ನಮ್ಮೆಲ್ಲರನ್ನು ಹರಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರುವ ನಿಮಗೆಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು. ನಮ್ಮ ದೇಶದ ಕೆಲವು ಭಾಗಗಳು ಕೆಲವು ಸಮಯದ ಹಿಂದೆ ಪ್ರವಾಹಗಳಿಂದ ಅಪಾರ ಕಷ್ಟಗಳನ್ನು ಅನುಭವಿಸುತ್ತಿದ್ದವು. ಅನೇಕ ಜೀವಗಳು ನಷ್ಟವಾಗುತ್ತಿದ್ದವು ಮತ್ತು ರೈತರು ಬೃಹತ್ ನಷ್ಟ ಅನುಭವಿಸುತ್ತಿದ್ದರು. ರಾಜಸ್ಥಾನವೂ ಕೂಡ ಅನೇಕ ಸ್ಥಳಗಳಲ್ಲಿ ಈ ಕಷ್ಟವನ್ನು ಅನುಭವಿಸುತ್ತಿತ್ತು. ಈ ಕುರಿತು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿಯೊಂದನ್ನು ಸಲ್ಲಿಸಿದ್ದು, ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮಿತಿ ಈಗಾಗಲೇ ರಾಜಸ್ಥಾನಕ್ಕೆ ಭೇಟಿ ನೀಡಿದೆ. ಇಂತಹ ಕಷ್ಟದ ಸಮಯದಲ್ಲಿ ಭಾರತ ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಎಂಬ ಖಾತ್ರಿಯನ್ನು ನಾನು ರಾಜಸ್ಥಾನದಲ್ಲಿ ಪ್ರವಾಹದಿಂದ ಪೀಡಿತರಾದ ಸೋದರರು, ಸೋದರಿಯರು ಮತ್ತು ರೈತರಿಗೆ ನೀಡಲು ಇಚ್ಛಿಸುತ್ತೇನೆ. ಈ ಕಷ್ಟದಿಂದ ಹೊರಬಂದ ನಂತರ ನಾವು ಪ್ರಗತಿ ಸಾಧಿಸಲು ಪ್ರತಿಯೊಂದು ಪ್ರಯತ್ನಗಳನ್ನು ಸಂಘಟಿತವಾಗಿ ಮಾಡುತ್ತೇವೆ.
ಇಂದು, ರಾಜಸ್ಥಾನಕ್ಕೆ ಐತಿಹಾಸಿಕ ಅದ್ಭುತ ಕ್ಷಣವಾಗಿದೆ. ಒಂದೇ ಕಾರ್ಯಕ್ರಮದಲ್ಲಿ 15,000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುತ್ತಿದೆ. ಅಥವಾ ಅವುಗಳ ಅಡಿಗಲ್ಲು ಹಾಕಲಾಗುತ್ತಿದೆ. ಯೋಜನೆಗಳನ್ನು ಪ್ರಕಟಿಸುವುದು; ಚುನಾವಣೆ ಸಂದರ್ಭದಲ್ಲಿ ಎಲ್ಲಾ ರೀತಿಯ ಭರವಸೆಗಳನ್ನು ನೀಡುವುದು; ಈ ಕಾರ್ಯಕ್ರಮಗಳ ವರದಿಗಳನ್ನು ದೊಡ್ಡ ಶೀರ್ಷಿಕೆಗಳಲ್ಲಿ ವೃತ್ತಪತ್ರಿಕೆಗಳಲ್ಲಿ ಬರುವಂತೆ ಮಾಡುವುದು; ಮತ್ತು ಈ ಮನೋವೃತ್ತಿ; ನೀವು ಒಳ್ಳೆಯವರು ನಾನು ಒಳ್ಳೆಯವನು ಎಂಬ ಮನೋವೃತ್ತಿಯಲ್ಲಿ ಒಬ್ಬರಿಗೊಬ್ಬರು ಹಾರ ಹಾಕುವುದು ಇಂತಹ ಎಲ್ಲಾ ನಡವಳಿಕೆಗಳನ್ನು ನೋಡುವುದು ದೇಶದಲ್ಲಿ ಅಭ್ಯಾಸವಾಗಿ ಹೋಗಿದೆ. ಹಲವಾರು ವರ್ಷಗಳಿಂದ ಇದು ನಡೆಯುತ್ತಿದೆ. ಇದು ನಮ್ಮ ಮುಂದಿರುವ ಅತ್ಯಂತ ದೊಡ್ಡ ಸವಾಲು ಕೂಡ ಆಗಿದೆ. ನಮ್ಮ ಮುಂದೆ ಎಷ್ಟು ದೊಡ್ಡ ಗೊಂದಲ ಇದೆ ಎಂದರೆ ಇವೆಲ್ಲ ಅನಿಷ್ಟಗಳನ್ನು ನಿವಾರಿಸಲು ಏನು ಬೇಕಾಗುತ್ತದೆ ಎಂಬುದನ್ನು ನೀವು ಕಲ್ಪಿಸಿಕೊಳ್ಳಲು ಸಾಧ್ಯವಾಗದು.
