ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದರು. ಸದನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಷ್ಟ್ರಪತಿಯವರ ಭಾಷಣವು ಭಾರತದ ಸಾಧನೆಗಳು, ಭಾರತದಿಂದ ಜಾಗತಿಕ ನಿರೀಕ್ಷೆಗಳು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಶ್ರೀಸಾಮಾನ್ಯನ ನಂಬಿಕೆ ಒಳಗೊಂಡಿದೆ ಎಂದು ಹೇಳಿದರು. ರಾಷ್ಟ್ರಪತಿಯವರ ಭಾಷಣ ಸ್ಪೂರ್ತಿದಾಯಕವಾಗಿದೆ, ಪ್ರಭಾವಶಾಲಿಯಾಗಿದೆ ಮತ್ತು ಭವಿಷ್ಯದ ಕೆಲಸಗಳಿಗೆ ಮಾರ್ಗದರ್ಶನ ನೀಡಿದೆ ಎಂದು ಅವರು ಹೇಳಿದರು. ಅವರು ರಾಷ್ಟ್ರಪತಿಯವರ ಭಾಷಣಕ್ಕೆ ಕೃತಜ್ಞತೆ ಸಲ್ಲಿಸಿದರು.
70 ಕ್ಕೂ ಹೆಚ್ಚು ಗೌರವಾನ್ವಿತ ಸಂಸದರು ತಮ್ಮ ಅಮೂಲ್ಯವಾದ ಅಭಿಪ್ರಾಯಗಳಿಂದ ವಂದನಾ ನಿರ್ಣಯವನ್ನು ಪುಷ್ಟೀಕರಿಸಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಎರಡೂ ಕಡೆಯಿಂದ ಚರ್ಚೆಗಳು ನಡೆದವು. ಪ್ರತಿಯೊಬ್ಬರೂ ತಮ್ಮ ತಿಳುವಳಿಕೆಯ ಆಧಾರದ ಮೇಲೆ ರಾಷ್ಟ್ರಪತಿಯವರ ಭಾಷಣವನ್ನು ವ್ಯಾಖ್ಯಾನಿಸಿದ್ದಾರೆ ಎಂದು ಅವರು ಹೇಳಿದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಬಗ್ಗೆ ಬಹಳಷ್ಟು ಹೇಳಲಾಗಿದೆ ಮತ್ತು ಅದರಲ್ಲಿನ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ತಮಗೆ ಕಷ್ಟವಾಯಿತು ಎಂದು ಅವರು ಹೇಳಿದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದ್ದು, ಅದಕ್ಕಾಗಿಯೇ ದೇಶವು ನಮಗೆ ಸೇವೆ ಮಾಡುವ ಅವಕಾಶವನ್ನು ನೀಡಿದೆ ಎಂದು ಅವರು ಒತ್ತಿ ಹೇಳಿದರು.
2014 ರಿಂದ ನಿರಂತರವಾಗಿ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದ್ದಕ್ಕಾಗಿ ಭಾರತದ ಜನರಿಗೆ ಧನ್ಯವಾದ ಅರ್ಪಿಸಿದ ಶ್ರೀ ಮೋದಿ, ಇದು ನಮ್ಮ ಅಭಿವೃದ್ಧಿಯ ಮಾದರಿಗೆ ಸಾಕ್ಷಿಯಾಗಿದೆ, ಇದನ್ನು ಜನರು ಪರೀಕ್ಷಿಸಿದ್ದಾರೆ, ಅರ್ಥಮಾಡಿಕೊಂಡಿದ್ದಾರೆ ಮತ್ತು ಬೆಂಬಲಿಸಿದ್ದಾರೆ. ‘ನೇಷನ್ ಫಸ್ಟ್’ ಎಂಬ ಪದಗುಚ್ಛವು ತಮ್ಮ ಅಭಿವೃದ್ಧಿಯ ಮಾದರಿಯನ್ನು ಸೂಚಿಸುತ್ತದೆ ಮತ್ತು ಇದು ಸರ್ಕಾರದ ನೀತಿಗಳು, ಯೋಜನೆಗಳು ಮತ್ತು ಕ್ರಮಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದರು. ಸ್ವಾತಂತ್ರ್ಯದ ನಂತರ 5-6 ದಶಕಗಳ ಸುದೀರ್ಘ ಅಂತರದ ನಂತರ ಪರ್ಯಾಯ ಮಾದರಿಯ ಆಡಳಿತದ ಅಗತ್ಯವನ್ನು ಗಮನಿಸಿದ ಶ್ರೀ ಮೋದಿ, 2014 ರಿಂದ ದೇಶವು ಓಲೈಕೆಯ (ತುಷ್ಟಿಕರಣ) ಬದಲಿಗೆ ತೃಪ್ತಿಯ (ಸಂತುಷ್ಟಿಕರಣ) ಅಭಿವೃದ್ಧಿಯ ಹೊಸ ಮಾದರಿಯನ್ನು ನೋಡುವ ಅವಕಾಶವನ್ನು ಪಡೆದುಕೊಂಡಿದೆ ಎಂದು ಹೇಳಿದರು.
“ಭಾರತದಲ್ಲಿ ಸಂಪನ್ಮೂಲಗಳ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಇದು ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದೆ” ಎಂದು ಪ್ರಧಾನಿ ಹೇಳಿದರು. ಭಾರತದ ಸಮಯವನ್ನು ವ್ಯರ್ಥ ಮಾಡದೆ ರಾಷ್ಟ್ರದ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು. ಆದ್ದರಿಂದ, ನಾವು ಸಂಪೂರ್ಣತಾ (ಸ್ಯಾಚುರೇಶನ್) ವಿಧಾನವನ್ನು ಅಳವಡಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು. ಯೋಜನೆಯ ನಿಜವಾದ ಫಲಾನುಭವಿಗಳಿಗೆ ಶೇ.100 ರಷ್ಟು ಲಾಭವನ್ನು ಖಚಿತಪಡಿಸುವುದು ಈ ವಿಧಾನದ ಹಿಂದಿನ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಕಳೆದ ದಶಕದಲ್ಲಿ “ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್”ನ ನಿಜವಾದ ಮನೋಭಾವವನ್ನು ಹೇಗೆ ವಾಸ್ತವದಲ್ಲಿ ಅಳವಡಿಸಲಾಗಿದೆ ಎಂಬುದನ್ನು ಎತ್ತಿತೋರಿಸಿದ ಶ್ರೀ ಮೋದಿ, ಪ್ರಯತ್ನಗಳು ಅಭಿವೃದ್ಧಿ ಮತ್ತು ಪ್ರಗತಿಯ ರೂಪದಲ್ಲಿ ಫಲ ನೀಡಿರುವುದರಿಂದ ಇದು ಈಗ ಸ್ಪಷ್ಟವಾಗಿದೆ ಎಂದು ಹೇಳಿದರು. ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ ನಮ್ಮ ಆಡಳಿತದ ಮುಖ್ಯ ಮಂತ್ರವಾಗಿದೆ ಎಂದು ಅವರು ಹೇಳಿದರು. ಬಡವರು ಮತ್ತು ಬುಡಕಟ್ಟು ಜನಾಂಗದವರ ಘನತೆ ಮತ್ತು ಭದ್ರತೆಯನ್ನು ಹೆಚ್ಚಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆಯನ್ನು ಬಲಪಡಿಸುವ ಮೂಲಕ ಸರ್ಕಾರವು ತನ್ನ ಬದ್ಧತೆಯನ್ನು ತೋರಿಸಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ಇಂದಿನ ದಿನಗಳಲ್ಲಿ ಜಾತೀಯತೆಯ ವಿಷವನ್ನು ಹರಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ ಪ್ರಧಾನಿ, ಕಳೆದ ಮೂರು ದಶಕಗಳಿಂದ ಉಭಯ ಸದನಗಳ ವಿವಿಧ ಪಕ್ಷಗಳ ಒಬಿಸಿ ಸಂಸದರು ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದ್ದರು ಎಂದು ನೆನಪಿಸಿದರು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ತಮ್ಮ ಸರ್ಕಾರ ಎಂದು ಅವರು ಹೇಳಿದರು. 140 ಕೋಟಿ ಭಾರತೀಯರನ್ನು ಆರಾಧಿಸುವ ತಮ್ಮ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಗೌರವ ಮತ್ತು ಘನತೆಯು ಅಷ್ಟೇ ಮುಖ್ಯವಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಮೀಸಲಾತಿಯ ಸಮಸ್ಯೆ ಉದ್ಭವಿಸಿದಾಗಲೆಲ್ಲಾ ಸಮಸ್ಯೆಯನ್ನು ಪರಿಹರಿಸಲು ದೃಢವಾದ ಪ್ರಯತ್ನಗಳು ನಡೆದಿಲ್ಲ ಎಂದು ಶ್ರೀ ಮೋದಿ ಹೇಳಿದರು. ಪ್ರತಿ ಬಾರಿಯೂ ದೇಶವನ್ನು ವಿಭಜಿಸುವ, ಉದ್ವಿಗ್ನತೆ ಸೃಷ್ಟಿಸುವ ಮತ್ತು ಪರಸ್ಪರ ದ್ವೇಷವನ್ನು ಹೆಚ್ಚಿಸುವ ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು ಎಂದು ಹೇಳಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಇದೇ ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು ಎಂದು ಒತ್ತಿ ಹೇಳಿದರು. ತಮ್ಮ ಸರ್ಕಾರವು ಮೊದಲ ಬಾರಿಗೆ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮಂತ್ರದಿಂದ ಪ್ರೇರಿತವಾದ ಮಾದರಿಯನ್ನು ಪರಿಚಯಿಸಿತು, ಇದರಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಯಾವುದೇ ಉದ್ವಿಗ್ನತೆ ಇಲ್ಲದೆ ಸುಮಾರು ಶೇ.10 ಮೀಸಲಾತಿಯನ್ನು ಒದಗಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಈ ನಿರ್ಧಾರವನ್ನು ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಸಮುದಾಯಗಳು ಸ್ವಾಗತಿಸಿದ್ದು, ಯಾರೂ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ತತ್ವವನ್ನು ಆಧರಿಸಿದ ಅನುಷ್ಠಾನ ವಿಧಾನವನ್ನು ಆರೋಗ್ಯಕರ ಮತ್ತು ಶಾಂತಿಯುತ ರೀತಿಯಲ್ಲಿ ಜಾರಿಗೊಳಿಸಲಾಗಿದೆ, ಇದು ದೇಶಾದ್ಯಂತ ಈ ನಿರ್ಧಾರವನ್ನು ಅಂಗೀಕರಿಸಲು ಕಾರಣವಾಯಿತು ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ದಿವ್ಯಾಂಗರು ಅಥವಾ ವಿಶೇಷಚೇತನರು ತಮಗೆ ಅರ್ಹವಾದ ಗಮನವನ್ನು ಪಡೆದಿರಲಿಲ್ಲ ಎಂದು ಪ್ರಧಾನಿ ಎತ್ತಿ ತೋರಿಸಿದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ಮಂತ್ರದಡಿಯಲ್ಲಿ ತಮ್ಮ ಸರ್ಕಾರವು ವಿಶೇಷಚೇತನರ ಮೀಸಲಾತಿಯನ್ನು ಹೆಚ್ಚಿಸಿದೆ ಮತ್ತು ಅವರಿಗೆ ಸೌಲಭ್ಯಗಳನ್ನು ಒದಗಿಸಲು ಮಿಷನ್ ಮೋಡ್ ನಲ್ಲಿ ಕೆಲಸ ಮಾಡಿದೆ ಎಂದು ಹೇಳಿದರು. ವಿಶೇಷಚೇತನರ ಅನುಕೂಲಕ್ಕಾಗಿ ಹಲವು ಕಲ್ಯಾಣ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು. ಇದಲ್ಲದೆ, ತೃತೀಯಲಿಂಗಿ ಸಮುದಾಯದ ಕಾನೂನು ಹಕ್ಕುಗಳಿಗಾಗಿ ಮಾಡಿದ ಪ್ರಯತ್ನಗಳನ್ನು ಶ್ರೀ ಮೋದಿ ಅವರು ಒತ್ತಿ ಹೇಳಿದರು ಮತ್ತು ಬಲವಾದ ಕಾನೂನು ಕ್ರಮಗಳ ಮೂಲಕ ಅವರ ಹಕ್ಕುಗಳನ್ನು ಖಾತ್ರಿಪಡಿಸುವ ಬದ್ಧತೆಯನ್ನು ಎತ್ತಿ ತೋರಿಸಿದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಕಡೆಗೆ ಸರ್ಕಾರದ ಧೋರಣೆಯು ಸಮಾಜದ ಅಂಚಿನಲ್ಲಿರುವ ವರ್ಗಗಳ ಬಗ್ಗೆ ಅದರ ಸಹಾನುಭೂತಿಯ ಚಿಂತನೆಯಲ್ಲಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.
