ರಾಜ್ಯಸಭೆಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ವಿವಿಧ ಕ್ಷೇತ್ರಗಳ ಗಣ್ಯರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಅಥ್ಲೀಟ್ ಪಿ.ಟಿ. ಉಷಾ, ಸಂಗೀತ ಸಂಯೋಜಕ ಇಳಯರಾಜ, ಧರ್ಮಸ್ಥಳ ಮಂಜುನಾಥ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ, ಶ್ರೀ ವಿ. ವಿಜಯೇಂದ್ರ ಪ್ರಸಾದ್ ಗಾರು ಅವರು ರಾಜ್ಯಸಭೆಗೆ ಹೊಸದಾಗಿ ನಾಮನಿರ್ದೇಶನಗೊಂಡಿರುವ ಸದಸ್ಯರಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
“ಹೆಸರಾಂತ ಅಥ್ಲೀಟ್ ಪಿ.ಟಿ. ಉಷಾ ಅವರು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಅವರ ಅದ್ಭುತ ಸಾಧನೆಗಳು ಎಲ್ಲರಿಗೂ ತಿಳಿದಿವೆ. ಕಳೆದ ಹಲವಾರು ವರ್ಷಗಳಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸವು ಅಷ್ಟೇ ಶ್ಲಾಘನೀಯವಾಗಿದೆ. ರಾಜ್ಯಸಭೆಗೆ ನಾಮನಿರ್ದೇಶನ ವಾಗಿರುವ ಅವರಿಗೆ ಅಭಿನಂದನೆಗಳು. @PTUshaOfficial”
“ಜನಪ್ರಿಯ ಸಂಗೀತ ನಿರ್ದೇಶಕ, ಚಲನಚಿತ್ರ ಗೀತೆ ರಚನೆಕಾರ ಇಳಯರಾಜ ಅವರ ಸೃಜನಶೀಲ ಪ್ರತಿಭೆ ದೇಶ ವಿದೇಶಗಳ ಹಲವು ತಲೆಮಾರಿನ ಜನರನ್ನು ಆಕರ್ಷಿಸಿದೆ. ಅವರ ಸಂಗೀತ ಮತ್ತು ಗೀತೆಗಳು ಜನರ ಭಾವನೆಗಳಲ್ಲಿ ಅಚ್ಚಳಿಯದೆ ಸುಂದರವಾಗಿ ಪ್ರತಿಬಿಂಬಿಸಿದೆ. ಅವರ ಜೀವನ ಪಯಣದ ಸ್ಫೂರ್ತಿದಾಯಕ ವಿಶೇಷವೆಂದರೆ, ವಿನಮ್ರತೆ. ವಿನಮ್ರತೆಯ ಹಿನ್ನೆಲೆಯಿಂದಲೇ ಬೆಳೆದು ನಿಂತಿರುವ ಅವರು ಅಪಾರ ಸಾಧನೆ ಮಾಡಿದ್ದಾರೆ. ಇಳಯರಾಜ ಅವರು ರಾಜ್ಯಸಭೆಗೆ ನಾಮನಿರ್ದೇಶನವಾಗಿರುವುದು ತುಂಬಾ ಸಂತೋಷವಾಗಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
“ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಜೀ ಅವರು ಸಮಾಜ ಮತ್ತು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ಮಂಜುನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರ ಕಾರ್ಯಗಳನ್ನು ಕಣ್ಣಾರೆ ನೋಡಲು ವೀಕ್ಷಿಸಲು ನನಗೆ ಅವಕಾಶ ಸಿಕ್ಕಿತ್ತು. ಅವರು ಖಂಡಿತವಾಗಿಯೂ ಸಂಸತ್ತಿನ ಕಲಾಪಗಳನ್ನು ಶ್ರೀಮಂತಗೊಳಿಸುತ್ತಾರೆ” ಎಂದು ಪ್ರಧಾನಿ ತಿಳಿಸಿದ್ದಾರೆ.
“ಶ್ರೀ ವಿ. ವಿಜಯೇಂದ್ರ ಪ್ರಸಾದ್ ಗಾರು ಅವರು ದಶಕಗಳ ಕಾಲದಿಂದಲೂ ಸೃಜನಶೀಲ ಚಲನಚಿತ್ರ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರ ಕಾರ್ಯಗಳು ಭಾರತದ ವೈಭವಯುತ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿವೆ, ಜಾಗತಿಕವಾಗಿ ಛಾಪು ಮೂಡಿಸಿವೆ. ರಾಜ್ಯಸಭೆಗೆ ನಾಮನಿರ್ದೇಶನ ಆಗಿರುವುದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ” ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.
*********
The remarkable PT Usha Ji is an inspiration for every Indian. Her accomplishments in sports are widely known but equally commendable is her work to mentor budding athletes over the last several years. Congratulations to her on being nominated to the Rajya Sabha. @PTUshaOfficial pic.twitter.com/uHkXu52Bgc
— Narendra Modi (@narendramodi) July 6, 2022
The creative genius of @ilaiyaraaja Ji has enthralled people across generations. His works beautifully reflect many emotions. What is equally inspiring is his life journey- he rose from a humble background and achieved so much. Glad that he has been nominated to the Rajya Sabha. pic.twitter.com/VH6wedLByC
— Narendra Modi (@narendramodi) July 6, 2022
Shri Veerendra Heggade Ji is at the forefront of outstanding community service. I have had the opportunity to pray at the Dharmasthala Temple and also witness the great work he is doing in health, education and culture. He will certainly enrich Parliamentary proceedings. pic.twitter.com/tMTk0BD7Vf
— Narendra Modi (@narendramodi) July 6, 2022
Shri V. Vijayendra Prasad Garu is associated with the creative world for decades. His works showcase India's glorious culture and have made a mark globally. Congratulations to him for being nominated to the Rajya Sabha.
— Narendra Modi (@narendramodi) July 6, 2022
രാജ്യസഭയിലേക്ക് നാമനിർദേശം ചെയ്യപ്പെട്ടതിന് അഭിനന്ദനങ്ങൾ. @PTUshaOfficial
— Narendra Modi (@narendramodi) July 6, 2022
శ్రీ వి.విజయేంద్ర ప్రసాద్ గారు దశాబ్దాలుగా సృజనాత్మక రంగంతో ప్రత్యేక అనుబంధం కలిగి ఉన్నారు. అతని రచనలు భారతదేశం యొక్క అద్భుతమైన సంస్కృతిని ప్రతిబింబిస్తూ ప్రపంచవ్యాప్తం గా ఒక ప్రత్యేక గుర్తంపును తీసుకువచ్చాయి. అతను రాజ్యసభకు నామినేట్ అయినందుకు నా అభినందనలు.
— Narendra Modi (@narendramodi) July 6, 2022
அவரது படைப்புகளைப் போலவே, எழுச்சி ஊட்டுவதாய் அவரது வாழ்க்கைப் பயணமும் அமைந்துள்ளது - எளிய பின்புலத்திலிருந்து உயர்ந்து எட்ட இயலா சாதனைகளை படைத்தவர். அவர் மாநிலங்களவைக்கு நியமிக்கப்பட்டுள்ளது மிகுந்த மகிழ்ச்சி அளிப்பதாய் உள்ளது.
— Narendra Modi (@narendramodi) July 6, 2022
ಖಂಡಿತವಾಗಿ ಅವರು ಸಂಸದೀಯ ನಡಾವಳಿಗಳನ್ನು ಮತ್ತಷ್ಟು ಉತ್ಕೃಷ್ಟ ಗೊಳಿಸುವರು.
— Narendra Modi (@narendramodi) July 6, 2022