೆ ಹೋದರೆ ಹುಲಿ ನೋಡಬಹುದು, ಬೇಟೆಯಾಡಬಹುದು ಎಂದು ಭಾವಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ಹುಲಿ ಅವರಿಗೆ ಆಶ್ಚರ್ಯವಾಗುವಂತೆ ಅಲ್ಲಿ ಕಾಣಿಸಿಕೊಂಡಿತು. ಅವರು ವಾಹನದ ಹೊರಗೆ ಮತ್ತು ಅವರ ಬಂದೂಕುಗಳು ವಾಹನದಲ್ಲಿದ್ದವು. ಏನು ಮಾಡಬೇಕೆಂದು ಅವರಿಗೆ ತಿಳಿದಿರಲಿಲ್ಲ? ಹಾಗಾಗಿ, ತಮ್ಮ ಬಂದೂಕು ಪರವಾನಗಿಯನ್ನು ಹುಲಿಗೆ ತೋರಿಸಿದರು. ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಅವರು ಇದೇ ರೀತಿ ಮಾಡಿದ್ದಾರೆ. ಇವೇ ಅವರ ತಂತ್ರಗಳು. ಯಾವುದೇ ಸಮಸ್ಯೆಯಿಂದ ಅವರು ತಮ್ಮ ಕೈಗಳನ್ನು ತೊಳೆಯುವುದೇ ಹೀಗೆ. 2004 ಮತ್ತು 2014ರ ನಡುವಿನ ಅವಧಿಯು ಸ್ವಾತಂತ್ರ್ಯದ ಇತಿಹಾಸದಲ್ಲಿ ಹೆಚ್ಚಿನ ಹಗರಣಗಳ ದಶಕವಾಗಿದೆ. ಯುಪಿಎ ಸರ್ಕಾರದ ಆ 10 ವರ್ಷಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭಾರತದ ಮೂಲೆ ಮೂಲೆಗಳಲ್ಲಿ ಭಯೋತ್ಪಾದಕರ ದಾಳಿಗಳು ಮುಂದುವರೆದವು. ಪ್ರತಿಯೊಬ್ಬ ಪ್ರಜೆಯೂ ಅಸುರಕ್ಷಿತನಾಗಿದ್ದ. ಯಾವುದೇ ಅಪರಿಚಿತ ವಸ್ತುಗಳನ್ನು ಮುಟ್ಟಬೇಡಿ ಮತ್ತು ಅಂತಹ ಅಪರಿಚಿತ ವಸ್ತುಗಳಿಂದ ದೂರವಿರಿ ಎಂದು ಎಲ್ಲೆಡೆ ಘೋಷಣೆಗಳನ್ನು ಮಾಡಲಾಗುತ್ತಿತ್ತು. ಆ 10 ವರ್ಷಗಳಲ್ಲಿ ದೇಶವು ಜಮ್ಮು-ಕಾಶ್ಮೀರದಿಂದ ಈಶಾನ್ಯದವರೆಗೆ ಹಿಂಸಾಚಾರಕ್ಕೆ ಬಲಿಯಾಯಿತು. ಜಾಗತಿಕ ವೇದಿಕೆಗಳಲ್ಲಿ ಭಾರತದ ಧ್ವನಿಯು ಆ 10 ವರ್ಷಗಳಲ್ಲಿ ಎಷ್ಟು ದುರ್ಬಲವಾಯಿತು ಎಂದರೆ ಜಗತ್ತು ಭಾರತದತ್ತ ಗಮನ ಹರಿಸಲು ಸಹ ಸಿದ್ಧವಾಗಿರಲಿಲ್ಲ.
ಮಾನ್ಯ ಸ್ಪೀಕರ್ ಸರ್,
ಇಂದು ದೇಶದ ಸಾಮರ್ಥ್ಯಗಳನ್ನು ಗುರುತಿಸಲಾಗುತ್ತಿದೆ, 140 ಕೋಟಿ ದೇಶವಾಸಿಗಳ ಸಾಮರ್ಥ್ಯ ಅರಳುತ್ತಿರುವುದು ಅವರ ನಿರಾಸೆಯ ಹಿಂದಿನ ಕಾರಣ. ಈ ಹಿಂದೆಯೂ ದೇಶಕ್ಕೆ ಸಾಮರ್ಥ್ಯವಿತ್ತು, ಆದರೆ ಅವರು 2004 ಮತ್ತು 2014ರ ನಡುವೆ ಆ ಅವಕಾಶವನ್ನು ಹಾಳು ಮಾಡಿದರು. ಪ್ರತಿಯೊಂದು ಅವಕಾಶವನ್ನೂ ಬಿಕ್ಕಟ್ಟಿಗೆ ಪರಿವರ್ತಿಸುವುದು ಯುಪಿಎ ಸರ್ಕಾರದ ವಿಶಿಷ್ಟ ಲಕ್ಷಣವಾಯಿತು. ಮಾಹಿತಿ ತಂತ್ರಜ್ಞಾನದ ಉತ್ಕರ್ಷದ ಯುಗದಲ್ಲಿ, ಅದು ಸ್ವತಃ 2ಜಿ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿತು. ಇದು ಮತ್ತೆ ಅವಕಾಶವನ್ನು ಬಿಕ್ಕಟ್ಟಾಗಿ ಪರಿವರ್ತಿಸಿತು. ನಾಗರಿಕ ಪರಮಾಣು ಒಪ್ಪಂದದ ಸಂದರ್ಭದಲ್ಲಿ ಅದು ಕ್ಯಾಶ್ ಫಾರ್ ವೋಟ್ ಹಗರಣದಲ್ಲಿ ಸಿಕ್ಕಿಬಿತ್ತು. ಇವೇ ಅವರು ಆಡುತ್ತಿದ್ದ ಆಟಗಳು.
ಮಾನ್ಯ ಸ್ಪೀಕರ್ ಸರ್,
2010ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಿತು. ಭಾರತಕ್ಕೆ ತನ್ನ ಯುವ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶವಾಗಿತ್ತು. ಆದರೆ ಮತ್ತೊಮ್ಮೆ ಅವರು ಅವಕಾಶವನ್ನು ಬಿಕ್ಕಟ್ಟಾಗಿ ಪರಿವರ್ತಿಸಿದರು ಮತ್ತು ಸಿಡಬ್ಲ್ಯುಜಿ ಹಗರಣದಿಂದಾಗಿ ಇಡೀ ದೇಶವು ವಿಶ್ವದಲ್ಲೇ ಕುಖ್ಯಾತವಾಯಿತು.
ಗೌರವಾನ್ವಿತ ಸಭಾಧ್ಯಕ್ಷರೆ,
ಯಾವುದೇ ದೇಶದ ಅಭಿವೃದ್ಧಿಯಲ್ಲಿ ಇಧನವು ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಭಾರತದ ಇಂಧನ ಶಕ್ತಿಯ ಬೆಳವಣಿಗೆ ಬಗ್ಗೆ ಜಗತ್ತಿನಲ್ಲಿ ಚರ್ಚೆ ಅಗತ್ಯವಿದ್ದಾಗ, ಈ ಶತಮಾನದ 2ನೇ ದಶಕದಲ್ಲಿ ಭಾರತ ಹಗರಣದಿಂದ ಕುಖ್ಯಾತವಾಯಿತು. ಕತ್ತಲೆಯ ಆ ದಿನಗಳು ವಿಶ್ವಾದ್ಯಂತ ಚರ್ಚೆಯ ಕೇಂದ್ರವಾಯಿತು. ಕಲ್ಲಿದ್ದಲು ಹಗರಣ ಬೆಳಕಿಗೆ ಬಂದಿತು.
ಗೌರವಾನ್ವಿತ ಸಭಾಧ್ಯಕ್ಷರೆ,
ದೇಶದ ಮೇಲೆ ಹಲವಾರು ಭಯೋತ್ಪಾದಕ ದಾಳಿಗಳು ನಡೆದಿವೆ. 2008ರ ದಾಳಿಯನ್ನು ಯಾರೂ ಮರೆಯುವಂತಿಲ್ಲ. ಆದರೆ ಅದನ್ನು ಎದುರಿಸುವ ಶಕ್ತಿ ಇರಲಿಲ್ಲ. ಇದರ ಪರಿಣಾಮವಾಗಿ ಭಯೋತ್ಪಾದಕ ಕೃತ್ಯಗಳಿಂದ ಇಡೀ ದೇಶದ ಅಮಾಯಕ ಜನರು 10 ವರ್ಷಗಳ ಕಾಲ ಅಶಕ್ತರಾದರು.
ಗೌರವಾನ್ವಿತ ಸಭಾಧ್ಯಕ್ಷರೆ,
ಎಲ್‌ಒಸಿ ಮತ್ತು ಎಲ್‌ಎಸಿಯಲ್ಲಿ ತನ್ನ ಪರಾಕ್ರಮ ಸಾಬೀತುಪಡಿಸಲು ಅವಕಾಶವಿದ್ದಾಗ, ಅಧಿಕಾರದಲ್ಲಿದ್ದವರು ರಕ್ಷಣಾ ಒಪ್ಪಂದಗಳು ಮತ್ತು ಹೆಲಿಕಾಪ್ಟರ್ ಹಗರಣದಲ್ಲಿ ಸಿಲುಕಿಕೊಂಡರು.