ಭಾರತದ ಪ್ರಗತಿಯು ನಾರಿ ಶಕ್ತಿಯಿಂದ ನಡೆಸಲ್ಪಡುತ್ತಿದೆ ಎಂದು ಮೋದಿ ಹೇಳಿದರು. ಮಹಿಳೆಯರಿಗೆ ಅವಕಾಶಗಳನ್ನು ನೀಡಿದರೆ ಮತ್ತು ನೀತಿ ನಿರೂಪಣೆಯ ಭಾಗವಾದರೆ, ಅದು ದೇಶದ ಪ್ರಗತಿಯನ್ನು ವೇಗಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಕಾರಣದಿಂದಲೇ ನೂತನ ಸಂಸತ್ತಿನಲ್ಲಿ ಸರ್ಕಾರದ ಮೊದಲ ನಿರ್ಧಾರವನ್ನು ನಾರಿಶಕ್ತಿಯ ಗೌರವಕ್ಕೆ ಮೀಸಲಿಡಲಾಯಿತು ಎಂದರು. ಹೊಸ ಸಂಸತ್ತನ್ನು ಅದರ ನೋಟಕ್ಕಾಗಿ ಮಾತ್ರವಲ್ಲದೆ ಅದರ ಮೊದಲ ನಿರ್ಧಾರಕ್ಕಾಗಿಯೂ ಸ್ಮರಿಸಿಕೊಳ್ಳಲಾಗುತ್ತದೆ, ಇದು ನಾರಿಶಕ್ತಿಗೆ ಗೌರವವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಹೊಗಳಿಕೆಗಾಗಿ ಹೊಸ ಸಂಸತ್ತನ್ನು ವಿಭಿನ್ನವಾಗಿ ಉದ್ಘಾಟಿಸಬಹುದಿತ್ತು, ಆದರೆ ಅದನ್ನು ಮಹಿಳೆಯರ ಗೌರವಕ್ಕೆ ಸಮರ್ಪಿಸಲಾಗಿದೆ ಎಂದು ಅವರು ಹೇಳಿದರು. ನಾರಿ ಶಕ್ತಿಯ ಆಶೀರ್ವಾದದಿಂದ ಸಂಸತ್ತು ತನ್ನ ಕೆಲಸವನ್ನು ಆರಂಭಿಸಿದೆ ಎಂದು ಅವರು ತಿಳಿಸಿದರು.
ಹಿಂದಿನ ಸರ್ಕಾರಗಳು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಭಾರತ ರತ್ನಕ್ಕೆ ಎಂದಿಗೂ ಅರ್ಹರೆಂದು ಪರಿಗಣಿಸಲಿಲ್ಲ ಎಂದು ಟೀಕಿಸಿದ ಶ್ರೀ ಮೋದಿ, ಇದರ ಹೊರತಾಗಿಯೂ ದೇಶದ ಜನರು ಯಾವಾಗಲೂ ಡಾ ಅಂಬೇಡ್ಕರ್ ಅವರ ಆತ್ಮ ಮತ್ತು ಆದರ್ಶಗಳನ್ನು ಗೌರವಿಸುತ್ತಾರೆ ಎಂದು ಒತ್ತಿ ಹೇಳಿದರು. ಸಮಾಜದ ಎಲ್ಲಾ ವರ್ಗಗಳ ಈ ಗೌರವದಿಂದಾಗಿ, ಎಲ್ಲಾ ಪಕ್ಷಗಳ ಎಲ್ಲರೂ ಈಗ ಇಷ್ಟವಿಲ್ಲದಿದ್ದರೂ ಬಲವಂತವಾಗಿ “ಜೈ ಭೀಮ್” ಎಂದು ಹೇಳುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳು ಎದುರಿಸುತ್ತಿರುವ ಮೂಲಭೂತ ಸವಾಲುಗಳನ್ನು ಆಳವಾಗಿ ಅರ್ಥಮಾಡಿಕೊಂಡಿದ್ದರು, ಏಕೆಂದರೆ ಅವರು ವೈಯಕ್ತಿಕವಾಗಿ ಅವರ ನೋವು ಮತ್ತು ಸಂಕಟವನ್ನು ಅನುಭವಿಸಿದ್ದರುರೆ ಎಂದು ಮೋದಿ ಹೇಳಿದರು. ಈ ಸಮುದಾಯಗಳ ಆರ್ಥಿಕ ಉನ್ನತಿಗೆ ಡಾ.ಅಂಬೇಡ್ಕರ್ ಅವರು ಸ್ಪಷ್ಟ ಮಾರ್ಗಸೂಚಿಯನ್ನು ಮಂಡಿಸಿದ್ದಾರೆ ಎಂದು ಅವರು ತಿಳಿಸಿದರು. “ಭಾರತ ಕೃಷಿ ಪ್ರಧಾನ ದೇಶ, ಆದರೆ ದಲಿತರಿಗೆ ಕೃಷಿ ಮುಖ್ಯ ಜೀವನಾಧಾರವಾಗಲು ಸಾಧ್ಯವಿಲ್ಲ” ಎಂಬ ಡಾ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಪ್ರಧಾನಿ, ಡಾ. ಅಂಬೇಡ್ಕರ್ ಎರಡು ಕಾರಣಗಳನ್ನು ಗುರುತಿಸಿದ್ದಾರೆ: ಮೊದಲನೆಯದಾಗಿ, ಭೂಮಿ ಖರೀದಿಸಲು ಅಸಮರ್ಥತೆ ಮತ್ತು ಎರಡನೆಯದಾಗಿ, ಹಣವಿದ್ದರೂ ಭೂಮಿ ಖರೀದಿಸಲು ಅವಕಾಶವಿರಲ್ಲ. ದಲಿತರು, ಆದಿವಾಸಿಗಳು ಮತ್ತು ಅಂಚಿನಲ್ಲಿರುವ ಗುಂಪುಗಳು ಎದುರಿಸುತ್ತಿರುವ ಈ ಅನ್ಯಾಯಕ್ಕೆ ಪರಿಹಾರವಾಗಿ ಡಾ.ಅಂಬೇಡ್ಕರ್ ಅವರು ಕೈಗಾರಿಕೀಕರಣವನ್ನು ಪ್ರತಿಪಾದಿಸಿದರು ಎಂದು ಅವರು ಒತ್ತಿ ಹೇಳಿದರು. ಕೌಶಲ್ಯ ಆಧಾರಿತ ಉದ್ಯೋಗಗಳು ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಉದ್ಯಮಶೀಲತೆಯನ್ನು ಉತ್ತೇಜಿಸುವುದನ್ನು ಡಾ. ಅಂಬೇಡ್ಕರ್ ಅವರು ನಂಬಿದ್ದರು ಎಂದು ಅವರು ಎತ್ತಿ ತೋರಿಸಿದರು. ಡಾ.ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಪರಿಗಣಿಸಲಿಲ್ಲ ಮತ್ತು ಸ್ವಾತಂತ್ರ್ಯದ ನಂತರ ಹಲವಾರು ದಶಕಗಳವರೆಗೆ ಸಂಪೂರ್ಣವಾಗಿ ತಿರಸ್ಕರಿಸಲಾಯಿತು ಎಂದು ಅವರು ಹೇಳಿದರು. ಡಾ.ಅಂಬೇಡ್ಕರ್ ಅವರು ಎಸ್ ಸಿ ಮತ್ತು ಎಸ್ ಟಿ ಸ್ಟಿ ಸಮುದಾಯದ ಆರ್ಥಿಕ ಸಂಕಷ್ಟಗಳನ್ನು ಹೋಗಲಾಡಿಸುವ ಗುರಿ ಹೊಂದಿದ್ದರು ಎಂದು ಒತ್ತಿ ಅವರು ಹೇಳಿದರು.
2014ರಲ್ಲಿ ತಮ್ಮ ಸರ್ಕಾರ ಕೌಶಲ್ಯಾಭಿವೃದ್ಧಿ, ಆರ್ಥಿಕ ಸೇರ್ಪಡೆ ಮತ್ತು ಕೈಗಾರಿಕಾ ಬೆಳವಣಿಗೆಗೆ ಆದ್ಯತೆ ನೀಡಿತು ಎಂದು ಪ್ರಧಾನಿ ಒತ್ತಿ ಹೇಳಿದರು. ಅವರು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು, ಇದು ಸಮಾಜದ ಅಡಿಪಾಯಕ್ಕೆ ಅಗತ್ಯವಾದ ಮತ್ತು ಹಳ್ಳಿಗಳಲ್ಲಿ ವ್ಯಾಪಕವಾಗಿರುವ ಕಮ್ಮಾರರು ಮತ್ತು ಕುಂಬಾರರಂತಹ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಮೊದಲ ಬಾರಿಗೆ ಸಮಾಜದ ಈ ವರ್ಗದ ಬಗ್ಗೆ ಕಾಳಜಿಯನ್ನು ವಹಿಸಲಾಗಿದ್ದು, ಅವರಿಗೆ ತರಬೇತಿ, ತಾಂತ್ರಿಕ ಉನ್ನತೀಕರಣ, ಹೊಸ ಉಪಕರಣಗಳು, ವಿನ್ಯಾಸ ನೆರವು, ಆರ್ಥಿಕ ನೆರವು ಮತ್ತು ಮಾರುಕಟ್ಟೆ ಪ್ರವೇಶವನ್ನು ಒದಗಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಸಮಾಜವನ್ನು ರೂಪಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ ಈ ನಿರ್ಲಕ್ಷಿತ ಗುಂಪಿನ ಮೇಲೆ ಕೇಂದ್ರೀಕರಿಸಲು ತಮ್ಮ ಸರ್ಕಾರ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.
“ನಮ್ಮ ಸರ್ಕಾರವು ಉದ್ಯಮಿಗಳನ್ನು ಆಹ್ವಾನಿಸಲು ಮತ್ತು ಪ್ರೋತ್ಸಾಹಿಸಲು ಮೊದಲ ಬಾರಿಗೆ ಮುದ್ರಾ ಯೋಜನೆಯನ್ನು ಪ್ರಾರಂಭಿಸಿತು” ಎಂದು ಶ್ರೀ ಮೋದಿ ಹೇಳಿದರು ಮತ್ತು ಸಮಾಜದ ಪ್ರಮುಖ ವರ್ಗವು ತಮ್ಮ ಸ್ವಾವಲಂಬನೆಯ ಕನಸುಗಳನ್ನು ಈಡೇರಿಸಲು ಸಹಾಯ ಮಾಡಲು ಖಾತರಿಯಿಲ್ಲದೆ ಸಾಲವನ್ನು ನೀಡುವ ದೊಡ್ಡ ಪ್ರಮಾಣದ ಅಭಿಯಾನವನ್ನು ನಡೆಸಲಾಗಿದೆ ಎಂದು ಅವರು ಹೇಳಿದರು. ಎಸ್ ಸಿ, ಎಸ್ ಟಿ ಮತ್ತು ಯಾವುದೇ ಸಮುದಾಯದ ಮಹಿಳೆಯರಿಗೆ ತಮ್ಮ ಉದ್ಯಮಗಳನ್ನು ಬೆಂಬಲಿಸಲು ಖಾತರಿಯಿಲ್ಲದೆ ₹1 ಕೋಟಿ ವರೆಗೆ ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿರುವ ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು ಸಹ ಅವರು ಉಲ್ಲೇಖಿಸಿದರು. ಈ ವರ್ಷ ಈ ಯೋಜನೆಗೆ ಬಜೆಟ್ ಅನ್ನು ದ್ವಿಗುಣಗೊಳಿಸಲಾಗಿದೆ ಎಂದು ಅವರು ಹೇಳಿದರು. ಅಂಚಿನಲ್ಲಿರುವ ಸಮುದಾಯಗಳ ಲಕ್ಷಾಂತರ ಯುವಕರು ಮತ್ತು ಅನೇಕ ಮಹಿಳೆಯರು ಮುದ್ರಾ ಯೋಜನೆಯಡಿಯಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿದ್ದಾರೆ, ಇದು ತಮಗಾಗಿ ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳುವುದಲ್ಲದೆ ಇತರರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು. ಮುದ್ರಾ ಯೋಜನೆ ಮೂಲಕ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸನ್ನು ನನಸು ಮಾಡುವ ಮೂಲಕ ಪ್ರತಿ ಕುಶಲಕರ್ಮಿ ಮತ್ತು ಪ್ರತಿ ಸಮುದಾಯದ ಸಬಲೀಕರಣ ಮಾಡಲಾಗಿದೆ ಎಂದು ಅವರು ಹೇಳಿದರು.
