Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ರಾಷ್ಟ್ರಪತಿ ಪ್ರಣಬ್ ಮುಖರ್ಜಿ – ಎ ಸ್ಟೇಟ್ಸ್ ಮನ್’ ಹೆಸರಿನ ಸಚಿತ್ರ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಮಂತ್ರಿ

‘ರಾಷ್ಟ್ರಪತಿ ಪ್ರಣಬ್ ಮುಖರ್ಜಿ –  ಎ ಸ್ಟೇಟ್ಸ್ ಮನ್’ ಹೆಸರಿನ ಸಚಿತ್ರ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಮಂತ್ರಿ

‘ರಾಷ್ಟ್ರಪತಿ ಪ್ರಣಬ್ ಮುಖರ್ಜಿ –  ಎ ಸ್ಟೇಟ್ಸ್ ಮನ್’ ಹೆಸರಿನ ಸಚಿತ್ರ ಪುಸ್ತಕ ಬಿಡುಗಡೆ ಮಾಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು, ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ‘ರಾಷ್ಟ್ರಪತಿ ಪ್ರಣಬ್ ಮುಖರ್ಜಿ – ಎ ಸ್ಟೇಟ್ಸ್ ಮನ್’ ಹೆಸರಿನ ಸಚಿತ್ರ ಪುಸ್ತಕವನ್ನು ಬಿಡುಗಡೆ ಮಾಡಿದರು. ಅವರು ರಾಷ್ಟ್ರಪತಿಯವರಿಗೆ ಪ್ರಥಮ ಪ್ರತಿಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ತಮ್ಮ ಅಭಿಪ್ರಾಯದಲ್ಲಿ ಸಮಾಜದಲ್ಲಿ ನಾವು ಇತಿಹಾಸದ ಬಗ್ಗೆ ಹೆಚ್ಚು ಎಚ್ಚರದಿಂದ ಇರಬೇಕು ಮತ್ತು ನಮ್ಮ ಇತಿಹಾಸದ ಅಂಶವನ್ನು ಇನ್ನೂ ಉತ್ತಮವಾಗಿ ಸಂರಕ್ಷಿಸಬೇಕು ಎಂದರು.

ರಾಷ್ಟ್ರಪತಿ ಹುದ್ದೆ ಶಿಷ್ಟಾಚಾರಕ್ಕಿಂತ ಹೆಚ್ಚು ಮಿಗಿಲಾದ್ದು. ಈ ಪುಸ್ತಕದಲ್ಲಿನ ಚಿತ್ರಗಳ ಮೂಲಕ, ನಾವು ನಮ್ಮ ರಾಷ್ಟ್ರಪತಿಯವರ ಮಾನವೀಯತೆಯನ್ನು ಕಾಣಬಹುದು ಮತ್ತು ಅವರ ಬಗ್ಗೆ ನಾವು ಹೆಮ್ಮೆ ಪಡಬಹುದು ಎಂದು ಪ್ರಧಾನಿ ಹೇಳಿದರು.

ಮಹಾತ್ಮಾ ಗಾಂಧಿ ಅವರ ಎರಡು ಚಿತ್ರಗಳಲ್ಲಿ ಒಂದರಲ್ಲಿ ಅವರು ಕಸಪೊರಕೆಯೊಂದಿಗಿದ್ದರೆ, ಮತ್ತೊಂದರಲ್ಲಿ ಸೂಕ್ಷ್ಮ ದರ್ಶಕದಲ್ಲಿ ಏನನ್ನೋ ನೋಡುತ್ತಿದ್ದಾರೆ. ಇದು ಎಷ್ಟು ವಿಭಿನ್ನ ವ್ಯಕ್ತಿತ್ವ ಎಂಬುದನ್ನು ತೋರಿಸುತ್ತದೆ ಎಂದರು.

ವಾರ್ತಾ ಪತ್ರಿಕೆಗಳು ನಾಯಕರ ಕೆಲವು ಅಂಶಗಳನ್ನು ತೋರಿಸುತ್ತವೆ, ಆದರೆ, ಒಬ್ಬ ನಾಯಕನಿಗೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದಕ್ಕಿಂತ ಹೆಚ್ಚು ಅಂಶಗಳಿರುತ್ತವೆ ಎಂದು ಪ್ರಧಾನಿ ಹೇಳಿದರು.

ಶ್ರೀ. ಪ್ರಣಬ್ ಮುಖರ್ಜಿ ಅವರೊಂದಿಗೆ ಕೆಲಸ ಮಾಡುವ ಗೌರವ ತಮಗೆ ದೊರಕಿದೆ ಎಂದು ಪ್ರಧಾನಿ ಹೇಳಿದರು. ತಮ್ಮ ಅನುಭವ ಮೆಲುಕು ಹಾಕಿದ ಪ್ರಧಾನಮಂತ್ರಿ, ತಮಗೆ ಹಲವು ಬಾರಿ, ವಿಭಿನ್ನ ಸಿದ್ಧಾಂತದ ನಾಯಕರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಕೆಲಸ ಮಾಡಿದ್ದಾಗಿ ತಿಳಿಸಿದರು. ತಾವು ದೆಹಲಿಗೆ ಬಂದಿದ್ದನ್ನು ಎಂದಿಗೂ ಮರೆಯುವುದಿಲ್ಲ ಎಂದ ಅವರು, ಅಲ್ಲಿ ತಮಗೆ ಪ್ರಣಬ್ ದಾ ಅವರಂಥ ನಾಯಕರೊಬ್ಬರು ದೊರಕಿದರೆಂದರು. ಪ್ರಣಬ್ ಮುಖರ್ಜಿ ಅವರು ತಮಗೆ ಪಿತೃ ಸ್ವರೂಪಿಯಾಗಿ ಮಾರ್ಗದರ್ಶನ ಮಾಡಿದರೆಂದು ತಿಳಿಸಿದರು. ಈಗಲೂ ಪ್ರಧಾನಿಯವರು ತಮಗೆ ಸಾಕಷ್ಟು ವಿಶ್ರಾಂತಿ ಪಡೆಯುವಂತೆ ಮತ್ತು ತಮ್ಮ ಆರೋಗ್ಯದ ಕಡೆ ಗಮನ ಹರಿಸುವಂತೆ ಹೇಳುತ್ತಾರೆ ಎಂದು ತಿಳಿಸಿದರು.

***

AKT/AK