Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಮಾಯಣ ಮತ್ತು ಮಹಾಭಾರತದ ಅರೇಬಿಕ್ ಭಾಷಾಂತರಗಳಿಗಾಗಿ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನಸೀಫ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ರಾಮಾಯಣ ಮತ್ತು ಮಹಾಭಾರತದ ಅರೇಬಿಕ್ ಭಾಷಾಂತರಗಳಿಗಾಗಿ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನಸೀಫ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಮಾಯಣ ಮತ್ತು ಮಹಾಭಾರತ ಮಹಾಗ್ರಂಥಗಳ ಅರೇಬಿಕ್ ಅನುವಾದ ಭಾಷಾಂತರ ಮತ್ತು ಪ್ರಕಟಿಸುವ ಪ್ರಯತ್ನಕ್ಕಾಗಿ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನಸೀಫ್ ಅವರನ್ನು ಅಭಿನಂದಿಸಿದ್ದಾರೆ. 

Xನ ಪೋಸ್ಟ್ ನಲ್ಲಿ, ಮೋದಿಯವರು:

“ರಾಮಾಯಣ ಮತ್ತು ಮಹಾಭಾರತದ ಅರೇಬಿಕ್ ಅನುವಾದಗಳನ್ನು ನೋಡಿ ನನಗೆ ಸಂತೋಷವಾಗಿದೆ. ಇದನ್ನು ಭಾಷಾಂತರಿಸಿ ಪ್ರಕಟಿಸುವಲ್ಲಿ ಅಬ್ದುಲ್ಲಾ ಅಲ್-ಬರೂನ್ ಮತ್ತು ಅಬ್ದುಲ್ ಲತೀಫ್ ಅಲ್-ನೆಸೀಫ್ ಅವರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಅವರ ಈ ಕಾರ್ಯವು ಜಾಗತಿಕವಾಗಿ ಭಾರತೀಯ ಸಂಸ್ಕೃತಿಯ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ” ಎಂದು ಹೇಳಿದ್ದಾರೆ.

“ರಾಮಾಯಣ’ ಮತ್ತು ‘ಮಹಾಭಾರತ’ದ ಅರೇಬಿಕ್ ಭಾಷಾಂತರಗಳನ್ನು ನೋಡಲು ನಾನು ಸಂತೋಷಪಡುತ್ತೇನೆ, ಅವುಗಳನ್ನು ಭಾಷಾಂತರಿಸಲು ಮತ್ತು ಪ್ರಕಟಿಸುವಲ್ಲಿ ಅಬ್ದುಲ್ಲಾ ಅಲ್-ಬ್ಯಾರನ್ ಮತ್ತು ಅಬ್ದುಲ್ ಲತೀಫ್ ಅಲ್-ನಿಸ್ಫ್ ಅವರ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ.

 

 

*****