ಬಡವರು ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ ಅವರು, ಕಡೆಗಣಿಸಲ್ಪಟ್ಟವರಿಗೆ ಈಗ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. ಪ್ರಸ್ತುತ ಬಜೆಟ್ ಚರ್ಮ ಮತ್ತು ಪಾದರಕ್ಷೆಗಳ ಉದ್ಯಮಗಳಂತಹ ವಿವಿಧ ಸಣ್ಣ ಕ್ಷೇತ್ರಗಳನ್ನು ಮುಟ್ಟಿದೆ, ಇದರಿಂದಾಗಿ ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಪ್ರಯೋಜನವಾಗಿದೆ ಎಂದು ಅವರು ಹೇಳಿದರು. ಆಟಿಕೆ ಉದ್ಯಮವನ್ನು ಉದಾಹರಣೆಯಾಗಿ ಪ್ರಸ್ತಾಪಿಸಿದ ಪ್ರಧಾನಿ, ಅಂಚಿನಲ್ಲಿರುವ ಸಮುದಾಯಗಳ ಅನೇಕ ಜನರು ಆಟಿಕೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರಕಾರವು ಈ ಕ್ಷೇತ್ರದತ್ತ ಗಮನಹರಿಸಿದ್ದು, ಬಡ ಕುಟುಂಬಗಳಿಗೆ ವಿವಿಧ ರೀತಿಯ ನೆರವು ನೀಡುತ್ತಿದೆ. ಪರಿಣಾಮವಾಗಿ ಆಟಿಕೆ ರಫ್ತಿನಲ್ಲಿ ಗಮನಾರ್ಹ ಹೆಚ್ಚಳವಾಗಿದೆ, ಇದು ಮೂರು ಪಟ್ಟು ಹೆಚ್ಚಾಗಿದೆ, ತಮ್ಮ ಜೀವನೋಪಾಯಕ್ಕಾಗಿ ಈ ಉದ್ಯಮವನ್ನು ಅವಲಂಬಿಸಿರುವ ಹಿಂದುಳಿದ ಸಮುದಾಯಗಳಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದು ಹೇಳಿದರು.
ಭಾರತದಲ್ಲಿ ಮೀನುಗಾರ ಸಮುದಾಯದ ಮಹತ್ವದ ಕೊಡುಗೆಯನ್ನು ಎತ್ತಿ ಹಿಡಿದ ಪ್ರಧಾನಮಂತ್ರಿಯವರು, ಸರ್ಕಾರವು ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿದೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ನ ಪ್ರಯೋಜನಗಳನ್ನು ಅವರಿಗೆ ವಿಸ್ತರಿಸಿದೆ ಎಂದು ಹೇಳಿದರು. ಮೀನುಗಾರಿಕೆ ಕ್ಷೇತ್ರಕ್ಕೆ ಸುಮಾರು ₹40,000 ಕೋಟಿ ಸೇರಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರಯತ್ನಗಳಿಂದ ಮೀನು ಉತ್ಪಾದನೆ ಮತ್ತು ರಫ್ತು ದ್ವಿಗುಣಗೊಂಡಿದ್ದು, ಮೀನುಗಾರ ಸಮುದಾಯಕ್ಕೆ ನೇರ ಲಾಭವಾಗಿದೆ ಎಂದು ಅವರು ಒತ್ತಿ ಹೇಳಿದರು. ಸಮಾಜದ ಅತ್ಯಂತ ನಿರ್ಲಕ್ಷಿತ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸರ್ಕಾರದ ಆದ್ಯತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು.
ನಮ್ಮ ಬುಡಕಟ್ಟು ಸಮುದಾಯಗಳನ್ನು ವಿವಿಧ ಹಂತಗಳಲ್ಲಿ ಬಾಧಿಸುವ ಜಾತೀಯತೆಯ ವಿಷವನ್ನು ಹರಡಲು ಹೊಸ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ ಪ್ರಧಾನಿ, ಕೆಲವು ಗುಂಪುಗಳು ಬಹಳ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು, ದೇಶದ 200-300 ಸ್ಥಳಗಳಲ್ಲಿ ಹರಡಿವೆ ಮತ್ತು ಹೆಚ್ಚಾಗಿ ನಿರ್ಲಕ್ಷಿಸಲ್ಪಟ್ಟಿವೆ ಎಂದು ಎತ್ತಿ ತೋರಿಸಿದರು. ಈ ಸಮುದಾಯಗಳ ಬಗ್ಗೆ ನಿಕಟ ಜ್ಞಾನ ಹೊಂದಿರುವ ರಾಷ್ಟ್ರಪತಿಯವರ ಮಾರ್ಗದರ್ಶನಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದರು. ಈ ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳನ್ನು ನಿರ್ದಿಷ್ಟ ಯೋಜನೆಗಳಲ್ಲಿ ಸೇರಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಈ ಸಮುದಾಯಗಳಿಗೆ ಸೌಲಭ್ಯಗಳು ಮತ್ತು ಕಲ್ಯಾಣ ಕ್ರಮಗಳನ್ನು ಒದಗಿಸಲು ₹ 24,000 ಕೋಟಿ ವಿನಿಯೋಗದೊಂದಿಗೆ ಪ್ರಧಾನಮಂತ್ರಿ ಜನಮನ್ ಯೋಜನೆಯ ಪರಿಚಯವನ್ನು ಅವರು ಪ್ರಸ್ತಾಪಿಸಿದರು. ಅವರನ್ನು ಇತರ ಬುಡಕಟ್ಟು ಸಮುದಾಯಗಳ ಮಟ್ಟಕ್ಕೆ ಏರಿಸುವುದು ಮತ್ತು ಅಂತಿಮವಾಗಿ ಅವರನ್ನು ಇಡೀ ಸಮಾಜಕ್ಕೆ ಸಮಾನವಾಗಿ ತರುವುದು ಗುರಿಯಾಗಿದೆ ಎಂದು ಅವರು ಹೇಳಿದರು.
“ನಮ್ಮ ಸರ್ಕಾರವು ಗಡಿ ಗ್ರಾಮಗಳಂತಹ ಗಮನಾರ್ಹವಾಗಿ ಹಿಂದುಳಿದಿರುವ ದೇಶದ ವಿವಿಧ ಪ್ರದೇಶಗಳ ಮೇಲೆ ಕೇಂದ್ರೀಕರಿಸಿದೆ” ಎಂದು ಶ್ರೀ ಮೋದಿ ಹೇಳಿದರು. ಗಡಿ ಗ್ರಾಮಸ್ಥರಿಗೆ ಆದ್ಯತೆ ನೀಡುವುದನ್ನು ಖಾತ್ರಿಪಡಿಸುವ ಮೂಲಕ ಸರ್ಕಾರ ತಂದಿರುವ ಮಾನಸಿಕ ಬದಲಾವಣೆಯನ್ನು ಅವರು ಎತ್ತಿ ತೋರಿಸಿದರು. ಸೂರ್ಯನ ಮೊದಲ ಮತ್ತು ಕೊನೆಯ ಕಿರಣಗಳು ಸ್ಪರ್ಶಿಸುವ ಈ ಗ್ರಾಮಗಳಿಗೆ ನಿರ್ದಿಷ್ಟ ಅಭಿವೃದ್ಧಿ ಯೋಜನೆಗಳೊಂದಿಗೆ “ಮೊದಲ ಗ್ರಾಮ” ಎಂದು ವಿಶೇಷ ಸ್ಥಾನಮಾನ ನೀಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಗ್ರಾಮಸ್ಥರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಮೈನಸ್ 15 ಡಿಗ್ರಿಯಂತಹ ವಿಪರೀತ ಪರಿಸ್ಥಿತಿಗಳಲ್ಲಿಯೂ ಸಹ 24 ಗಂಟೆಗಳ ಕಾಲ ಉಳಿಯಲು ದೂರದ ಹಳ್ಳಿಗಳಿಗೆ ಮಂತ್ರಿಗಳನ್ನು ಕಳುಹಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಆಚರಣೆಗಳಿಗೆ ಈ ಗಡಿ ಭಾಗದ ಗ್ರಾಮಗಳ ಮುಖಂಡರನ್ನು ಅತಿಥಿಗಳಾಗಿ ಆಹ್ವಾನಿಸಲಾಗುತ್ತಿದೆ ಎಂದು ಅವರು ಹೇಳಿದರು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ನಿರ್ಲಕ್ಷಿತ ಸಮುದಾಯವನ್ನು ತಲುಪಲು ನಡೆಯುತ್ತಿರುವ ಪ್ರಯತ್ನಗಳಿಗೆ ಸರ್ಕಾರದ ಬದ್ಧತೆಯನ್ನು ಅವರು ಒತ್ತಿ ಹೇಳಿದರು. ರಾಷ್ಟ್ರದ ಭದ್ರತೆಗಾಗಿ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮದ ಮಹತ್ವ ಮತ್ತು ಉಪಯುಕ್ತತೆಯನ್ನು ಶ್ರೀ ಮೋದಿ ಎತ್ತಿ ತೋರಿಸಿದರು, ಅದರ ಬಗ್ಗೆ ಸರ್ಕಾರದ ನಿರಂತರ ಗಮನವನ್ನು ಒತ್ತಿ ಹೇಳಿದರು.
ಗಣರಾಜ್ಯದ 75 ವರ್ಷಗಳ ಸಂದರ್ಭದಲ್ಲಿ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಸಂವಿಧಾನ ರಚನೆಕಾರರಿಂದ ಸ್ಫೂರ್ತಿ ಪಡೆಯುವಂತೆ ಪ್ರತಿಯೊಬ್ಬರನ್ನು ಒತ್ತಾಯಿಸಿದರು ಎಂದು ಪ್ರಧಾನಿ ಹೇಳಿದರು. ಸಂವಿಧಾನ ರಚನೆಕಾರರ ಭಾವನೆಗಳಿಗೆ ಗೌರವ ಮತ್ತು ಸ್ಫೂರ್ತಿಯೊಂದಿಗೆ ಸರ್ಕಾರ ಮುನ್ನಡೆಯುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ವಿಷಯವನ್ನು ಕುರಿತು ಮಾತನಾಡಿದ ಶ್ರೀ ಮೋದಿಯವರು, ಸಂವಿಧಾನ ಸಭೆಯ ಚರ್ಚೆಗಳನ್ನು ಓದುವವರು ಆ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ಕೆಲವರು ರಾಜಕೀಯ ಆಕ್ಷೇಪಗಳನ್ನು ಹೊಂದಿರಬಹುದು, ಆದರೆ ಸರ್ಕಾರವು ಧೈರ್ಯ ಮತ್ತು ಸಮರ್ಪಣಾ ಮನೋಭಾವದಿಂದ ಈ ದೃಷ್ಟಿಕೋನವನ್ನು ಈಡೇರಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು.
ಸಂವಿಧಾನ ರಚನೆಕಾರರನ್ನು ಗೌರವಿಸುವ ಮತ್ತು ಅವರ ಮಾತುಗಳಿಂದ ಸ್ಫೂರ್ತಿ ಪಡೆಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಸ್ವಾತಂತ್ರ್ಯದ ನಂತರ ಸಂವಿಧಾನ ರಚನೆಕಾರರ ಭಾವನೆಗಳನ್ನು ಕಡೆಗಣಿಸಲಾಯಿತು ಎಂದು ವಿಷಾದ ವ್ಯಕ್ತಪಡಿಸಿದರು. ಚುನಾಯಿತ ಸರ್ಕಾರವಲ್ಲದ ಮಧ್ಯಂತರ ವ್ಯವಸ್ಥೆಯು ಚುನಾಯಿತ ಸರ್ಕಾರ ಮಾಡುವವರೆಗೆ ಕಾಯದೆ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಿತು ಎಂದು ಅವರು ಎತ್ತಿ ತೋರಿಸಿದರು. ಅಂದಿನ ಸರಕಾರ ಪ್ರಜಾಪ್ರಭುತ್ವವನ್ನು ಕಾಪಾಡುವುದಾಗಿ ಹೇಳುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿತ್ತು ಎಂದರು. ಇದು ಸಂವಿಧಾನದ ಆಶಯಕ್ಕೆ ಮಾಡಿದ ಸಂಪೂರ್ಣ ಅಗೌರವ ಎಂದು ಹೇಳಿದರು.
ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದ ಸ್ವತಂತ್ರ ಭಾರತದ ಮೊದಲ ಸರ್ಕಾರದ ಅವಧಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಅನೇಕ ನಿದರ್ಶನಗಳಿವೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಮುಂಬೈನಲ್ಲಿ ನಡೆದ ಕಾರ್ಮಿಕರ ಮುಷ್ಕರದ ಸಂದರ್ಭದಲ್ಲಿ ಖ್ಯಾತ ಕವಿ ಶ್ರೀ ಮಜ್ರೂಹ್ ಸುಲ್ತಾನಪುರಿ ಅವರು ಕಾಮನ್ವೆಲ್ತ್ ಅನ್ನು ಟೀಕಿಸುವ ಕವಿತೆಯನ್ನು ಹಾಡಿದರು, ಇದರಿಂದಾಗಿ ಅವರು ಜೈಲಿಗೆ ಹೋಗಬೇಕಾಯಿತು. ಖ್ಯಾತ ನಟ ಶ್ರೀ ಬಾಲರಾಜ್ ಸಾಹ್ನಿ ಅವರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲಿಗೆ ಹೋಗಬೇಕಾಯಿತು ಎಂದು ಅವರು ತಿಳಿಸಿದರು. ಆಕಾಶವಾಣಿಯಲ್ಲಿ ವೀರ್ ಸಾವರ್ಕರ್ ಅವರ ಕವಿತೆಯನ್ನು ಪ್ರಸ್ತುತಪಡಿಸಲು ಯೋಜಿಸಿದ್ದಕ್ಕಾಗಿ ಲತಾ ಮಂಗೇಶ್ಕರ್ ಅವರ ಸಹೋದರ ಶ್ರೀ ಹೃದಯನಾಥ್ ಮಂಗೇಶ್ಕರ್ ಅವರು ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದು ಅವರು ತಿಳಿಸಿದರು. ಈ ಕಾರಣಕ್ಕಾಗಿಯೇ ಹೃದಯನಾಥ್ ಮಂಗೇಶ್ಕರ್ ಅವರನ್ನು ಆಕಾಶವಾಣಿಯಿಂದ ಶಾಶ್ವತವಾಗಿ ವಜಾಗೊಳಿಸಲಾಯಿತು ಎಂದು ಅವರು ಹೇಳಿದರು.
ಅಧಿಕಾರದ ಹೆಸರಿನಲ್ಲಿ ಸಂವಿಧಾನವನ್ನು ತುಳಿದು ಅದರ ಮೂಲ ಚೈತನ್ಯವನ್ನು ಹತ್ತಿಕ್ಕಲಾದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶದಲ್ಲಿನ ಅನುಭವಗಳನ್ನು ನೆನಪಿಸಿಕೊಂಡ ಮೋದಿ, ಇದನ್ನು ದೇಶವು ನೆನಪಿಸಿಕೊಳ್ಳುತ್ತದೆ ಎಂದು ಒತ್ತಿ ಹೇಳಿದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಖ್ಯಾತ ಹಿರಿಯ ನಟ ಶ್ರೀ ದೇವ್ ಆನಂದ್ ಅವರಿಗೆ ಸಾರ್ವಜನಿಕವಾಗಿ ತುರ್ತು ಪರಿಸ್ಥಿತಿಯನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿತ್ತು ಎಂದು ಅವರು ತಿಳಿಸಿದರು. ಶ್ರೀ ದೇವ್ ಆನಂದ್ ಧೈರ್ಯವನ್ನು ತೋರಿಸಿದರು ಮತ್ತು ಅದನ್ನು ಬೆಂಬಲಿಸಲು ನಿರಾಕರಿಸಿದರು, ಇದರ ಪರಿಣಾಮವಾಗಿ ದೂರದರ್ಶನದಲ್ಲಿ ಅವರ ಎಲ್ಲಾ ಚಲನಚಿತ್ರಗಳನ್ನು ನಿಷೇಧಿಸಲಾಯಿತು. ಸಂವಿಧಾನದ ಬಗ್ಗೆ ಮಾತನಾಡುವವರು ವರ್ಷಗಟ್ಟಲೆ ಅದನ್ನು ಜೇಬಿನಲ್ಲಿ ಇಟ್ಟುಕೊಂಡಿರುವವರು ಅದಕ್ಕೆ ಗೌರವ ಕೊಡುವುದಿಲ್ಲ ಎಂದು ಪ್ರಧಾನಿ ಹೇಳಿದರು. ಶ್ರೀ ಕಿಶೋರ್ ಕುಮಾರ್ ಅವರು ಅಂದಿನ ಆಡಳಿತ ಪಕ್ಷಕ್ಕೆ ಹಾಡಲು ನಿರಾಕರಿಸಿದರು ಮತ್ತು ಇದರ ಪರಿಣಾಮವಾಗಿ ಅವರ ಎಲ್ಲಾ ಹಾಡುಗಳನ್ನು ಆಕಾಶವಾಣಿಯಿಂದ ನಿಷೇಧಿಸಲಾಯಿತು ಎಂದು ಅವರು ಹೇಳಿದರು.
ತುರ್ತು ಪರಿಸ್ಥಿತಿಯ ದಿನಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ ಪ್ರಧಾನಿ, ಪ್ರಜಾಪ್ರಭುತ್ವ ಮತ್ತು ಮಾನವ ಘನತೆಯ ಬಗ್ಗೆ ಮಾತನಾಡುವವರು ತುರ್ತು ಪರಿಸ್ಥಿತಿಯಲ್ಲಿ ಶ್ರೀ ಜಾರ್ಜ್ ಫರ್ನಾಂಡಿಸ್ ಸೇರಿದಂತೆ ದೇಶದ ಮಹಾನ್ ವ್ಯಕ್ತಿಗಳನ್ನು ಕೈಕೋಳ ಮತ್ತು ಸರಪಳಿಯಿಂದ ಬಂಧಿಸಿದರು ಎಂದು ಒತ್ತಿ ಹೇಳಿದರು. ಈ ಅವಧಿಯಲ್ಲಿ ಸಂಸತ್ತಿನ ಸದಸ್ಯರು ಮತ್ತು ರಾಷ್ಟ್ರೀಯ ನಾಯಕರನ್ನು ಸರಪಳಿ ಮತ್ತು ಕೈಕೋಳದಲ್ಲಿ ಬಂಧಿಸಲಾಯಿತು ಎಂದು ಅವರು ಎತ್ತಿ ತೋರಿಸಿದರು. ಅವರಿಗೆ ಸಂವಿಧಾನ ಎಂಬ ಪದ ಸರಿಬರುವುದಿಲ್ಲ ಎಂದರು.
ರಾಜಮನೆತನದ ಅಧಿಕಾರ ಮತ್ತು ದುರಹಂಕಾರಕ್ಕಾಗಿ ದೇಶದ ಲಕ್ಷಾಂತರ ಕುಟುಂಬಗಳನ್ನು ನಾಶಪಡಿಸಲಾಯಿತು ಮತ್ತು ದೇಶವನ್ನು ಜೈಲಿನಂತೆ ಮಾಡಲಾಯಿತು ಎಂದು ಶ್ರೀ ಮೋದಿ ಹೇಳಿದರು. ಅಜೇಯರು ಎಂದುಕೊಂಡವರು ಜನರ ಬಲಕ್ಕೆ ತಲೆಬಾಗುವಂತೆ ಒತ್ತಾಯಿಸಿ ಸುದೀರ್ಘ ಹೋರಾಟ ನಡೆಯಿತು ಎಂದು ಅವರು ಒತ್ತಿ ಹೇಳಿದರು. ಭಾರತೀಯರ ರಕ್ತನಾಳಗಳಲ್ಲಿ ಹುದುಗಿರುವ ಪ್ರಜಾಸತ್ತಾತ್ಮಕ ಮನೋಭಾವದಿಂದಾಗಿ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಯಿತು ಎಂದು ಪ್ರಧಾನಿ ಹೇಳಿದರು. ನಾನು ಹಿರಿಯ ನಾಯಕರನ್ನು ಬಹಳವಾಗಿ ಗೌರವಿಸುತ್ತೇನೆ ಮತ್ತು ಅವರ ಸುದೀರ್ಘ ಸಾರ್ವಜನಿಕ ಸೇವೆಗಳನ್ನು ಗೌರವಿಸುತ್ತೇನೆ ಎಂದು ಪ್ರಧಾನಮಂತ್ರಿ ಹೇಳಿದರು. ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ಶ್ರೀ ದೇವೇಗೌಡರಂತಹ ನಾಯಕರ ಸಾಧನೆಗಳನ್ನು ಪ್ರಸ್ತಾಪಿಸಿದರು.
ತಮ್ಮ ಸರ್ಕಾರದ ಅವಧಿಯಂತೆ ಬಡವರ ಸಬಲೀಕರಣ ಮತ್ತು ಉನ್ನತಿ ಎಂದಿಗೂ ವ್ಯಾಪಕವಾಗಿರಲಿಲ್ಲ ಎಂದು ಹೇಳಿದ ಮೋದಿ, ಸರ್ಕಾರವು ಬಡವರನ್ನು ಸಬಲೀಕರಣಗೊಳಿಸುವ ಮತ್ತು ಬಡತನವನ್ನು ಹೋಗಲಾಡಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು. ದೇಶದ ಬಡವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, ಅವಕಾಶ ನೀಡಿದರೆ ಅವರು ಯಾವುದೇ ಸವಾಲನ್ನು ಎದುರಿಸುತ್ತಾರೆ ಎಂದು ಹೇಳಿದರು. ಈ ಯೋಜನೆಗಳು ಮತ್ತು ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಬಡವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಸಬಲೀಕರಣದ ಮೂಲಕ 25 ಕೋಟಿ ಜನರು ಯಶಸ್ವಿಯಾಗಿ ಬಡತನದಿಂದ ಹೊರಬಂದಿದ್ದಾರೆ, ಇದು ಸರಕಾರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು. ಬಡತನದಿಂದ ಹೊರಬಂದವರು ಕಠಿಣ ಪರಿಶ್ರಮ, ಸರ್ಕಾರದ ಮೇಲಿನ ನಂಬಿಕೆ ಮತ್ತು ಯೋಜನೆಗಳ ಲಾಭ ಪಡೆದು ಇಂದು ದೇಶದಲ್ಲಿ ನವ ಮಧ್ಯಮ ವರ್ಗವನ್ನು ರೂಪಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
ನವ-ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದ ಬಗ್ಗೆ ಸರ್ಕಾರದ ದೃಢವಾದ ಬದ್ಧತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅವರ ಆಕಾಂಕ್ಷೆಗಳು ದೇಶದ ಪ್ರಗತಿಗೆ ಪ್ರೇರಕ ಶಕ್ತಿಯಾಗಿದ್ದು, ಹೊಸ ಶಕ್ತಿ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಒದಗಿಸುತ್ತವೆ ಎಂದು ಹೇಳಿದರು. ಮಧ್ಯಮ ವರ್ಗ ಮತ್ತು ನವ-ಮಧ್ಯಮ ವರ್ಗದ ಸಾಮರ್ಥ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. ಪ್ರಸಕ್ತ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ಗಮನಾರ್ಹ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು. 2013ರಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿ ₹2 ಲಕ್ಷದವರೆಗೆ ಇತ್ತು, ಈಗ ₹12 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಯಾವುದೇ ವರ್ಗ ಅಥವಾ ಸಮುದಾಯದ 70 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಆಯುಷ್ಮಾನ್ ಭಾರತ್ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ, ಮಧ್ಯಮ ವರ್ಗದ ವೃದ್ಧರಿಗೆ ಗಮನಾರ್ಹ ಅನುಕೂಲಗಳಿವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
“ನಾವು ನಾಗರಿಕರಿಗಾಗಿ ನಾಲ್ಕು ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ, ಅದರಲ್ಲಿ ಒಂದು ಕೋಟಿಗೂ ಹೆಚ್ಚು ಮನೆಗಳನ್ನು ನಗರಗಳಲ್ಲಿ ನಿರ್ಮಿಸಲಾಗಿದೆ” ಎಂದು ಶ್ರೀ ಮೋದಿ ಹೇಳಿದರು. ಮನೆ ಖರೀದಿದಾರರ ವಿರುದ್ಧ ಸಾಕಷ್ಟು ವಂಚನೆಗಳು ನಡೆಯುತ್ತಿವೆ, ಆದ್ದರಿಂದ ಭದ್ರತೆಯನ್ನು ಒದಗಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು. ಈ ಸಂಸತ್ತಿನಲ್ಲಿ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) (ರೇರಾ) ಕಾಯ್ದೆಯ ಅಂಗೀಕಾರವು ಮಧ್ಯಮ ವರ್ಗದ ಮನೆ ಮಾಲೀಕತ್ವದ ಕನಸಿಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವಲ್ಲಿ ಪ್ರಮುಖ ಸಾಧನವಾಗಿದೆ ಎಂದು ಅವರು ಒತ್ತಿ ಹೇಳಿದರು. ಪ್ರಸಕ್ತ ಬಜೆಟ್ SWAMIH ಉಪಕ್ರಮವನ್ನು ಒಳಗೊಂಡಿದೆ, ಇದರ ಅಡಿಯಲ್ಲಿ ಮಧ್ಯಮ ವರ್ಗದ ಹಣ ಮತ್ತು ಸೌಲಭ್ಯಗಳು ಸಿಲುಕಿರುವ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು 15,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಮಧ್ಯಮ ವರ್ಗದವರ ಕನಸುಗಳನ್ನು ನನಸು ಮಾಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಅವರು ಒತ್ತಿ ಹೇಳಿದರು.