ಎಲ್ಲ ವ್ಯವಸ್ಥೆಗಳನ್ನು ಎಂತಹ ಶಿಥಿಲ ರೂಪದಲ್ಲಿ ಉಳಿಸಲಾಗಿದೆ ಎಂದರೆ, ಎಷ್ಟೊಂದು ದುಷ್ಟತೆಗಳು ಅವುಗಳಲ್ಲಿ ಸೇರಿಕೊಂಡಿವೆ ಎಂದರೆ ದುರ್ಬಲ ವರ್ಗದ ವ್ಯಕ್ತಿ ತನ್ನ ಧೈರ್ಯವನ್ನು ಕಳೆದುಕೊಳ್ಳಬಹುದಾಗಿತ್ತು. ಆದರೆ, ನಾವು ಬೇರೆ ರೀತಿಯ ವಸ್ತುವಿನಿಂದ ತಯಾರಾದವರಾಗಿದ್ದೇವೆ. ಸವಾಲುಗಳನ್ನು ಕೈಗೆತ್ತಿಕೊಳ್ಳುವ ಅಭ್ಯಾಸ ನಮಗಿದೆ. ಸವಾಲುಗಳಿಗೆ ಸವಾಲು ಎಸೆಯುವ ಅಭ್ಯಾಸ ನಮಗಿದೆ. ಮತ್ತು ಈ ಸವಾಲುಗಳನ್ನು ಸ್ವೀಕರಿಸುವುದರೊಂದಿಗೆ ದೇಶವನ್ನು ತನ್ನ ಗುರಿಗೆ ಒಯ್ಯಲು ನಮ್ಮನ್ನು ನಾವು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ನಾವು ಸಮರ್ಥರಾಗಿದ್ದೇವೆ.
ಚಂಬಲ್ ನ ಸೇತುವೆ ಬಗ್ಗೆ ನಿತಿನ್ ಜಿ ಅವರು ಈಗ ತಾನೇ ಮಾತನಾಡುತ್ತಿದ್ದರು. ಈ ಸೇತುವೆ 300 ಕೋಟಿ ರೂ.ಗಳಿಗೂ ಕಡಿಮೆ ಬಜೆಟ್ ಹೊಂದಿದ್ದು 2006ರಿಂದ 2017ರವರೆಗಿನ 11 ವರ್ಷದಲ್ಲಿ ನಿರ್ಮಿಸಲಾಗಿದೆ. ಒಂದು ಸರ್ಕಾರದಿಂದ ಮತ್ತೊಂದರ ನಡುವಿನ ವ್ಯತ್ಯಾಸ ಇದೇ ಆಗಿದೆ. ಯಾವ ಸರ್ಕಾರವನ್ನು ಕೆಲಸ ಮಾಡುವ ಸರ್ಕಾರ ಎಂದು ಕರೆಯಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಘಟನೆ ಸಾಕಾಗುತ್ತದೆ. 300 ಕೋಟಿ ರೂ. ವೆಚ್ಚವಾಗುವ ಸಣ್ಣ ಸೇತುವೆಯನ್ನು ಸಾಮಾನ್ಯವಾಗಿ ಒಂದು ವರ್ಷ ಅಥವ ಒಂದೂವರೆ ವರ್ಷದಲ್ಲಿ ನಿರ್ಮಿಸಬಹುದು. ಇಂದು 11 ವರ್ಷಗಳ ನಂತರವೂ ಈ ಯೋಜನೆ ಮುಂದುವರಿಯುತ್ತಿದೆ ಎಂದರೆ ಅದನ್ನು 5600 ಕೋಟಿ ರೂ. ಮೌಲ್ಯದ ಯೋಜನೆಗಳೊಂದಿಗೆ ಹೋಲಿಸಿ ನೋಡಿ. ಮಾಧ್ಯಮದ ಸ್ನೇಹಿತರು ಇದರ ಬಗ್ಗೆ ಲೆಕ್ಕಾಚಾರ ಹಾಕಲಿ; 300 ಕೋಟಿ ರೂ. ಯೋಜನೆ ಮತ್ತು 5,600 ಕೋಟಿ ರೂ.