ಗೌರವಾನ್ವಿತ ಸಭಾಧ್ಯಕ್ಷರೆ,
ದೇಶಕ್ಕೆ ತೀವ್ರ ಅಗತ್ಯವಿದ್ದಾಗ ಇಂತಹ ಸಮಸ್ಯೆಗಳು ಉದ್ಭವಿಸುತ್ತಲೇ ಇದ್ದವು. 2014ರ ಹಿಂದಿನ ಅವಧಿಯು ಭಾರತದ ಪಾಲಿಗೆ ಕಳೆದುಹೋದ ದಶಕವಾಗಿ ನೆನಪಾಗುತ್ತದೆ. ಆದರೆ 2030ರ ದಶಕವು ಇಡೀ ಜಗತ್ತಿಗೆ ಭಾರತದ ದಶಕವಾಗಲಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಗೌರವಾನ್ವಿತ ಸಭಾಧ್ಯಕ್ಷರೆ,
ಪ್ರಜಾಪ್ರಭುತ್ವದಲ್ಲಿ ಟೀಕೆ, ವಿಮರ್ಶೆಯ ಮಹತ್ವವನ್ನು ನಾನು ಒಪ್ಪಿಕೊಳ್ಳುತ್ತೇನೆ. ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ನಾನು ಯಾವಾಗಲೂ ನಂಬುತ್ತೇನೆ, ಪ್ರಜಾಪ್ರಭುತ್ವವು ಶತಮಾನಗಳಿಂದ ನಮ್ಮ ರಕ್ತನಾಳಗಳಲ್ಲಿದೆ. ಅದಕ್ಕಾಗಿಯೇ ನಾನು ಯಾವಾಗಲೂ ಟೀಕೆಗಳನ್ನು ಪ್ರಜಾಪ್ರಭುತ್ವದ ಶಕ್ತಿ, ಪ್ರಚಾರ ಮತ್ತು ಚೈತನ್ಯಕ್ಕಾಗಿ ‘ಶುದ್ಧಿ (ಶುದ್ಧೀಕರಣ) ಯಜ್ಞ’ ಎಂದು ನಂಬುತ್ತೇನೆ. ಈ ರೂಪದಲ್ಲಿ ನಾವು ಟೀಕೆಗಳನ್ನು ನೋಡುತ್ತೇವೆ. ಆದರೆ ದುರದೃಷ್ಟವಶಾತ್, ದೇಶಕ್ಕೆ ಅನುಕೂಲವಾಗುವಂತೆ (ಸರ್ಕಾರದ) ವಿಮರ್ಶಾತ್ಮಕ ವಿಶ್ಲೇಷಣೆ ಮಾಡಲು ಯಾರಾದರೂ ಮುಂದೆ ಬರುತ್ತಾರೆ ಎಂದು ನಾನು ಹಲವು ವರ್ಷಗಳಿಂದ ಕಾಯುತ್ತಿದ್ದೇನೆ. ಆದರೆ ಅವರು ಟೀಕೆ ಮತ್ತು ಆರೋಪಗಳಲ್ಲಿ 9 ವರ್ಷಗಳನ್ನು ವ್ಯರ್ಥ ಮಾಡಿದರು. ಅವರು ಸುಳ್ಳು ಆರೋಪ ಮತ್ತು ನಿಂದನೆಗಳನ್ನು ಹೊರತುಪಡಿಸಿ ಬೇರೇನೂ ಮಾಡಲಿಲ್ಲ. ಚುನಾವಣೆಯಲ್ಲಿ ಸೋತರೆ ಇವಿಎಂಗಳನ್ನು ದೂಷಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಚುನಾವಣೆಯಲ್ಲಿ ಸೋತರೆ ಚುನಾವಣಾ ಆಯೋಗವನ್ನು ನಿಂದಿಸುತ್ತಾರೆ. ಇದು ಏನು? ಹಾಗಾದರೆ, ನ್ಯಾಯಾಲಯದಲ್ಲಿ ತೀರ್ಪು ನಿಮ್ಮ ಪರವಾಗಿಲ್ಲದಿದ್ದರೆ, ಸುಪ್ರೀಂ ಕೋರ್ಟ್ ಅನ್ನು ನಿಂದಿಸಿ ಮತ್ತು ಟೀಕಿಸಿ.
ಮಾನ್ಯ ಸಭಾಧ್ಯಕ್ಷರೆ,
ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಯುತ್ತಿದ್ದರೆ, ನೀವು ತನಿಖಾ ಸಂಸ್ಥೆಗಳನ್ನು ನಿಂದಿಸುತ್ತೀರಿ. ಸೇನೆಯು ತನ್ನ ಪರಾಕ್ರಮವನ್ನು ಪ್ರದರ್ಶಿಸಿ ದೇಶದ ಜನರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದರೆ, ಸೇನೆಯನ್ನು ಟೀಕಿಸಿ, ನಿಂದಿಸಿ, ಆರೋಪ ಮಾಡಿ.
ದೇಶದ ಆರ್ಥಿಕ ಅಭಿವೃದ್ಧಿಯ ಸುದ್ದಿ ಬಂದಾಗಲೆಲ್ಲಾ ಮತ್ತು ಪ್ರಪಂಚದ ಎಲ್ಲಾ ಸಂಸ್ಥೆಗಳು ಭಾರತದ ಆರ್ಥಿಕತೆಯನ್ನು ಹೊಗಳಿದರೆ, ನಂತರ ಆರ್ ಬಿಐ ನಿಂದಿಸಿ, ಭಾರತದ ಆರ್ಥಿಕ ಸಂಸ್ಥೆಗಳನ್ನು ನಿಂದಿಸಿ.
ಮಾನ್ಯ ಸಭಾಧ್ಯಕ್ಷರೆ,
ಕಳೆದ 9 ವರ್ಷಗಳಲ್ಲಿ ಕೆಲವು ಜನರ ದಿವಾಳಿತನವನ್ನು ನಾವು ನೋಡಿದ್ದೇವೆ. ಒತ್ತಾಯಪೂರ್ವಕ ಟೀಕೆಯು ರಚನಾತ್ಮಕ ಟೀಕೆಯನ್ನು ಬದಲಿಸಿದೆ ಮತ್ತು ಒತ್ತಾಯಪೂರ್ವಕ ಟೀಕಾಕಾರರು ಅದರಲ್ಲಿ ಮುಳುಗಿದ್ದಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ಸಂಸ್ಥೆಗಳ ಬಗ್ಗೆ ಸದನದಲ್ಲಿ ಬಹಳಷ್ಟು ಚರ್ಚೆಯಾಗಿದೆ. ವಿರೋಧ ಪಕ್ಷದ ಅನೇಕ ಜನರು ಈ ನಿಟ್ಟಿನಲ್ಲಿ ಧ್ವನಿ ಎತ್ತುತ್ತಿರುವುದನ್ನು ನಾನು ಗಮನಿಸಿದ್ದೇನೆ.
ಗೌರವಾನ್ವಿತ ಸಭಾಧ್ಯಕ್ಷರೆ,
ದೇಶದ ಚುನಾವಣಾ ಫಲಿತಾಂಶಗಳು ಖಂಡಿತವಾಗಿಯೂ ಈ ಜನರನ್ನು ಒಂದೇ ವೇದಿಕೆಗೆ ತರುತ್ತವೆ ಎಂದು ನಾನು ನಂಬಿದ್ದೆ, ಆದರೆ ಅದು ಆಗಲಿಲ್ಲ. ಆದಾಗ್ಯೂ, ಈ ಜನರು ಈಗ ಒಂದೇ ವೇದಿಕೆಯಲ್ಲಿರುವುದರಿಂದ ಜಾರಿ ನಿರ್ದೇಶನಾಲಯಕ್ಕೆ ಧನ್ಯವಾದ ಹೇಳಬೇಕು. ದೇಶದ ಮತದಾರರು ಮಾಡಲು ಸಾಧ್ಯವಾಗದ ಈ ಜನರನ್ನು ಜಾರಿ ನಿರ್ದೇಶನಾಲಯ ಒಂದೇ ವೇದಿಕೆಗೆ ತಂದಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಇಲ್ಲಿನ ಕೆಲವರಿಗೆ ಹಾರ್ವರ್ಡ್ ಬಗ್ಗೆ ದೊಡ್ಡ ಕ್ರೇಜ್ ಇದೆ. ಕೊರೊನಾ ಕಾಲದಲ್ಲೂ ಇದನ್ನೇ ಹೇಳಲಾಗಿತ್ತು. ಕೊರೊನಾದಿಂದ ಭಾರತಕ್ಕೆ ಆಗಿರುವ ಹಾನಿಯ ಬಗ್ಗೆ ಹಾರ್ವರ್ಡ್‌ನಲ್ಲಿ ಕೇಸ್ ಸ್ಟಡಿ ನಡೆಯಲಿದೆ ಎಂದು ಕಾಂಗ್ರೆಸ್ ಆಗ ಹೇಳಿತ್ತು. ನಿನ್ನೆಯೂ ಈ ಸದನದಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಸ್ತಾಪವಾಯಿತು. ಗೌರವಾನ್ವಿತ ಸಭಾಧ್ಯಕ್ಷರೆ, ಹಾರ್ವರ್ಡ್ ವಿಶ್ವವಿದ್ಯಾಲಯವು ಕಳೆದ ಕೆಲವು ವರ್ಷಗಳಲ್ಲಿ ಬಹಳ ಮುಖ್ಯವಾದ ಅಧ್ಯಯನ ನಡೆಸಿದೆ. ಪೂರ್ಣಗೊಂಡಿರುವ ಅಧ್ಯಯನದ ಬಗ್ಗೆ ನಾನು ಸದನಕ್ಕೆ ತಿಳಿಸಲು ಬಯಸುತ್ತೇನೆ. ‘ಭಾರತದ ಕಾಂಗ್ರೆಸ್ ಪಕ್ಷದ ಉದಯ ಮತ್ತು ಅವನತಿ’ ಎಂಬುದು ಅಧ್ಯಯನದ ವಿಷಯವಾಗಿದೆ. ಹಾರ್ವರ್ಡ್ ವಿಶ್ವವಿದ್ಯಾಲಯವಲ್ಲದೆ, ವಿಶ್ವದ ಇತರ ಪ್ರಮುಖ ವಿಶ್ವವಿದ್ಯಾಲಯಗಳು ಕಾಂಗ್ರೆಸ್ ಪಕ್ಷದ ಅವನತಿ ಮತ್ತು ಅದರ ಅವನತಿಯ ಹಿಂದೆ ಇರುವವರ ಬಗ್ಗೆ ಅಧ್ಯಯನ ಮಾಡಲಿವೆ ಎಂದು ನನಗೆ ಖಾತ್ರಿಯಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಅಂಥವರ ಬಗ್ಗೆ ದುಶ್ಯಂತ್ ಕುಮಾರ್ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ದುಶ್ಯಂತ್ ಕುಮಾರ್ ಹೇಳಿರುವುದು ಇಂಥವರಿಗೆ ಚೆನ್ನಾಗಿ ಸರಿಹೊಂದುತ್ತದೆ. ಅವರು ಹೀಗೆ ಹೇಳಿದ್ದಾರೆ:
‘तुम्हारे पाँव के नीचे, कोई जमीन नहीं,
कमाल ये है कि फिर भी तुम्हें यकीन नहीं’।
ಗೌರವಾನ್ವಿತ ಸಭಾಧ್ಯಕ್ಷರೆ,
ಈ ಜನರು ಅಂತಹ ಪ್ರಾಪಂಚಿಕ ವಿಷಯಗಳಿಗೆ ಒಗ್ಗಿಕೊಂಡಿರುವುದರಿಂದ, ಅವರು ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ವಿರೋಧಿಸುತ್ತಾರೆ ಎಂದು ಅವರು ನೆನಪಿಸಿಕೊಳ್ಳುವುದಿಲ್ಲ. ಅವರು ತಮ್ಮೊಳಗಿನ ವೈರುಧ್ಯವನ್ನು ಸರಿಯಾದ ಆತ್ಮಾವಲೋಕನದಿಂದ ಸರಿಪಡಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. 2014ರಿಂದ ಅವರು ನಿರಂತರವಾಗಿ ಶಪಿಸುತ್ತಿದ್ದಾರೆ, ಪ್ರತಿ ಸಂದರ್ಭದಲ್ಲೂ ಶಪಿಸುತ್ತಿದ್ದಾರೆ. ಭಾರತ ದುರ್ಬಲವಾಗುತ್ತಿದೆ, ಯಾರೂ ಭಾರತದ ಮಾತನ್ನು ಕೇಳುತ್ತಿಲ್ಲ, ಭಾರತಕ್ಕೆ ಜಗತ್ತಿನಲ್ಲಿ ಧ್ವನಿ ಇಲ್ಲ. ಅವರು ಹಿಂದೆ ತುಂಬಾ ವಿಷಯಗಳನ್ನು ಹೇಳಿದ್ದರು ಮತ್ತು ಅವರು ಈಗ ಏನು ಹೇಳುತ್ತಿದ್ದಾರೆ? ಈಗ ಭಾರತವು ತನ್ನ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಇತರ ದೇಶಗಳಿಗೆ ಬೆದರಿಕೆ ಹಾಕುವಷ್ಟು ಶಕ್ತಿಶಾಲಿಯಾಗಿದೆ ಎಂದು ಅವರು ಹೇಳುತ್ತಾರೆ. ಭಾರತ ದುರ್ಬಲವಾಗಿದೆಯೇ ಅಥವಾ ಬಲಿಷ್ಠವಾಗಿದೆಯೇ ಎಂಬುದನ್ನು ಮೊದಲು ಅವರು ನಿರ್ಧರಿಸಲಿ.
