Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯೋತ್ಸವ ಮೇಳ ಮೈದಾನದಲ್ಲಿ ಛತ್ತೀಸ್ ಘಡ ರಾಜ್ಯೋತ್ಸವ್ – 2016 ಉದ್ಘಾಟಿಸಿ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣ

ರಾಜ್ಯೋತ್ಸವ ಮೇಳ ಮೈದಾನದಲ್ಲಿ ಛತ್ತೀಸ್ ಘಡ  ರಾಜ್ಯೋತ್ಸವ್  –  2016 ಉದ್ಘಾಟಿಸಿ   ಪ್ರಧಾನ ಮಂತ್ರಿ  ಅವರು ಮಾಡಿದ ಭಾಷಣ

ರಾಜ್ಯೋತ್ಸವ ಮೇಳ ಮೈದಾನದಲ್ಲಿ ಛತ್ತೀಸ್ ಘಡ  ರಾಜ್ಯೋತ್ಸವ್  –  2016 ಉದ್ಘಾಟಿಸಿ   ಪ್ರಧಾನ ಮಂತ್ರಿ  ಅವರು ಮಾಡಿದ ಭಾಷಣ


ವೇದಿಕೆಯ ಮೇಲೆ ವಿರಾಜಮಾನರಾಗಿರುವ ಛತ್ತೀಸ್ ಘಡದ ರಾಜ್ಯಪಾಲರಾದ ಶ್ರೀಮಾನ್ ಬಲರಾಮ್ ದಾಸ್‍ ಟನ್ಡನ್ ಜಿ , ಛತ್ತೀಸ್ ಘಡದ ಜನಪ್ರಿಯ ಮುಖ್ಯಮಂತ್ರಿಯಾದ ಡಾ.ರಮಣಸಿಂಹಜೀ, ಕೇಂದ್ರದಲ್ಲಿ ಸಚಿವ ಸಂಪುಟದ ನನ್ನ ಸಂಗಡಿಗ ಶ್ರೀಮಾನ್ ಗೌರಿಶಂಕರ್ ಅಗರ್ ವಾಲ್ ಜಿ , ಛತ್ತೀಸ್ ಘಡ್ ಸರ್ಕಾರದ ಸಕಲ ಮಂತ್ರಿವರ್ಯರೆ, ಸಂಸದ ಶ್ರೀ ರಮೇಶ್ ಜಿ . ವೇದಿಕೆಯ ಮೇಲೆ ವಿರಾಜಮಾನರಾಗಿರುವ ಮಹನೀಯರೇ ಮತ್ತು ವಿಶಾಲ ಸಂಖ್ಯೆಯಲ್ಲಿ ಆಗಮಿಸಿರುವ ಛತ್ತೀಸ್ ಘಡದ ನನ್ನ ಪ್ರಿಯ ಸಹೋದರ ಮತ್ತು ಸಹೋದರಿಯರೆ,

ಈಗಂತೂ ದೇಶ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ಎಲ್ಲಾ ಕಡೆ ದೀಪಾವಳಿಯನ್ನು ಆಚರಿಸಲಾಗುತ್ತಿದೆ

ಮತ್ತು ನನಗೆ ಇಂತಹ ಸಮಯದಲ್ಲಿ ಛತ್ತೀಸಘಡಕ್ಕೆ ಬರುವ ಅವಕಾಶ ಸಿಕ್ಕಿತು. ನಾನು ನಿಮ್ಮೆಲ್ಲರಿಗೂ ದೀಪಾವಳಿಯ ಪವಿತ್ರ ಹಬ್ಬಕ್ಕೆ ಬಹಳ-ಬಹಳ ಶುಭಾಶಯಗಳನ್ನು ಹೇಳುತ್ತೇನೆ. ಇಂದು ನನ್ನದು ಒಂದು ವಿಶೇಷ ಸೌಭಾಗ್ಯವಾಗಿದೆ. ತಾಯಂದಿರು, ಸಹೋದರಿಯರು ಆಶೀರ್ವಾದ ಮಾಡಿದಾಗ ನಿಮ್ಮ ಕೆಲಸ ಮಾಡುವ ಶಕ್ತಿ ಅನೇಕ ಪಟ್ಟು ಹೆಚ್ಚಾಗುತ್ತದೆ. ಇಂದು ಈ ರಕ್ಷಾ ಬಂಧನ ಹಬ್ಬದಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಪೂರಾ ಛತ್ತೀಸ್ ಘಡ ದ ಸಹೋದರಿಯರು ಬಂದು ನನಗೆ ಆಶೀರ್ವಾದ ಮಾಡಿದ್ದಾರೆ. ವಿಶೇಷವಾಗಿ ನನ್ನ ಆದಿವಾಸಿ ಸಹೋದರಿಯರು ನನ್ನನ್ನು ಆಶೀರ್ವದಿಸಿದ್ದಾರೆ. ನಾನು ಈ ಎಲ್ಲಾ ಸಹೋದರಿಯರಿಗೂ ನಮಸ್ಕರಿಸುತ್ತೇನೆ. ನಿಮ್ಮ ಈ ಸಹೋದರ ನಿಮ್ಮ ಆಶೀರ್ವಾದದಿಂದ ತಾಯಿ ಭಾರತಿಯ ಕಲ್ಯಾಣಕ್ಕಾಗಿ ನೂರಿಪ್ಪತ್ತೈದು ಕೋಟಿ ದೇಶವಾಸಿಗಳ ಒಳಿತಿಗಾಗಿ ಕೆಲಸ ಮಾಡುವುದರಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಮಾಡುವುದಿಲ್ಲ ಎಂಬ ಭರವಸೆ ಕೊಡುತ್ತೇನೆ.

ಇಂದು ಛತ್ತೀಸ್ ಘಡದ ನಮ್ಮ ರಾಜ್ಯಪಾಲರು, ನಮ್ಮೆಲ್ಲರ ಶ್ರೇಷ್ಠ ನಾಯಕರಾದ ಶ್ರೀಮಾನ್ ಬಲರಾಮ್

ದಾಸ್ ಜಿ ಯವರ ಜನ್ಮದಿನ. ನಾನು ಅವರಿಗೆ ಬಹಳ-ಬಹಳ ಅಭಿನಂದನೆಗಳನ್ನು ಹೇಳುತ್ತೇನೆ. ಇಂದು ಎಂತಹ ಮಹತ್ವಪೂರ್ಣ ದಿನವೆಂದರೆ ಇದಕ್ಕಾಗಿ ಭಾರತದ ಪೂರ್ವ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಜೀಯವರಿಗೆ ನಾನು ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಇಂದು ಇಡೀ ಛತ್ತೀಸ್ ಘಡದ ಕಡೆಯಿಂದ ಇಡೀ ಉತ್ತರಾಖಂಡದ ಕಡೆಯಿಂದ, ಇಡೀ ಬಿಹಾರದ ಕಡೆಯಿಂದ, ಇಡೀ ಜಾರ್ಖಂಡ್ ಕಡೆಯಿಂದ, ನಾವೆಲ್ಲರೂ ಅಟಲ್ ಬಿಹಾರಿ ವಾಜಪೇಯಿಜೀಯವರಿಗೆ ಬಹಳ – ಬಹಳ ಧನ್ಯವಾದಗಳನ್ನು ಹೇಳುತ್ತೇವೆ. ಛತ್ತೀಸ್ ಘಡದ ನಿರ್ಮಾಣ ಮಾಡಿದ್ದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಯಾವುದೇ ರಾಜ್ಯದ ರಚನೆ ಎಷ್ಟು ಶಾಂತಿಪೂರ್ಣರೀತಿಯಲ್ಲಾಗಿತ್ತು, ಪ್ರೀತಿ ತುಂಬಿದ ವಾತಾವರಣದಲ್ಲಾಗಿತ್ತು, ಆತ್ಮೀಯತೆಯ ಭಾವನೆಗೆ ಇನ್ನೂ ಹೆಚ್ಚಿನ ಶಕ್ತಿ ತುಂಬುವ ರೀತಿಯಲ್ಲಾಗಿತ್ತು ಎಂದರೆ ಛತ್ತೀಸ್ ಘಡ ನಿರ್ಮಾಣವಾಗಲಿ, ಜಾರ್ಖಂಡ್ ನ ನಿರ್ಮಾಣವಾಗಲಿ ಉತ್ತರಾಖಂಡದ ನಿರ್ಮಾಣವಾಗಲಿ. ಮುಂಬರುವ ಪ್ರತಿ ಪೀಳಿಗೆಯವರೆಲ್ಲರನ್ನೂ ಒಟ್ಟುಗೂಡಿಸಿ ಪ್ರತಿಯೊಬ್ಬರಿಗೂ ಸಮಾಧಾನವಾಗುವಂತೆ ಪ್ರಜಾತಂತ್ರದ ಸಂಪ್ರದಾಯ ಮತ್ತು ಶಿಷ್ಟಾಚಾರಗಳನ್ನು ಪಾಲಿಸುತ್ತಾ ರಾಜ್ಯರಚನೆ ಹೇಗೆ ಮಾಡಬಹುದು ಎಂಬುದಕ್ಕೆ ವಾಜಪೇಯಿಜೀಯವರು ಬಹಳ ದೊಡ್ಡ ಉದಾಹರಣೆಯನ್ನು ಪ್ರಸ್ತುತ ಪಡಿಸಿದ್ದಾರೆ. ನಮ್ಮ ದೇಶದಲ್ಲಿ ರಾಜ್ಯಗಳ ನಿರ್ಮಾಣವು ಎಂತೆಂತಹ ಕಟುತ್ವಗಳ್ಳನ್ನು ಹುಟ್ಟು ಹಾಕಿತ್ತು ಯೆನ್ನುವುದು ನಮಗೆ ಗೊತ್ತು. ಎಂತೆಂತಹ ವಿವಾದಗಳನ್ನು ಹುಟ್ಟು ಹಾಕಿತ್ತು., ಪ್ರತೇಕ ರಾಜ್ಯ ರಚನೆಯಾಗಿ ವಿಕಾಸದ ಹಾದಿಯ ಪಯಣವಾಗದೆ ಸರಿಯಾದ ರೀತಿಯಲ್ಲಿ ಕೆಲಸವಾಗದಿದ್ದರೆ ಯಾವಾಗಲೂ ವೈರಭಾವನೆಯ ನಡುವೆ ವ್ಯವಹರಿಸುತ್ತಿರುತ್ತಾರೆ. ನಾವು ಭಾಗ್ಯಶಾಲಿಗಳು. ವಾಯಪೇಯಿಜೀಯಂತಹ ಮಹಾ ನಾಯಕರು ನಮಗೆ ಛತ್ತೀಸ್ಅ ಘಡ್ ಅನ್ನು ಕೊಟ್ಟರು. 16 ವರ್ಷಗಳ ಹಿಂದೆ ರಾಜ್ಯದ ರಚನೆಯಾದಾಗ ಹಿಂದೂಸ್ಥಾನದ ರಾಜ್ಯಗಳ ವಿಕಾಸದ ಪಯಣದಲ್ಲಿ ಈ ಆದಿವಾಸಿ ವಿಸ್ತಾರವಾದ ನಕ್ಸಲರ ಪ್ರಭಾವ ಇರುವ ಪ್ರದೇಶವು ಭಾರತದ ವಿಕಸಿತ ರಾಜ್ಯಗಳ ಜೊತೆ ಪೈಪೋಟಿಗಿಳಿಯುತ್ತೆಂದು ಯಾರು ತಾನೆ ಯೋಚಿಸಿದ್ದರು ಮತ್ತು ವಿಕಾಸದ ವಿಷಯದಲ್ಲಿ ಮುಂದೆ ಹೋಗುತ್ತಾರೆಂದು ಯಾರು ತಾನೆ ಆಲೋಚಿಸಿದ್ದರು. 13 ವರ್ಷಗಳ ತನಕ ಡಾ. ರಮಣಸಿಂಹಜೀರವರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದೆ. ನಮ್ಮೆಲ್ಲರ ಮಂತ್ರವು ವಿಕಾಸ ಎಂಬುದಾಗಿದೆ. ದೇಶದ ಪ್ರತಿ ಸಮಸ್ಯೆಯ ಪರಿಹಾರ ಕೇವಲ ಒಂದೇ ಮಾರ್ಗದಿಂದ ಸಾಧ್ಯ ಮತ್ತು ಆ ಮಾರ್ಗವೇ ವಿಕಾಸದ ಮಾರ್ಗ.

ನಮಗೆ ಎಲ್ಲೆಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿದೆ ಆ ಎಲ್ಲಾ ರಾಜ್ಯಗಳಲ್ಲಿ ಮತ್ತು ಈಗ ಭಾರತ ಸರ್ಕಾರದಲ್ಲಿ ನಾವು ವಿಕಾಸದ ಮಾರ್ಗದಲ್ಲಿ ಮುಂದೆ ನಡೆಯುವುದರಲ್ಲಿ ಪೂರಾ ಸಮರ್ಪಣಾ ಭಾವದಿಂದ ಪ್ರಯತ್ನಿಸುತ್ತಿದ್ದೇವೆ. ನಮ್ಮೆಲ್ಲರ ಮಾರ್ಗದರ್ಶಕರ ಚಿಂತನೆಗಳ ತಳಪಾಯದ ಮೇಲೆ, ಅವರ ಚಿಂತನೆಗಳ ಬೆಳಕಿನಲ್ಲಿ ನಾವು ನಮ್ಮ ನೀತಿಯನ್ನು ರೂಪಿಸುತ್ತಿರುವುದು. ರಣನೀತಿಗಳನ್ನು ಸಿದ್ಧಪಡಿಸುತ್ತಿರುವುದು, ಇದು ನನ್ನ ಸೌಭಾಗ್ಯವಾಗಿದೆ. ಸಮಾಜದ ತುಟ್ಟತುದಿಯಲ್ಲಿರುವ ವ್ಯಕ್ತಿಯ ಒಳಿತಿಗಾಗಿ ನಾವು ಪವಿತ್ರ ಭಾವ ದಿಂದ , ಸೇವಾಮನೋಭಾವದಿಂದ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತಿದ್ದೇವೆ. ನಮ್ಮ ಪ್ರೇರಣಾಪುರುಷ ಪಂಡಿತ ದೀನ್ ದಯಾಳ್ ಉಪಾಧ್ಯಾಯರವರ ಜನ್ಮ ಶತಾಭ್ಡಿಯ ವರ್ಷವನ್ನು ಬಡವರ ಕಲ್ಯಾಣದ ವರ್ಷದ ರೂಪದಲ್ಲಿ ವರ್ಷಪೂರ್ತಿ ಸರ್ಕಾರಗಳು, ಸಮಾಜ, ಸ್ವಯಂಸೇವಾ ಸಂಘಟನೆಗಳು, ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ತಮ್ಮ ಸಮಯವನ್ನು ಗುರಿಯಾಗಿಸಿಕೊಳ್ಳುವಂತೆ ಇಚ್ಛಿಸುತ್ತೇವೆ. ಇಂದು ಆ ಮಹಾಪುರುಷ ದೀನ್ ದಯಾಳ್ ಉಪಾಧ್ಯಾಯರ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಸೌಭಾಗ್ಯ ದೊರಕಿತು. ಜನಪಥದಿಂದ ರಾಜಪಥದವರೆಗೆ ಒಂದು ಚೇತನಾಪಥದ್ದು ಕೂಡ. ಪಂಡಿತ ದೀನ್ ದಯಾಳ್ ಉಪಾಧ್ಯಾಯರ ಚಿಂತನೆಗಳ ಪರಿಚಯವನ್ನು ಒಂದು ಮಾತಿನಲ್ಲಿ ಮಾಡುವುದಾದರೆ ಏಕಾತ್ಮತೆಯು ಏಕಾತ್ಮಪಥವನ್ನು ನಿರ್ಮಿಸಿದೆ. ನಾನು ಬೆಳಿಗ್ಗೆ ಇಲ್ಲಿ ಬಂದಾಗಿನಿಂದ ಪ್ರತಿಯೊಂದು ಸ್ಥಳಕ್ಕೂ ಹೋಗಿ ಯೋಜನೆಗಳನ್ನು ನೋಡುತ್ತಿದ್ದೆ. ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುವಂತಹ ಯೋಜನೆಗಳು ರೂಪುಗೊಂಡಿವೆ. ನಿರ್ಮಾಣ ಕಾರ್ಯ ಉತ್ತಮವಾಗಿದೆ. ಇವತ್ತಲ್ಲ 50 ವರ್ಷಗಳ ನಂತರ ಯಾರಾದರೂ ಛತ್ತೀಸ್ ಘಡಕ್ಕೆ ಬಂದು ನವ್ಯರಾಯಪುರವನ್ನು ನೋಡಿದಾಗ, ಏಕಾತ್ಮಪಥವನ್ನು ನೋಡಿದಾಗ ಹಿಂದೂಸ್ಥಾನದ ಒಂದು ಸಣ್ಣ ರಾಜ್ಯ ಕೂಡಾ ಎಂತಹ ಪವಾಡ ಸದೃಶ ಕೆಲಸ ಮಾಡಬಲ್ಲದು ಎಂದು ಅವರಿಗೆ ಅನಿಸುತ್ತದೆ. ಆದಿವಾಸಿ ಕ್ಷೇತ್ರ ಹೇಗೆ ಒಂದು ಹೊಸ ಕಾಂತಿಯನ್ನು ತರಬಲ್ಲದು. ಇಂದು ಒಂದು ಪ್ರಕಾರದ ಶಿಲಾನ್ಯಾಸ ಆಗಿರುವುದು ಇದರ ಸಂದೇಶವಾಗಿದೆ.ಛತ್ತೀಸ್ ಘಡದಲ್ಲಿ ಇಂದು ಯಾವ ತಳಪಾಯ ಹಾಕಲಾಗುತ್ತಿದೆಯೋ ಅದು 21ನೇ ಶತಮಾನದ್ದು, ಇಂದು ಯೋಜನೆಗಳನ್ನು ವೃದ್ಧಿಗೊಳಿಸಲಾಗುತ್ತಿದೆ. ಅತಿ ಕಡುಬಡವರ ಕಲ್ಯಾಣ ಕಾರ್ಯಕ್ಕೆ ಶಕ್ತಿಯನ್ನು ನೀಡಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಮೂಲಕ ಇಲ್ಲಿರುವ ಪ್ರಾಕೃತಿಕ ಸಂಪತ್ತಿನ ಮೌಲ್ಯವರ್ಧನೆ ಮಾಡಿ ಭಾರತದ ಆರ್ಥಿಕ ವ್ಯವಸ್ಥೆಗೂ ಶಕ್ತಿ ತುಂಬುವ ಪ್ರಯತ್ನವನ್ನು ಛತ್ತೀಸ್ ಘಡದ ಭೂಮಿ ಇಲ್ಲಿಯ ನಾಗರಿಕರ ಮೂಲಕ,ಇಲ್ಲಿನ ಸರ್ಕಾರದ ಮೂಲಕ ಡಾ.ರಮಣಸಿಂಹಜೀಯವರ ತಂಡವು ಕೆಲಸ ಮಾಡುತ್ತಿದೆ. ಇವರು ಮಾಡುತ್ತಿರುವ ಕೆಲಸದ ಪ್ರಭಾವ ಇಡೀ ಶತಮಾನದ ಮೇಲೆ ಇರುತ್ತದೆ. ಹೀಗೆ ಒಂದು ಬಲವತ್ತಾದ ಅಡಿಪಾಯ ಸಿದ್ಧವಾಗುತ್ತಿದೆ. ಇದು ಚಟ್ಟಿಯ ಘಡದ ಭಾಗ್ಯವನ್ನು ಬದಲಾಯಿಸುತ್ತದೆ. ಇಷ್ಟೇ ಅಲ್ಲ ಇದು ಭಾರತದ ಭಾಗ್ಯವನ್ನು ಬದಲಾಯಿಸುವುದರಲ್ಲ್ಲೂ ಮುಖ್ಯ ಪಾತ್ರ ವಹಿಸುತ್ತದೆ.

