ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರು. “ರಾಷ್ಟ್ರಪತಿ ಭವನ್: ರಾಜ್ ಟು ಸ್ವರಾಜ್’ ಎಂಬ ಕೃತಿಯನ್ನು ಬಿಡುಗಡೆ ಮಾಡಿದ ಪ್ರಧಾನಿ, ಅದರ ಮೊದಲ ಪ್ರತಿಯನ್ನು ರಾಷ್ಟ್ರಪತಿಯವರಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಜನ್ಮ ದಿನದ ಸಂದರ್ಭದಲ್ಲಿ ರಾಷ್ಟ್ರಪತಿ ಶ್ರೀ. ಪ್ರಣಬ್ ಮುಖರ್ಜಿ ಅವರಿಗೆ ಶುಭ ಕೋರಿದರು.
ತಾವು ಪ್ರಧಾನಮಂತ್ರಿ ಹುದ್ದೆಯನ್ನು ವಹಿಸಿಕೊಂಡ ಆರಂಭಿಕ ದಿನಗಳಲ್ಲಿ ರಾಷ್ಟ್ರಪತಿ ಮುಖರ್ಜಿ ಅವರು ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದ ಅವರು, ರಾಷ್ಟ್ರಪತಿ ಮುಖರ್ಜಿ ಅವರ ದೀರ್ಘಕಾಲದ ಅನುಭವದ ಕೊಡುಗೆಯನ್ನು ದೇಶ ಮುಂದೆಯೂ ಪಡೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಕೆಲಸ ಮಾಡುವ ಮತ್ತು ಅವರಿಂದ ಕಲಿಯುವ ಅವಕಾಶ ದೊರೆತದ್ದು, ತಮ್ಮ ಸುದೈವ ಎಂದು ಪ್ರಧಾನಿ ಹೇಳಿದರು.
ಇಂದು ಬಿಡುಗಡೆಯಾದ ಮೂರು ಪುಸ್ತಕಗಳು ರಾಷ್ಟ್ರಪತಿ ಭವನದ ಇತಿಹಾಸ ಮತ್ತು ಅದರ ನಿವಾಸಿಗಳ ಜೀವನ ಮತ್ತು ಚಟುವಟಿಕೆಗಳ ವಿವಿಧ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಹೇಳಿದರು.
AKT/SH
Attended a book release programme at Rashtrapati Bhavan & released the book 'Rashtrapati Bhavan: From Raj to Swaraj' https://t.co/xcA4844I9q pic.twitter.com/0hnBmCQhbl
— Narendra Modi (@narendramodi) December 11, 2016