ಗೌರವಾನ್ವಿತ ಸಭಾಧ್ಯಕ್ಷರೆ,
ನೆಲದಲ್ಲಿ ಬೇರೂರಿರುವ ಯಾವುದೇ ಅಸ್ತಿತ್ವದಲ್ಲಿರುವ ಸಂಘಟನೆಯು ಜನಸಾಮಾನ್ಯರ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಅದು ಅವರಿಂದ ಕಲಿಯಲು ಪ್ರಯತ್ನಿಸುತ್ತದೆ ಮತ್ತು ಅದಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡುತ್ತದೆ. ಆದರೆ ದುರಹಂಕಾರಿಗಳು ತಮ್ಮ ಬಳಿ ಎಲ್ಲಾ ಜ್ಞಾನವಿದೆ, ಅವರ ವಿಧಾನ ಸರಿ ಎಂದು ಭಾವಿಸುವವರು ಮೋದಿಯನ್ನು ನಿಂದಿಸುವ ಮೂಲಕ ದಾರಿ ಕಂಡುಕೊಳ್ಳುತ್ತಾರೆ ಎಂದು ನಂಬುತ್ತಾರೆ. ಸುಳ್ಳು ಆರೋಪಗಳ ಮೂಲಕ ಮೋದಿಯನ್ನು ಕೆಣಕುವ ಮೂಲಕ ಅವರು ತಮ್ಮ ಭವಿಷ್ಯ ನೋಡುತ್ತಾರೆ. ಈಗ 22 ವರ್ಷಗಳು ಕಳೆದಿವೆ, ಆದರೂ ಅವರು ಈ ತಪ್ಪು ಕಲ್ಪನೆಯನ್ನು ಮುಂದುವರೆಸಿದ್ದಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಮೋದಿ ಅವರ ಮೇಲಿನ ಈ ನಂಬಿಕೆಗೆ ಪತ್ರಿಕೆಯ ಮುಖ್ಯಾಂಶಗಳು ಅಥವಾ ದೂರದರ್ಶನ ಚಿತ್ರಗಳು ಕಾರಣವಲ್ಲ. ಏಕೆಂದರೆ ನಾನು ನನ್ನ ಜೀವನವನ್ನು, ಅದರ ಪ್ರತಿ ಕ್ಷಣವನ್ನು ದೇಶದ ಜನರಿಗಾಗಿ, ಅವರ ಉಜ್ವಲ ಭವಿಷ್ಯಕ್ಕಾಗಿ ಕಳೆದಿದ್ದೇನೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಮೋದಿ ಅವರ ಮೇಲೆ ದೇಶವಾಸಿಗಳು ಇಟ್ಟಿರುವ ನಂಬಿಕೆ ಅವರ ಗ್ರಹಿಕೆಗೆ ಮೀರಿದ್ದು. ಉಚಿತ ಪಡಿತರ ಪಡೆಯುತ್ತಿರುವ ನನ್ನ ದೇಶದ 80 ಕೋಟಿ ದೇಶವಾಸಿಗಳು ನನ್ನ ವಿರುದ್ಧ ಸುಳ್ಳು ಆರೋಪ ಮಾಡುವ ಇವರನ್ನು ನಂಬುತ್ತಾರೆಯೇ?
ಗೌರವಾನ್ವಿತ ಸಭಾಧ್ಯಕ್ಷರೆ,
ಈಗ ಒಂದು ದೇಶ ಒಂದು ಪಡಿತರ ಚೀಟಿಯಿಂದಾಗಿ ಬಡವರಲ್ಲಿ ಬಡವರು ಕೂಡ ದೇಶದ ಎಲ್ಲಾದರೂ ಪಡಿತರ ಪಡೆಯುತ್ತಿದ್ದಾರೆ. ನಿಮ್ಮ ಸುಳ್ಳುಗಳನ್ನು, ನಿಮ್ಮ ಸುಳ್ಳು ಆರೋಪಗಳನ್ನು ಅವರು ಹೇಗೆ ನಂಬುತ್ತಾರೆ?
ಗೌರವಾನ್ವಿತ ಸಭಾಧ್ಯಕ್ಷರೆ,
ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿ ವರ್ಷಕ್ಕೆ 3 ಬಾರಿ ಖಾತೆಗೆ ಹಣ ಜಮಾ ಆಗುವ 11 ಕೋಟಿ ರೈತರು ನಿಮ್ಮ ನಿಂದನೆ ಮತ್ತು ಸುಳ್ಳು ಆರೋಪಗಳನ್ನು ಹೇಗೆ ನಂಬುತ್ತಾರೆ?
ಗೌರವಾನ್ವಿತ ಸಭಾಧ್ಯಕ್ಷರೆ,
ಫುಟ್‌ಪಾತ್ ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ 3 ಕೋಟಿಗೂ ಹೆಚ್ಚು ಜನರಿಗೆ ಪಕ್ಕಾ ಮನೆಗಳು ಸಿಕ್ಕಿವೆ. ಅವರು ನಿಮ್ಮ ನಿಂದನೆಗಳು ಮತ್ತು ಸುಳ್ಳುಗಳನ್ನು ಏಕೆ ನಂಬುತ್ತಾರೆ?
ಗೌರವಾನ್ವಿತ ಸಭಾಧ್ಯಕ್ಷರೆ,
9 ಕೋಟಿ ಜನರು ಉಚಿತ ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಅವರು ನಿಮ್ಮ ಸುಳ್ಳನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? ಅದೇ ರೀತಿ 11 ಕೋಟಿ ಸಹೋದರಿಯರಿಗೆ ಗೌರವ ಸಿಕ್ಕಿದೆ, ಶೌಚಾಲಯ ಸಿಕ್ಕಿದೆ. ನಿಮ್ಮ ಸುಳ್ಳನ್ನು ಅವರು ಸಹ ಹೇಗೆ ನಂಬುತ್ತಾರೆ?
ಗೌರವಾನ್ವಿತ ಸಭಾಧ್ಯಕ್ಷರೆ,
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. 8 ಕೋಟಿ ಕುಟುಂಬಗಳಿಗೆ ಈಗ ನಲ್ಲಿ ನೀರು ಸಿಕ್ಕಿದೆ. ನಿಮ್ಮ ಸುಳ್ಳುಗಳು, ತಪ್ಪುಗಳು ಮತ್ತು ನಿಂದನೆಗಳನ್ನು ಆ ತಾಯಂದಿರು ಹೇಗೆ ನಂಬುತ್ತಾರೆ? ಆಯುಷ್ಮಾನ್ ಭಾರತ್ ಯೋಜನೆಯು 2 ಕೋಟಿ ಕುಟುಂಬಗಳಿಗೆ ಸಹಾಯ ಮಾಡಿದೆ, ಅವರ ಜೀವಗಳನ್ನು ಉಳಿಸಿದೆ. ಅವರ ಕಷ್ಟದ ಸಮಯದಲ್ಲಿ ಮೋದಿ ಅವರ ನೆರವಿಗೆ ಬಂದಿದ್ದಾರೆ. ಅವರು ನಿಮ್ಮ ನಿಂದನೆಗಳನ್ನು ಹೇಗೆ ಸ್ವೀಕರಿಸುತ್ತಾರೆ?