ಇಂದು ಡಾ. ರಮಣಸಿಂಹಜೀ ನನ್ನನ್ನು ತಮಗೆ ಪ್ರಿಯವಾದ ಯೋಜನೆ ಜಂಗಲ್ ಸಫಾರಿಯಲ್ಲಿ ಸುತ್ತಾಡಲು ಕರೆದುಕೊಂಡು ಹೋಗಿದ್ದರು. ಹುಲಿ ಅವರನ್ನು ಗುರುತು ಹಿಡಿಯುತ್ತಿದೆ ಎಂದು ಅನಿಸುತ್ತಿತ್ತು. ಕಣ್ಣಿಗೆ ಕಣ್ಣು ಸೇರಿಸಲೆಂದು ಬಂದಂತಿತ್ತು. ಛತ್ತೀಸ್ ಘಡದ ಜನರು ಮಾತ್ರವಲ್ಲ ದೇಶದ ಇತರ ಭಾಗಗಳಿಂದಲೂ ಜನರು ಈ ಪ್ರವಾಸದ ದೃಷ್ಟಿಯಿಂದ ಈ ನೈಸರ್ಗಿಕ ಪರಿಸರದಲ್ಲಿ ಸಿದ್ಧಪಡಿಸಿರುವ ಜಂಗಲ್ ಸಫಾರಿಯನ್ನು ನೋಡಲು ಬರುತ್ತಾರೆ ಎಂಬ ವಿಶ್ವಾಸ ನನಗಿದೆ. ಪ್ರವಾಸೋದ್ಯಮವು ಅಭಿವೃದ್ಧಿಗೊಳ್ಳಲು ತುಂಬಾ ಸಾಧ್ಯತೆ ಇದೆ.ರಾಜ್ಯದ ಬಳಿ ಪ್ರವಾಸೋದ್ಯಮಕ್ಕೆ ಬಲ ನೀಡಲು ಅಂತರ್ಗತ ಶಕ್ತಿಗಳು ಬಹಳಷ್ಟು ಇವೆ. ಇಲ್ಲಿನ ಶಿಲ್ಪಕಲೆ ಪ್ರವಾಸಿಗಳನ್ನು ಆಕರ್ಷಿಸುವ ಒಂದು ಮಹತ್ವಪೂರ್ಣವಾದ ಭಾಗವಾಗಿದೆ. ಇಲ್ಲಿಯ ಅರಣ್ಯ, ಇಲ್ಲಿನ ನೈಸರ್ಗಿಕ ಸಂಪತ್ತು ಪ್ರವಾಸಿ ಜನರಲ್ಲಿ ಮೂಲಕ್ಕೆ ಹಿಂದಿರುಗುವ ಭಾವನೆ ಹುಟ್ಟಿಸುವಂತಿದೆ. ಅವರನ್ನು ಪರಿಸರ ಪ್ರವಾಸಕ್ಕೆ ಆಹ್ವಾನಿಸಿ. ಛತ್ತೀಸ್ಢ್ನ ಘಡದ ಕಾಡುಗಳಲ್ಲಿ ಪರಿಸರ ಪ್ರವಾಸದ ಸಾಧ್ಯತೆ ಬಹಳ ಹೆಚ್ಚಾಗಿದೆ. ಪ್ರವಾಸೋದ್ಯಮ ಎಂತಹ ಕ್ಷೇತ್ರವೆಂದರೆ ಅದರಲ್ಲಿ ಬಹಳ ಕಡಿಮೆ ಬಂಡವಾಳ ಹೂಡಿದರೆ ಬಹಳ ಹೆಚ್ಚು ಜನರಿಗೆ ಉದ್ಯೋಗ ಸಿಗುತ್ತದೆ. ಒಂದು ಕಾರ್ಖಾನೆಯನ್ನು ಹಾಕಲು ಎಷ್ಟೋ ಬಂಡವಾಳ ಹೂಡಿ ಅದರಿಂದ ಎಷ್ಟು ಜನರಿಗೆ ಉದ್ಯೋಗ ದೊರಕುತ್ತದೋ ಅದರಲ್ಲಿ ಹತ್ತನೇ ಒಂದು ಭಾಗದಷ್ಟು ಬಂಡವಾಳ ಹಾಕಿದರೆ ಅಧಿಕ ಜನರಿಗೆ ಪ್ರವಾಸೋದ್ಯಮದಿಂದ ಉದ್ಯೋಗ ಸಿಗುತ್ತದೆ ಮತ್ತು ಪ್ರವಾಸೋದ್ಯಮವು ಅತಿ ಬಡವ ಕೂಡಾ ಸಂಪಾದನೆ ಮಾಡಬಲ್ಲಂತಹ ಕ್ಷೇತ್ರವಾಗಿದೆ. ಆಟೋರಿಕ್ಷಾದವನು ಕೂಡಾ ಸಂಪಾದಿಸುತ್ತಾನೆ. ಗೊಂಬೆ ಮಾರುವವ ಕೂಡಾ ಸಂಪಾದಿಸುತ್ತಾನೆ. ಹಣ್ಣು, ಹೂವು ಮಾರುವವರು ಸಂಪಾದಿಸುತ್ತಾರೆ. ಚಾಕೋಲೇಟ್, ಬಿಸ್ಕೆಟ್ ಮಾರುವವರು ಸಂಪಾದಿಸುತ್ತಾರೆ. ಚಹಾ ಮಾರುವವರು ಸಂಪಾದಿಸುತ್ತಾರೆ. ಇದು ಕಡು ಬಡವನಿಗೂ ಉದ್ಯೋಗ ಕೊಡುತ್ತದೆ. ಆದ್ದರಿಂದ ಈ ಹೊಸ ರಾಯಪುರ ಈ ಜಂಗಲ್ ಸಫಾರಿ ಏಕಾತ್ಮಪಥಗಳು ವಿಕಾಸದ ಆವಾಸಗಳಂತೂ ಆಗಿವೆ. ಆದರೆ ಭವಿಷ್ಯದಲ್ಲಿ ಪ್ರವಾಸೋದ್ಯಮದ ಗುರಿಯೂ ಆಗಬಲ್ಲದು. ಡಾ. ರಮಣಸಿಂಹಜಿಯವರು ನನಗೆ ನಿರಂತರವಾಗಿ ಈ ವಿಷಯಗಳ ವಿವರಗಳನ್ನು ಹೇಳುತ್ತಿದ್ದರು. ಅದರಿಂದ ನನಗೆ ವಿಶ್ವಾಸವಾಗಿದೆ. ಯಾವ ಕನಸುಗಳನ್ನು ಅವರು ಕಂಡಿದ್ದಾರೋ ಅವು ಬಹಳ ಬೇಗನೆ ಭವಿಷ್ಯದಲ್ಲಿ ಇಡೀಛಾತ್ತ್ತಿಸ್ ಘಡದ ಕಣ್ಣುಗಳ ಎದುರಿಗೆ ಸಕಾರವಾಗುತ್ತವೆಂದು. ಅದು ರಮಣ ಸಿಂಹಜಿಯವರ ನಾಯಕತ್ವದಲ್ಲಿ ಆಗುತ್ತದೆ. ಇದು ಬಹಳ ಸಂತಸದ ವಿಷಯ.

