ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿಂದು ಸಂಸತ್ತಿನಲ್ಲಿ ರಾಷ್ಟ್ರಪತಿಗಳು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದರು.
ಸದನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, 75ನೇ ಗಣರಾಜ್ಯೋತ್ಸವವು ರಾಷ್ಟ್ರದ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭಾರತದ ಆತ್ಮಸ್ಥೈರ್ಯದ ಬಗ್ಗೆ ಮಾತನಾಡಿದರು. ಅವರು ಭಾರತದ ಉಜ್ವಲ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ನಾಗರಿಕರ ಸಾಮರ್ಥ್ಯವನ್ನು ಒಪ್ಪಿಕೊಂಡರು. ವಿಕಸಿತ ಭಾರತ ಸಂಕಲ್ಪ ಸಾಧಿಸಲು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ ಅವರ ಸ್ಫೂರ್ತಿದಾಯಕ ಭಾಷಣಕ್ಕಾಗಿ ನಾನು ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ‘ವಂದನಾ ನಿರ್ಣಯ’ದ ಮೇಲೆ ಫಲಪ್ರದ ಚರ್ಚೆ ನಡೆಸಿದ ಸದನದ ಸದಸ್ಯರಿಗೆ ಪ್ರಧಾನಿ ಧನ್ಯವಾದ ಹೇಳಿದರು. “ರಾಷ್ಟ್ರಪತಿ ಜಿ ಅವರ ಭಾಷಣವು ಭಾರತದ ಬೆಳೆಯುತ್ತಿರುವ ಆತ್ಮವಿಶ್ವಾಸ, ಭರವಸೆಯ ಭವಿಷ್ಯ ಮತ್ತು ಜನತೆಯ ಅಪಾರ ಸಾಮರ್ಥ್ಯವನ್ನು ಒತ್ತಿಹೇಳಿತು” ಎಂದು ಪ್ರಧಾನಿ ಶ್ಲಾಘಿಸಿದರು.
ಸದನದ ವಾತಾವರಣ ಕುರಿತು ಮಾತನಾಡಿದ ಪ್ರಧಾನಿ, “ಪ್ರತಿಪಕ್ಷಗಳು ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ, ಏಕೆಂದರೆ ದೇಶದ ಜನರು ಈ ಧ್ವನಿಗೆ ಬಲ ನೀಡಿದ್ದಾರೆ”. ಸಾರ್ವಜನಿಕ ಹಣಕಾಸು ಸೋರಿಕೆಯ ಸಮಯ, ‘ಪಂಚ ದೌರ್ಬಲ್ಯ’ ಮತ್ತು ‘ ನಿಷ್ಕ್ರಿಯ ನೀತಿ’ಗಳನ್ನು ನೆನಪಿಸಿಕೊಂಡ ಪ್ರಧಾನಿ, ಪ್ರಸ್ತುತ ಸರ್ಕಾರವು ದೇಶವನ್ನು ಹಿಂದಿನ ಅವ್ಯವಸ್ಥೆಗಳಿಂದ ಹೊರತರಲು ಹೆಚ್ಚಿನ ಪರಿಗಣನೆಯೊಂದಿಗೆ ಜವಾಬ್ದಾರಿಯಿಂದ ಕೆಲಸ ಮಾಡಿದೆ. “ಕಾಂಗ್ರೆಸ್ ಸರ್ಕಾರದ 10 ವರ್ಷಗಳ ಆಡಳಿತದಲ್ಲಿ, ಇಡೀ ಜಗತ್ತು ಭಾರತಕ್ಕೆ ‘ಪಂಚ ದೌರ್ಬಲ್ಯ’ ಮತ್ತು ನಿಷ್ಕ್ರಿಯ ನೀತಿಗಳ ಪದಗಳನ್ನು ಬಳಸಿತು. ಆದರೆ ನಮ್ಮ 10 ವರ್ಷಗಳಲ್ಲಿ – ಟಾಪ್ 5 ಆರ್ಥಿಕತೆಗಳಲ್ಲಿ ಭಾರತ ಒಂದಾಗಿದೆ ಎಂಬ ಪದ ಬಳಸುತ್ತಿದೆ. ಹೀಗಾಗಿಯೇ ಇಂದು ಜಗತ್ತು ನಮ್ಮ ಬಗ್ಗೆ ಮಾತನಾಡುತ್ತಿದೆ” ಎಂದು ಪ್ರಧಾನಿ ಶ್ರೀ ಮೋದಿ ಹೇಳಿದರು.