ಗೌರವಾನ್ವಿತ ಸಭಾಧ್ಯಕ್ಷರೆ,
ವಿಪಕ್ಷಗಳ ನಿಂದನೆಗಳು ಮತ್ತು ಆರೋಪಗಳು ಈ ಕೋಟಿಗಟ್ಟಲೆ ಭಾರತೀಯರ ಮೂಲಕ ಹಾದುಹೋಗಬೇಕಾಗಿದೆ, ಅವರನ್ನು ನೀವು ದಶಕಗಳಿಂದ ಸಂಕಷ್ಟದಲ್ಲಿ ಬದುಕಲು ಒತ್ತಾಯಿಸಿದ್ದೀರಿ.
ಗೌರವಾನ್ವಿತ ಸಭಾಧ್ಯಕ್ಷರೆ,
ಕೆಲವರು ತಮ್ಮ ಮತ್ತು ತಮ್ಮ ಕುಟುಂಬದ ಹಿತಕ್ಕಾಗಿ ಮಾತ್ರ ಬಹಳಷ್ಟು ಹಾನಿ ಮಾಡುವುದರಲ್ಲಿ ತೊಡಗಿದ್ದಾರೆ. ಅವರು ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಬದುಕುತ್ತಾರೆ. ಮೋದಿ 25 ಕೋಟಿ ದೇಶವಾಸಿಗಳ ಕುಟುಂಬಗಳ ಸದಸ್ಯರಾಗಿದ್ದಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
140 ಕೋಟಿ ದೇಶವಾಸಿಗಳ ಆಶೀರ್ವಾದವೇ ನನ್ನ ದೊಡ್ಡ ‘ಸುರಕ್ಷಾ ಕವಚ’ (ಸುರಕ್ಷತಾ ಕವಚ). ದುರುಪಯೋಗ ಮತ್ತು ಸುಳ್ಳಿನ ಆಯುಧಗಳಿಂದ ನೀವು ಈ ಸುರಕ್ಷತಾ ಕವಚವನ್ನು ಎಂದಿಗೂ ಉಲ್ಲಂಘಿಸಲು ಸಾಧ್ಯವಿಲ್ಲ. ಇದು ನಂಬಿಕೆಯ ಗುರಾಣಿಯಾಗಿದ್ದು, ಈ ಆಯುಧಗಳನ್ನು ನೀವು ಉಲ್ಲಂಘಿಸಲು ಸಾಧ್ಯವಿಲ್ಲ.
ಗೌರವಾನ್ವಿತ ಸಭಾಧ್ಯಕ್ಷರೆ,
ಚುನಾವಣೆ ಸಮಯದಲ್ಲಿ ಮಾತ್ರ ನೀವು ಗಮನಿಸದೆ ಬಿಟ್ಟಿದ್ದ ಬಡಾವಣೆಗಳು ನಿಮಗೆ ನೆನಪಾಗುತ್ತವೆ. ಇಂದು ರಸ್ತೆ, ವಿದ್ಯುತ್, ನೀರು ಮತ್ತು 4ಜಿ ತಂತ್ರಜ್ಞಾನ ಸಂಪರ್ಕಕ್ಕಿಂತ ಹೆಚ್ಚಿನ ಎಲ್ಲಾ ಸೌಲಭ್ಯಗಳು ಸಹ ಲಭ್ಯವಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಬುಡಕಟ್ಟು ಸಮುದಾಯದ ರಾಷ್ಟ್ರಪತಿಯನ್ನು ಕಂಡರೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ಇಡೀ ದೇಶವೇ ಪ್ರಶಂಸೆ ಮಾಡುತ್ತಿದೆ. ಇಂದು ಮಾತೃಭೂಮಿಗಾಗಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಬುಡಕಟ್ಟು ಸಮುದಾಯದ ಪುರುಷರು ಮತ್ತು ಮಹಿಳೆಯರನ್ನು ಸ್ಮರಿಸಲಾಗುತ್ತಿದೆ. ಇಂದು ‘ಆದಿವಾಸಿ ಗೌರವ್ ದಿವಸ್’ (ಬುಡಕಟ್ಟು ಜನಾಂಗದ ಹೆಮ್ಮೆಯ ದಿನ) ಆಚರಿಸಲಾಗುತ್ತಿದೆ. ನಮ್ಮ ಬುಡಕಟ್ಟು ಸಂಪ್ರದಾಯದ ಇಂತಹ ಮಹಾನ್ ಪ್ರತಿನಿಧಿ, ಮಹಿಳೆಯೊಬ್ಬರು ರಾಷ್ಟ್ರಪತಿಯಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ. ನಾವು ಅವರಿಗೆ ಹಕ್ಕುಗಳನ್ನು ನೀಡಿದ್ದೇವೆ.
ಗೌರವಾನ್ವಿತ ಸಭಾಧ್ಯಕ್ಷರೆ,
ನಾವು ಇದನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ, ಇದು ನಿಜವೂ ಹೌದು. ನಮಗೆಲ್ಲರಿಗೂ ಒಂದೇ ರೀತಿಯ ಅನುಭವವಿದೆ. ಇದು ನನ್ನದಲ್ಲ, ನಿಮ್ಮದೂ ಆಗಿದೆ. ತಾಯಿಗೆ ಅಧಿಕಾರ ಸಿಕ್ಕರೆ ಇಡೀ ಕುಟುಂಬವೇ ಸಬಲವಾಗುತ್ತದೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಕುಟುಂಬ ಸದೃಢವಾಗಿದ್ದರೆ ಸಮಾಜ ಬಲಿಷ್ಠವಾಗುತ್ತದೆ, ಆಗ ಮಾತ್ರ ದೇಶ ಸದೃಢವಾಗುತ್ತದೆ. ನಮ್ಮ ಸರ್ಕಾರವು ತಾಯಿ, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಹೆಚ್ಚು ಸೇವೆ ಸಲ್ಲಿಸುವ ಸೌಭಾಗ್ಯ ಪಡೆದಿದೆ ಎಂದು ನನಗೆ ತೃಪ್ತಿ ಇದೆ. ಅವರ ಪ್ರತಿಯೊಂದು ಸಣ್ಣ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನಾವು ಬಹಳ ಸೂಕ್ಷ್ಮತೆಯಿಂದ ಅದರ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಕೆಲವೊಮ್ಮೆ ಪ್ರಧಾನಿಯ ಬಗ್ಗೆ ತಮಾಷೆ ಮಾಡಲಾಗುತ್ತಿದೆ. ಇವರು ಯಾವ ರೀತಿಯ ಪ್ರಧಾನಿ? ಅವರು ಕೆಂಪು ಕೋಟೆ ಮೇಲೆ ನಿಂತು ಶೌಚಾಲಯಗಳ ಬಗ್ಗೆ ಮಾತನಾಡುತ್ತಾರೆ, ಅದನ್ನು ಅಪಹಾಸ್ಯ ಮಾಡಲಾಯಿತು. ಗೌರವಾನ್ವಿತ ಸಭಾಧ್ಯಕ್ಷರೆ, ಈ ಶೌಚಾಲಯ, ಈ ‘ಇಜ್ಜತ್ ಘರ್’, ಈ ತಾಯಂದಿರು ಮತ್ತು ಸಹೋದರಿಯರನ್ನು ಗೌರವಿಸುವ ವಿಷಯವಾಗಿದೆ. ಅವರ ಅನುಕೂಲಕ್ಕಾಗಿ ಮತ್ತು ಭದ್ರತೆಗಾಗಿ ಇವೆಲ್ಲಾ. ಇಷ್ಟೇ ಅಲ್ಲ, ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮಾತನಾಡುವಾಗ ಜನರು ಸಹ ಪ್ರಶ್ನಿಸುತ್ತಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಸ್ಯಾನಿಟರಿ ಪ್ಯಾಡ್‌ಗಳು ಇಲ್ಲದಿದ್ದಾಗ, ಬಡ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಅವಮಾನ ಅನುಭವಿಸಿದರು, ಆಗಾಗ್ಗೆ ರೋಗಗಳಿಗೆ ಬಲಿಯಾದರು. ತಾಯಂದಿರು ಮತ್ತು ಸಹೋದರಿಯರು ದಿನದ ಹಲವು ಗಂಟೆಗಳನ್ನು ಹೊಗೆಯಲ್ಲಿ ಕಳೆಯಬೇಕಾಗಿತ್ತು. ಅವರ ಜೀವನವು ಅವರ ಅಡುಗೆ ಮನೆಗಳಲ್ಲಿನ ಹೊಗೆಯ ಸುತ್ತ ಸುತ್ತುತ್ತಿತ್ತು. ಆ ಬಡ ತಾಯಂದಿರು ಮತ್ತು ಸಹೋದರಿಯರನ್ನು ಹೊಗೆಯಿಂದ ಮುಕ್ತಗೊಳಿಸುವ ಈ ಭಾಗ್ಯ ನಮಗೆ ಸಿಕ್ಕಿದೆ. ಅವರ ಇಡೀ ಜೀವನವು ನೀರು ಮತ್ತು ಸೀಮೆಎಣ್ಣೆಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದರಲ್ಲೇ ಕಳೆಯುತ್ತಿತ್ತು. ಇಂದು ಆ ಸಂಕಷ್ಟಗಳಿಂದ ತಾಯಂದಿರನ್ನು, ಸಹೋದರಿಯರನ್ನು ಮುಕ್ತಿಗೊಳಿಸಿದ ಸಂತೃಪ್ತಿ ನಮಗೆ ಸಿಕ್ಕಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ನಾವು ಈ ಪರಿಸ್ಥಿತಿ ಮುಂದುವರಿಸಲು ಅವಕಾಶ ನೀಡಿದ್ದರೆ, ಬಹುಶಃ ಯಾರೂ ನಮ್ಮನ್ನು ಕೇಳುತ್ತಿರಲಿಲ್ಲ, ಮೋದಿಜಿ ಇದನ್ನು ಏಕೆ ಮಾಡಲಿಲ್ಲ, ಏಕೆಂದರೆ ನೀವು ದೇಶವನ್ನು ಇದರಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿಗೆ ತಂದಿಟ್ಟಿದ್ದೀರಿ. ದೇಶವು ಅಂತಹ ಹತಾಶೆಯಲ್ಲಿ ಮುಳುಗಿತ್ತು. ಉಜ್ವಲ ಯೋಜನೆ ಮೂಲಕ ಹೊಗೆ ಮುಕ್ತಿ, ಜಲಜೀವನ್ ಮಿಷನ್ ಮೂಲಕ ನೀರು ಒದಗಿಸಿ ಸಹೋದರಿಯರ ಸಬಲೀಕರಣಕ್ಕೆ ಶ್ರಮಿಸಿದ್ದೇವೆ. ನಾವು 9 ಕೋಟಿ ಸಹೋದರಿಯರನ್ನು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕಿಸಿದ್ದೇವೆ. ಗಣಿಗಾರಿಕೆಯಿಂದ ರಕ್ಷಣೆ, ತಾಯಂದಿರು ಮತ್ತು ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಅವಕಾಶಗಳನ್ನು ತೆರೆಯಲಾಗಿದೆ. ಅವರಿಗಾಗಿ ಈ ಕ್ಷೇತ್ರಗಳನ್ನು ತೆರೆಯುವ ಕಾರ್ಯವನ್ನು ನಮ್ಮ ಸರ್ಕಾರ ಸಾಧಿಸಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ವೋಟ್ ಬ್ಯಾಂಕ್ ರಾಜಕೀಯವು ಕೆಲವೊಮ್ಮೆ ದೇಶದ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ಉಂಟುಮಾಡಿದೆ ಎಂಬ ಸತ್ಯವನ್ನು ನಾವು ಅರಿತುಕೊಳ್ಳೋಣ. ಅದರ ಪರಿಣಾಮವೆಂದರೆ ಹಲವಾರು ವರ್ಷಗಳ ಹಿಂದೆ ದೇಶದಲ್ಲಿ ಏನಾಗಬೇಕಿತ್ತೊ ಅದು ವಿಳಂಬವಾಯಿತು. ನೀವು ನೋಡಿ, ಮಧ್ಯಮ ವರ್ಗವು ದೀರ್ಘಕಾಲದವರೆಗೆ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ, ಯಾರೂ ಅವರನ್ನು ನೋಡಿಕೊಳ್ಳಲಿಲ್ಲ. ತನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ ಮತ್ತು ಎಲ್ಲವನ್ನೂ ತಾನೇ ಮಾಡಬೇಕೆಂದು ಅವರು ತಮ್ಮ ಅದೃಷ್ಟಕ್ಕೆ ಹೊರಳಿದರು. ಬಡವರು ತಮ್ಮ ಸಂಪೂರ್ಣ ಶಕ್ತಿ ವ್ಯಯಿಸುತ್ತಿದ್ದರು. ಆದರೆ ನಮ್ಮ ಎನ್ ಡಿಎ ಸರ್ಕಾರ ಮಧ್ಯಮ ವರ್ಗದವರ ಪ್ರಾಮಾಣಿಕತೆ ಗುರುತಿಸಿ, ಅವರಿಗೆ ಭದ್ರತೆ ಒದಗಿಸಿದೆ. ಇಂದು ನಮ್ಮ ಕಷ್ಟಪಟ್ಟು ದುಡಿಯುವ ಮಧ್ಯಮ ವರ್ಗ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಸರ್ಕಾರದ ವಿವಿಧ ಯೋಜನೆಗಳಿಂದ ಮಧ್ಯಮ ವರ್ಗದವರು ಎಷ್ಟು ಪ್ರಯೋಜನ ಪಡೆದಿದ್ದಾರೆ ಎಂಬುದಕ್ಕೆ ನಾನು ಉದಾಹರಣೆ ನೀಡುತ್ತೇನೆ. ನಾನು ಜಿಬಿ ಡೇಟಾ ಉಲ್ಲೇಖಿಸುತ್ತಿದ್ದೇನೆ, ಇಂದು ಯುಗ ಬದಲಾಗಿದೆ. ಇದು ಆನ್‌ಲೈನ್ ಜಾಗತಿಕ ಯುಗ. ಇಂದು ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಫೋನ್ ಇದೆ, ಕೆಲವರ ಜೇಬು ಹರಿದರೂ ಮೊಬೈಲ್ ಇರುತ್ತದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಜಿಬಿ ಡೇಟಾದ ಬೆಲೆ 2014ಕ್ಕಿಂತ ಮೊದಲು 250 ರೂ. ಇತ್ತು. ಇಂದು ಕೇವಲ 10 ರೂ.ಗೆ ಸಿಗುತ್ತಿದೆ. ನಮ್ಮ ದೇಶದ ಒಬ್ಬ ನಾಗರಿಕ ಸರಾಸರಿ 20 ಜಿಬಿ ಡೇಟಾ ಬಳಸುತ್ತಾನೆ. ನಾನು ಆ ಲೆಕ್ಕಾಚಾರವನ್ನು ಅನ್ವಯಿಸಿದರೆ, ಒಬ್ಬ ವ್ಯಕ್ತಿಯು ವಾರ್ಷಿಕ ಸರಾಸರಿ. 5,000 ರೂ. ಉಳಿತಾಯ ಮಾಡುತ್ತಿದ್ದಾನೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಜನೌಷಧಿ ಮಳಿಗೆಗಳು ಇಂದು ದೇಶಾದ್ಯಂತ ಆಕರ್ಷಣೆ ಗಳಿಸಿವೆ. ಮಧುಮೇಹದಿಂದ ಬಳಲುತ್ತಿರುವ ಮಧ್ಯಮ ವರ್ಗದ ಕುಟುಂಬದ ಹಿರಿಯ ನಾಗರಿಕರು ಔಷಧಿಗಳಿಗೆ ಪ್ರತಿ ತಿಂಗಳು ಸುಮಾರು 2-3 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ 100 ರೂಪಾಯಿ ಬೆಲೆಯ ಔಷಧಗಳು ಜನೌಷಧಿ ಕೇಂದ್ರಗಳಲ್ಲಿ 10-20 ರೂಪಾಯಿಗೆ ಸಿಗುತ್ತವೆ. ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಅಗ್ಗದ ಔಷಧಿಗಳಿಂದ ಇಂದು ಮಧ್ಯಮ ವರ್ಗದ ಕುಟುಂಬಗಳು 20,000 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬದವರು ಸ್ವಂತ ಮನೆ ಹೊಂದುವುದು ಕನಸಾಗಿದ್ದು, ನಗರ ಪ್ರದೇಶಗಳಲ್ಲಿ ಗೃಹ ಸಾಲಕ್ಕೆ ವ್ಯವಸ್ಥೆ ಮಾಡಿದ್ದೇವೆ. ರೇರಾ ಜಾರಿಯೊಂದಿಗೆ, ನಾವು ಕಷ್ಟಪಟ್ಟು ದುಡಿದ ಹಣವನ್ನು ಕೆಲವು ಯೋಜನೆಗಳಲ್ಲಿ ಕೆಲವು ಅಂಶಗಳಿಂದ ಅನಗತ್ಯವಾಗಿ ವರ್ಷಗಳವರೆಗೆ ನಿಲುಗಡೆ ಮಾಡುತ್ತಿದ್ದ ಮಧ್ಯಮ ವರ್ಗದ ಕುಟುಂಬಗಳನ್ನು ನಾವು ಮುಕ್ತಗೊಳಿಸಿದ್ದೇವೆ. ಇದು ಅವರಲ್ಲಿ ಹೊಸ ನಂಬಿಕೆ ಹುಟ್ಟುಹಾಕಿದೆ. ಈಗ ಅವರು ತಮ್ಮ ಸ್ವಂತ ಮನೆ ನಿರ್ಮಿಸಲು ಸುಲಭವಾಗಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಪ್ರತಿ ಮಧ್ಯಮ ವರ್ಗದ ಕುಟುಂಬವು ಅವರ ಮನಸ್ಸಿನಲ್ಲಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ, ಅವರ ಉನ್ನತ ಶಿಕ್ಷಣಕ್ಕಾಗಿ ಒಂದು ಯೋಜನೆ ಹೊಂದಿರುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ವೃತ್ತಿಪರ ಕಾಲೇಜುಗಳ ಸಂಖ್ಯೆ ಮತ್ತು ಸೀಟುಗಳ ಹೆಚ್ಚಳವು ಮಧ್ಯಮ ವರ್ಗದ ಆಕಾಂಕ್ಷೆಗಳನ್ನು ಪರಿಹರಿಸಿದೆ. ತನ್ನ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂದು ಅವರು ನಂಬಲು ಪ್ರಾರಂಭಿಸಿದ್ದಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
ದೇಶ ಮುನ್ನಡೆಯಬೇಕಾದರೆ ಭಾರತವನ್ನು ಆಧುನಿಕತೆಯತ್ತ ಕೊಂಡೊಯ್ಯದೆ ಬೇರೆ ದಾರಿಯಿಲ್ಲ. ಇದು ಸಮಕಾಲೀನ ಬೇಡಿಕೆಯಾಗಿದೆ. ನಾವು ಇನ್ನು ಮುಂದೆ ಸಮಯ ವ್ಯರ್ಥ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಮೂಲಸೌಕರ್ಯಕ್ಕೆ ಹೆಚ್ಚಿನ ಗಮನ ನೀಡಿದ್ದೇವೆ. ಗುಲಾಮಗಿರಿಯ ಅವಧಿಗಿಂತ ಮುಂಚೆಯೇ ಭಾರತವು ಮೂಲಸೌಕರ್ಯ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ ಎಂಬ ಅಂಶವನ್ನು ನೀವು ಒಪ್ಪಿಕೊಳ್ಳಬೇಕು. ಗುಲಾಮಗಿರಿಯ ಅವಧಿಯಲ್ಲಿ ಎಲ್ಲವೂ ನಾಶವಾಯಿತು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅದೇ ಕಾಲಘಟ್ಟಕ್ಕೆ ಮರಳುತ್ತದೆ ಎಂಬ ನಿರೀಕ್ಷೆಯಿತ್ತು, ಆದರೆ ಆ ಕಾಲವೂ ಕಳೆದು ಹೋಗಿತ್ತು. ಆಗಬೇಕಾದ್ದನ್ನು, ಆಗಬೇಕಾದ ವೇಗವನ್ನು, ಆಗಬೇಕಾದ ಪ್ರಮಾಣದಲ್ಲಿ ನಾವು ಮಾಡಲಾಗಲಿಲ್ಲ. ಇಂದು ಈ ದಶಕದಲ್ಲಿ ಭಾರೀ ಬದಲಾವಣೆ ಕಾಣಬಹುದು. ರಸ್ತೆಗಳು, ಸಮುದ್ರ ಮಾರ್ಗಗಳು, ವ್ಯಾಪಾರ, ಜಲಮಾರ್ಗಗಳು, ಮೂಲಸೌಕರ್ಯಗಳ ರೂಪಾಂತರವು ಇಂದು ಪ್ರತಿಯೊಂದು ವಲಯದಲ್ಲೂ ಗೋಚರಿಸುತ್ತದೆ. ಹೆದ್ದಾರಿಗಳಲ್ಲಿ ದಾಖಲೆಯ ಹೂಡಿಕೆ ಮಾಡಲಾಗುತ್ತಿದೆ. ದೇಶದ ಹೊಸ ಪೀಳಿಗೆಯು ಈಗ ಭಾರತದಲ್ಲಿ ವಿಶಾಲವಾದ ರಸ್ತೆಗಳು, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ವೇಗಳನ್ನು ಅನುಭವಿಸುತ್ತಿದೆ. ಭಾರತದಲ್ಲಿ ಜಾಗತಿಕ ಗುಣಮಟ್ಟದ ಉತ್ತಮ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್ ವೇಗಳನ್ನು ಖಚಿತಪಡಿಸಿಕೊಳ್ಳಲು ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಹಿಂದೆ, ಬ್ರಿಟಿಷರ ಆಳ್ವಿಕೆಯಲ್ಲಿ ರಚಿಸಲಾದ ರೈಲ್ವೆ ಮೂಲಸೌಕರ್ಯದಿಂದ ನಾವು ಹೆಚ್ಚು ತೃಪ್ತರಾಗಿದ್ದೇವೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಬ್ರಿಟಿಷರು ಬಿಟ್ಟುಕೊಟ್ಟಿದ್ದರಲ್ಲಿ ನಾವು ಬದುಕುವುದನ್ನು ಮುಂದುವರಿಸಿದ್ದೇವೆ. ರೈಲ್ವೆಯ ಗುರುತು ಯಾವುದು? ಅತಿಯಾದ ಜನಸಂದಣಿ, ಅಪಘಾತಗಳು ಮತ್ತು ವಿಳಂಬಗಳು ಭಾರತೀಯ ರೈಲ್ವೆಯನ್ನು ವ್ಯಾಖ್ಯಾನಿಸುತ್ತವೆ. ವಿಳಂಬಗಳು ರೈಲ್ವೆಗೆ ಸಮಾನಾರ್ಥಕವಾಗಿದೆ. ಪ್ರತಿ ತಿಂಗಳು ರೈಲು ಅಪಘಾತಗಳು ಸಂಭವಿಸುತ್ತಿದ್ದ ಕಾಲವೊಂದಿತ್ತು. ಈಗ ಪರಿಸ್ಥಿತಿ ಏನು? ವಂದೇ ಭಾರತ್ ರೈಲುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರತಿಯೊಬ್ಬ ಸಂಸದರೂ ತಮ್ಮ ಕ್ಷೇತ್ರದಲ್ಲಿ ವಂದೇ ಭಾರತ್ ರೈಲಿಗೆ ಒತ್ತಾಯಿಸಿ ಪತ್ರ ಬರೆಯುತ್ತಾರೆ. ಇಂದು ರೈಲು ನಿಲ್ದಾಣಗಳು ಬದಲಾಗುತ್ತಿವೆ. ಇಂದು ವಿಮಾನ ನಿಲ್ದಾಣಗಳು ಬದಲಾಗುತ್ತಿವೆ. ದೇಶದಲ್ಲಿ 70 ವರ್ಷಗಳಲ್ಲಿ 70 ವಿಮಾನ ನಿಲ್ದಾಣಗಳಿದ್ದವು. ಕೇವಲ 9 ವರ್ಷಗಳಲ್ಲಿ 70 ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ. ದೇಶದಲ್ಲಿ ಜಲಮಾರ್ಗಗಳನ್ನೂ ಅಭಿವೃದ್ಧಿಪಡಿಸಲಾಗುತ್ತಿದೆ. ಇಂದು ಸಾರಿಗೆ ಜಲಮಾರ್ಗಗಳಲ್ಲಿ ನಡೆಯುತ್ತಿದೆ. ನಾವು ಆಧುನಿಕ ಮೂಲಸೌಕರ್ಯಕ್ಕೆ ಒತ್ತು ನೀಡುವ ಮೂಲಕ ದೇಶವು ಆಧುನಿಕತೆಯತ್ತ ಸಾಗುವಂತೆ ನಾವು ಸಹ ಮುನ್ನಡೆಯುತ್ತಿದ್ದೇವೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಕಳೆದ 4-5 ದಶಕಗಳಲ್ಲಿ ನನ್ನ ಸಾರ್ವಜನಿಕ ಜೀವನದಲ್ಲಿ, ನಾನು ದೇಶದ ಹಲವಾರು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನಾನು 4-5 ದಶಕಗಳನ್ನು ಹಳ್ಳಿಗಳಲ್ಲಿ ಕುಟುಂಬದ ಭಾಗವಾಗಿ ಕಳೆದಿದ್ದೇನೆ. ಪ್ರತಿಯೊಂದು ವರ್ಗದ ಕುಟುಂಬಗಳೊಂದಿಗೆ ಸಂವಹನ ನಡೆಸುವ ಅವಕಾಶ ನನಗೆ ಸಿಕ್ಕಿದೆ. ಆದ್ದರಿಂದ, ನನಗೆ ಭಾರತದ ಸಮಾಜದ ಪ್ರತಿಯೊಂದು ವರ್ಗಗಳ ಭಾವನೆಗಳ ಪರಿಚಯವಿದೆ. ನನ್ನ ಅನುಭವದ ಆಧಾರದ ಮೇಲೆ ಮತ್ತು ಅತ್ಯಂತ ಆತ್ಮವಿಶ್ವಾಸದಿಂದ ನಾನು ಹೇಳಬಲ್ಲೆ, ಭಾರತದ ಸಾಮಾನ್ಯ ಮನುಷ್ಯ ಸಕಾರಾತ್ಮಕತೆಯಿಂದ ತುಂಬಿದ್ದಾನೆ. ಸಕಾರಾತ್ಮಕತೆಯು ಅವನ ಸ್ವಭಾವ ಮತ್ತು ಅವನ ಸಂಸ್ಕೃತಿಯ ಭಾಗವಾಗಿದೆ. ಭಾರತೀಯ ಸಮಾಜವು ನಕಾರಾತ್ಮಕತೆಯನ್ನು ಸಹಿಸಿಕೊಳ್ಳುತ್ತದೆ, ಆದರೆ ಅದನ್ನು ಸ್ವೀಕರಿಸುವುದಿಲ್ಲ; ಅದು ಅದರ ಸ್ವಭಾವವಲ್ಲ. ಭಾರತೀಯ ಸಮುದಾಯದ ಸ್ವಭಾವವು ಹರ್ಷಚಿತ್ತದಿಂದ ಕೂಡಿದೆ, ಕನಸಿನ ಸಮಾಜವಾಗಿದೆ. ಇದು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸುವ ಸಮಾಜವಾಗಿದೆ. ಖಜಾನೆಯ ಬೆಂಚುಗಳಲ್ಲಿ ಕುಳಿತುಕೊಳ್ಳಲು ಮತ್ತೆ ಅವಕಾಶ ಸಿಗುತ್ತದೆ ಎಂಬ ಕನಸು ಹೊತ್ತು ಇಲ್ಲಿ ಕುಳಿತಿರುವವರು 50 ಬಾರಿ ಯೋಚಿಸಿ ತಮ್ಮ ಮಾರ್ಗವನ್ನು ಮರುಪರಿಶೀಲಿಸಬೇಕು ಎಂದು ನಾನು ಇಂದು ಹೇಳಲು ಬಯಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಧಾರ್ ಇಂದು ಡಿಜಿಟಲ್ ವಹಿವಾಟಿನ ಪ್ರಮುಖ ಭಾಗವಾಗಿದೆ. ನೀವು ಇದನ್ನು ಆಧಾರರಹಿತ ಎಂದು ಬಣ್ಣಿಸಿ ಟೀಕಿಸಿದ್ದೀರಿ. ಅದರ ಅನುಷ್ಠಾನವನ್ನು ವಿರೋಧಿಸಲು ನ್ಯಾಯಾಲಯಗಳು ಸಹ ಬಿಡಲಿಲ್ಲ. ಜಿಎಸ್‌ಟಿ ಬಗ್ಗೆ ಏನು ಹೇಳಿಲ್ಲ? ಆದರೆ ಇಂದು, ಭಾರತದ ಆರ್ಥಿಕತೆಯ ತಿರುವು ಮತ್ತು ಸಾಮಾನ್ಯರ ಜೀವನವನ್ನು ಸುಲಭಗೊಳಿಸುವಲ್ಲಿ ಜಿಎಸ್‌ಟಿ ದೊಡ್ಡ ಪಾತ್ರ ವಹಿಸಿದೆ. ಎಚ್‌ಎಎಲ್ ಅನ್ನು ಟೀಕಿಸಿದ ಮತ್ತು ಹಲವಾರು ಪ್ರಮುಖ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡ ಸಮಯವಿತ್ತು. ಇಂದು ಎಚ್‌ಎಎಲ್ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಕೇಂದ್ರವಾಗಿದೆ, ಅಲ್ಲಿ ತೇಜಸ್ ವಿಮಾನಗಳು ನೂರಾರು ಸಂಖ್ಯೆಯಲ್ಲಿ ತಯಾರಾಗುತ್ತಿವೆ. ಇಂದು ಭಾರತೀಯ ಸೇನೆ ಎಚ್‌ಎಎಲ್‌ಗೆ ಸಾವಿರಾರು ಕೋಟಿ ರೂಪಾಯಿಗಳ ಆರ್ಡರ್ ನೀಡಿದೆ. ಭಾರತದ ರಕ್ಷಣಾ ಉದ್ಯಮವು ರೋಮಾಂಚಕವಾಗಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಒಂದು ಕಾಲದಲ್ಲಿ ಖಜಾನೆಯ ಬೆಂಚುಗಳಲ್ಲಿ ಕೂರುತ್ತಿದ್ದವರು ಕಳಚಿಕೊಂಡ ನಂತರವೂ ವಿಫಲರಾಗಿದ್ದಾರೆ ಎಂದು ಸಮಯ ಸಾಬೀತುಪಡಿಸಿದೆ ಎಂಬುದು ನಿಮಗೆ ಸಂಪೂರ್ಣವಾಗಿ ತಿಳಿದಿದೆ. ಇಂದು ದೇಶ ವಿಶಿಷ್ಟವಾಗಿ ಯಶಸ್ಸು ಸಾಧಿಸುತ್ತಿದೆ. ಆದ್ದರಿಂದ ಹತಾಶೆಯಲ್ಲಿ ಮುಳುಗಿರುವ ಜನರು ತಂಪು ಮನಸ್ಸಿನಿಂದ ತಮ್ಮ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಜಮ್ಮು-ಕಾಶ್ಮೀರ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪ ಇತ್ತು. ಜಮ್ಮು-ಕಾಶ್ಮೀರಕ್ಕೆ ಇತ್ತೀಚೆಗೆ ಭೇಟಿ ನೀಡಿದವರು ಜಮ್ಮು-ಕಾಶ್ಮೀರಕ್ಕೆ ಮುಕ್ತವಾಗಿ ಭೇಟಿ ನೀಡಬಹುದು ಎಂದು ಕಂಡುಕೊಂಡಿರಬೇಕು.