ಸೋದರ ಸೋದರಿಯರೆ ನಾನು ಪಂಡಿತ ದೀನ್ ದಯಾಳ್ ಉಪಾಧ್ಯಾಯರವರ ಜನ್ಮ ಶತಾಭ್ಡಿಯ ಮಾತನಾಡುತ್ತಿರುವಾಗ ಈ ದೇಶದಲ್ಲಿ ಬಡತನವನ್ನು ನಿರ್ಮೂಲನ ಮಾಡಲು, ಬಡತನದಿಂದ ಮುಕ್ತಿಪಡೆಯಲು, ಕೇಂದ್ರವಾಗಲಿ, ರಾಜ್ಯವಾಗಲಿ, ಪಂಚಾಯತಿಯಾಗಲಿ ಅಥವಾ ಪಾಲಿಕೆಯಾಗಲಿ ಎಲ್ಲರೂ ಸೇರಿ ಪೂರ್ಣ ಬಲವನ್ನು ಹಾಕಿ ಬಡತನ ನಿರ್ಮೂಲನೆಯ ಯುದ್ಧವನ್ನು ಹೆಗಲಿಗೆ ಹೆಗಲು ಜೋಡಿಸಿ ಹೋರಾಡಬೇಕಾಗಿದೆ ಎನ್ನುತ್ತೇನೆ. ಬಡತನದಿಂದ ಮುಕ್ತಿ ಪಡೆಯುವ ಮಾರ್ಗ ಬಡತನದಲ್ಲಿ ಜೀವನ ನಡೆಸುವವರಿಗೆ ಕಾಣಿಕೆಗಳನ್ನು ಹಂಚಿ ತಡೆಯಲು ಸಾಧ್ಯವಿಲ್ಲ. ಅವರನ್ನೂ ಸಮರ್ಥರನ್ನಾಗಿ ಮಾಡಬೇಕು. ಅವರನ್ನು ಶಿಕ್ಷಿತರಾಗಿ ಮಾಡಬೇಕು. ಅವರಿಗೆ ಕಲೆಗಳನ್ನು ಕಲಿಸಬೇಕು. ಅವರಿಗೆ ಕೆಲಸಮಾಡಲು ಸಲಕರಣೆಗಳನ್ನು ಕೊಡಬೇಕು. ಅವರಿಗೆ ಕೆಲಸ ಮಾಡಲು ಅವಕಾಶ ಕೊಡಬೇಕು. ಆಗ ಕೇವಲ ತಮ್ಮ ಕುಟುಂಬದ ಬಡತನವನ್ನು ಮಾತ್ರ ಓಡಿಸುವುದಿಲ್ಲ. ನೆರೆಹೊರೆಯ ಒಂದೆರೆಡು ಕುಟುಂಬಗಳ ಬಡತನವನ್ನು ಓಡಿಸಲು ಕೂಡ ಅವರಲ್ಲಿ ಶಕ್ತಿ ಬರುತ್ತದೆ. ಆದ್ದರಿಂದ ಬಡವರ ಸಬಲೀಕರಣದ ದಿಸೆಯಲ್ಲಿ ನಾವು ಕೆಲಸಕ್ಕೆ ಒತ್ತು ಕೊಟ್ಟಿದ್ದೇವೆ.

ಬಡಮಕ್ಕಳಿಗಾಗಿ ಸರ್ಕಾರದ ಯೋಜನೆಗಳು ಇವೆ ಎನ್ನುವುದು ನಮಗೆ ಗೊತ್ತು, ಆರೋಗ್ಯಕ್ಕಾಗಿ ಲಸಿಕೆ ಹಾಕುವುದು. ಹೀಗಿದ್ದಾಗಲೂ ತಾಯಿ ವಿದ್ಯಾವಂತಳಾಗಿದ್ದು ಸ್ವಲ್ಪ ಜಾಗರೂಕಳಾಗಿದ್ದರೆ, ಅಲ್ಲಿಯ ಸ್ಥಳೀಯ ಜನ ಸ್ವಲ್ಪ ಸಕ್ರಿಯರಾಗಿದ್ದರೆ ಲಸಿಕೆ ಹಾಕುವುದು ಆಗುತ್ತದೆ. ಬಡಮಕ್ಕಳು ಮುಂಬರುವ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಸುರಕ್ಷಾ ಕವಚವನ್ನು ಪಡೆಯುತ್ತಾರೆ. ಆದರೆ ನಮ್ಮ ದೇಶದಲ್ಲಿ ಇನ್ನೂ ಅನಕ್ಷರತೆ ಇದೆ. ಬಡತಾಯಿಗೆ ತನ್ನ ಮಗುವಿಗೆ ಯಾವ್ಯಾವ ಲಸಿಕೆ ಹಾಕಿಸಬೇಕೆಂದು ಗೊತ್ತಿರುವುದಿಲ್ಲ. ಲಕ್ಷಾಂತರ ಮಕ್ಕಳು ಸರ್ಕಾರಿ ಯೋಜನೆಗಳಿದ್ದೂ, ಅದಕ್ಕಾಗಿ ಬಜೆಟ್ ಇದ್ದೂ ಲಸಿಕೆ ಹಾಕಿಸಿಕೊಳ್ಳುವುದರಿಂದ ವಂಚಿತರಾಗುತ್ತಿದ್ದರು. ನಾವು ಒಂದು ಇಂದ್ರಧನುಷ್ ಯೋಜನೆ ರೂಪಿಸಿದ್ದೇವೆ . ಈ ಇಂದ್ರಧನುಷ್ ಯೋಜನೆಯ ಅಡಿಯಲ್ಲಿ ದಿನನಿತ್ಯ ಲಸಿಕೆ ಹಾಕುವುದು ಆಗುತ್ತದೆ. ಅಲ್ಲಿ ತಡೆಯಾಗುವುದಿಲ್ಲ. ಹಳ್ಳಿ ಹಳ್ಳಿಯ ಗಲ್ಲಿಗಳಲ್ಲಿ ಬಡವರ ಮನೆಗಳಿಗೆ ಹೋಗಿ ಹುಡುಕಬೇಕು ಯಾವ ಮಕ್ಕಳು ಲಸಿಕೆಯಿಂದ ವಂಚಿತರಾಗಿದ್ದಾರೆಂದು. ಶ್ರಮ ಪಡುತ್ತಿದ್ದಾರೆ. ನಮ್ಮೆಲ್ಲಾ ಜೊತೆಗಾರರು ನಿರತರಾಗಿದ್ದಾರೆ. ಲಕ್ಷಗಳ ಸಂಖ್ಯೆಯಲ್ಲಿ ಇಂತಹ ಮಕ್ಕಳನ್ನು ಹುಡುಕಿ ಅವರಿಗೆ ಲಸಿಕೆ ಹಾಕಿಸಿ ಅವರ ಆರೋಗ್ಯ ಬಲಪಡಿಸುವ ಪ್ರಯತ್ನವನ್ನು ನಾವು ಮಾಡಿದ್ದೇವೆ. ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು. ಯೋಜನೆಯನ್ನು ಕೇವಲ ಅಂಕಿ ಅಂಶಗಳಿಂದಲ್ಲ , ಪರಿಣಾಮ ಉಂಟಾಗುವವರೆಗೂ ನಡೆಸುವುದು ಈ ವಿಷಯಕ್ಕೆ ಶಕ್ತಿ ಕೊಟ್ಟಿದೆ.