ಜಾಗತಿಕ ಮನ್ನಣೆ ಗಳಿಸಿರುವ ಸ್ಟಾರ್ಟಪ್ ಕ್ರಾಂತಿಯತ್ತ ಗಮನಸೆಳೆದ ಪ್ರಧಾನಿ, ಈ ಸ್ಟಾರ್ಟ್‌ಅಪ್‌ಗಳನ್ನು ಮುಖ್ಯವಾಗಿ ಮಧ್ಯಮ ವರ್ಗದ ಯುವಜನರು ನಡೆಸುತ್ತಿದ್ದಾರೆ ಎಂದು ಹೇಳಿದರು. ವಿಶೇಷವಾಗಿ ದೇಶಾದ್ಯಂತ 50-60 ಸ್ಥಳಗಳಲ್ಲಿ ನಡೆದ ಜಿ 20 ಸಭೆಗಳಿಂದಾಗಿ ಜಗತ್ತು ಭಾರತದತ್ತ ಹೆಚ್ಚು ಆಕರ್ಷಿತವಾಗಿದೆ ಎಂದು ಅವರು ಹೇಳಿದರು. ಇದು ದೆಹಲಿ, ಮುಂಬೈ ಮತ್ತು ಬೆಂಗಳೂರು ಮೀರಿದ ಭಾರತದ ವಿಶಾಲತೆಯನ್ನು ಬಹಿರಂಗಪಡಿಸಿದೆ ಎಂದು ಅವರು ಒತ್ತಿ ಹೇಳಿದರು. ಭಾರತೀಯ ಪ್ರವಾಸೋದ್ಯಮದಲ್ಲಿ ಹೆಚ್ಚುತ್ತಿರುವ ಜಾಗತಿಕ ಆಸಕ್ತಿಯು ಹಲವಾರು ವ್ಯಾಪಾರ ಅವಕಾಶಗಳನ್ನು ತರುತ್ತದೆ, ವಿವಿಧ ಆದಾಯ ಮೂಲಗಳನ್ನು ಒದಗಿಸುವ ಮೂಲಕ ಮಧ್ಯಮ ವರ್ಗದವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.
“ಇಂದು ಮಧ್ಯಮ ವರ್ಗವು ಆತ್ಮವಿಶ್ವಾಸದಿಂದ ತುಂಬಿದೆ, ಇದು ಅಭೂತಪೂರ್ವವಾಗಿದ್ದು ರಾಷ್ಟ್ರವನ್ನು ಹೆಚ್ಚು ಬಲಪಡಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು. ಭಾರತೀಯ ಮಧ್ಯಮ ವರ್ಗವು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ದೃಢಸಂಕಲ್ಪವನ್ನು ಹೊಂದಿದೆ ಮತ್ತು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಯುವಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂಬುದನ್ನು ಎತ್ತಿ ಹಿಡಿದ ಪ್ರಧಾನಿ, ಜನಸಂಖ್ಯಾ ಲಾಭಾಂಶಕ್ಕೆ ಒತ್ತು ನೀಡಿದರು, ಪ್ರಸ್ತುತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅಭಿವೃದ್ಧಿ ಹೊಂದಿದ ರಾಷ್ಟ್ರದ ಪ್ರಾಥಮಿಕ ಫಲಾನುಭವಿಗಳಾಗುತ್ತಾರೆ ಎಂದು ತಿಳಿಸಿದರು. ಯುವ ವಯಸ್ಸಿನಲ್ಲಿ, ದೇಶದ ಅಭಿವೃದ್ಧಿ ಪಯಣವು ಪ್ರಗತಿ ಹೊಂದುತ್ತದೆ, ಅಭಿವೃದ್ಧಿ ಹೊಂದಿದ ಭಾರತಕ್ಕೆ ಮಹತ್ವದ ಬುನಾದಿಯಾಗುತ್ತದೆ ಎಂದು ಅವರು ಹೇಳಿದರು. ಕಳೆದ ಒಂದು ದಶಕದಲ್ಲಿ ಶಾಲಾ-ಕಾಲೇಜುಗಳಲ್ಲಿ ಯುವಕರ ನೆಲೆಯನ್ನು ಬಲಪಡಿಸಲು ಕಾರ್ಯತಂತ್ರದ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಕಳೆದ 30 ವರ್ಷಗಳಿಂದ 21ನೇ ಶತಮಾನದ ಶಿಕ್ಷಣದ ಬಗ್ಗೆ ಸ್ವಲ್ಪವೂ ಚಿಂತನೆ ನಡೆದಿರಲಿಲ್ಲ ಎಂದ ಅವರು, ಹೇಗಿದೆಯೋ ಹಾಗೆಯೇ ಮುಂದುವರಿಯಲಿ ಎಂಬುದು ಹಿಂದಿನ ಧೋರಣೆಯಾಗಿತ್ತು. ಈ ಸಮಸ್ಯೆಗಳನ್ನು ಪರಿಹರಿಸಲು ಸುಮಾರು ಮೂರು ದಶಕಗಳ ನಂತರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ ಇ ಪಿ) ಪರಿಚಯಿಸಲಾಗಿದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಈ ನೀತಿಯಡಿಯಲ್ಲಿ ಪಿಎಂ ಶ್ರೀ ಶಾಲೆಗಳ ಸ್ಥಾಪನೆ ಸೇರಿದಂತೆ ವಿವಿಧ ಉಪಕ್ರಮಗಳು ಶಿಕ್ಷಣವನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು. ಸರಿಸುಮಾರು 10,000 ರಿಂದ 12,000 ಪಿಎಂ ಶ್ರೀ ಶಾಲೆಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು, ಭವಿಷ್ಯದಲ್ಲಿ ಇನ್ನಷ್ಟು ಶಾಲೆಗಳನ್ನು ಸ್ಥಾಪಿಸುವ ಯೋಜನೆಯಿದೆ ಎಂದರು. ಶಿಕ್ಷಣ ನೀತಿಯಲ್ಲಿನ ಬದಲಾವಣೆಗಳ ಕುರಿತು ಅವರು ಮಹತ್ವದ ನಿರ್ಧಾರವನ್ನು ಒತ್ತಿ ಹೇಳಿದರು, ಇದು ಈಗ ಶಿಕ್ಷಣ ಮತ್ತು ಪರೀಕ್ಷೆಗಳನ್ನು ಮಾತೃಭಾಷೆಯಲ್ಲಿ ನಡೆಸಬೇಕಾದ ನಿಬಂಧನೆಗಳನ್ನು ಒಳಗೊಂಡಿದೆ. ಭಾರತದಲ್ಲಿ ಭಾಷೆಯ ಬಗ್ಗೆ ಕಾಲಹರಣ ಮಾಡುತ್ತಿದ್ದ ವಸಾಹತುಶಾಹಿ ಮನಸ್ಥಿತಿಯ ಬಗ್ಗೆ ಒತ್ತಿಹೇಳುತ್ತಾ, ಭಾಷೆಯ ಅಡೆತಡೆಗಳಿಂದಾಗಿ ಬಡ, ದಲಿತ, ಬುಡಕಟ್ಟು ಮತ್ತು ಅಂಚಿನಲ್ಲಿರುವ ಸಮುದಾಯಗಳ ಮಕ್ಕಳು ಎದುರಿಸುತ್ತಿರುವ ಅನ್ಯಾಯವನ್ನು ಒತ್ತಿ ಹೇಳಿದರು. ಮಾತೃಭಾಷೆಯಲ್ಲಿ ಶಿಕ್ಷಣದ ಅವಶ್ಯಕತೆಯನ್ನು ಕುರಿತು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ವಿದ್ಯಾರ್ಥಿಗಳು ತಮಗೆ ಇಂಗ್ಲಿಷ್ ನಲ್ಲಿರುವ ಪ್ರಾವೀಣ್ಯತೆಯನ್ನು ಲೆಕ್ಕಿಸದೆ ವೈದ್ಯರು ಮತ್ತು ಇಂಜಿನಿಯರ್ ಗಳಾಗಿ ವೃತ್ತಿಜೀವನವನ್ನು ಮುಂದುವರಿಸಲು ಇದು ಅನುವು ಮಾಡಿಕೊಡುತ್ತದೆ. ಎಲ್ಲಾ ಹಿನ್ನೆಲೆಯ ಮಕ್ಕಳು ವೈದ್ಯರು ಮತ್ತು ಇಂಜಿನಿಯರ್ ಆಗುವ ಕನಸು ಕಾಣುವಂತೆ ಮಾಡಲು ಕೈಗೊಂಡ ಮಹತ್ವದ ಸುಧಾರಣೆಗಳ ಬಗ್ಗೆ ಅವರು ಒತ್ತಿ ಹೇಳಿದರು. ಇದಲ್ಲದೆ, ಬುಡಕಟ್ಟು ಯುವಕರಿಗಾಗಿ ಏಕಲವ್ಯ ಮಾದರಿ ವಸತಿ ಶಾಲೆಗಳ ವಿಸ್ತರಣೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು, ಒಂದು ದಶಕದ ಹಿಂದೆ ಸುಮಾರು 150 ಶಾಲೆಗಳು ಇದ್ದವು, ಇಂದು 470 ಶಾಲೆಗಳಿಗೆ ಏರಿಕೆಯಾಗಿವೆ ಎಂದರು. ಇನ್ನೂ 200 ಕ್ಕೂ ಹೆಚ್ಚು ಶಾಲೆಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದರು.
ಶಿಕ್ಷಣ ಸುಧಾರಣೆಗಳ ಕುರಿತು ವಿವರವಾಗಿ ಮಾತನಾಡಿದ ಶ್ರೀ ಮೋದಿ, ಸೈನಿಕ ಶಾಲೆಗಳಲ್ಲಿ ಹೆಣ್ಣುಮಕ್ಕಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಪ್ರಮುಖ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಹೇಳಿದರು. ಈ ಶಾಲೆಗಳ ಪ್ರಾಮುಖ್ಯತೆ ಮತ್ತು ಸಾಮರ್ಥ್ಯವನ್ನು ಒತ್ತಿ ಹೇಳಿದ ಅವರು, ಪ್ರಸ್ತುತ ನೂರಾರು ಹೆಣ್ಣುಮಕ್ಕಳು ಈ ದೇಶಭಕ್ತಿಯ ವಾತಾವರಣದಲ್ಲಿ ಓದುತ್ತಿದ್ದಾರೆ, ಇದು ಸ್ವಾಭಾವಿಕವಾಗಿ ಅವರಲ್ಲಿ ದೇಶದ ಬಗ್ಗೆ ಸಮರ್ಪಣಾ ಭಾವವನ್ನು ಮೂಡಿಸುತ್ತದೆ ಎಂದು ಹೇಳಿದರು.
ಯುವಜನತೆಯಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ ಸಿ ಸಿ) ಮಹತ್ವದ ಪಾತ್ರವನ್ನು ಎತ್ತಿ ಹಿಡಿದ ಪ್ರಧಾನಿ, ಎನ್ ಸಿ ಸಿ ಯೊಂದಿಗೆ ಸಂಬಂಧ ಹೊಂದಿರುವವರಿಗೆ ಇದು ನಿರ್ಣಾಯಕ ವಯಸ್ಸಿನಲ್ಲಿ ಸಮಗ್ರ ಅಭಿವೃದ್ಧಿ ಮತ್ತು ಮಾನ್ಯತೆಗೆ ಸುವರ್ಣಾವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಎನ್ ಸಿ ಸಿ ಯ ಅಭೂತಪೂರ್ವ ವಿಸ್ತರಣೆಯನ್ನು ಅವರು ಒತ್ತಿ ಹೇಳಿದರು, 2014 ರಲ್ಲಿದ್ದ ಸುಮಾರು 14 ಲಕ್ಷದ ಕೆಡೆಟ್ ಗಳ ಸಂಖ್ಯೆ ಇಂದು 20 ಲಕ್ಷಕ್ಕೂ ಹೆಚ್ಚಿದೆ ಎಂದು ಅವರು ಹೇಳಿದರು.