ಗೌರವಾನ್ವಿತ ಸಭಾಧ್ಯಕ್ಷರೆ,
ಕಳೆದ ಶತಮಾನದ ಉತ್ತರಾರ್ಧದಲ್ಲಿ, ನಾನು ಜಮ್ಮು-ಕಾಶ್ಮೀರದಲ್ಲಿ ಯಾತ್ರೆ ಕೈಗೊಂಡಿದ್ದೆ, ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದಾಗಿ ಪ್ರತಿಜ್ಞೆ ಮಾಡಿದ್ದೆ. ಭಯೋತ್ಪಾದಕರು ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಯಾರಿಗಾದರೂ ಸವಾಲು ಹಾಕುವ ಪೋಸ್ಟರ್‌ಗಳನ್ನು ಹಾಕಿದ್ದರು. ಅದು ಜನವರಿ 24ರಂದು ನಾನು ಇದನ್ನು ಜಮ್ಮುವಿನಲ್ಲಿ ನಡೆದ ಸಭೆಯೊಂದರಲ್ಲಿ ಹೇಳಿದ್ದೆ. ನಾನು ಕಳೆದ ಶತಮಾನದ ಬಗ್ಗೆ ಮಾತನಾಡುತ್ತಿದ್ದೇನೆ. ತದನಂತರ ನಾನು ಯಾವುದೇ ಭದ್ರತೆಯಿಲ್ಲದೆ ಮತ್ತು ಬುಲೆಟ್ ಪ್ರೂಫ್ ಜಾಕೆಟ್ ಧರಿಸದೆ ಜನವರಿ 26ರಂದು ಬೆಳಿಗ್ಗೆ 11 ಗಂಟೆಗೆ ಲಾಲ್ ಚೌಕ್ ತಲುಪುತ್ತೇನೆ ಎಂದು ಭಯೋತ್ಪಾದಕರಿಗೆ ಸವಾಲು ಹಾಕಿದ್ದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದಾಗ, ನಾನು ಮಾಧ್ಯಮದವರಿಗೆ ಹೇಳಿದ್ದೇನೆ, ಸಾಮಾನ್ಯವಾಗಿ ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ಭಾರತದಲ್ಲಿ ತ್ರಿವರ್ಣ ಧ್ವಜ ಹಾರಿಸಿದಾಗ ಭಾರತೀಯ ಫಿರಂಗಿಗಳು ಸೆಲ್ಯೂಟ್ ಹೊಡೆಯುತ್ತವೆ. ನಾನು ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸುವಾಗ ಈ ಬಾರಿ ಶತ್ರು ದೇಶವೂ ಸೆಲ್ಯೂಟ್ ಹೊಡೆಯುತ್ತಿದೆ, ಗುಂಡುಗಳನ್ನು ಹಾರಿಸುತ್ತಿದೆ ಮತ್ತು ಬಂದೂಕು ಮತ್ತು ಬಾಂಬ್‌ಗಳನ್ನು ಸಿಡಿಸುತ್ತದೆ ಎಂದು ನಾನು ಹೇಳಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಜಮ್ಮು-ಕಾಶ್ಮೀರದಲ್ಲಿ ಇಂದು ಶಾಂತಿ ನೆಲೆಸಿದೆ. ನೀವು ಶಾಂತಿಯುತವಾಗಿ ನೂರಾರು ಸಂಖ್ಯೆಯಲ್ಲಿ ಅಲ್ಲಿಗೆ ಹೋಗಬಹುದು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರವು ಹಲವು ದಶಕಗಳ ನಂತರ ಹಲವಾರು ದಾಖಲೆಗಳನ್ನು ಮಾಡಿದೆ. ಇಂದು ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ ಆಚರಿಸಲಾಗುತ್ತಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಇಂದು ಜಮ್ಮು-ಕಾಶ್ಮೀರದ ಪ್ರತಿಯೊಂದು ಮನೆಯಲ್ಲೂ ‘ಹರ್ ಘರ್ ತಿರಂಗ’ದ ಯಶಸ್ವಿ ಕಾರ್ಯಕ್ರಮಗಳಿವೆ. ಜಮ್ಮು-ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಿದರೆ ಅಲ್ಲಿ ಶಾಂತಿ ಕದಡುತ್ತದೆ ಎಂಬ ಆತಂಕ ಕೆಲವರದ್ದು. ಕುತೂಹಲದ ಸಂಗತಿಯೆಂದರೆ, ಅದೇ ಜನರು ಅಲ್ಲಿಯ ತಿರಂಗಾ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಕೆಲವು ಪತ್ರಿಕೆಗಳಲ್ಲಿ ಯಾರೂ ಗಮನ ಹರಿಸದ ಸುದ್ದಿಗಳು ಬಂದಿದ್ದವು. ಈ ಜನರು ಟಿವಿಯಲ್ಲಿ ಪ್ರಚಾರ ಮಾಡಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಈ ಸುದ್ದಿ ಬಂದಿದೆ. ಅದೇ ಸಮಯದಲ್ಲಿ, ಹಲವಾರು ದಶಕಗಳ ನಂತರ ಸಿನಿಮಾ ಥಿಯೇಟರ್‌ಗಳು ಹೌಸ್ ಫುಲ್ ಆಗಿದ್ದವು ಮತ್ತು ಪ್ರತ್ಯೇಕತಾವಾದಿಗಳು ಎಲ್ಲಿಯೂ ಕಾಣಿಸಲಿಲ್ಲ. ಇದನ್ನು ಹಲವಾರು ವಿದೇಶಗಳು ಸಹ ಗಮನಿಸಿವೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಇದೀಗ ನಮ್ಮ ಸ್ನೇಹಿತ ಮತ್ತು ನಮ್ಮ ಗೌರವಾನ್ವಿತ ಸದಸ್ಯರು ಈಶಾನ್ಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಈಶಾನ್ಯಕ್ಕೆ ಒಮ್ಮೆ ಭೇಟಿ ನೀಡಿ ನಿಮ್ಮ ಯುಗದ ಈಶಾನ್ಯ ಮತ್ತು ಇಂದಿನ ಈಶಾನ್ಯ ನಡುವಿನ ವ್ಯತ್ಯಾಸ ನೋಡಬೇಕೆಂದು ನಾನು ಅವರನ್ನು ವಿನಂತಿಸುತ್ತೇನೆ. ಆಧುನಿಕ ವಿಶಾಲ ಹೆದ್ದಾರಿಗಳಿವೆ ಮತ್ತು ಆರಾಮದಾಯಕ ರೈಲು ಪ್ರಯಾಣವಿದೆ. ಈಶಾನ್ಯದ ಯಾವುದೇ ಮೂಲೆಗೆ ನೀವು ಆರಾಮವಾಗಿ ವಿಮಾನದಲ್ಲಿ ಹೋಗಬಹುದು. ನಾವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿರುವಾಗ, ಕಳೆದ 9 ವರ್ಷಗಳಲ್ಲಿ ಶಸ್ತ್ರಾಸ್ತ್ರ ಕೈಗೊತ್ತಿಕೊಂಡಿದ್ದ ಸುಮಾರು 7,500 ಜನರು ಶರಣಾಗಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಪ್ರತ್ಯೇಕತಾವಾದದ ಹಾದಿ ಬಿಟ್ಟು ಮುಖ್ಯವಾಹಿನಿಗೆ ಸೇರಿಕೊಂಡಿದ್ದಾರೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಇಂದು ತ್ರಿಪುರಾದಲ್ಲಿ ಲಕ್ಷಾಂತರ ಕುಟುಂಬಗಳು ಪಕ್ಕಾ ಮನೆಗಳನ್ನು ಪಡೆದಿವೆ. ಅವರ ಸಂತೋಷದಲ್ಲಿ ಪಾಲ್ಗೊಳ್ಳುವ ಅವಕಾಶ ನನಗಿತ್ತು. ನಾನು ತ್ರಿಪುರಾದಲ್ಲಿ ‘HIRA’ (ಹೈವೇಗಳು, ಐ-ವೇಸ್, ರೈಲ್ವೇಸ್ ಮತ್ತು ಏರ್ ವೇಸ್) ಯೋಜನೆಯ ಬಗ್ಗೆ ಮಾತನಾಡಿದ್ದೆ. ಇಂದು ತ್ರಿಪುರಾ ನಾಡಿನಲ್ಲಿ ಈ ‘ಹಿರಾ’ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ತ್ರಿಪುರಾ ಭಾರತದ ಅಭಿವೃದ್ಧಿ ಪಯಣದಲ್ಲಿ ತ್ವರಿತ ಗತಿಯಲ್ಲಿ ಪಾಲುದಾರನಾಗಿ ಮಾರ್ಪಟ್ಟಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ಸತ್ಯ ಕೇಳಲು ಸಹ ಸಾಕಷ್ಟು ಧೈರ್ಯ ಬೇಕು ಎಂದು ನನಗೆ ತಿಳಿದಿದೆ. ಸುಳ್ಳು ಮತ್ತು ಕೊಳಕು ಆರೋಪಗಳನ್ನು ಕೇಳಲು ಸಹ ಸಾಕಷ್ಟು ತಾಳ್ಮೆ ಬೇಕಾಗುತ್ತದೆ. ಕೊಳಕು ಆರೋಪಗಳನ್ನು ಕೇಳುವ ತಾಳ್ಮೆ ತೋರಿದ ಖಜಾನೆ ಪೀಠದಲ್ಲಿರುವ ಎಲ್ಲರಿಗೂ ನಾನು ಅಭಿನಂದಿಸುತ್ತೇನೆ. ಅವರು ಅಭಿನಂದನೆಗೆ ಅರ್ಹರು. ಆದರೆ ಸತ್ಯವನ್ನು ಕೇಳುವ ಛಲ ಇಲ್ಲದವರನ್ನು ಹತಾಶೆಯಲ್ಲಿ ಮುಳುಗಿಸುವುದನ್ನು ದೇಶ ನೋಡುತ್ತಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು, ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು, ಆದರೆ ಈ ದೇಶ ಅಜರಾಮರ. 2047ರಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತ ಮಾಡುವಲ್ಲಿ 100 ವರ್ಷಗಳ ಸ್ವಾತಂತ್ರ್ಯ ಆಚರಿಸಲು ಮುನ್ನಡೆಯೋಣ. ಕನಸಿನೊಂದಿಗೆ ಅನುಸರಿಸೋಣ, ಪೂರ್ಣ ಸಾಮರ್ಥ್ಯದೊಂದಿಗೆ ನಿರ್ಣಯದೊಂದಿಗೆ ಅನುಸರಿಸೋಣ. ಮತ್ತು ಪದೇಪದೆ ಗಾಂಧಿಯ ಹೆಸರು ಹೇಳಿಕೊಂಡು ರಾಜಕೀಯ ಲಾಭ ಗಳಿಸಲು ಬಯಸುವವರಿಗೆಲ್ಲ ಒಂದು ಬಾರಿ ಗಾಂಧಿಯನ್ನು ಓದಬೇಕೆಂಬುದು ನನ್ನ ವಿನಂತಿ. ಮಹಾತ್ಮ ಗಾಂಧೀಜಿ ಹೇಳಿದ್ದರು: ಇತರರ ಹಕ್ಕುಗಳ ರಕ್ಷಣೆ ನಿಮ್ಮ ಕರ್ತವ್ಯಗಳಲ್ಲಿ ಅಡಗಿದೆ. ಇಂದು ನಾವು ಕರ್ತವ್ಯ ಮತ್ತು ಹಕ್ಕುಗಳ ನಡುವಿನ ಹೋರಾಟವನ್ನು ನೋಡುತ್ತಿದ್ದೇವೆ. ದೇಶವು ಇಂತಹ ಅವಿವೇಕವನ್ನು ಬಹುಶಃ ಮೊದಲ ಬಾರಿಗೆ ನೋಡಿದೆ.
ಗೌರವಾನ್ವಿತ ಸಭಾಧ್ಯಕ್ಷರೆ,
ನಾನು ಮತ್ತೊಮ್ಮೆ ಗೌರವಾನ್ವಿತ ಅಧ್ಯಕ್ಷರನ್ನು ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ. ಇಂದು ದೇಶವು ಹೊಸ ಉತ್ಸಾಹ, ಹೊಸ ನಂಬಿಕೆ ಮತ್ತು ಹೊಸ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ.
ತುಂಬು ಧನ್ಯವಾದಗಳು!
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರು ಮಾಡಿರುವ ಭಾಷಣದ ಅಂದಾಜು ಇಂಗ್ಲೀಷ್ ಅನುವಾದ ಇದಾಗಿದೆ. ಅವರ ಮೂಲ ಭಾಷಣ ಹಿಂದಿ ಭಾಷೆಯಲ್ಲಿದೆ.
*****
Speaking in the Lok Sabha. https://t.co/Ikh7uniQoi
— Narendra Modi (@narendramodi) February 8, 2023