ಗಳ ಯೋಜನೆಗಳ ಬಗ್ಗೆ ಲೆಕ್ಕಾಚಾರ ಹಾಕಲಿ. 2014ರಲ್ಲಿ ನಮ್ಮ ಸರ್ಕಾರ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದಾಗ ಈ ಯೋಜನೆಗಳನ್ನು ಆರಂಭಿಸಲಾಗಿತ್ತು. ಅಂದು ಆರಂಭಿಸಲಾದ ಯೋಜನೆಗಳಲ್ಲಿ ಮೂರು ವರ್ಷಗಳ ಒಳಗೆ 5600 ಕೋಟಿ ರೂ.ಗಳ ಮೌಲ್ಯದ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುತ್ತಿದೆ.
ನಮ್ಮ ಕಾಲದಲ್ಲಿ ಆರಂಭಿಸಲಾದ ಯೋಜನೆಗಳನ್ನು ಪೂರ್ಣಗೊಳಿಸುವ ಕಾರ್ಯಸಂಸ್ಮೃತಿಯನ್ನು ಅನುಸರಿಸಲು ನಾವು ನಿರ್ಧರಿಸಿದ್ದೇವೆ. ಒಂದು ಯೋಜನೆಯನ್ನು ವಿಳಂಬಗೊಳಿಸಿದರೂ ಕೂಡ ಅದರ ಲಾಭವನ್ನು ಒಂದು ಅಥವಾ ಎರಡು ಚುನಾವಣೆಗಳಲ್ಲಿ ಪಡೆಯಬಹುದು, ಅಲ್ಲದೆ ಅಡಿಗಲ್ಲು ಹಾಕಲಾಗುತ್ತದೆ, ಅನೇಕ ಜನರಿಗೆ ಹಾರ ಹಾಕಬಹುದು. ಅವರ ಛಾಯಾ ಚಿತ್ರಗಳನ್ನು ವೃತ್ತಪತ್ರಿಕೆಗಳಲ್ಲಿ ಮುದ್ರಿಸಬಹುದು. ಹೀಗಾದ ನಂತರ ಇದರಿಂದ ಒಂದು ಅಥವಾ ಎರಡು ಚುನಾವಣೆಗಳಲ್ಲಿ ಸಹಾಯವಾಗಬಹುದು. ಆದರೆ, ಯೋಜನೆ ನಿಂತಲ್ಲಿ ಅದರ ವೆಚ್ಚ ಸಾವಿರಾರು ಕೋಟಿ ರೂ.ಗಳಷ್ಟು ಹೆಚ್ಚಾಗುತ್ತದೆ. ಅಪೂರ್ಣ ಯೋಜನೆಯಿಂದಾಗಿ ಕಾರ್ಯದ ಉದ್ದೇಶವು ನಷ್ಟವಾಗುತ್ತದೆ. ದೇಶದ ಸಂಪೂರ್ಣ ಆರ್ಥಿಕ ಸ್ಥಿತಿಯನ್ನು ಈ ಅಪೂರ್ಣ ಯೋಜನೆಗಳು ನುಂಗಿಹಾಕುತ್ತಿವೆ. ಈ ಅಪಾರ ಆಳದಲ್ಲಿ ಸಿಲುಕಿಕೊಂಡಿರಬಹುದಾದ ಈ ಯೋಜನೆಗಳನ್ನು ಪುನಾರಾರಂಭಿಸಲು ನಾನು ಬಹಳಷ್ಟು ಪ್ರಯತ್ನವನ್ನು ನಡೆಸಬೇಕಾಗುತ್ತದೆ. ನೀವೇ ನೋಡಿರುವಂತೆ ಈ ಸೇತುವೆಯ ಕಾರ್ಯವೂ ಕೂಡ ಅರ್ಧಕ್ಕೆ ನಿಂತುಕೊಂಡಿತ್ತು. ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿಕೊಂಡಿತ್ತು. ಆದರೆ, ನಿರ್ಣಯಗಳನ್ನು ಧೈರ್ಯದೊಂದಿಗೆ ಕೈಗೊಂಡರೆ, ಪ್ರಾಮಾಣಿಕತೆಯೊಂದಿಗೆ ಕೈಗೊಂಡರೆ ನಂತರ ಅವು ಫಲಿತಾಂಶಗಳನ್ನು ನೀಡುತ್ತವೆ. ಇಂದು ಫಲಿತಾಂಶ ನಿಮ್ಮ ಮುಂದಿದೆ. ಮುಂಬರುವ ದಿನಗಳಲ್ಲಿ 9000 ಕೋಟಿಗೂ ವೆಚ್ಚದ ಮೌಲ್ಯದ ನೂತನ ಯೋಜನೆಗಳನ್ನು ರಾಜಸ್ಥಾನ ಒಂದರಲ್ಲೇ ಕಾರ್ಯೋನ್ಮುಖಗೊಳಿಸಲಾಗುತ್ತಿದೆ ಮತ್ತು ಇವೆಲ್ಲವೂ ಮುಖ್ಯವಾಗಿ ರಸ್ತೆ ಕ್ಷೇತ್ರದೊಂದಿಗೆ ಸಂಬಂಧಿತವಾಗಿವೆ, ಕೆಲವುಗಳು ರಸ್ತೆ ಅಗಲೀಕರಣ ಕಾರ್ಯವಾಗಿವೆ, ಕೆಲವು ಸಣ್ಣಪುಟ್ಟ ಸೇತುವೆಗಳನ್ನು ನಿರ್ಮಿಸುವುದಾಗಿದೆ, ಮತ್ತೆ ಕೆಲವು ನೂತನ ರಸ್ತೆಗಳ ನಿರ್ಮಾಣದವುಗಳಾಗಿದ್ದು, ಇನ್ನು ಕೆಲವು ಪ್ರಸ್ತುತ ರಸ್ತೆಗಳ ಆಧುನೀಕರಣಕ್ಕೆ ಸಂಬಂಧಿಸಿವೆ. ಒಂದೇ ಸಾರಿಗೆ 9000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಆರಂಭಿಸಲಾಗುತ್ತಿದ್ದು ಅದರಲ್ಲಿ ಇಂದು 500 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ನಾವು ಆರಂಭಿಸಿ, ತಿಂಗಳ ನಂತರ 500 ಕೋಟಿ ರೂ.ಗಳ ಯೋಜನೆಗಳನ್ನು ಆರಂಭಿಸಿ – ಹೀಗೆ ರಾಜಸ್ಥಾನದಲ್ಲಿ ಮುಂದಿನ ಚುನಾವಣೆವರೆಗೆ ರಾಜಕೀಯ ಲಾಭವನ್ನು ನಾವು ಪಡೆಯಬಹುದಾಗಿದೆ. ಆದರೆ ಈ ಮಾದರಿಯನ್ನು ನಾವು ಸ್ವೀಕರಿಸುವುದಿಲ್ಲ. ನಾವು ಕೆಲಸ ಮಾಡಲು ಇಚ್ಛಿಸುತ್ತೇವೆ. ಹಾಗೂ ಈ ಕೆಲಸವನ್ನು ನಾವು ನಿರ್ದಿಷ್ಟ ಸಮಯದೊಳಗೆ ಮಾಡಲು ಇಚ್ಛಿಸುತ್ತೇವೆ. ಇದಕ್ಕಾಗಿಯೇ ನಾವು 9000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಯೋಜನೆಗಳ ಶಂಕುಸ್ಥಾಪನೆಯನ್ನು ನೆರವೇರಿಸುತ್ತಿದ್ದೇವೆ. ಇಂತಹ ಯೋಜನೆಗಳ ಬಗ್ಗೆ ಅಪಾರ ಜವಾಬ್ದಾರಿಯೊಂದಿಗೆ ನಾವು ಮಾತನಾಡಿದಾಗ, ಅವುಗಳನ್ನು ಪೂರೈಸುವ ಬದ್ಧತೆಯೊಂದಿಗೆ ನಾವು ಮಾತನಾಡುತ್ತೇವೆ.
ಯಾವುದೇ ಸ್ಥಿತಿಯಲ್ಲೂ ನಾವು ಇದನ್ನು ಪೂರೈಸುತ್ತೇವೆ ಎಂಬ ಖಾತ್ರಿಯನ್ನು ರಾಜಸ್ಥಾನಕ್ಕೆ ನಾನು ನೀಡಲು ಇಚ್ಛಿಸುತ್ತೇನೆ. ಯಾವುದೇ ಸ್ಥಿತಿಯಲ್ಲಿ ರಾಜಸ್ಥಾನ ಪರಿವರ್ತಿತವಾಗಲಿದೆ. ದೇಶದ ಅಭಿವೃದ್ಧಿಯಲ್ಲಿ ಮೂಲಸೌಕರ್ಯ ಅತ್ಯಂತ ಪ್ರಮುಖಪಾತ್ರ ವಹಿಸುತ್ತದೆ. ಇವು ಸಮಯ ಹಿಡಿಯುವ ಮತ್ತು ದುಬಾರಿ ಯೋಜನೆಗಳಾಗಿವೆ. ಇವುಗಳನ್ನು ನಾವು ರಾಜಕೀಯದ ಕನ್ನಡಿಯ ಮೂಲಕ ನೋಡಿದಲ್ಲಿ ಜನರು ತಾಳ್ಮೆ ಕಳೆದುಕೊಳ್ಳುತ್ತಾರೆ. ಇದೇ ಕಾರಣ ಹಿಂದಿನ ಸರ್ಕಾರಗಳು ಮತ್ತು ರಾಜಕಾರಣಿಗಳು ದೀರ್ಘಕಾಲೀನ ಯೋಜನೆಗಳಿಂದ ಅಂದರೆ ಬೃಹತ್ ಯೋಜನೆಗಳಿಂದ ದೂರ ಓಡುತ್ತಿದ್ದರು.
ನಮ್ಮ ದೇಶಕ್ಕಾಗಿ ನಾವು ನೂತನ ಎತ್ತರಗಳಿಗೆ ಏರಬೇಕೆಂದಿದ್ದರೆ ನಮ್ಮ ವ್ಯವಸ್ಥೆಗಳನ್ನು ನಾವು ಆಧುನೀಕರಣಗೊಳಿಸಬೇಕು ಎಂಬುದರ ಬಗ್ಗೆ ನಾವು ಸಂಪೂರ್ಣವಾಗಿ ಜಾಗೃತರಾಗಿದ್ದೇವೆ. ಅದು ರೈಲ್ವೆ ಆಗಲಿ, ರಸ್ತೆಗಳಾಗಲಿ ಅಥವಾ ನೀರು ಪೂರೈಕೆ ವ್ಯವಸ್ಥೆಗಳು ಅಥವಾ ವಿದ್ಯುತ್ ಪೂರೈಕೆ ಅಥವ ಆಪ್ಟಿಕ್ ಫೈಬರ್ ಜಾಲ ಆಥವಾ ಕರಾವಳಿ ಸಂಪರ್ಕ ಸ್ಥಾಪಿಸುವುದು ಅಥವಾ ಯಾವುದೇ ರೀತಿಯ ಆಧುನಿಕ ಮೂಲಸೌಕರ್ಯ ಇರಬಹುದು, ಇವುಗಳಲ್ಲಿ ಯಾವುದೇ ರೀತಿಯ ವಿಳಂಬ ದೇಶಕ್ಕೆ ಒಳ್ಳೆಯದನ್ನು ಮಾಡುವುದಿಲ್ಲ.
