ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನ ದಿನದ ಅಂಗವಾಗಿ ರಾಜಸ್ಥಾನದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತ, ಶ್ರೇಷ್ಠತೆಯಡೆಗಿನ ಭಾರತದ ಪಯಣದಲ್ಲಿ ಅತ್ಯಮೂಲ್ಯ ಕೊಡುಗೆ ನೀಡಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ:
“ಅದ್ಭುತ ಸಾಹಸ ಮತ್ತು ಪರಾಕ್ರಮದ ಪ್ರತೀಕವಾಗಿರುವ ರಾಜಸ್ಥಾನದ ಎಲ್ಲಾ ಸಹೋದರ ಸಹೋದರಿಯರಿಗೆ ರಾಜಸ್ಥಾನ ದಿನದ ಅಂಗವಾಗಿ ಅನಂತಾನಂತ ಶುಭಾಶಯಗಳು. ಇಲ್ಲಿನ ಶ್ರಮಶೀಲ ಮತ್ತು ಪ್ರತಿಭಾವಂತ ಜನರ ಭಾಗವಹಿಸುವಿಕೆಯೊಂದಿಗೆ, ಈ ರಾಜ್ಯವು ಅಭಿವೃದ್ಧಿಯ ಹೊಸ ಮಾನದಂಡಗಳನ್ನು ರೂಪಿಸುವುದನ್ನು ಮುಂದುವರಿಸಲಿ ಮತ್ತು ದೇಶದ ಏಳಿಗೆಗೆ ಅಮೂಲ್ಯ ಕೊಡುಗೆಯನ್ನು ನೀಡಲಿ ಎಂದು ಹಾರೈಸುತ್ತೇನೆ”
*****
अद्भुत साहस और पराक्रम के प्रतीक प्रदेश राजस्थान के अपने सभी भाई-बहनों को राजस्थान दिवस की अनेकानेक शुभकामनाएं। यहां के परिश्रमी और प्रतिभाशाली लोगों की भागीदारी से यह राज्य विकास के नित-नए मानदंड गढ़ता रहे और देश की समृद्धि में अमूल्य योगदान देता रहे, यही कामना है।
— Narendra Modi (@narendramodi) March 30, 2025