ಹಿಂದಿನ ಸರ್ಕಾರಗಳ ವಸಾಹತುಶಾಹಿ ಮನಸ್ಥಿತಿಯ ಸಂಕೇತ ಅಥವಾ ಚಿಹ್ನೆಗಳನ್ನು ತೊಡೆದುಹಾಕಲು ಸರ್ಕಾರ ಮಾಡಿರುವ ಪ್ರಯತ್ನಗಳನ್ನು ಪ್ರಧಾನಿ ಒತ್ತಿ ಹೇಳಿದರು. ರಕ್ಷಣಾ ಪಡೆಗಳಿಗೆ ಹೊಸ ಧ್ವಜ, ಕರ್ತವ್ಯ ಪಥ, ಅಂಡಮಾನ್ ದ್ವೀಪಗಳ ಮರುನಾಮಕರಣ, ವಸಾಹತುಶಾಹಿ ಕಾನೂನುಗಳ ನಿರ್ಮೂಲನೆ ಮತ್ತು ಭಾರತೀಯ ಭಾಷೆಯ ಪ್ರಚಾರ ಸೇರಿದಂತೆ ಇತರೆ ಹಲವು ಹಂತಗಳ ಕಾರ್ಯಗಳನ್ನು ಪಟ್ಟಿ ಮಾಡಿದರು. ಸ್ಥಳೀಯ ಉತ್ಪನ್ನಗಳು, ಸಂಪ್ರದಾಯಗಳು ಮತ್ತು ಸ್ಥಳೀಯ ಮೌಲ್ಯಗಳ ಬಗ್ಗೆ ಹಿಂದಿನ ಕೀಳರಿಮೆಯ ಸರಮಾಲೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಇದೆಲ್ಲವನ್ನೂ ಈಗ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದರು.
ನಾರಿ ಶಕ್ತಿ, ಯುವ ಶಕ್ತಿ, ಬಡವರು ಮತ್ತು ಅನ್ನದಾತ ಎಂಬ 4 ಪ್ರಮುಖ ವರ್ಗಗಳ ಕುರಿತು ರಾಷ್ಟ್ರಪತಿ ಅವರು ತಮ್ಮ ಭಾಷಣದಲ್ಲಿ ನೀಡಿದ ಒಳನೋಟಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಭಾರತದ ಈ 4 ಪ್ರಮುಖ ಆಧಾರಸ್ತಂಭಗಳ ಅಭಿವೃದ್ಧಿ ಮತ್ತು ಪ್ರಗತಿಯಿಂದ ಇಡೀ ರಾಷ್ಟ್ರವೇ ಅಭಿವೃದ್ಧಿ ಹೊಂದಲು ಕಾರಣವಾಗುತ್ತದೆ. 2047ರ ವೇಳೆಗೆ ವಿಕಸಿತ ಭಾರತವನ್ನು ಸಾಧಿಸಲು ಬಯಸಿದರೆ 20ನೇ ಶತಮಾನದ ಆಡಳಿತ ವಿಧಾನವು ಕಾರ್ಯ ನಿರ್ವಹಿಸುವುದಿಲ್ಲ, ಹಾಗಾಗಿ, ಆಡಳಿತ ಬದಲಾವಣೆ ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು.
ಪ್ರಧಾನ ಮಂತ್ರಿ ಅವರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಹಕ್ಕುಗಳು ಮತ್ತು ಅಭಿವೃದ್ಧಿಯ ಬಗ್ಗೆಯೂ ಪ್ರಸ್ತಾಪಿಸಿದರು. ಸಂವಿಧಾನ ವಿಧಿ 370 ರದ್ದತಿಯು ಈ ಸಮುದಾಯಗಳು ಜಮ್ಮು-ಕಾಶ್ಮೀರದಲ್ಲಿ ದೇಶದ ಇತರ ಭಾಗಗಳಿಗೆ ಸಿಗುತ್ತಿರುವ ಸಮಾನ ಹಕ್ಕುಗಳನ್ನು ಪಡೆಯುವುದನ್ನು ಖಚಿತಪಡಿಸಿದೆ. ಅದೇ ರೀತಿ, ಅರಣ್ಯ ಹಕ್ಕು ಕಾಯಿದೆ, ದೌರ್ಜನ್ಯ ತಡೆ ಕಾಯಿದೆ ಮತ್ತು ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದ ನಿವಾಸ ಹಕ್ಕುಗಳನ್ನು ಜಾರಿಗೆ ತರಲಾಯಿತು. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲಾತಿ ಮಸೂದೆ ಅಂಗೀಕಾರದ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.