ಒಂದು ಕಾಲದಲ್ಲಿ ಲೋಕಸಭೆಯ ಸದಸ್ಯರಿಗೆ 25 ಗ್ಯಾಸ್ ಸಂಪರ್ಕದ ಕೂಪನ್ನುಗಳು ಸಿಗುತ್ತಿತ್ತು ಮತ್ತು ನೂರಾರು ಜನರು, ದೊಡ್ಡ-ದೊಡ್ಡ ಜನರು ಆ ಲೋಕಸಭಾ ಸದಸ್ಯರ ಸುತ್ತಮುತ್ತ ಸುತ್ತುತ್ತಾ, ” ಅರೆ ಸಾಹೇಬರೆ ಒಂದು ಗ್ಯಾಸ್ ಸಂಪರ್ಕದ ಕೂಪನ್ ಕೊಡಿ” ಎಂದು ಕೇಳುತ್ತಿದ್ದರು. ಮನೆಗೆ ಗ್ಯಾಸ್ ಸಂಪರ್ಕ ಬೇಕು, ದೊಡ್ಡ-ದೊಡ್ಡ ಜನರು ಶಿಫಾರಿಶ್ ಮಾಡುತ್ತಿದ್ದರು. ಪತ್ರಿಕೆಗಳಲ್ಲಿ ಕೆಲವು ಲೋಕಸಭಾ ಸದಸ್ಯರು ಗ್ಯಾಸ್ ಕೂಪನ್ನು ಗಳನ್ನೂ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ ಎಂಬ ಸುದ್ದಿ ಬರುತ್ತಿತ್ತು. ಗ್ಯಾಸ್ ಸಂಪರ್ಕ ಪಡೆಯುವುದು ಎಷ್ಟು ಕಷ್ಟವಾಗಿತ್ತು. ಇದು ಬಹಳ ಹಳೆಯ ವಿಷಯವೇನಲ್ಲ ಹತ್ತು ಹದಿನೈದು ವರ್ಷಗಳ ಹಿಂದೆ ಜನರಿಗೆ ಈ ವಿಷಯ ಗೊತ್ತಿತ್ತು.

ಸೋದರ ಸೋದರಿಯರೆ, ನನ್ನ ಬಡ ತಾಯಂದಿರು ಸೌದೆಯ ಒಲೆ ಉರಿಸಿ ಹೊಗೆಯಲ್ಲಿ ತಮ್ಮ ಜೀವನ ನಡೆಸುತ್ತಿದ್ದಾರೆ. ಒಬ್ಬ ಬಡತಾಯಿ ಸೌದೆಯ ಒಲೆ ಉರಿಸಿ ಅಡುಗೆ ಮಾಡುತ್ತಾಳೆ. ಇದರಿಂದ ನಾಲ್ಕುನೂರು ಸಿಗರೇಟುಗಳ ಸುಟ್ಟಂತಹ ಹೊಗೆ ಅವಳ ಶರೀರದಲ್ಲಿ ಪ್ರತಿ ದಿನವೂ ಹೋಗುತ್ತದೆ. ಪ್ರತಿ ದಿನವೂ ಒಬ್ಬ ಬಡತಾಯಿಯ ಶರೀರದಲ್ಲಿ ನಾಲ್ಕುನೂರು ಸಿಗರೇಟುಗಳ ಹೊಗೆ ಹೋಗುತ್ತೆಂದರೆ ಅ ತಾಯಿಯ ಆರೋಗ್ಯದ ಸ್ಥಿತಿ ಏನಾಗಿರಬೇಕು ಎಂಬುದನ್ನು ನೀವು ಕಲ್ಪನೆ ಮಾಡಿಕೊಳ್ಳಬಲ್ಲಿರಿ. ಆಕೆಯ ಮಕ್ಕಳ ಸ್ಥಿತಿ ಏನಾಗಬೇಕು? ನನ್ನ ದೇಶದ ಭವಿಷ್ಯದ ಸ್ಥಿತಿ ಏನಾಗಬಹುದು? ನಾವು ನಮ್ಮ ಬಡ ತಾಯಂದಿರನ್ನು ಇಂತಹ ಜೀವನ ನಡೆಸಲು ವಿವಶರನ್ನಾಗಿಸುತ್ತಿರಬೇಕೇ ಅಥವಾ ಅವರನ್ನು ಅವರ ವಿಧಿ ಎಂದು ಬಿಟ್ಟು ಬಿಡಬೇಕೆ? ನಾವು ಪ್ರತಿಜ್ಞೆ ಮಾಡಿದ್ದೇವೆ ಮುಂದಿನ ಮೂರು ವರ್ಷಗಳಲ್ಲಿ ಈ ಬಡ ಕುಟುಂಬಗಳಲ್ಲಿ ಐದು ಕೋಟಿ ಕುಟುಂಬಗಳನ್ನು ಸೌದೆಒಲೆ ಮತ್ತು ಹೊಗೆಯಿಂದ ಮುಕ್ತಿಗೊಳಿಸಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ತಲುಪಿಸಬೇಕು. ಗ್ಯಾಸ್ ಒಲೆಗಳನ್ನು ತಲುಪಿಸಬೇಕು. ಕಾಡುಗಳಲ್ಲಿ ಮರಗಳನ್ನು ಕಡಿಯುವುದನ್ನು ತಪ್ಪಿಸಬೇಕು. ಸೌದೆ ತರಲು ತಾಯಂದಿರು ಶ್ರಮ ಪಡುತ್ತಿರುವುದನ್ನು ತಪ್ಪಿಸಬೇಕು. ಮಕ್ಕಳಿಗೆ ಅಗತ್ಯವಾದಾಗ ಊಟ ಮಾಡಿಸಲು ಆಗುವಂತಹ ವ್ಯವಸ್ಥೆ ಮಾಡುವುದು. ಪೂರಾ ಉತ್ಸಾಹದಿಂದ ಈ ಕೆಲಸ ಮಾಡಿಸಿದೆವು.