ದೇಶದ ಯುವಕರ ಉತ್ಸಾಹ ಮತ್ತು ದಿನನಿತ್ಯದ ಕಾರ್ಯಗಳನ್ನು ಮೀರಿ ಹೊಸದನ್ನು ಮಾಡಬೇಕೆಂಬ ಅವರ ಬಯಕೆಯನ್ನು ಒತ್ತಿ ಹೇಳಿದ ಶ್ರೀ ಮೋದಿ, ಸ್ವಚ್ಛ ಭಾರತ ಅಭಿಯಾನದ ಕುರಿತು ಪ್ರತಿಕ್ರಿಯಿಸಿದರು, ಅನೇಕ ನಗರಗಳಲ್ಲಿ ಯುವ ಗುಂಪುಗಳು ಸ್ವಯಂ ಪ್ರೇರಣೆಯಿಂದ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುತ್ತಿವೆ. ಕೆಲವು ಯುವಕರು ಕೊಳಗೇರಿಗಳಲ್ಲಿ ಶಿಕ್ಷಣ ಮತ್ತು ಇತರ ಹಲವಾರು ಉಪಕ್ರಮಗಳಿಗಾಗಿ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು, ಯುವಕರಿಗೆ ಸಂಘಟಿತ ಅವಕಾಶಗಳನ್ನು ಒದಗಿಸುವ ಅಗತ್ಯವನ್ನು ಪ್ರಧಾನಿ ಎತ್ತಿ ತೋರಿಸಿದರು, ಇದರ ಪರಿಣಾಮವಾಗಿ “ಮೇರಾ ಭಾರತ್” ಅಥವಾ ಮೈ ಯಂಗ್ ಇಂಡಿಯಾ ಆಂದೋಲನವನ್ನು ಪ್ರಾರಂಭಿಸಲಾಯಿತು. ಇಂದು 1.5 ಕೋಟಿಗೂ ಹೆಚ್ಚು ಯುವಕರು ನೋಂದಾಯಿಸಿಕೊಂಡು ಸಮಕಾಲೀನ ವಿಚಾರಗಳ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಮಾಜದಲ್ಲಿ ಜಾಗೃತಿ ಮೂಡಿಸಿ, ಯಾವುದೇ ಸಹಾಯವಿಲ್ಲದೆ ತಮ್ಮ ಸಾಮರ್ಥ್ಯದಿಂದಲೇ ಸಕಾರಾತ್ಮಕ ಕೆಲಸ ಮಾಡುತ್ತಿದ್ದಾರೆ ಎಂದರು.
ಕ್ರೀಡಾಸ್ಫೂರ್ತಿಯನ್ನು ಉತ್ತೇಜಿಸುವಲ್ಲಿ ಕ್ರೀಡೆಯ ಪ್ರಾಮುಖ್ಯತೆ ಮತ್ತು ಕ್ರೀಡೆಗಳ ವ್ಯಾಪಕ ಹರಡುವಿಕೆಯಿಂದಾಗಿ ರಾಷ್ಟ್ರದ ಉತ್ಸಾಹವು ಹೇಗೆ ಅಭಿವೃದ್ಧಿಗೊಳ್ಳುತ್ತದೆ ಎಂಬುದರ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಅಭೂತಪೂರ್ವ ಆರ್ಥಿಕ ಬೆಂಬಲ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಕ್ರೀಡಾ ಪ್ರತಿಭೆಗಳನ್ನು ಬೆಂಬಲಿಸಲು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಅವರು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS) ಮತ್ತು ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಖೇಲೋ ಇಂಡಿಯಾ ಉಪಕ್ರಮದ ಪರಿವರ್ತಕ ಶಕ್ತಿಯನ್ನು ಎತ್ತಿ ತೋರಿಸಿದರು. ಕಳೆದ ದಶಕದಲ್ಲಿ ಭಾರತದ ಕ್ರೀಡಾಪಟುಗಳು ವಿವಿಧ ಕ್ರೀಡಾಕೂಟಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದು, ಯುವತಿಯರು ಸೇರಿದಂತೆ ಭಾರತದ ಯುವಜನರು ಜಾಗತಿಕ ವೇದಿಕೆಯಲ್ಲಿ ದೇಶದ ಶಕ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಅಭಿವೃದ್ಧಿಶೀಲ ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವಲ್ಲಿ ಮೂಲಸೌಕರ್ಯದ ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ದೇಶದ ಬೆಳವಣಿಗೆಗೆ ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯಗಳೆರಡೂ ನಿರ್ಣಾಯಕ ಎಂದು ಅವರು ಒತ್ತಿ ಹೇಳಿದರು ಮತ್ತು ಮೂಲಸೌಕರ್ಯ ಯೋಜನೆಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ವಿಳಂಬವು ತೆರಿಗೆದಾರರ ಹಣವನ್ನು ವ್ಯರ್ಥ ಮಾಡುತ್ತದೆ ಮತ್ತು ರಾಷ್ಟ್ರವು ಪ್ರಯೋಜನಗಳಿಂದ ವಂಚಿತವಾಗುತ್ತದೆ ಎಂದು ಅವರು ಹೇಳಿದರು. ಹಿಂದೆ ಇದ್ದ ಯೋಜನಾ ಅನುಷ್ಠಾನದಲ್ಲಿ ವಿಳಂಬ ಮತ್ತು ರಾಜಕೀಯ ಹಸ್ತಕ್ಷೇಪ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ಡ್ರೋನ್ ಗಳನ್ನು ಬಳಸಿಕೊಂಡು ನೈಜ-ಸಮಯದ ವೀಡಿಯೋಗ್ರಫಿ ಮತ್ತು ಮಧ್ಯಸ್ಥಗಾರರೊಂದಿಗೆ ನೇರ ಸಂವಾದ ಸೇರಿದಂತೆ ಮೂಲಸೌಕರ್ಯ ಯೋಜನೆಗಳ ವಿವರವಾದ ಮೇಲ್ವಿಚಾರಣೆಗಾಗಿ ಅವರು ವೈಯಕ್ತಿಕವಾಗಿ ಪರಿಶೀಲಿಸುವ ಪ್ರಗತಿ ವೇದಿಕೆಯ ಸ್ಥಾಪನೆಯನ್ನು ಶ್ರೀ ಮೋದಿ ಪ್ರಸ್ತಾಪಿಸಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಥವಾ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಸಮಸ್ಯೆಗಳಿಂದ ಅಂದಾಜು ₹19 ಲಕ್ಷ ಕೋಟಿ ಮೌಲ್ಯದ ಯೋಜನೆಗಳು ಸ್ಥಗಿತಗೊಂಡಿದ್ದವು ಎಂದು ಅವರು ಹೇಳಿದರು. ಪ್ರಗತಿ ವೇದಿಕಯನ್ನು ಶ್ಲಾಘಿಸಿರುವ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಅದರ ಅನುಭವಗಳಿಂದ ಪ್ರಯೋಜನ ಪಡೆಯಬಹುದೆಂದು ಸಲಹೆ ನೀಡಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನವನ್ನು ಅವರು ಎತ್ತಿ ತೋರಿಸಿದರು. ಹಿಂದಿನ ಅಸಮರ್ಥತೆಯನ್ನು ವಿವರಿಸಲು ಉತ್ತರ ಪ್ರದೇಶದ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಿ, 1972 ರಲ್ಲಿ ಅನುಮೋದಿಸಲಾದ ಸರಯೂ ಕಾಲುವೆ ಯೋಜನೆಯನ್ನು ಪ್ರಸ್ತಾಪಿಸಿದರು, ಇದು 2021 ರಲ್ಲಿ ಪೂರ್ಣಗೊಳ್ಳುವವರೆಗೆ ಐದು ದಶಕಗಳ ಕಾಲ ಸ್ಥಗಿತಗೊಂಡಿತ್ತು. ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗವನ್ನು ಪೂರ್ಣಗೊಂಡ ಬಗ್ಗೆ ಮಾತನಾಡಿದ ಪ್ರಧಾನಿ, 1994 ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಯಿತು ಆದರೆ ದಶಕಗಳಿಂದ ಸ್ಥಗಿತಗೊಂಡಿತ್ತು ಎಂದು ಹೇಳಿದರು. ಅಂತಿಮವಾಗಿ, ಮೂರು ದಶಕಗಳ ನಂತರ, ಇದು 2025 ರಲ್ಲಿ ಪೂರ್ಣಗೊಂಡಿತು ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಒಡಿಶಾದಲ್ಲಿ ಹರಿದಾಸಪುರ-ಪಾರದೀಪ್ ರೈಲು ಮಾರ್ಗವನ್ನು ಪೂರ್ಣಗೊಳಿಸಿರುವುದನ್ನು ಎತ್ತಿ ತೋರಿಸಿದರು. ಈ ಯೋಜನೆಗೆ 1996 ರಲ್ಲಿ ಅನುಮೋದನೆ ನೀಡಲಾಯಿತು ಆದರೆ ಪ್ರಸ್ತುತ ಆಡಳಿತದ ಅವಧಿಯಲ್ಲಿ ಅಂತಿಮವಾಗಿ 2019 ರಲ್ಲಿ ಪೂರ್ಣಗೊಂಡಿತು ಎಂದು ಅವರು ಹೇಳಿದರು. ಅಸ್ಸಾಂನಲ್ಲಿ ಬೋಗಿಬೀಲ್ ಸೇತುವೆಯನ್ನು 1998 ರಲ್ಲಿ ಅನುಮೋದಿಸಿ 2018 ರಲ್ಲಿ ತಮ್ಮ ಸರ್ಕಾರದಿಂದ ಪೂರ್ಣಗೊಳಿಸಿರುವುದನ್ನು ಎತ್ತಿ ತೋರಿಸಿದರು. ಈ ಹಿಂದೆ ಪ್ರಚಲಿತದಲ್ಲಿದ್ದ ವಿಳಂಬದ ಹಾನಿಕಾರಕ ಸಂಸ್ಕೃತಿಯನ್ನು ವಿವರಿಸುವ ನೂರಾರು ಉದಾಹರಣೆಗಳನ್ನು ನೀಡಬಹುದು ಎಂದು ಅವರು ಹೇಳಿದರು. ಇಂತಹ ಪ್ರಮುಖ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸಂಸ್ಕೃತಿಯಲ್ಲಿ ಬದಲಾವಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಹಿಂದಿನ ಅವಧಿಯಲ್ಲಿ ಈ ಸಂಸ್ಕೃತಿಯಿಂದ ಉಂಟಾದ ಗಮನಾರ್ಹ ಹಿನ್ನಡೆಗಳಿಂದಾಗಿ ರಾಷ್ಟ್ರವು ಸರಿಯಾದ ಪ್ರಗತಿಯಿಂದ ವಂಚಿತವಾಯಿತು ಎಂದು ಹೇಳಿದರು. ಮೂಲಸೌಕರ್ಯ ಯೋಜನೆಗಳ ಸರಿಯಾದ ಯೋಜನೆ ಮತ್ತು ಸಕಾಲಿಕ ಕಾರ್ಯಗತಗೊಳಿಸುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಇದನ್ನು ಪರಿಹರಿಸಲು ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅನ್ನು ಪರಿಚಯಿಸಲಾಗಿದೆ ಎಂದು ಹೇಳಿದರು. 1,600 ಡೇಟಾ ಲೇಯರ್ ಗಳನ್ನು ಒಳಗೊಂಡಿರುವ ಪ್ರಧಾನಮಂತ್ರಿ ಗತಿ ಶಕ್ತಿ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳಲು ಅವರು ರಾಜ್ಯಗಳನ್ನು ಉತ್ತೇಜಿಸಿದರು, ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಗಮಗೊಳಿಸಲು ಮತ್ತು ಯೋಜನೆಯ ಅನುಷ್ಠಾನವನ್ನು ವೇಗಗೊಳಿಸಲು. ದೇಶದಲ್ಲಿ ಮೂಲಸೌಕರ್ಯ ಕಾರ್ಯಗಳನ್ನು ತ್ವರಿತಗೊಳಿಸಲು ಗತಿ ಶಕ್ತಿ ಪ್ಲಾಟ್‌ಫಾರ್ಮ್ ಪ್ರಮುಖ ಅಡಿಪಾಯವಾಗಿದೆ ಎಂದು ಅವರು ಹೇಳಿದರು.
ಇಂದಿನ ಯುವಜನರು ತಮ್ಮ ಹೆತ್ತವರು ಎದುರಿಸಿದ ಕಷ್ಟಗಳು ಮತ್ತು ರಾಷ್ಟ್ರದ ಹಿಂದಿನ ಸ್ಥಿತಿಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳುತ್ತಾ, ಕಳೆದ ದಶಕದಲ್ಲಿ ಸಕ್ರಿಯ ನಿರ್ಧಾರಗಳು ಮತ್ತು ಕ್ರಮಗಳು ಇಲ್ಲದಿದ್ದರೆ, ಡಿಜಿಟಲ್ ಇಂಡಿಯಾದ ಪ್ರಯೋಜನಗಳು ಸಾಕಾರಗೊಳ್ಳಲು ವರ್ಷಗಳೇ ಹಿಡಿಯುತ್ತಿದ್ದವು ಎಂದು ಹೇಳಿದರು. ಸಕ್ರಿಯ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಕ್ರಮಗಳು ಭಾರತವನ್ನು ಸಮಯೋಚಿತವಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ಸಮಯಕ್ಕಿಂತ ಮುಂಚಿತವಾಗಿರಲು ಅನುವು ಮಾಡಿಕೊಟ್ಟಿವೆ ಎಂದು ಅವರು ಹೇಳಿದರು. 5ಜಿ ತಂತ್ರಜ್ಞಾನವು ಈಗ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿದ್ದು ಜಾಗತಿಕವಾಗಿ ವೇಗದ ದರಗಳಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.