ಬಾಬಾ ಸಾಹೇಬರನ್ನು ಗೌರವಿಸುವ ಕ್ರಮಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಬುಡಕಟ್ಟು ಮಹಿಳೆಯರು ರಾಷ್ಟ್ರದ ರಾಷ್ಟ್ರಪತಿಗಳಾದ ಘಟನೆಯನ್ನೂ ಸ್ಮರಿಸಿದರು. ಬಡವರ ಕಲ್ಯಾಣಕ್ಕಾಗಿ ಸರ್ಕಾರದ ನೀತಿಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಪಕ್ಕಾ ಮನೆಗಳು, ಆರೋಗ್ಯ ಸುಧಾರಿಸುವ ಸ್ವಚ್ಛತಾ ಅಭಿಯಾನಗಳು, ಉಜ್ವಲ ಅನಿಲ ಯೋಜನೆ, ಉಚಿತ ಪಡಿತರ ಮತ್ತು ಈ ಸಮುದಾಯಗಳನ್ನು ಸಬಲೀಕರಣಗೊಳಿಸಲು ಆಯುಷ್ಮಾನ್ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕಳೆದ 10 ವರ್ಷಗಳಲ್ಲಿ, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹೆಚ್ಚಿಸಲಾಗಿದೆ, ಶಾಲಾ ದಾಖಲಾತಿ ಸಂಖ್ಯೆ ಏರಿದೆ, ಶಾಲೆ ಬಿಡುವವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹೊಸ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಏಕಲವ್ಯ ಶಾಲೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಮಾದರಿ ಶಾಲೆಗಳ ಸಂಖ್ಯೆ 120ರಿಂದ 400ಕ್ಕೆ ಏರಿಕೆಯಾಗಿದೆ. ಉನ್ನತ ಶಿಕ್ಷಣದಲ್ಲಿ ಎಸ್‌ಸಿ ವಿದ್ಯಾರ್ಥಿಗಳ ದಾಖಲಾತಿ ಶೇ.44ರಷ್ಟು, ಎಸ್‌ಟಿ ವಿದ್ಯಾರ್ಥಿಗಳ ದಾಖಲಾತಿ ಶೇ.65ರಷ್ಟು ಮತ್ತು ಒಬಿಸಿ ದಾಖಲಾತಿ ಶೇ.45ರಷ್ಟು ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
“ಸಬ್ಕಾ ಸಾಥ್ ಸಬ್ಕಾ ವಿಕಾಸ್ ಕೇವಲ ಘೋಷಣೆಯಲ್ಲ, ಅದು ಮೋದಿ ಅವರ ಗ್ಯಾರಂಟಿ”. ಸುಳ್ಳು ನಿರೂಪಣೆ ಆಧರಿಸಿ ಹತಾಶೆಯ ಮನಸ್ಥಿತಿ ಹರಡದಂತೆ ಪ್ರಧಾನಿ ಎಚ್ಚರಿಸಿದರು. ಸ್ವತಂತ್ರ ಭಾರತದಲ್ಲಿ ಜನಿಸಿದರು ಮತ್ತು ಅವರ ಆಲೋಚನೆಗಳು ಮತ್ತು ಕನಸುಗಳು ಸ್ವತಂತ್ರವಾಗಿವೆ. ಆದರೆ ರಾಷ್ಟ್ರದಲ್ಲಿ ವಸಾಹತುಶಾಹಿ ಮನಸ್ಥಿತಿಗೆ ಅವಕಾಶವಿಲ್ಲ ಎಂದು ಪ್ರಧಾನಿ ಮಾರ್ಮಿಕವಾಗಿ ಹೇಳಿದರು.
ಸಾರ್ವಜನಿಕ ವಲಯದ ಉದ್ಯಮಗಳ ಹಿಂದಿನ ಅವ್ಯವಸ್ಥೆಗೆ ವಿರುದ್ಧವಾಗಿ, ಈಗ ಬಿಎಸ್ಸೆನ್ನೆಲ್ ನಂತಹ ಉದ್ಯಮಗಳು 4ಜಿ ಮತ್ತು 5ಜಿಯಲ್ಲಿ ಮುಂಚೂಣಿಯಲ್ಲಿವೆ, ಎಚ್ಎಲ್ ದಾಖಲೆಯ ಉತ್ಪಾದನೆ ಮಾಡುತ್ತಿದೆ. ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ ಎಚ್ಎಎಲ್ ಕರ್ನಾಟಕದಲ್ಲಿ ಇದೆ ಎಂದು ಪ್ರಧಾನಿ ಹೇಳಿದರು.