ಸೋದರ ಸೋದರಿಯರೆ, ಇದರ ಮೂಲದಲ್ಲಿ ಒಂದೇ ವಿಚಾರವಿದೆ ಮತ್ತು ಒಂದೇ ಭಾವನೆಯಿದೆ. ದೇಶವನ್ನು ಬಡತನದಿಂದ ಮುಕ್ತಿಗೊಳಿಸುವುದು. ಸೋದರ ಸೋದರಿಯರೆ ನಾವು ಮೇಕ್ ಇನ್ ಇಂಡಿಯಾ ಅಭಿಯಾನವನ್ನು ನಡೆಸುತ್ತಿದ್ದೇವೆ. ಯಾಕೆ? ನಮ್ಮ ದೇಶದಲ್ಲಿ ಯುವ ಜನರು ಇದ್ದಾರೆ. ಇವರ ಬಳಿ ಬಹಳ ಬಲವಾದ ತೋಳುಗಳಿವೆ, ಹೃದಯವೂ ಇದೆ, ಬುದ್ಧಿಯೂ ಇದೆ, ಇವರಿಗೆ ಅವಕಾಶ ದೊರೆತರೆ ಪ್ರಪಂಚದಲ್ಲೇ ಅತ್ಯುತ್ತಮವಾದ ವಸ್ತುಗಳನ್ನು ತಯಾರಿಸುವ ಶಕ್ತಿ ಇವರಲ್ಲಿದೆ. ಕಲಿಸುವುದಾದರೆ ಇವರು ಕೌಶಲ್ಯವನ್ನು ಕಲಿಯಲು ಇಷ್ಟಪಡುತ್ತಾರೆ. ನಿಪುಣತೆಯ ವಿಕಾಸ ಹೊಂದಿದ ನನ್ನ ನವ ಯುವ ಜನ ತಮ್ಮ ಕಾಲ ಮೇಲೆ ನಿಲ್ಲುವ ಶಕ್ತಿ ಗಳಿಸಿಕೊಂಡಿರುತ್ತಾರೆ. ನಮ್ಮ ಸರ್ಕಾರ ರಚಿತವಾದ ನಂತರ ನಾವು ನಿಪುಣತೆಯ ವಿಕಾಸಕ್ಕೆಂದು ಪ್ರತ್ಯೇಕ ಸಚಿವಾಲಯ ಮಾಡಿದೆವು. ಪ್ರತ್ಯೇಕ ಸಚಿವರನ್ನು ನೇಮಿಸಿದೆವು ಪ್ರತ್ಯೇಕ ಬಜೆಟ್ ನಿಗದಿ ಮಾಡಿದೆವು. ಇಡೀ ದೇಶದಲ್ಲಿ ರಾಜ್ಯಗಳ ಮೂಲಕ ಕೇಂದ್ರದ ಮೂಲಕ, ಉದ್ಯೋಗದ ಮೂಲಕ, ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಯಾವುದೇ ಮಾದರಿಯನ್ನು ಎಲ್ಲಿ ಆರಂಭಿಸಲು ಸಾಧ್ಯವೋ ಅಲ್ಲಿ ಆರಂಭಿಸಿ ನಿಪುಣತೆಯ ವಿಕಾಸದ ದೊಡ್ಡ ಅಭಿಯಾನವನ್ನು ಆರಂಭಿಸಿದೆವು. ಈ ಅಭಿಯಾನ ಆರಂಭವಾದ್ದರಿಂದ ಹಣವುಳ್ಳ ಕುಟುಂಬದ ಮಕ್ಕಳು ಒಳ್ಳೆಯ ಕಾಲೇಜುಗಳಲ್ಲಿ ಪ್ರವೇಶ ದೊರಕಿಸಿಕೊಳ್ಳುತ್ತಾರೆ. ವಿದೇಶಗಳಿಗೆ ಹೋಗುತ್ತಾರೆ. ಬಡವರ ಮಕ್ಕಳಾದರೆ 3ನೇ ತರಗತಿ, 5ನೇ ತರಗತಿ ತನಕ ಬಹಳ ಕಷ್ಟದಿಂದ ಓದುತ್ತಾರೆ, ನಂತರ ಓದುವುದನ್ನು ಬಿಟ್ಟು ಬಿಡುತ್ತಾರೆ. ನಂತರ ನಿಪುಣತೆ ರಹಿತ ಶ್ರಮಿಕನಾಗಿ ಜೀವನವನ್ನು ಕಳೆಯುತ್ತಾನೆ. ನಾವು ಇಂತಹ ಮಕ್ಕಳನ್ನು ಹುಡುಕಿ ಹುಡುಕಿ ನಿಪುಣತೆಯ ವಿಕಾಸದ ಕಡೆ ತರುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ಕಡು ಬಡವರ ಮಕ್ಕಳು ಕೂಡ ಗೌರವಯುತವಾಗಿ ತಮ್ಮಲ್ಲಿರುವ ಕೌಶಲ್ಯದ ಬಲದಿಂದ ತಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಏಕೆಂದರೆ ನಮಗೆ ದೇಶವನ್ನು ಬಡತನದಿಂದ ಮುಕ್ತಿಗೊಳಿಸಬೇಕಾಗಿದೆ, ಕೆಲಸ ಎಷ್ಟೇ ಕಠಿಣವಾಗಿರಬಹುದು ಆದರೆ ದೇಶದ ಹಿತ ಬಡತನದಿಂದ ಮುಕ್ತಿ ಪಡೆಯುವುದರಲ್ಲೇ ಇದೆ. ಬಡತನದಿಂದ ಮುಕ್ತಿಗೊಳಿಸದೇ ಇದ್ದರೆ, ಉಳಿದ ಐವತ್ತು ಕೆಲಸಗಳನ್ನು ಮಾಡಿದರೂ ದೇಶದ ಭಾಗ್ಯ ಬದಲಾಗುವುದಿಲ್ಲ. ಆದ್ದರಿಂದ ನಮ್ಮ ಪೂರ್ಣ ಶಕ್ತಿ, ಪೂರ್ಣ ಬಲ ಬಡವರ ಕಲ್ಯಾಣದಲ್ಲಿ ತೊಡಗಿದೆ. ನಮ್ಮ ರೈತ ಕುಟುಂಬ ದೊಡ್ಡದಾಗುತ್ತಾ ಹೋಗುತ್ತಿದೆ. ಜಮೀನಿನ ಸುತ್ತಳತೆ ಕಡಿಮೆಯಾಗುತ್ತಾ ಹೋಗುತ್ತಿದೆ. ಪೀಳಿಗೆಯ ನಂತರ ಪೀಳಿಗೆಯಲ್ಲಿ ಜಮೀನು ಪಾಲಾಗುತ್ತಾ ಇರುತ್ತದೆ. ಚಿಕ್ಕ ಜಮೀನಿದ್ದಾಗ ಹೊಟ್ಟೆ ತುಂಬಿಸಿಕೊಳ್ಳುವುದು, ಮನೆಯನ್ನು ನಡೆಸುವುದು ಒಮ್ಮೊಮ್ಮೆ ಕಷ್ಟ ಆಗುತ್ತದೆ. ಯಾರಾದರೂ ರೈತನಿಗೆ 3 ಗಂಡು ಮಕ್ಕಳಿದ್ದು ಆ ತಂದೆಯನ್ನು ಮಕ್ಕಳ ಬಗ್ಗೆ ಏನು ಯೋಚಿಸಿದ್ದಿ ಎಂದು ಕೇಳಿದರೆ ಒಬ್ಬ ಮಗನನ್ನು ಹೊಲದ ಕೆಲಸಕ್ಕೆ ಹಾಕಿಕೊಳ್ತೇನೆ, ಉಳಿದ ಇಬ್ಬರನ್ನು ಕೆಲಸ ಮಾಡಿ ಸಂಪಾದಿಸಲು ಪಟ್ಟಣಕ್ಕೆ ಕಳಿಸುತ್ತೇನೆ ಎಂದು ಹೇಳುತ್ತಾನೆ. ನಮಗೆ ನಮ್ಮ ಕೃಷಿಯನ್ನು, ನಮ್ಮ ಬೇಸಾಯವನ್ನು ನಾವು ಬದುಕಲು ಯೋಗ್ಯವಾಗಿ ಮಾಡಬೇಕು. ಸಣ್ಣ ಜಮೀನಿನಿಂದಲೂ ಉತ್ಪಾದನೆ ಹೆಚ್ಚು ಆಗಬೇಕು, ಮೌಲ್ಯಭರಿತ ಉತ್ಪಾದನೆಯಾಗಬೇಕು ಮತ್ತು ನೈಸರ್ಗಿಕ ಆಪತ್ತುಗಳಲ್ಲೂ ನನ್ನ ರೈತನಿಗೆ ಕಷ್ಟಗಳ ಜೊತೆ ಹೋರಾಡುವ ಶಕ್ತಿ ಸಿಗಬೇಕು, ಇಂತಹ ಅರ್ಥ ವ್ಯವಸ್ಥೆಯು ಕೃಷಿ ಅರ್ಥ ವ್ಯವಸ್ಥೆ ಆಗಬೇಕು, ರೈತ ಏನು ಬೆಳೆಯುತ್ತಾನೋ ಅದಕ್ಕೆ ಇಡೀ ದೇಶದಲ್ಲಿ ಮಾರುಕಟ್ಟೆ ಸಿಗಬೇಕು, ಅಕ್ಕಪಕ್ಕದ ಕೆಲವು ದಲ್ಲಾಳಿಗಳು, ವ್ಯಾಪಾರಿಗಳು ರೈತನ ವಿವಶತೆಯ ಲಾಭ ಪಡೆದು ಆತನ ಸರಕನ್ನು ಕಿತ್ತುಕೊಳ್ಳುವ ಪರಿಸ್ಥಿತಿ ನಿಲ್ಲಬೇಕು. ಮತ್ತು ನಾವು ಇದಕ್ಕಾಗಿ ಇ-ನಾಮ್ ನಿಂದ ಇಡೀ ದೇಶದ ಮಂಡಿಗಳ ಆನ್ಲೈನ್ ಜಾಲತಾಣವನ್ನು ಸ್ಥಾಪಿಸಿದ್ದೇವೆ. ತನ್ನ ಮೊಬೈಲ್ ಫೋನಿ ನಿಂದ ರೈತನು ಎಲ್ಲಿ ಜಾಸ್ತಿ ಬೆಲೆ ಸಿಗುತ್ತದೋ ಅಲ್ಲಿಗೆ ತನ್ನ ಸರಕನ್ನು ಮಾರಾಟ ಮಾಡಬಹುದಾದಂತಹ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ.