ಈ ಆಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದ ನಂತರ ಭೂಮಿಯ ಮೇಲೆ ಉದ್ದವಾದ ಕಪ್ಪು ಗೆರೆಯೊಂದನ್ನು ಮಾತ್ರ ನೀವು ನೋಡುವುದಿಲ್ಲ. ಈ ಕಪ್ಪಾದ ಉದ್ದನೆಯ ಬೆಲ್ಟ್, ಆ ರಸ್ತೆ, ಕಪ್ಪು ಬಣ್ಣದ ರಸ್ತೆ ನಿಮ್ಮ ಜೀವನವನ್ನು ಬೆಳಕಿನಿಂದ ತುಂಬುತ್ತದೆ. 9000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಈ ರಸ್ತೆಗಳಿಂದ ರೈತರಿಗೆ ಎಷ್ಟು ಲಾಭವಾಗಲಿದೆ ಎನ್ನುವುದರ ಬಗ್ಗೆ ಸ್ವಲ್ಪ ಯೋಚಿಸಿ. ರೈತರು ಅವರ ಕೃಷಿ ಉತ್ಪನ್ನ, ಅವರ ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳನ್ನು ಸುಲಭವಾಗಿ ಪೂರೈಸಬಹುದು. ಅಟಲ್ ಬಿಹಾರಿ ವಾಜಪೇಯಿ ಅವರು ಸುವರ್ಣ ಚತುಷ್ಪಥ ರಸ್ತೆಗಳನ್ನು ನಿರ್ಮಿಸಿದಾಗ ಆರಂಭದಲ್ಲಿ ಜನರು ಉದ್ಗಾರ ಎತ್ತಿದ್ದರಲ್ಲದೆ, ಇಂತಹ ಒಳ್ಳೆಯ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ ಇಂತಹ ರಸ್ತೆಗಳು ಇರಲಿಲ್ಲ. ಜನರು ಬಹಳ ಹರ್ಷಗೊಂಡಿದ್ದರಲ್ಲದೆ, ವಾಹನಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದವು. ಜನರು ಅಲ್ಲಿ ಮಾತನಾಡಲು ಆಗುತ್ತಿರಲಿಲ್ಲ.
ಈ ರಾಜಸ್ಥಾನದ ಭಾಗಕ್ಕೆ ಹೊಂದಿಕೊಂಡಿರುವ ಗುಜರಾತ್ ನ ಪ್ರದೇಶಗಳನ್ನು ನಾನು ಇಂದಿಗೂ ನೆನಪಿಸಿಕೊಳ್ಳುತ್ತೇನೆ. ಅದು ಸಬರ್ ಕಾಂತ ವಾಗಿರಲಿ, ಅಹ್ಮದಾಬಾದ್ ಜಿಲ್ಲೆಯ ರೈತರಾಗಿರಲಿ, ಇವರು ತಮ್ಮ ಹಣ್ಣುಗಳು, ತರಕಾರಿಗಳು, ಹಾಲು ಅಥವಾ ಹೂವುಗಳನ್ನು ಪೂರೈಕೆ ಮಾಡಬೇಕಾದಲ್ಲಿ ಉತ್ತಮ ರಸ್ತೆ ಸಂಪರ್ಕದಿಂದಾಗಿ ದಿಲ್ಲಿಯ ಮಾರುಕಟ್ಟೆಗೆ ಇವುಗಳನ್ನು ಒಂದೇ ದಿನದಲ್ಲಿ ಪೂರೈಸಲಾಗುತ್ತಿತ್ತು. ಈ ಜಿಲ್ಲೆಗಳ ರೈತರ ಆದಾಯದಲ್ಲಿ ಬೃಹತ್ ಬದಲಾವಣೆಯಾಗಿದೆ.