ಶ್ರೀ ಮೋದಿಯವರು ಹಿಂದಿನ ಅನುಭವಗಳತ್ತ ಗಮನ ಸೆಳೆದರು, ಕಂಪ್ಯೂಟರ್, ಮೊಬೈಲ್ ಫೋನ್ ಮತ್ತು ಎಟಿಎಂಗಳಂತಹ ತಂತ್ರಜ್ಞಾನಗಳು ಭಾರತಕ್ಕಿಂತ ಮುಂಚೆಯೇ ಅನೇಕ ದೇಶಗಳನ್ನು ತಲುಪಿದ್ದವು, ಇಲ್ಲಿಗೆ ಬರಲು ದಶಕಗಳನ್ನು ತೆಗೆದುಕೊಂಡವು. ಆರೋಗ್ಯ ವಲಯದಲ್ಲಿಯೂ ಸಹ, ಸಿಡುಬು ಮತ್ತು ಬಿಸಿಜಿಯಂತಹ ರೋಗಗಳಿಗೆ ಲಸಿಕೆಗಳು ಜಾಗತಿಕವಾಗಿ ಲಭ್ಯವಿದ್ದವು, ಆದರೆ ವ್ಯವಸ್ಥಿತ ಅಸಮರ್ಥತೆಯಿಂದಾಗಿ ಭಾರತ ಹಿಂದುಳಿದಿತ್ತು ಎಂದು ಅವರು ಹೇಳಿದರು. ಹಿಂದಿನ ಕಾಲದ ಕಳಪೆ ಆಡಳಿತ ಈ ವಿಳಂಬಗಳಿಗೆ ಕಾರಣವೆಂದು ಪ್ರಧಾನಮಂತ್ರಿಯವರು ಹೇಳಿದರು. ಅಲ್ಲಿ ನಿರ್ಣಾಯಕ ಜ್ಞಾನ ಮತ್ತು ಅನುಷ್ಠಾನವನ್ನು ಬಿಗಿಯಾಗಿ ನಿಯಂತ್ರಿಸಲಾಯಿತು, ಇದರಿಂದಾಗಿ “ಪರವಾನಗಿ ಪರವಾನಗಿ ರಾಜ್” ಪ್ರಗತಿಯನ್ನು ಕುಂಠಿತಗೊಳಿಸಿತು. ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿಪಡಿಸುವ ಈ ವ್ಯವಸ್ಥೆಯ ದಬ್ಬಾಳಿಕೆಯ ಸ್ವರೂಪವನ್ನು ಅವರು ಯುವಕರಿಗೆ ಒತ್ತಿ ಹೇಳಿದರು.
ಕಂಪ್ಯೂಟರ್ ಆಮದುಗಳ ಆರಂಭಿಕ ದಿನಗಳಲ್ಲಿ, ಕಂಪ್ಯೂಟರ್ ಗಳನ್ನು ಆಮದು ಮಾಡಿಕೊಳ್ಳಲು ಪರವಾನಗಿ ಪಡೆಯುವುದು ದೀರ್ಘವಾದ ಪ್ರಕ್ರಿಯೆಯಾಗಿತ್ತು ಎಂದು ಎತ್ತಿ ತೋರಿಸುತ್ತಾ, ಈ ಅಗತ್ಯವು ಭಾರತದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದನ್ನು ಗಮನಾರ್ಹವಾಗಿ ವಿಳಂಬಗೊಳಿಸಿತು ಎಂದು ಪ್ರಧಾನಿ ಹೇಳಿಸಿದರು.
ಹಿಂದಿನ ಅಧಿಕಾರಶಾಹಿ ಸವಾಲುಗಳನ್ನು ಎತ್ತಿ ತೋರಿಸಿದ ಪ್ರಧಾನಿ, ಮನೆ ನಿರ್ಮಾಣಕ್ಕೆ ಸಿಮೆಂಟ್ ಪಡೆಯಲು ಅನುಮತಿ ಅಗತ್ಯವಾಗಿತ್ತು ಮತ್ತು ಮದುವೆಯ ಸಂದರ್ಭದಲ್ಲಿ ಚಹಾಕ್ಕೆ ಸಕ್ಕರೆ ಪಡೆಯಲು ಸಹ ಪರವಾನಗಿ ಅಗತ್ಯವಿತ್ತು ಎಂದು ಹೇಳಿದರು. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಈ ಸವಾಲುಗಳು ಸಂಭವಿಸಿವೆ ಎಂದು ಒತ್ತಿ ಹೇಳಿದ ಅವರು, ಲಂಚಕ್ಕೆ ಯಾರು ಹೊಣೆ ಮತ್ತು ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸುವ ಮೂಲಕ ಇಂದಿನ ಯುವಕರು ಇದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಹಿಂದಿನ ಅಧಿಕಾರಶಾಹಿ ಅಡೆತಡೆಗಳನ್ನು ಎತ್ತಿ ತೋರಿಸುತ್ತಾ, ಸ್ಕೂಟರ್ ಖರೀದಿಸಲು ಬುಕಿಂಗ್ ಮತ್ತು ಪಾವತಿ ಅಗತ್ಯವಿತ್ತು, ನಂತರ 8-10 ವರ್ಷಗಳ ಕಾಲ ಕಾಯಬೇಕಿತ್ತು, ಸ್ಕೂಟರ್ ಮಾರಾಟಕ್ಕೂ ಸರ್ಕಾರದ ಅನುಮತಿ ಅಗತ್ಯವಿತ್ತು ಎಂದು ಹೇಳಿದರು. ಸಂಸದರಿಗೆ ಕೂಪನ್ ಗಳ ಮೂಲಕ ವಿತರಿಸಲಾಗುತ್ತಿದ್ದ ಗ್ಯಾಸ್ ಸಿಲಿಂಡರ್ ಗಳಂತಹ ಅಗತ್ಯ ವಸ್ತುಗಳನ್ನು ಪಡೆಯುವಲ್ಲಿ ಅಸಮರ್ಥತೆ ಮತ್ತು ಅನಿಲ ಸಂಪರ್ಕಕ್ಕಾಗಿ ಇದ್ದ ಉದ್ದನೆಯ ಸರತಿ ಸಾಲುಗಳನ್ನು ಅವರು ಒತ್ತಿ ಹೇಳಿದರು. ದೂರವಾಣಿ ಸಂಪರ್ಕ ಪಡೆಯಲು ಇದ್ದ ಸುದೀರ್ಘ ಪ್ರಕ್ರಿಯೆಯನ್ನು ವಿವರಿಸಿದ ಅವರು, ಇಂದಿನ ಯುವಕರು ಈ ಸವಾಲುಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಒತ್ತಿ ಹೇಳಿದರು. ಇಂದು ಭವ್ಯ ಭಾಷಣ ಮಾಡುವವರು ತಮ್ಮ ಹಿಂದಿನ ಆಡಳಿತ ಮತ್ತು ರಾಷ್ಟ್ರದ ಮೇಲೆ ಅದರ ಪ್ರಭಾವವನ್ನು ಪರಿಗಣಿಸಬೇಕು ಎಂದು ಅವರು ಹೇಳಿದರು.
“ನಿರ್ಬಂಧಿತ ನೀತಿಗಳು ಮತ್ತು ಪರವಾನಗಿ ರಾಜ್ ಭಾರತವನ್ನು ಜಾಗತಿಕವಾಗಿ ನಿಧಾನಗತಿಯ ಆರ್ಥಿಕ ಬೆಳವಣಿಗೆ ದರಗಳಿಗೆ ತಳ್ಳಿತು” ಎಂದು ಮೋದಿ ಹೇಳಿದರು. ಈ ದುರ್ಬಲ ಬೆಳವಣಿಗೆ ದರವನ್ನು “ಹಿಂದೂ ಬೆಳವಣಿಗೆ ದರ” ಎಂದು ಕರೆಯಲಾಯಿತು, ಇದು ದೊಡ್ಡ ಸಮುದಾಯಕ್ಕೆ ಅವಮಾನವಾಗಿದೆ ಎಂದು ಅವರು ಹೇಳಿದರು. ಅಧಿಕಾರದಲ್ಲಿರುವವರ ಅಸಮರ್ಥತೆ, ತಿಳುವಳಿಕೆಯ ಕೊರತೆ ಮತ್ತು ಭ್ರಷ್ಟಾಚಾರದಿಂದಾಗಿ ಈ ವೈಫಲ್ಯವು ನಿಧಾನಗತಿಯ ಬೆಳವಣಿಗೆಗೆ ಇಡೀ ಸಮಾಜವನ್ನು ಹೊಣೆಗಾರರನ್ನಾಗಿಸಿತು ಎಂದು ಅವರು ಒತ್ತಿ ಹೇಳಿದರು.
ಇಡೀ ಸಮಾಜವನ್ನು ದೂಷಿಸಲು ಮತ್ತು ಕಳಂಕಕ್ಕೆ ಕಾರಣವಾದ ಹಿಂದಿನ ಆರ್ಥಿಕ ದುರುಪಯೋಗ ಮತ್ತು ದೋಷಪೂರಿತ ನೀತಿಗಳನ್ನು ಟೀಕಿಸಿದ ಪ್ರಧಾನಿ, ಐತಿಹಾಸಿಕವಾಗಿ, ಭಾರತದ ಸಂಸ್ಕೃತಿ ಮತ್ತು ನೀತಿಗಳು ನಿರ್ಬಂಧಿತ ಪರವಾನಗಿ ರಾಜ್ ಅನ್ನು ಒಳಗೊಂಡಿರಲಿಲ್ಲ, ಭಾರತೀಯರು ಮುಕ್ತತೆಯನ್ನು ನಂಬಿದ್ದರು ಮತ್ತು ಜಾಗತಿಕವಾಗಿ ಮುಕ್ತ ವ್ಯಾಪಾರದಲ್ಲಿ ತೊಡಗಿಸಿಕೊಂಡವರಲ್ಲಿ ಮೊದಲಿಗರಾಗಿದ್ದರು ಎಂದು ಹೇಳಿದರು. ಭಾರತೀಯ ವ್ಯಾಪಾರಿಗಳು ಯಾವುದೇ ನಿರ್ಬಂಧಗಳಿಲ್ಲದೆ ವ್ಯಾಪಾರಕ್ಕಾಗಿ ದೂರದ ದೇಶಗಳಿಗೆ ಪ್ರಯಾಣಿಸುತ್ತಿದ್ದರು, ಇದು ಭಾರತದ ಸಹಜ ಸಂಸ್ಕೃತಿಯ ಭಾಗವಾಗಿತ್ತು ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಭಾರತದ ಆರ್ಥಿಕ ಸಾಮರ್ಥ್ಯ ಮತ್ತು ಕ್ಷಿಪ್ರ ಬೆಳವಣಿಗೆಯ ಪ್ರಸ್ತುತ ಜಾಗತಿಕ ಮನ್ನಣೆಯು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ ಎಂದು ಅವರು ಹೇಳಿದರು. “ಭಾರತವು ಈಗ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಾಗಿದೆ, ಮತ್ತು ರಾಷ್ಟ್ರದ ಆರ್ಥಿಕತೆಯು ಗಮನಾರ್ಹವಾಗಿ ವಿಸ್ತರಿಸುತ್ತಿದೆ” ಎಂದು ಅವರು ಒತ್ತಿ ಹೇಳಿದರು.