ಎಲ್ಐಸಿ ಕೂಡ ದಾಖಲೆಯ ಷೇರು ಬೆಲೆಗಳೊಂದಿಗೆ ಅಭಿವೃದ್ಧಿ ಹೊಂದುತ್ತಿದೆ. 2014ರಲ್ಲಿ ದೇಶದಲ್ಲಿ 234 ಇದ್ದ ಪಿಎಸ್‌ಯುಗಳ ಸಂಖ್ಯೆ ಇಂದು 254ಕ್ಕೆ ಏರಿಕೆಯಾಗಿದ್ದು, ಅವುಗಳಲ್ಲಿ ಹೆಚ್ಚಿನವು ಹೂಡಿಕೆದಾರರ ಗಮನ ಸೆಳೆಯುವ ಮೂಲಕ ದಾಖಲೆಯ ಆದಾಯ ನೀಡುತ್ತಿವೆ ಎಂದು ಪ್ರಧಾನಿ ಮೋದಿ ಸದನಕ್ಕೆ ತಿಳಿಸಿದರು. ಕಳೆದ ವರ್ಷದಲ್ಲಿ ದೇಶದಲ್ಲಿ ಪಿಎಸ್‌ಯು ಸೂಚ್ಯಂಕವು 2 ಪಟ್ಟು ಏರಿಕೆ ಕಂಡಿದೆ. ಕಳೆದ 10 ವರ್ಷಗಳಲ್ಲಿ ಅಂದರೆ2004 ಮತ್ತು 2014ರ ನಡುವೆ ಪಿಎಸ್ ಯುಗಳ ನಿವ್ವಳ ಲಾಭ 1.25 ಲಕ್ಷ ಕೋಟಿ ರೂ. ಗಳಿಂದ 2.50 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ಪಿಎಸ್ ಯುಗಳ ನಿವ್ವಳ ಮೌಲ್ಯವು 9.5 ಲಕ್ಷ ಕೋಟಿ ರೂ.ನಿಂದ 17 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ರಾಜಕೀಯ ಜೀವನದಲ್ಲಿ ಹಾದು ಹೋಗಿರುವುದರಿಂದ ಪ್ರಾದೇಶಿಕ ಆಶಯಗಳನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ‘ದೇಶದ ಅಭಿವೃದ್ಧಿಗಾಗಿ ರಾಜ್ಯಗಳ ಅಭಿವೃದ್ಧಿ’ ಎಂಬ ಮಂತ್ರವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು. ರಾಜ್ಯಗಳ ಅಭಿವೃದ್ಧಿಗೆ ಕೇಂದ್ರದಿಂದ ಸಂಪೂರ್ಣ ನೆರವು ನೀಡಲಾಗುವುದು. ರಾಜ್ಯಗಳ ನಡುವೆ ಅಭಿವೃದ್ಧಿಗಾಗಿ ಆರೋಗ್ಯಕರ ಸ್ಪರ್ಧೆಯ ಪ್ರಾಮುಖ್ಯತೆ ಅಗತ್ಯ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಸಹಕಾರಿ ಒಕ್ಕೂಟ ವ್ಯವಸ್ಥೆ ಅತ್ಯಗತ್ಯ ಎಂದು ಪ್ರಧಾನಿ ಕರೆ ನೀಡಿದರು.
ಜೀವಿತಾವಧಿಯಲ್ಲಿ ಒಮ್ಮೆ ಸಂಭವಿಸಿದ ಕೋವಿಡ್ ಸಾಂಕ್ರಾಮಿಕದ ಸವಾಲುಗಳ ಮೇಲೆ ಬೆಳಕು ಚೆಲ್ಲಿದ ಮೋದಿ ಅವರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ 20 ಸಭೆಗಳ ಅಧ್ಯಕ್ಷತೆ ವಹಿಸಿಕೊಂಡಿದ್ದನ್ನು ನೆನಪಿಸಿಕೊಂಡರು ಮತ್ತು ಸವಾಲನ್ನು ಎದುರಿಸಲು ಸಂಪೂರ್ಣ ಆಡಳಿತ ಯಂತ್ರದ ಶ್ರಮ ಮತ್ತು ಹೋರಾಟ ಕಾರಣ ಎಂದರು.
ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿದಂತೆ ಎಲ್ಲಾ ರಾಜ್ಯಗಳಿಗೆ ಜಿ-20 ಮಾನ್ಯತೆ ಮತ್ತು ವೈಭವ ಹರಡಬೇಕು ಎಂದು ಕರೆ ನೀಡಿದ ಪ್ರಧಾನಿ, ವಿದೇಶಿ ಗಣ್ಯರನ್ನು ಬೇರೆ ಬೇರೆ ರಾಜ್ಯಗಳಿಗೆ ಕರೆದುಕೊಂಡು ಹೋಗುವ ಅವರ ಅಭ್ಯಾಸವನ್ನು ಪ್ರಸ್ತಾಪಿಸಿದರು.
ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದ ಯಶಸ್ಸಿಗೆ ರಾಜ್ಯಗಳು ಮಹತ್ವದ ಪಾತ್ರ ವಹಿಸಿವೆ. “ನಮ್ಮ ಕಾರ್ಯಕ್ರಮದ ವಿನ್ಯಾಸವು ರಾಜ್ಯಗಳನ್ನು ಜೊತೆಯಲ್ಲಿ ಕರೆದೊಯ್ಯುತ್ತದೆ, ರಾಷ್ಟ್ರಗಳನ್ನು ಸಾಮೂಹಿಕವಾಗಿ ಮುಂದಕ್ಕೆ ಕೊಂಡೊಯ್ಯುತ್ತದೆ” ಎಂದು ಅವರು ಹೇಳಿದರು.
ಮಾನವ ದೇಹದೊಂದಿಗೆ ರಾಷ್ಟ್ರದ ಕಾರ್ಯ ನಿರ್ವಹಣೆಯ ಸಾದೃಶ್ಯ ಚಿತ್ರಿಸಿದ ಪ್ರಧಾನಿ, ಕಾರ್ಯ ನಿರ್ವಹಿಸದ ಅಥವಾ ಊನವಾದ ದೇಹದ ಅಂಗವು ಇಡೀ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ ಅದೇ ರೀತಿ, ಒಂದು ರಾಜ್ಯ ಅಭಿವೃದ್ಧಿಯಿಂದ ವಂಚಿತವಾಗಿ, ಹಿಂದುಳಿದರೆ, ಇಡೀ ರಾಷ್ಟ್ರ ಅಭಿವೃದ್ಧಿ ಹೊಂದಿದೆ ಎಂದು ಪರಿಗಣಿಸಲಾಗುವುದಿಲ್ಲ ಎಂದರು.
ಎಲ್ಲರಿಗೂ ಮೂಲಸೌಕರ್ಯಗಳನ್ನು ಖಾತ್ರಿಪಡಿಸುವುದು ಮತ್ತು ಜೀವನ ಮಟ್ಟ ಹೆಚ್ಚಿಸುವುದು ರಾಷ್ಟ್ರದ ನೀತಿಗಳ ನಿರ್ದೇಶನವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಗಮನವು ಸುಲಭವಾದ ಜೀವನ ದಾಟಿ ಜೀವನದ ಗುಣಮಟ್ಟ ಸುಧಾರಿಸುವತ್ತ ಹೋಗುತ್ತದೆ. ಬಡತನದಿಂದ ಹೊರಬಂದಿರುವ ನವ-ಮಧ್ಯಮ ವರ್ಗಕ್ಕೆ ಹೊಸ ಅವಕಾಶಗಳನ್ನು ಒದಗಿಸುವ ಅವರ ಸಂಕಲ್ಪವನ್ನು ಒತ್ತಿ ಹೇಳಿದರು. “ಸಾಮಾಜಿಕ ನ್ಯಾಯದ ‘ಮೋದಿ ಕವಚ’ಕ್ಕೆ ನಾವು ಹೆಚ್ಚಿನ ಶಕ್ತಿ ನೀಡುತ್ತೇವೆ” ಎಂದರು.
ಬಡತನದಿಂದ ಹೊರಬಂದವರಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಉಚಿತ ಪಡಿತರ ಯೋಜನೆ, ಆಯುಷ್ಮಾನ್ ಯೋಜನೆ, ಔಷಧಗಳ ಮೇಲೆ 80 ಪ್ರತಿಶತ ರಿಯಾಯಿತಿ, ರೈತರಿಗೆ ಪ್ರಧಾನ ಮಂತ್ರಿ ಸಮ್ಮಾನ್ ನಿಧಿ, ಬಡವರಿಗೆ ಪಕ್ಕಾ ಮನೆಗಳು, ನಲ್ಲಿ ನೀರಿನ ಸಂಪರ್ಕಗಳು ಮತ್ತು ಹೊಸ ಮನೆಗಳ ನಿರ್ಮಾಣಗಳನ್ನು ಪ್ರಧಾನಿ ಘೋಷಿಸಿದರು. ಶೌಚಾಲಯಗಳು ತ್ವರಿತ ಗತಿಯಲ್ಲಿ ಮುಂದುವರಿಯಲಿವೆ. “ಮೋದಿ 3.0 ವಿಕಸಿತ ಭಾರತದ ಅಡಿಪಾಯ ಬಲಪಡಿಸಲು ಯಾವುದೇ ಪ್ರಯತ್ನ ಬಿಡುವುದಿಲ್ಲ” ಎಂದು ಅವರು ಹೇಳಿದರು.
