ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆಯ್ದ ಭಾಷಣಗಳ ನಾಲ್ಕನೇ ಸಂಪುಟವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೊರೆತ ಮಾರ್ಗದರ್ಶನ ತಮಗೆ ಅಪಾರವಾಗಿ ನೆರವಾಯಿತು ಎಂದು ಹೇಳಿದರು. ಅವರೊಂದಿಗೆ ಕೆಲಸ ಮಾಡಿದವರೆಲ್ಲರೂ ಇದೇ ರೀತಿಯ ಭಾವನೆ ಹೊಂದಿದ್ದಾರೆ ಎಂದು ತಾವು ಖಚಿತವಾಗಿ ಹೇಳುವುದಾಗಿ ತಿಳಿಸಿದರು.
ಪ್ರಣಬ್ ಮುಖರ್ಜಿ ಅವರು ಜ್ಞಾನದ ಗಣಿ ಮತ್ತು ಅಷ್ಟೇ ಸರಳ ಎಂದು ಹೇಳಿದರು. ತಾವು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಅಧಿಕೃತ ವಿಚಾರಗಳ ಬಗ್ಗೆ ಚರ್ಚಿಸಿದಾಗಲೆಲ್ಲಾ, ರಾಷ್ಟ್ರಪತಿಯವರು ತಮಗೆ ಮಾರ್ಗದರ್ಶನ ಮಾಡಿದ್ದಾರೆ ಮತ್ತು ರಚನಾತ್ಮಕವಾದ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ಪ್ರಣಬ್ ಮುಖರ್ಜಿ ಅವರ ಆಡಳಿತದಲ್ಲಿ ರಾಷ್ಟ್ರಪತಿ ಭವನ ‘ಲೋಕ ಭವನ’ವಾಗಿತ್ತು ಎಂದೂ ಪ್ರಧಾನಿ ತಿಳಿಸಿದರು. ಐತಿಹಾಸಿಕವಾದ ದಸ್ತಾವೇಜುಗಳ ಗಣಿಯೇ ಅವರ ಅಧಿಕಾರಾವಧಿಯಲ್ಲಿ ಹೊರಬಂದವು ಎಂದು ಪ್ರಧಾನಮಂತ್ರಿ ಹೇಳಿದರು. ಈ ಪ್ರಯತ್ನಕ್ಕಾಗಿ ರಾಷ್ಟ್ರಪತಿಯವರ ತಂಡವನ್ನೂ ಶ್ಲಾಘಿಸಿದರು.
***
AKT/SH
Whenever I would discuss official matters with President Pranab Mukherjee he would guide me & offer constructive feedback: PM @narendramodi
— PMO India (@PMOIndia) July 24, 2017
President Pranab Mukherjee is extremely knowledgable and extremely simple: PM @narendramodi
— PMO India (@PMOIndia) July 24, 2017
The guidance I received from President Pranab Mukherjee will help me immensely. I am sure those who worked with him feel the same: PM
— PMO India (@PMOIndia) July 24, 2017
Under President Pranab Mukherjee, Rashtrapati Bhavan became a 'Lok Bhavan' : PM @narendramodi
— PMO India (@PMOIndia) July 24, 2017
Released Volume 4 of Selected Speeches of President Pranab Mukherjee. https://t.co/9ClaUQr4eZ @RashtrapatiBhvn
— Narendra Modi (@narendramodi) July 24, 2017
Pranab Da made Rashtrapati Bhavan into a ‘Lok Bhavan.’ His knowledge & simplicity are endearing and his guidance has benefited us immensely.
— Narendra Modi (@narendramodi) July 24, 2017