In her visionary address to both Houses, the Hon'ble President has given direction to the nation: PM @narendramodi pic.twitter.com/pfuFyNc5mu
— PMO India (@PMOIndia) February 8, 2023
The self-confidence of India's tribal communities have increased. pic.twitter.com/EaY38FQAYp
— PMO India (@PMOIndia) February 8, 2023
The country is overcoming challenges with the determination of 140 crore Indians. pic.twitter.com/HMiSXW45pB
— PMO India (@PMOIndia) February 8, 2023
आज पूरे विश्न में भारत को लेकर पॉजिटिविटी है, एक आशा है और भरोसा है। pic.twitter.com/YfkMF2PdTV
— PMO India (@PMOIndia) February 8, 2023
आज पूरी दुनिया भारत की ओर आशा भरी नजरों से देख रही है। pic.twitter.com/gswT4WQYuq
— PMO India (@PMOIndia) February 8, 2023
Today, India has a stable and decisive government. pic.twitter.com/uq95NClzGw
— PMO India (@PMOIndia) February 8, 2023
आज Reform out of Compulsion नहीं Out of Conviction हो रहे हैं। pic.twitter.com/zitLpDND5r
— PMO India (@PMOIndia) February 8, 2023
The years 2004 to 2014 were filled with scams. pic.twitter.com/t8Gv69rxKD
— PMO India (@PMOIndia) February 8, 2023
आज आत्मविश्वास से भरा हुआ देश अपने सपनों और संकल्पों के साथ चलने वाला है। pic.twitter.com/N4IZ6uo8tw
— PMO India (@PMOIndia) February 8, 2023
From 'Lost Decade' (under UPA) to now India's Decade. pic.twitter.com/z0UP1zlkyj
— PMO India (@PMOIndia) February 8, 2023
Constructive criticism is vital for a strong democracy. pic.twitter.com/Up7SZueFUu
— PMO India (@PMOIndia) February 8, 2023
Unfortunate that instead of constructive criticism, some people indulge in compulsive criticism. pic.twitter.com/4Z8TEEvsWy
— PMO India (@PMOIndia) February 8, 2023
The blessings of 140 crore Indians is my 'Suraksha Kavach'. pic.twitter.com/HX5tloJUm8
— PMO India (@PMOIndia) February 8, 2023
We have spared no efforts to strengthen India's Nari Shakti. pic.twitter.com/lpDS02cTgY
— PMO India (@PMOIndia) February 8, 2023
Our government has addressed the aspirations of the middle class.
— PMO India (@PMOIndia) February 8, 2023
We are honouring them for their honesty. pic.twitter.com/CgT0fjoDWA
भारत का सामान्य मानवी Positivity से भरा हुआ है। pic.twitter.com/5bFBmZ3DG7
— PMO India (@PMOIndia) February 8, 2023
वर्ष 2004 से 2014 के बीच यूपीए सरकार का दशक जहां Lost Decade के रूप में जाना जाएगा, वहीं इस दशक को लोग India's Decade बता रहे हैं। pic.twitter.com/scJyJ1VVft
— Narendra Modi (@narendramodi) February 8, 2023
140 करोड़ देशवासियों का आशीर्वाद मोदी का सबसे बड़ा सुरक्षा कवच है। pic.twitter.com/w06tMogWuf
— Narendra Modi (@narendramodi) February 8, 2023
देश के मध्यम वर्ग को लंबे समय तक उपेक्षित रखा गया, लेकिन हमारी सरकार ने उनकी ईमानदारी को पहचाना है। आज हमारा यह परिश्रमी वर्ग भारत को नई ऊंचाई पर ले जा रहा है। pic.twitter.com/h6Qw6aT4CG
— Narendra Modi (@narendramodi) February 8, 2023
जब मां सशक्त होती है तो पूरा परिवार सशक्त होता है, परिवार सशक्त होता है तो पूरा समाज सशक्त होता है और जब समाज सशक्त होता है तो पूरा देश सशक्त होता है। मुझे संतोष है कि माताओं, बहनों और बेटियों की सबसे ज्यादा सेवा करने का सौभाग्य हमारी सरकार को मिला है। pic.twitter.com/bUZFR2Zzll
— Narendra Modi (@narendramodi) February 8, 2023
The transformation in the Northeast is for everyone to see. pic.twitter.com/R4tWY20JOa
— Narendra Modi (@narendramodi) February 8, 2023
Highlighted how the situation in Jammu and Kashmir has changed for the betterment of the people. pic.twitter.com/zDRviSAdNS
— Narendra Modi (@narendramodi) February 8, 2023
Next generation infrastructure is absolutely essential, Our infra creation is fast and at a large scale. pic.twitter.com/8lq3PoYSdc
— Narendra Modi (@narendramodi) February 8, 2023
Across sectors, India’s progress is being lauded. pic.twitter.com/gadREWnoBN
— Narendra Modi (@narendramodi) February 9, 2023
In these times, India stands tall as a ray of hope and a bright spot. pic.twitter.com/8FKzr6bWSD
— Narendra Modi (@narendramodi) February 9, 2023
Criticism makes our democracy stronger but the Opposition cannot offer constructive criticism. Instead, they have compulsive critics who only level baseless allegations. pic.twitter.com/tZnWws28FN
— Narendra Modi (@narendramodi) February 9, 2023
देश में पहली बार उन कोटि-कोटि गरीबों को सरकार की गरीब कल्याण योजनाओं का सबसे अधिक लाभ मिला है, जिन्हें पहले की सरकारों ने दशकों तक उनके हाल पर छोड़े रखा। समाज के ऐसे वंचितों को वरीयता के साथ आगे ले जाना हमारी सरकार का संकल्प है। pic.twitter.com/TIFFgDMDvx
— Narendra Modi (@narendramodi) February 9, 2023