ಮುಂದಿನ 5 ವರ್ಷಗಳಲ್ಲಿ ವೈದ್ಯಕೀಯ ಮೂಲಸೌಕರ್ಯದಲ್ಲಿ ದಾಪುಗಾಲು ಮುಂದುವರಿಯಲಿದೆ. ವೈದ್ಯಕೀಯ ಚಿಕಿತ್ಸೆ ಹೆಚ್ಚು ಕೈಗೆಟುಕಲಿದೆ, ಪ್ರತಿ ಮನೆಗೆ ಪೈಪ್‌ಲೈನ್‌ನಲ್ಲಿ ನೀರು ಸಿಗಲಿದೆ, ಪ್ರಧಾನಿ ಆವಾಸ್ ಯೋಜನೆಯಲ್ಲಿ ಪರಿಪೂರ್ಣತೆ ಸಾಧಿಸಲಾಗುವುದು, ಕೋಟ್ಯಂತರ ಮನೆಗಳಿಗೆ ವಿದ್ಯುತ್ ಬಿಲ್‌ಗಳು ಶೂನ್ಯವಾಗಲಿದೆ. ಸೌರಶಕ್ತಿಗೆ ಇಡೀ ದೇಶದಲ್ಲಿ ಪೈಪ್ ಮೂಲಕ ಅಡುಗೆ ಅನಿಲ, ಸ್ಟಾರ್ಟಪ್‌ಗಳು ಹೆಚ್ಚಾಗುತ್ತವೆ, ಪೇಟೆಂಟ್ ಫೈಲಿಂಗ್ ಹೊಸ ದಾಖಲೆಗಳನ್ನು ಮುರಿಯಲಿದೆ. ಮುಂದಿನ 5 ವರ್ಷಗಳಲ್ಲಿ ಪ್ರತಿ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಭಾರತೀಯ ಯುವಕರ ಸಾಮರ್ಥ್ಯವನ್ನು ಜಗತ್ತು ವೀಕ್ಷಿಸಲಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪಾಂತರಗೊಳ್ಳಲಿದೆ. ಆತ್ಮನಿರ್ಭರ್ ಭಾರತ್ ಅಭಿಯಾನವು ಹೊಸ ಎತ್ತರಕ್ಕೆ ತಲುಪಲಿದೆ. ಭಾರತದಲ್ಲಿ ತಯಾರಿಸಿದ ಸೆಮಿಕಂಡಕ್ಟರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಸರಕುಗಳು ಪ್ರಾಬಲ್ಯ ಸಾಧಿಸಲಿವೆ ಎಂದು ಪ್ರಧಾನಿ ಮೋದಿ ಸದನಕ್ಕೆ ಭರವಸೆ ನೀಡಿದರು.
ಜಗತ್ತು ಮತ್ತು ದೇಶವು ಇತರ ದೇಶಗಳ ಮೇಲೆ ಇಂಧನ ಅವಲಂಬನೆ ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಹಸಿರು ಹೈಡ್ರೋಜನ್ ಮತ್ತು ಎಥೆನಾಲ್ ಮಿಶ್ರಣದ ಕಡೆಗೆ ದೇಶವು ದಾಪುಗಾಲು ಹಾಕಲಿದೆ. ಖಾದ್ಯ ತೈಲ ಉತ್ಪಾದನೆಯಲ್ಲಿ ಆತ್ಮನಿರ್ಭರ್ ಆಗುವ ಭಾರತದ ನಂಬಿಕೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಮುಂದಿನ 5 ವರ್ಷಗಳ ದೂರದೃಷ್ಟಿ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ನೈಸರ್ಗಿಕ ಕೃಷಿ ಮತ್ತು ಸಿರಿಧಾನ್ಯಯನ್ನು ಉತ್ಕೃಷ್ಟ ಆಹಾರವಾಗಿ ಉತ್ತೇಜಿಸಲಾಗುವುದು. ಕೃಷಿಯಲ್ಲಿ ಡ್ರೋನ್ ಬಳಕೆಯು ಹೊಸ ಎತ್ತರ ಕಾಣಲಿದೆ. ಅದೇ ರೀತಿ, ನ್ಯಾನೊ ಯೂರಿಯಾ ಸಹಕಾರಿ ಬಳಕೆಯನ್ನು ಜನಾಂದೋಲನವಾಗಿ ಪ್ರಚಾರ ಮಾಡಲಾಗುತ್ತಿದೆ. ಮೀನುಗಾರಿಕೆ ಮತ್ತು ಪಶುಸಂಗೋಪನೆಯಲ್ಲಿ ಹೊಸ ದಾಖಲೆ ಮಾಡಲಾಗುತ್ತಿದೆ ಎಂದರು.