ನಾನು ಇಂದು ಕೃಷಿಯ ಅಂಗಡಿಗಳು ಇ-ನಾಮ್ ಅನ್ನು ಜನರಿಗೆ ಅರ್ಥ ಮಾಡಿಸುವ ವ್ಯವಸ್ಥೆಯನ್ನು ಛತ್ತೀಸ್ ಘಡದಲ್ಲಿ ಮಾಡಿರುವುದನ್ನು ನೋಡಿದೆ. ಇಡೀ ದೇಶದಲ್ಲಿ ರೈತನಿಗೆ ಒಂದೇ ರೀತಿಯ ಮಾರುಕಟ್ಟೆ ಸಿಗಬೇಕು, ರೈತನ ಇಚ್ಛೆಯ ಪ್ರಕಾರ ಅವನಿಗೆ ಬೆಲೆ ಸಿಗಬೇಕು ಅನ್ನುವುದಕ್ಕೆ ಒತ್ತು ಕೊಡುವ ಕೆಲಸ ಮಾಡಿದೆ. ಈಗೀಗ ನೈಸರ್ಗಿಕ ವಿಕೋಪಗಳಾದ ಒಮ್ಮೆ ಅಕಾಲವಾದರೆ ಇನ್ನೊಮ್ಮೆ ಭಯಂಕರ ಮಳೆ, ಮತ್ತೊಮ್ಮೆ ಬೆಳೆಪೂರ್ತಿ ಬೆಳೆದು ನಿಂತಾಗ ಬರುವ ಮಳೆ, ಹೀಗಾಗಿ ರೈತನಿಗೆ ಬಹಳ ನಷ್ಟವಾಗುತ್ತದೆ. ಮೊದಲನೆ ಸಲ ಪ್ರಧಾನಮಂತ್ರಿ ಫಸಲು ವಿಮೆ ಯೋಜನೆಯ ಅಡಿಯಲ್ಲಿ ನನ್ನ ದೇಶದ ರೈತರಿಗೆ ಒಂದು ಸುರಕ್ಷತೆಯ ಭರವಸೆ ನೀಡಲಾಗಿದೆ. ಈ ವಿಮಾ ಯೋಜನೆಯು ಬಹಳ ಕಡಿಮೆ ಹಣದ್ದಾಗಿದೆ. ರೈತನು ಬಹಳ ಕಡಿಮೆ ಹಣ ಕೊಡುವಂತದ್ದು. ಹೆಚ್ಚಿನಂಶ ಹಣವನ್ನು ಸರ್ಕಾರ ಕೊಡುತ್ತದೆ. ಭಾರತ ಸರ್ಕಾರ ಕೊಡುತ್ತದೆ. ಜೂನ್ ತಿಂಗಳು ಅವನು ಬೀಜ ಬಿತ್ತಬೇಕಾಗಿರುತ್ತದೆ. ಆದರೆ ಜುಲೈ ಬಂದರೂ ಮಳೆಯೇ ಆಗಿರುವುದಿಲ್ಲ. ಆತನಿಗೆ ಬೀಜ ಬಿತ್ತಲು ಆಗುವುದಿಲ್ಲ. ಹಾಗಾದರೆ ಬೆಳೆಯಂತೂ ಹಾಳಾಗಿರುವುದಿಲ್ಲ. ಅವನಿಗೆ ವಿಮೆ ಸಿಗುವುದಿಲ್ಲ. ನೈಸರ್ಗಿಕ ತೊಂದರೆಗಳಿಂದ ಆತ ಬಿತ್ತನೆ ಮಾಡಲು ಆಗಲಿಲ್ಲ. ಅಂದರೂ ಅವನ ಲೆಕ್ಕಹಾಕಿ ಅವನು ಒಂದು ಅಂಗುಲ ನೆಲದಲ್ಲಿ ಬಿತ್ತಿರದಿದ್ದರೂ ಅವನ ವಾರ್ಷಿಕ ಆದಾಯ ಲೆಕ್ಕ ಹಾಕಿ ಅವನಿಗೆ ವಿಮಾ ಹಣ ದೊರಕಿಸಲಾಗುತ್ತಿದೆ. ದೇಶದಲ್ಲಿ ಮೊದಲನೇ ಸಲ ಹೀಗಾಗಿದೆ.

