Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರಪತಿಯವರಿಗೆ ಅವರ ಜನ್ಮದಿನದಂದು ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಅವರಿಗೆ ಅವರ ಜನ್ಮದಿನದಂದು ಶುಭ ಕೋರಿದ್ದಾರೆ.

“ರಾಷ್ಟ್ರಪತಿಯವರಿಗೆ ಜನ್ಮ ದಿನದ ಶುಭಾಶಯಗಳು. ದೇವರು ಅವರಿಗೆ ಆರೋಗ್ಯ ಮತ್ತು ದೀರ್ಘ ಆಯುಷ್ಯ ಕರುಣಿಸಿ, ನಮ್ಮ ದೇಶಕ್ಕೆ ಅವರು ಸೇವೆ ಸಲ್ಲಿಸುವಂತೆ ಹರಸಲಿ.

ಅವರ ಅಧಿಕಾರಾವಧಿಯು ಪ್ರಾರಂಭವಾದಂದಿನಿಂದ, ರಾಷ್ಟ್ರಪತಿ ಅವರು ತಮ್ಮ ಸರಳ ಮತ್ತು ಸಜ್ಜನಿಕೆಯ ಸ್ವಭಾವದಿಂದ ಭಾರತದ ಜನರೊಂದಿಗೆ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ರಾಷ್ಟ್ರಪತಿಯವರು ಸದಾ 125 ಕೋಟಿ ಭಾರತೀಯರ ಅದರಲ್ಲೂ ಬಡ ಮತ್ತು ದುರ್ಬಲರ ಆಶೋತ್ತರಗಳಿಗೆ ಸ್ಪಂದಿಸುವುದನ್ನು ನಾನು ಕಂಡಿದ್ದೇನೆ” ಎಂದು ಪ್ರಧಾನಿ ತಿಳಿಸಿದ್ದಾರೆ..

***