Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯಪಾಲರುಗಳ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿಯವರ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿಂದು ರಾಜ್ಯಪಾಲರುಗಳ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಭಾಷಣ ಮಾಡಿದರು. 
ಸಮಾಜದಲ್ಲಿ ಬದಲಾವಣೆ ತರಲು ಎಲ್ಲ ರಾಜ್ಯಪಾಲರೂ ಸಂವಿಧಾನದ ಪಾವಿತ್ರ್ಯವನ್ನು ಎತ್ತಿ ಹಿಡಿದು ವೇಗವರ್ಧಕ ಪ್ರತಿನಿಧಿಗಳಾಗಬಹುದು ಎಂದು ಅಭಿಪ್ರಾಯಪಟ್ಟರು. 2022ರ ಹೊತ್ತಿಗೆ ನವ ಭಾರತದ ಗುರಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಇದನ್ನು ಜನಾಂದೋಲನವಾಗಿ ಮಾಡುವ ಮೂಲಕ ಮಾತ್ರ ಸಾಧಿಸಬಹುದು ಎಂದರು. 
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ದೀರ್ಘಕಾಲ ಸಂವಾದ ನಡೆಸುವಂತೆ ರಾಜ್ಯಪಾಲರುಗಳಿಗೆ ಉತ್ತೇಜನ ನೀಡಿದರು. ಕೇಂದ್ರ ಸರ್ಕಾರ ಇತ್ತೀಚೆಗೆ ಆಯೋಜಿಸಿದ್ದ ಹ್ಯಾಕಥಾನ್ ನ ಉದಾಹರಣೆ ನೀಡಿದ ಅವರು, ಅದರಲ್ಲಿ ವಿದ್ಯಾರ್ಥಿಗಳು ವಿವಿಧ ಸಮಸ್ಯೆಗಳಿಗೆ ತಂತ್ರಜ್ಞಾನದ ಪರಿಹಾರ ಒದಗಿಸಿದ್ದರು ಎಂದರು, ವಿಶ್ವವಿದ್ಯಾಲಯಗಳು ನಾವಿನ್ಯದ ಕೇಂದ್ರಗಳಾಗಬೇಕು ಎಂದು ಪ್ರತಿಪಾದಿಸಿದರು. 
ಇದೇ ದಾರಿಯಲ್ಲಿ, ಪ್ರತಿ ರಾಜ್ಯದಲ್ಲಿರುವ ಯುವಜನರು ಒಂದು ಕ್ರೀಡೆಯ ಬಗ್ಗೆ ಗಮನ ಹರಿಸಬೇಕು ಎಂದರು. ಸ್ವಚ್ಛತಾ ಅಥವಾ ಶುಚಿತ್ವಕ್ಕಾಗಿ ಉದಾಹರಣೆ ರೂಪಿಸಲು ಮುಂದಾಗುವಂತೆ ರಾಜ್ಯಪಾಲರುಗಳನ್ನು ಉತ್ತೇಜಿಸಿದರು. ಮಹಾತ್ಮಾ ಗಾಂಧಿ ಅವರ 150ನೇ ಜಯಂತಿಯನ್ನು 2019ರಲ್ಲಿ ಆಚರಿಸಲಾಗುತ್ತಿದ್ದು, ಬಯಲು ಶೌಚ ಮುಕ್ತ ಭಾರತ ನಿರ್ಮಾಣದೆಡೆಗಿನ ನಮ್ಮ ಪ್ರಯತ್ನಕ್ಕೆ ಅವರು ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದರು. ಬದಲಾವಣೆಯ ಅನ್ವೇಷಣೆಯಲ್ಲಿ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳು ದೊಡ್ಡ ಪ್ರೇರಕಶಕ್ತಿ ಮತ್ತು ಶಕ್ತಿವರ್ಧಕವಾಗಿವೆ ಎಂದು ಪ್ರಧಾನಿ ಹೇಳಿದರು. ರಾಜ್ಯಪಾಲರುಗಳು ಕೂಡ ಬ್ಯಾಂಕ್ ಗಳಿಗೆ ಮುದ್ರಾ ಯೋಜನೆ ಅಡಿಯಲ್ಲಿ ಅದರಲ್ಲೂ ಸಂವಿಧಾನದ ದಿನವಾದ ನವೆಂಬರ್ 26ರಿಂದ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನವಾದ ಡಿಸೆಂಬರ್ 6ರೊಳಗೆ ಗುಡ್ಡಗಾಡು ಜನರಿಗೆ, ದಲಿತರಿಗೆ ಮತ್ತು ಮಹಿಳೆಯರಿಗೆ ಸಾಲ ನೀಡುವಂತೆ ರಾಜ್ಯಪಾಲರೂ ಪ್ರೇರೇಪಿಸಬಹುದು ಎಂದರು.

, ಸೌರ ಶಕ್ತಿ, ಡಿಬಿಟಿ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೀಮೆಎಣ್ಣೆ ಮುಕ್ತಗೊಳಿಸುವಲ್ಲಿ ಕೈಗೊಂಡ ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳುವಂತೆ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್ ಗಳಿಗೆ ಪ್ರಧಾನಿಯವರು ಉತ್ತೇಜನ ನೀಡಿದರು. ಈ ಸಾಧನೆಗಳು ಎಲ್ಲ ಕೇಂದ್ರಾಡಳಿತ ಪ್ರದೇಶಗಳಿಗೂ ತ್ವರಿತವಾಗಿ ವಿಸ್ತರಣೆ ಆಗಬೇಕು ಎಂದರು.