ಫಸಲು ಬೆಳೆದು ನಿಂತಿದೆ. ಬೆಳೆ ಸಿದ್ಧವಾಗುವ ತನಕ ಮಳೆ-ಗಿಳೆ ಎಲ್ಲಾ ಚೆನ್ನಾಗಿ ಆಗಿದೆ. ಹದಿನಾರಾಣೆ ಬೆಳೆ ಬೆಳೆದು ನಿಂತಿದೆ. ಹೊಲದಲ್ಲಿ ಫಸಲಿನ ರಾಶಿಯೂ ಬಿದ್ದಿದೆ. ಅಷ್ಟೇ ಒಂದೆರಡು ಮೂರು ದಿನದಲ್ಲಿ ಯಾರದಾದರೂ ಟ್ರಾಕ್ಟರ್ ಸಿಗುತ್ತದೆ. ನಂತರ ಮಾರುಕಟ್ಟೆಗೆ ಹೋಗುವುದೇ ಹೋಗುವುದು. ಆದರೆ ಅನಿರೀಕ್ಷಿತವಾಗಿ ಮಳೆ ಬಂತು. ಸಿದ್ಧವಾಗಿದ್ದ ಬೆಳೆ ಪೂರ್ತಿ ಹಾಳಾಗಿ ಹೋಗುತ್ತದೆ. ಇದುವರೆಗೂ ಹೀಗೇನಾದರೂ ಆದರೆ ವಿಮಾದವರು “ಅಣ್ಣ ನಿನ್ನ ಬೆಳೆ ಸಿದ್ಧವಾಗಿ ನಿಂತಿದೆ ನಿನಗೆ ಯಾವ ನಷ್ಟವೂ ಆಗಿಲ್ಲ ಅಂದಮೇಲೆ ನಿನಗೆ ಹಣ ದೊರಕುವುದಿಲ್ಲ” ಎಂದು ಹೇಳುತ್ತಿದ್ದರು. ನಾವು ಒಂದು ಪ್ರಧಾನಮಂತ್ರಿ ಫಸಲು ಯೋಜನೆ ತಂದಿದ್ದೇವೆ. ಅದೆಂದರೆ ಕಟಾವಾಗಿ ರಾಶಿ ಬಿದ್ದಿದೆ. ಮತ್ತು 15 ದಿನದೊಳಗೆ ಯಾವುದಾದರೂ ನೈಸರ್ಗಿಕ ವಿಪತ್ತು ಬಂದು ನಷ್ಟವಾದರೆ ಪ್ರಧಾನಮಂತ್ರಿ ಫಸಲು ಯೋಜನೆ ವಿಮಾ ಯೋಜನೆಯ ಮೂಲಕ ರೈತನಿಗೆ ಹಣ ಸಿಗುತ್ತದೆ. ಇಷ್ಟರಮಟ್ಟಿಗಿನ ವ್ಯವಸ್ಥೆ ಆಗಿದೆ. ನನ್ನ ದೇಶದ ರೈತನನ್ನು ಸುರಕ್ಷಿತವಾಗಿಡುವುದು ಜೊತೆಜೊತೆಗೆ ರೈತನಿಗೆ ಮೌಲ್ಯವರ್ಧನೆ ಮಾಡುವುದು. ರೈತ ಏನು ಬೆಳೆ ತೆಗೆಯುತ್ತಾನೋ ಅದರ ಮೌಲ್ಯವನ್ನು ಹೆಚ್ಚು ಮಾಡುವುದು, ಮೌಲ್ಯ ಹೆಚ್ಚಳವಾಗಬೇಕು. ರೈತ ಮಾವು ಬೆಳೆದರೆ ಮಾವಿನ ಉಪ್ಪಿನಕಾಯಿ ಹಾಕಬಹುದು. ಆಗ ಅದು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಅವನು ಟೊಮ್ಯಾಟೋ ಬೆಳೆದರೆ ಟೊಮ್ಯಾಟೋ ಕೆಚಪ್ ತಯಾರಿಸಬಹುದು ಮತ್ತು ಹೆಚ್ಚಿನ ಬೆಲೆಗೆ ಮಾರಬಹುದು. ಅವನು ಹಾಲು ಉತ್ಪಾದನೆ ಮಾಡುತ್ತಾನೆ. ಅದನ್ನು ಮಾರಿದರೆ ಕಡಿಮೆ ಹಣ ಸಿಗುತ್ತದೆ. ಹಾಲಿನ ಮಿಠಾಯಿ ತಯಾರಿಸಿ ಮಾರಿದರೆ ಹೆಚ್ಚು ಹಣ ಸಿಗುತ್ತದೆ. ಇಂತಹ ಮೌಲ್ಯ ವರ್ಧನೆ ಆಗಬೇಕು. ಮೌಲ್ಯ ಹೆಚ್ಚಳವಾಗಬೇಕು. ಛತ್ತೀಸ್ ಘಡ್ ಇಂತಹ ಅನೇಕ ಕಾರ್ಯಕ್ರಮಗಳನ್ನು ಆರಂಭಿಸಿರುವುದನ್ನು ನಾನು ನೋಡುತ್ತಿದ್ದೆ. ಅವುಗಳಿಂದಾಗಿ ರೈತ ಏನು ಬೆಳೆಯುತ್ತಾನೋ ಅದರ ಮೌಲ್ಯ ಹೆಚ್ಚಳ ಇರುತ್ತದೆ. ಕಬ್ಬು ಬೆಳೆಗಾರನಾದ ರೈತ ಕಬ್ಬನ್ನು ಮಾರುತ್ತಾ ಇದ್ದರೆ ಸಂಪಾದನೆ ಹೆಚ್ಚಿರುವುದಿಲ್ಲ. ಆದರೆ ಸಕ್ಕರೆ ತಯಾರಿಸಬಹುದು. ಕಬ್ಬಿನಿಂದ ರೈತ ಸಂಪಾದನೆ ಮಾಡುತ್ತಾನೆ. ಆದ್ದರಿಂದ ನಮ್ಮ ಹಳ್ಳಿ ಬಡವ, ರೈತಕಾರ್ಮಿಕ, ಯುವಜನ ಇವರ ಸಾಮರ್ಥ್ಯ ವನ್ನು ಹೇಗೆ ಹೆಚ್ಚಿಸಬೇಕು, ದೇಶದ ಅಭಿವೃದ್ಧಿಯ ಹೊಸ ಎತ್ತರಗಳನ್ನು ಹೇಗೆ ದಾಟುವುದು ಎಂಬುದರ ಬಗ್ಗೆ ಒಂದಾದ ನಂತರ ಒಂದು ಹೆಜ್ಜೆಯನ್ನು ಇಡಲಾಗುತ್ತಿದೆ. ದೇಶದ ಸರ್ಕಾರ ಸಹಕಾರಿ ಒಕ್ಕೂಟವನ್ನು ಅನುಸರಿಸಿ ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟಕ್ಕೆ ಒತ್ತು ಕೊಟ್ಟು ಮುಂದೆ ನಡೆಯುತ್ತಿದೆ. ರಾಜ್ಯ ರಾಜ್ಯಗಳ ನಡುವೆ ಸ್ಪರ್ಧೆ ನಡೆಯಲಿ ಎಂದು ನಾವು ಇಚ್ಚಿಸುತ್ತೇವೆ. ಒಂದು ರಾಜ್ಯ ಬಯಲು ಬಹಿರ್ದೆಸೆ ಮುಕ್ತವಾಗಿದೆ ಎಂದರೆ ಇನ್ನೊಂದು ರಾಜ್ಯದ ಗುರಿಯು ನಾವು ಹಿಂದೆ ಬೀಳುವುದಿಲ್ಲ ಎಂದು ಆಗಬೇಕು ನಾವೂ ಮಾಡೇ ಮಾಡುತ್ತೇವೆ. ಒಂದು ರಾಜ್ಯವು ಉದ್ಯೋಗದ ಒಂದು ಮಾರ್ಗವನ್ನು ಹಿಡಿದರೆ ಇನ್ನೊಂದು ರಾಜ್ಯ ಇನ್ನೊಂದು ಮಾರ್ಗವನ್ನು ಹಿಡಿದು ನೋಡು ನಾನು ನಿಮಗಿಂತ ಮುಂದೆ ಹೋಗಿದ್ದೇನೆ ಎನ್ನಬೇಕು. ನಾವು ರಾಜ್ಯಗಳ ನಡುವೆ ಸ್ಪರ್ಧೆಯನ್ನು ಇಷ್ಟಪಡುತ್ತೇವೆ. ವಿಕಾಸದ ಸ್ಪರ್ಧೆಯನ್ನು ಇಷ್ಟಪಡುತ್ತೇವೆ. ಭಾರತ ಸರ್ಕಾರವು ಈ ವಿಕಾಸದ ಪಯಣದಲ್ಲಿ ವೇಗವಾಗಿ ಮುಂದೆ ಬರಲು ಇಷ್ಟಪಡುತ್ತದೆ. ಎಲ್ಲಾ ರಾಜ್ಯಗಳು ಯಾವ ಭೇದಭಾವ ಎಣಿಸದೆ ಎಲ್ಲಾ ರೀತಿಯ ಸಹಾಯ ಮಾಡಲು ಸದಾಕಾಲವೂ ಸಿದ್ಧವಾಗಿರಲು ಬದ್ದರಾಗಿರುತ್ತವೆ. ಛತ್ತೀಸ್ ಘಡ್ ಭವಿಷ್ಯದ ಏಳಿಗೆಗಾಗಿ ಯಾವ್ಯಾವ ಯೋಜನೆಗಳನ್ನು ತರುತ್ತದೋ, ಯಾವ್ಯಾವ ಯೋಜನೆಗಳನ್ನು ತಂದಿದೆಯೋ ಅವುಗಳಿಗಾಗಿ ದೆಹಲಿಯಲ್ಲಿ ಇರುವ ಸರ್ಕಾರವು ರಾಜ್ಯದ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಮತ್ತು ಮುಂದೆಯೂ ನಿಲ್ಲುತ್ತದೆ ಮತ್ತು ರಾಜ್ಯವನ್ನು ಹೊಸ ಎತ್ತರಗಳಿಗೆ ತೆಗೆದುಕೊಂಡು ಹೋಗುವುದರಲ್ಲಿ ನಾವು ಎಂದಿಗೂ ಹಿಂದೆ ಬೀಳುವುದಿಲ್ಲ. ನಾನು ಮತ್ತೊಮ್ಮೆ ಛತ್ತೀಸ್ ಘಡ್ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಕೋಟಿ ಕೋಟಿ ಜನರಿಗೆ ಅನೇಕ ಶುಭಾಶಯಗಳನ್ನು ಹೇಳುತ್ತೇನೆ. ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಭಾರತ ಸರ್ಕಾರದ ಕಡೆಯಿಂದ ಪೂರ್ಣ ಸಹಯೋಗವಿದೆ ಎಂದು ಆಶ್ವಾಸನೆ ಕೊಡುತ್ತೇನೆ. ನಾವೆಲ್ಲರೂ ಒಟ್ಟಾಗಿ ಛತ್ತೀಸ್ ಘಡ ವನ್ನು ವಿಕಾಸದ ಹೊಸ ಎತ್ತರಗಳಿಗೆ ಒಯ್ಯುತ್ತೇವೆ ಎಂಬ ಶುಭಾಕಾಂಕ್ಷೆಯ ಜೊತೆಗೆ ನನ್ನೊಂದಿಗೆ ಸೇರಿಕೊಂಡು ಭಾರತಮಾತೆಗೆ ಜಯವಾಗಲಿ ಎಂದು ಹೇಳಿ. ಧ್ವನಿಯು ದೂರ ದೂರದ ವರೆಗೆ ಹೋಗಬೇಕು. ಭಾರತಮಾತೆಗೆ ಜಯವಾಗಲಿ, ಭಾರತಮಾತೆಗೆ ಜಯವಾಗಲಿ, ಭಾರತ ಮಾತೆಗೆ ಜಯವಾಗಲಿ.

ಬಹಳ ಧನ್ಯವಾದಗಳು.