ಮುಂದಿನ 5 ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರವು ದೊಡ್ಡ ಉದ್ಯೋಗದ ಮೂಲವಾಗುತ್ತಿರುವ ಬಗ್ಗೆಯೂ ಪ್ರಧಾನಿ ಮೋದಿ ಸದನದ ಗಮನ ಸೆಳೆದರು. ದೇಶದ ಹಲವು ರಾಜ್ಯಗಳು ತಮ್ಮ ಆರ್ಥಿಕತೆಯನ್ನು ಪ್ರವಾಸೋದ್ಯಮದಿಂದಲೇ ಚಲಾಯಿಸುವ ಸಾಮರ್ಥ್ಯ ಹೊಂದಿವೆ. ಈ ನಿಟ್ಟಿನಲ್ಲಿ “ಭಾರತವು ವಿಶ್ವಕ್ಕೆ ಬೃಹತ್ ಪ್ರವಾಸಿ ತಾಣವಾಗಲಿದೆ” ಎಂದು ಅವರು ಹೇಳಿದರು
ಡಿಜಿಟಲ್ ಇಂಡಿಯಾ ಮತ್ತು ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯನ್ನು ಪ್ರಧಾನಿ ಎತ್ತಿ ತೋರಿಸಿದರು. ಮುಂದಿನ 5 ವರ್ಷಗಳು ಭಾರತದ ಡಿಜಿಟಲ್ ಆರ್ಥಿಕತೆಗೆ ಸಕಾರಾತ್ಮಕ ಭವಿಷ್ಯ ಪ್ರಸ್ತುತಪಡಿಸಲಿವೆ. “ಡಿಜಿಟಲ್ ಸೇವೆಗಳು ಭಾರತದ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ”. “ನಮ್ಮ ವಿಜ್ಞಾನಿಗಳು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ” ಎಂದು ಪ್ರಧಾನ ಮಂತ್ರಿ ಹೇಳಿದರು.
ತಳಮಟ್ಟದ ಆರ್ಥಿಕತೆಯ ಪರಿವರ್ತನೆಯ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಸ್ವಸಹಾಯ ಗುಂಪುಗಳಿಂದ 3 ಕೋಟಿ ಲಕ್ಷಪತಿ ದೀದಿಗಳು ಮಹಿಳಾ ಸಬಲೀಕರಣದ ಹೊಸ ಅಧ್ಯಾಯ ಬರೆಯುತ್ತಾರೆ. “2047ರ ವೇಳೆಗೆ, ಭಾರತವು ತನ್ನ ಸುವರ್ಣ ಅವಧಿಯನ್ನು ಪುನರುಜ್ಜೀವನಗೊಳಿಸುತ್ತದೆ” ಎಂದು ಪ್ರಧಾನ ಮಂತ್ರಿ ಅವರು ವಿಕಸಿತ ಭಾರತಗೆ ಸರ್ಕಾರ ಹೊಂದಿರುವ ಬದ್ಧತೆಯನ್ನು ತಿಳಿಸಿದರು.
ಸದನ ಮತ್ತು ರಾಷ್ಟ್ರದ ಮುಂದೆ ತಮ್ಮ ವಾಸ್ತವಾಂಶಗಳನ್ನು ಮಂಡಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ರಾಜ್ಯಸಭೆಯ ಸಭಾಪತಿ ಅವರಿಗೆ ಪ್ರಧಾನಿ ಧನ್ಯವಾದಗಳನ್ನು ಅರ್ಪಿಸಿದರು. ಸ್ಫೂರ್ತಿದಾಯಕ ಭಾಷಣ ಮಾಡಿದ ಭಾರತದ ರಾಷ್ಟ್ರಪತಿಗಳಿಗೆ ಧನ್ಯವಾದ ಅರ್ಪಿಸಿ, ಪ್ರಧಾನ ಮಂತ್ರಿ ಅವರು ತಮ್ಮ ಭಾಷಣ ಮುಕ್ತಾಯಗೊಳಿಸಿದರು
Speaking in the Rajya Sabha. https://t.co/fNP5AOeIuV
— Narendra Modi (@narendramodi) February 7, 2024
Rashtrapati Ji’s address emphasized India’s burgeoning confidence, promising future and immense potential of its people. pic.twitter.com/WtfvdINfOf
— PMO India (@PMOIndia) February 7, 2024
विपक्ष मेरी आवाज को दबा नहीं सकता है, क्योंकि देश की जनता ने इस आवाज को ताकत दे रखी है: PM @narendramodi pic.twitter.com/BQxn81Z17G
— PMO India (@PMOIndia) February 7, 2024
From “Fragile Five” to “Top Five” economy. pic.twitter.com/iPTU9CRZTu
— PMO India (@PMOIndia) February 7, 2024
हमारी सरकार के बीते 10 साल को बड़े और निर्णायक फैसलों के लिए हमेशा याद किया जाएगा। हम कड़ी मेहनत से सोच-समझकर देश को संकटों से बाहर लाए हैं। pic.twitter.com/j59VksvjN1
— PMO India (@PMOIndia) February 7, 2024
Sabka Saath, Sabka Vikaas is not a slogan. It is Modi’s guarantee: PM pic.twitter.com/b1QhYdicXU
— PMO India (@PMOIndia) February 7, 2024
विकसित भारत के सपने को 2047 तक साकार करने के लिए 20वीं सदी की सोच नहीं चलेगी। pic.twitter.com/zSOwr2QfzJ
— PMO India (@PMOIndia) February 7, 2024
**
Speaking in the Rajya Sabha. https://t.co/fNP5AOeIuV
— Narendra Modi (@narendramodi) February 7, 2024
Rashtrapati Ji's address emphasized India's burgeoning confidence, promising future and immense potential of its people. pic.twitter.com/WtfvdINfOf
— PMO India (@PMOIndia) February 7, 2024