ನಿರ್ಬಂಧಿತ ಪರವಾನಗಿ ರಾಜ್ ಮತ್ತು ದೋಷಪೂರಿತ ನೀತಿಗಳ ಹಿಡಿತದಿಂದ ಮುಕ್ತವಾದ ನಂತರ ರಾಷ್ಟ್ರವು ಈಗ ನಿರಾಳವಾಗಿ ಉಸಿರಾಡುತ್ತಿದೆ ಮತ್ತು ಎತ್ತರಕ್ಕೆ ಏರುತ್ತಿದೆ ಎಂದು ಒತ್ತಿಹೇಳಿದ ಅವರು, ದೇಶದಲ್ಲಿ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ “ಮೇಕ್ ಇನ್ ಇಂಡಿಯಾ” ಉಪಕ್ರಮವನ್ನು ಉಲ್ಲೇಖಿಸಿದರು. ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿ ಎಲ್ ಐ) ಯೋಜನೆ ಮತ್ತು ವಿದೇಶಿ ನೇರ ಹೂಡಿಕೆಗೆ (ಎಫ್ ಡಿ ಐ) ಸಂಬಂಧಿಸಿದ ಸುಧಾರಣೆಗಳನ್ನು ಅವರು ಪ್ರಸ್ತಾಪಿಸಿದರು. ಮೊಬೈಲ್ ಫೋನ್ ಗಳನ್ನು ಪ್ರಧಾನವಾಗಿ ಆಮದು ಮಾಡಿಕೊಳ್ಳುವ ದೇಶದಿಂದ ರಫ್ತುದಾರ ದೇಶವಾಗಿ ಪರಿವರ್ತನೆಗೊಳ್ಳುವ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದೆ ಎಂದು ಅವರು ಒತ್ತಿ ಹೇಳಿದರು.
ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸಾಧನೆಗಳನ್ನು ಒತ್ತಿಹೇಳುತ್ತಾ, ಕಳೆದ ದಶಕದಲ್ಲಿ ರಕ್ಷಣಾ ಉತ್ಪನ್ನಗಳ ರಫ್ತು ಹತ್ತುಪಟ್ಟು ಹೆಚ್ಚಿದೆ ಎಂದು ಹೇಳಿದರು. ಸೌರ ಘಟಕಗಳ ತಯಾರಿಕೆಯಲ್ಲಿ ಹತ್ತು ಪಟ್ಟು ಹೆಚ್ಚಳವನ್ನು ಅವರು ಎತ್ತಿ ತೋರಿಸಿದರು. ಯಂತ್ರೋಪಕರಣಗಳು ಮತ್ತು ಎಲೆಕ್ಟ್ರಾನಿಕ್ ರಫ್ತುಗಳು ಕಳೆದ ದಶಕದಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಂಡಿದೆ, “ಭಾರತವು ಈಗ ವಿಶ್ವದ ಎರಡನೇ ಅತಿದೊಡ್ಡ ಉಕ್ಕು ಉತ್ಪಾದಕ ದೇಶವಾಗಿದೆ” ಎಂದು ಅವರು ಹೇಳಿದರು. ಆಟಿಕೆ ರಫ್ತು ಮೂರು ಪಟ್ಟು ಹೆಚ್ಚಾಗಿದೆ ಮತ್ತು ಕೃಷಿ ರಾಸಾಯನಿಕ ರಫ್ತು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಅವರು ಹೇಳಿದರು. “ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಭಾರತವು “ಮೇಡ್ ಇನ್ ಇಂಡಿಯಾ” ಉಪಕ್ರಮದ ಅಡಿಯಲ್ಲಿ 150 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆಗಳು ಮತ್ತು ಔಷಧಿಗಳನ್ನು ಪೂರೈಸಿದೆ” ಎಂದು ಶ್ರೀ ಮೋದಿ ಹೇಳಿದರು. ಆಯುಷ್ ಮತ್ತು ಗಿಡಮೂಲಿಕೆ ಉತ್ಪನ್ನಗಳ ರಫ್ತಿನ ತ್ವರಿತ ಬೆಳವಣಿಗೆಯನ್ನು ಅವರು ಎತ್ತಿ ತೋರಿಸಿದರು.
ಖಾದಿ ಪ್ರಚಾರಕ್ಕೆ ಹಿಂದಿನ ಸರ್ಕಾರಗಳು ಮಾಡಿದ ಪ್ರಯತ್ನಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಾರಂಭವಾದ ಚಳವಳಿಯೂ ಟೇಕಾಫ್ ಆಗಲಿಲ್ಲ. ಖಾದಿ ಮತ್ತು ಗ್ರಾಮೋದ್ಯೋಗಗಳ ವಹಿವಾಟು ಮೊದಲ ಬಾರಿಗೆ ₹1.5 ಲಕ್ಷ ಕೋಟಿ ದಾಟಿದೆ ಎಂದು ಪ್ರಧಾನಮಂತ್ರಿ ಹೇಳಿಸಿದರು. ಕಳೆದ ದಶಕದಲ್ಲಿ ಉತ್ಪಾದನೆಯು ನಾಲ್ಕು ಪಟ್ಟು ಹೆಚ್ಚಾಗಿದೆ, ಇದು ಎಂ ಎಸ್ ಎಂ ಇ ವಲಯಕ್ಕೆ ಹೆಚ್ಚು ಪ್ರಯೋಜನವನ್ನು ನೀಡಿದೆ ಮತ್ತು ದೇಶಾದ್ಯಂತ ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.
ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸೇವಕರು ಎಂದು ಒತ್ತಿ ಹೇಳಿದ ಶ್ರೀ ಮೋದಿ ಅವರು, ಸಾರ್ವಜನಿಕ ಪ್ರತಿನಿಧಿಗಳಿಗೆ ದೇಶ ಮತ್ತು ಸಮಾಜದ ಧ್ಯೇಯವೇ ಮುಖ್ಯ ಮತ್ತು ಸೇವಾ ಮನೋಭಾವದಿಂದ ಕೆಲಸ ಮಾಡುವುದು ಅವರ ಕರ್ತವ್ಯ ಎಂದು ಹೇಳಿದರು.
ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಅಳವಡಿಸಿಕೊಳ್ಳುವ ಎಲ್ಲಾ ಭಾರತೀಯರ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳಿದ ಪ್ರಧಾನಿ, ಇದು ಕೇವಲ ಒಂದು ಸರ್ಕಾರದ ಅಥವಾ ಒಬ್ಬ ವ್ಯಕ್ತಿಯ ಸಂಕಲ್ಪವಲ್ಲ, 140 ಕೋಟಿ ನಾಗರಿಕರ ಬದ್ಧತೆಯಾಗಿದೆ ಎಂದು ಹೇಳಿದರು. ಈ ಧ್ಯೇಯೋದ್ದೇಶದ ಬಗ್ಗೆ ಅಸಡ್ಡೆ ತೋರುವವರು ಹಿಂದೆ ಬೀಳುತ್ತಾರೆ ಎಂದು ಎಚ್ಚರಿಸಿದರು. ದೇಶವನ್ನು ಮುಂದೆ ಕೊಂಡೊಯ್ಯಲು ಭಾರತದ ಮಧ್ಯಮ ವರ್ಗ ಮತ್ತು ಯುವಜನರ ಅಚಲ ಸಂಕಲ್ಪವನ್ನು ಅವರು ಎತ್ತಿ ತೋರಿಸಿದರು.
ರಾಷ್ಟ್ರದ ಪ್ರಗತಿಯಲ್ಲಿ ಪ್ರತಿಯೊಬ್ಬರ ಪಾತ್ರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಶ್ರೀ ಮೋದಿ, ಸರ್ಕಾರದಲ್ಲಿ ವಿರೋಧವು ಸಹಜ ಮತ್ತು ಪ್ರಜಾಪ್ರಭುತ್ವದಲ್ಲಿ ಅಗತ್ಯವಾಗಿದೆ ಮತ್ತು ನೀತಿಗಳಿಗೂ ವಿರೋಧವಿರುವುದು ಸಹಜವಾಗಿದೆ ಎಂದು ಹೇಳಿದರು. ಆದಾಗ್ಯೂ, ಅತಿಯಾದ ನಕಾರಾತ್ಮಕತೆ ಮತ್ತು ಇತರರನ್ನು ಕುಗ್ಗಿಸುವ ಪ್ರಯತ್ನಗಳು ಭಾರತದ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ಅವರು ಎಚ್ಚರಿಸಿದರು. ಇಂತಹ ಋಣಾತ್ಮಕತೆಯಿಂದ ಮುಕ್ತಿ ಪಡೆದು ನಿರಂತರ ಆತ್ಮಾವಲೋಕನದಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಸದನದಲ್ಲಿ ನಡೆಯುವ ಚರ್ಚೆಗಳು ಮೌಲ್ಯಯುತವಾದ ಒಳನೋಟಗಳನ್ನು ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟ್ರಪತಿಯವರ ಭಾಷಣದಿಂದ ದೊರೆತ ನಿರಂತರ ಪ್ರೇರಣೆಯನ್ನು ಶ್ಲಾಘಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಅವರು ರಾಷ್ಟ್ರಪತಿಯವರಿಗೆ ಹಾಗೂ ಎಲ್ಲ ಗೌರವಾನ್ವಿತ ಸಂಸದರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
*****
Speaking in the Rajya Sabha. https://t.co/OZKM3x0CEX
— Narendra Modi (@narendramodi) February 6, 2025
Sabka Saath, Sabka Vikas is our collective responsibility. pic.twitter.com/j7mNeSiiyC
— PMO India (@PMOIndia) February 6, 2025
The people of the country have understood, tested and supported our model of development. pic.twitter.com/YVuNTSMgZY
— PMO India (@PMOIndia) February 6, 2025
Santushtikaran over Tushtikaran. pic.twitter.com/CbXeCWerM7
— PMO India (@PMOIndia) February 6, 2025
The mantra of our governance is – Sabka Saath, Sabka Vikas. pic.twitter.com/8w9qmoUfhy
— PMO India (@PMOIndia) February 6, 2025
India's progress is powered by Nari Shakti. pic.twitter.com/1bIFRlfBcC
— PMO India (@PMOIndia) February 6, 2025
Prioritising the welfare of the poor and marginalised. pic.twitter.com/lqBg0oqCQc
— PMO India (@PMOIndia) February 6, 2025
Empowering the tribal communities with PM-JANMAN. pic.twitter.com/QKppDDRbaY
— PMO India (@PMOIndia) February 6, 2025
25 crore people of the country have moved out of poverty and become part of the neo middle class. Today, their aspirations are the strongest foundation for the nation's progress. pic.twitter.com/0AIXj8znqC
— PMO India (@PMOIndia) February 6, 2025
The middle class is confident and determined to drive India's journey towards development. pic.twitter.com/VPilrdUE9l
— PMO India (@PMOIndia) February 6, 2025
We have focused on strengthening infrastructure across the country. pic.twitter.com/yUhe2xKuK7
— PMO India (@PMOIndia) February 6, 2025
Today, the world recognises India's economic potential. pic.twitter.com/JrhzIUox5Z
— PMO India (@PMOIndia) February 6, 2025
‘फैमिली फर्स्ट’ को लेकर चलने वाली कांग्रेस 'सबका साथ सबका विकास' के बारे में सोच भी नहीं सकती! pic.twitter.com/ugvHzdWS1C
— Narendra Modi (@narendramodi) February 6, 2025
2014 के बाद देश को एक नया मॉडल देखने को मिला है, जो तुष्टिकरण नहीं, संतुष्टिकरण का है। pic.twitter.com/NnpW9zwAqZ
— Narendra Modi (@narendramodi) February 6, 2025
हमारी हर योजना में सैचुरेशन पर फोकस है, ताकि उसके लाभ से कोई भी वंचित ना रहे। pic.twitter.com/lJ5xfR4Eax
— Narendra Modi (@narendramodi) February 6, 2025
कांग्रेस आज इसलिए 'जय भीम' बोलने को मजबूर हो गई है… pic.twitter.com/qwOwnh9AbF
— Narendra Modi (@narendramodi) February 6, 2025
संविधान को जेब में रखकर जनता-जनार्दन को गुमराह करने वालों ने कैसे बार-बार इसकी धज्जियां उड़ाई हैं, देशवासियों ने इसे देखा है। pic.twitter.com/NyojbMqxgB
— Narendra Modi (@narendramodi) February 6, 2025
तमाशा करने वालों को क्या खबर,
— Narendra Modi (@narendramodi) February 6, 2025
हमने कितने तूफानों को पार कर दीया जलाया है! pic.twitter.com/gpoT9tvo0J
देश के 25 करोड़ लोग गरीबी रेखा से बाहर निकलकर Neo Middle Class का हिस्सा बने हैं। आज उनकी आकांक्षाएं विकसित भारत के संकल्प को मजबूती दे रही हैं। pic.twitter.com/1w8ZgNXQAk
— Narendra Modi (@narendramodi) February 6, 2025
अटकाने, लटकाने और भटकाने के कांग्रेसी कल्चर से किनारा कर हम देशभर में इंफ्रास्ट्रक्चर के तेज विकास में निरंतर जुटे हुए हैं। pic.twitter.com/pIFuwrjjYL
— Narendra Modi (@narendramodi) February 6, 2025
आज भारत की पहचान तेज गति से बढ़ने वाले देश के रूप में है, जिस पर हर भारतीय को गर्व है। pic.twitter.com/4jN3MVPs9S
— Narendra Modi (@narendramodi) February 6, 2025