Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಣಿ ವೇಲು ನಾಚ್ಚಿಯಾರ್ ಅವರ ಜನ್ಮ ದಿನದ ಅಂಗವಾಗಿ  ಪ್ರಧಾನಮಂತ್ರಿಗಳಿಂದ ಅವರ ಸ್ಮರಣೆ


ರಾಣಿ ವೇಲು ನಾಚ್ಚಿಯಾರ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಚ್ಚಿಯಾರ್ ಅವರನ್ನು ಧೈರ್ಯಶಾಲಿ ಮಹಿಳೆ ಎಂದು ಸ್ಮರಿಸಿದ್ದಾರೆ. ಅಪ್ರತಿಮ ಶೌರ್ಯ ಮತ್ತು ತಂತ್ರಗಾರಿಕಾ ಕೌಶಲ್ಯದೊಂದಿಗೆ ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಅವರು ವೀರೋಚಿತ ಹೋರಾಟ ನಡೆಸಿದರು ಎಂದು ಶ್ರೀ ಮೋದಿ ಅವರು  ಬಣ್ಣಿಸಿದ್ದಾರೆ.

ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ: 

“ಧೈರ್ಯಶಾಲಿ ರಾಣಿ ವೇಲು ನಾಚ್ಚಿಯಾರ್ ಅವರ ಜನ್ಮದಿನದಂದು ಅವರ ಸ್ಮರಣೆ! ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಅವರು ವೀರೋಚಿತ ಹೋರಾಟ ನಡೆಸಿ ಅಪ್ರತಿಮ ಶೌರ್ಯ ಮತ್ತು ತಂತ್ರಗಾರಿಕಾ ಕೌಶಲ್ಯ ಪ್ರದರ್ಶಿಸಿದರು. ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅವರು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ತುಂಬಿದರು. ಮಹಿಳಾ ಸಬಲೀಕರಣವನ್ನು ವರ್ಧಿಸುವಲ್ಲಿ ಅವರ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.”

 

 

*****