विपक्ष मेरी आवाज को दबा नहीं सकता है, क्योंकि देश की जनता ने इस आवाज को ताकत दे रखी है: PM @narendramodi pic.twitter.com/BQxn81Z17G
— PMO India (@PMOIndia) February 7, 2024
From "Fragile Five" to "Top Five" economy. pic.twitter.com/iPTU9CRZTu
— PMO India (@PMOIndia) February 7, 2024
हमारी सरकार के बीते 10 साल को बड़े और निर्णायक फैसलों के लिए हमेशा याद किया जाएगा। हम कड़ी मेहनत से सोच-समझकर देश को संकटों से बाहर लाए हैं। pic.twitter.com/j59VksvjN1
— PMO India (@PMOIndia) February 7, 2024
Sabka Saath, Sabka Vikaas is not a slogan. It is Modi's guarantee: PM pic.twitter.com/b1QhYdicXU
— PMO India (@PMOIndia) February 7, 2024
विकसित भारत के सपने को 2047 तक साकार करने के लिए 20वीं सदी की सोच नहीं चलेगी। pic.twitter.com/zSOwr2QfzJ
— PMO India (@PMOIndia) February 7, 2024
कांग्रेस अध्यक्ष खड़गे जी ने एनडीए को 400 सीटों का जो आशीर्वाद दिया है, वो सिर-आंखों पर! pic.twitter.com/uOaUxJezLX
— Narendra Modi (@narendramodi) February 7, 2024
कांग्रेस को इसलिए मोदी की गारंटी पर सवाल उठाने का अधिकार नहीं है… pic.twitter.com/xhaZoXlI8P
— Narendra Modi (@narendramodi) February 7, 2024
हमारी सरकार के 10 साल बड़े और निर्णायक फैसलों के लिए हमेशा याद किए जाएंगे। pic.twitter.com/HKN7CjZ6yn
— Narendra Modi (@narendramodi) February 7, 2024
देश को गुलामी की मानसिकता से बाहर निकालने के लिए हमने जो प्रयास किए हैं, उसके एक नहीं, अनेक उदाहरण हैं। pic.twitter.com/DnANAhHDrm
— Narendra Modi (@narendramodi) February 7, 2024
युवा, महिला, गरीब और हमारे अन्नदाता, इन चार स्तंभों के मजबूत होने से देश तेजी से विकसित भारत की ओर आगे बढ़ेगा। pic.twitter.com/GU4iM3UCnJ
— Narendra Modi (@narendramodi) February 7, 2024
पिछले 10 वर्षों में हमारी सरकार की योजनाओं के लाभार्थियों में एससी, एसटी और ओबीसी समाज के हमारे भाई-बहनों की बड़ी संख्या रही है। pic.twitter.com/TOaF3o0H23
— Narendra Modi (@narendramodi) February 7, 2024
आज इसलिए दुनियाभर के Investors का भरोसा भारत के PSU की तरफ बढ़ रहा है… pic.twitter.com/b00sC6HL7K
— Narendra Modi (@narendramodi) February 7, 2024
गुजरात के मुख्यमंत्री के रूप में और आज भी मेरा यही मंत्र रहा है- देश के विकास के लिए राज्य का विकास। pic.twitter.com/G2IlFX2vZC
— Narendra Modi (@narendramodi) February 7, 2024
राष्ट्र हमारे लिए सिर्फ जमीन का एक टुकड़ा नहीं है। देश के हर हिस्से को साथ लेकर चलने के लिए हम प्रतिबद्ध हैं। pic.twitter.com/ygr9eeDXdS
— Narendra Modi (@narendramodi) February 7, 2024
आने वाले दिनों में हमें अपना पूरा सामर्थ्य Ease of Living से Quality of Life की ओर बढ़ने में लगाना है। pic.twitter.com/dLcz3vIVp8
— Narendra Modi (@narendramodi) February 7, 2024
'मोदी 3.0' विकसित भारत की नींव को मजबूत करने में अपनी पूरी शक्ति लगा देगा। pic.twitter.com/bq3v7dJQXH
— Narendra Modi (@narendramodi) February 7, 2024