ಈ ರೀತಿಯ ಉತ್ತಮ ರಸ್ತೆಗಳನ್ನು ನಿರ್ಮಿಸಿದಾಗ ನಗರಕ್ಕೆ ತಮ್ಮ ಉತ್ಪನ್ನಗಳನ್ನು ಪೂರೈಸುವುದರಲ್ಲಿ ಕಷ್ಟ ಅನುಭವಿಸುವ ರೈತರಿಗೆ ಅನುಕೂಲವಾಗುತ್ತದೆ. ಹಾಲು, ಹಣ್ಣು, ತರಕಾರಿಗಳು ಮತ್ತು ಹೂವುಗಳನ್ನು ಪೂರೈಸುವಲ್ಲಿ ಒಂದು ಅಥವಾ ಎರಡು ದಿನಗಳ ವಿಳಂಬವಾದರೆ ಆಗ ಶೇ. 20ರಿಂದ 30ರಷ್ಟು ಉತ್ಪನ್ನ ವ್ಯರ್ಥವಾಗುತ್ತದೆ. ಗ್ರಾಹಕರು ಅವುಗಳನ್ನು ಖರೀದಿಸುವುದಿಲ್ಲ. ಉತ್ತಮ ರಸ್ತೆಯ ಜಾಲವನ್ನು ಸೃಷ್ಟಿಸಿದಲ್ಲಿ ಆಗ ದೇಶದ ಆರ್ಥಿಕ ಸ್ಥಿತಿಯ ವೇಗ ಹೆಚ್ಚುತ್ತದೆ. ದೂರದ ಪ್ರದೇಶಗಳಲ್ಲಿ ಇರುವ ರೈತರು ಉತ್ಪನ್ನಗಳನ್ನು ಅವರ ಆಯ್ಕೆಯ ಮಾರುಕಟ್ಟೆಗಳಿಗೆ ಪೂರೈಸುವ ಅವಕಾಶವನ್ನು ರಸ್ತೆಗಳಿದ್ದಲ್ಲಿ, ಮೂಲಸೌಕರ್ಯಗಳಿದ್ದಲ್ಲಿ ಪಡೆಯುತ್ತಾರೆ. ಗ್ರಾಮದಲ್ಲಿ ಹೆರಿಗೆಗಾಗಿ ಕಾಯುತ್ತಿರುವ ಬಡ ಗರ್ಭಿಣಿ ಮಹಿಳೆ ಇದ್ದಲ್ಲಿ ಹಾಗೂ ಅವರು ದೂರದಲ್ಲಿನ ಆಸ್ಪತ್ರೆಗೆ ಹೋಗಬೇಕಿದ್ದಲ್ಲಿ ಅಲ್ಲದೆ, ಆಕೆ 25-30 ಕಿಲೋ ಮೀಟರ್ ಹೋಗಬೇಕಾಗಿದ್ದಲ್ಲಿ ಉತ್ತಮವಾದ ರಸ್ತೆಗಳಿದ್ದರೆ ಆಗ ತಾಯಿ ಮತ್ತು ಮಗು ಇಬ್ಬರ ಜೀವವನ್ನು ಉಳಿಸಬಹುದು. ಆದರೆ, ರಸ್ತೆ ಇಲ್ಲದಿದ್ದರೆ ತಾಯಿ ತನ್ನ ಜೀವವನ್ನು ಕಳೆದುಕೊಳ್ಳುತ್ತಾಳೆ . ಇದು ರಸ್ತೆಯೊಂದರ ಪ್ರಾಮುಖ್ಯತೆಯಾಗಿದೆ. ರಾಜಸ್ಥಾನದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಸ್ತೆಗಳು ಅತ್ಯುತ್ತಮವಾಗಿವೆ. ಬಹುಶಃ ಈ ಉತ್ತಮ ರಸ್ತೆಗಳಿಂದ 5 ಪಟ್ಟು ಹೆಚ್ಚು ಲಾಭ ರಾಜಸ್ಥಾನಕ್ಕೆ ಲಭಿಸುತ್ತದೆ. ಏಕೆಂದರೆ ರಾಜಸ್ಥಾನದಲ್ಲಿ ಊರುಗಳ ನಡುವಿನ ಅಂತರ ಹೆಚ್ಚು. ರಾಜಸ್ಥಾನ ಅತ್ಯಂತ ವಿಸ್ತಾರವಾದ ಪ್ರದೇಶವಾಗಿದ್ದು ಪ್ರವಾಸೋದ್ಯಮ ರಾಜಸ್ಥಾನದ ಶಕ್ತಿಯಾಗಿದೆ. ವಿಶ್ವದ ಎಲ್ಲೆಡೆಯ ಪ್ರವಾಸಿಗಳಿಗೆ ರಾಜಸ್ಥಾನದ ಬಗ್ಗೆ ಅರಿವು ಇದೆ. ಪುಷ್ಕರಕ್ಕೆ ಪ್ರವಾಸಿಯೊಬ್ಬರು ಭೇಟಿ ನೀಡಬೇಕೆಂದಿದ್ದರೆ, ಸರೋವರಗಳ ನಗರವಾದ ಉದಯಪುರ ದಲ್ಲಿ ಕೆಲಕಾಲ ಅವರು ಕಳೆಯಬೇಕೆಂದಿದ್ದರೆ, ಜೈಸಲ್ಮೇರ್ ನ ಮರುಭೂಮಿಯಲ್ಲಿ ನೂತನ ಜೀವನವನ್ನು ಅನುಭವಿಸುವ ಆಸೆಯನ್ನು ಜಗತ್ತಿನ ಎಲ್ಲೆಡೆಯ ಪ್ರವಾಸಿಗಳು ಹೊಂದಿದ್ದರೆ, ಯಾರಾದರೂ ಶ್ರೀನಾಥಕ್ಕೆ ಭೇಟಿ ನೀಡಬೇಕೆಂದಿದ್ದರೆ, ಯಾರಾದರೂ ಏಕಲಿಂಗಕ್ಕೆ ಭೇಟಿ ನೀಡಬೇಕೆಂದಿದ್ದರೆ, ರಸ್ತೆಗಳು ಪ್ರಮುಖಪಾತ್ರ ವಹಿಸುತ್ತವೆ. ರಾಜಸ್ಥಾನದಲ್ಲಿ ಈ ರೀತಿಯ ಅನೇಕ ಸ್ಥಳಗಳಿವೆ. ಈ ರಾಜ್ಯದ ಪ್ರತಿ ಮೂಲೆ ಪ್ರವಾಸಿಗಳನ್ನು ಆಕರ್ಷಿಸುವ ಗುಣ ಹೊಂದಿದೆ. ಭಾರತದ ಪ್ರತಿ ಮೂಲೆಯಿಂದ ಜನರನ್ನು ಮಾತ್ರವಲ್ಲದೆ, ಜಗತ್ತಿನ ಎಲ್ಲೆಡೆಯಿಂದ ಜನರನ್ನು ಆಕರ್ಷಿಸುವ ದೃಢವಾದ ಆಯಸ್ ಕಾಂತೀಯ ಶಕ್ತಿ ಇಲ್ಲಿದೆ. ಪ್ರವಾಸಿಯೊಬ್ಬ ಇಲ್ಲಿಗೆ ಭೇಟಿ ನೀಡಿದಾಗ ಆತ ತನ್ನ ಜೇಬಿನ ಹಣವನ್ನು ಖರ್ಚು ಮಾಡಿ ಇಲ್ಲಿನ ಜನರಿಗೆ ಲಾಭ ನೀಡುತ್ತಾನೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕನಿಷ್ಠ ಮೊತ್ತವನ್ನು ವೆಚ್ಚ ಮಾಡಿ ಗರಿಷ್ಠ ಉದ್ಯೋಗಾವಕಾಶವನ್ನು ಸೃಷ್ಟಿಸಬಹುದಾಗಿದೆ. ಪ್ರತಿಯೊಬ್ಬರೂ ಇಲ್ಲಿ ಗಳಿಸುತ್ತಾರೆ. ಹೂವು ಮಾರುವವರು ಗಳಿಸುವರು, ಪ್ರಸಾದ ಮಾರುವವರು ಗಳಿಸುವರು, ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ಅತಿಥಿಗೃಹ ಮಾಲೀಕರು, ಕರಕುಶಲ ಕಲಾವಿದರು ಗಳಿಸುವರು. ಅಲ್ಲದೆ, ಚಹಾ ಮಾರುವವರು ಕೂಡ ಗಳಿಕೆ ಹೊಂದುತ್ತಾರೆ. ಈ ಶಕ್ತಿ ರಾಜ್ಯದಲ್ಲಿದೆ. ಆದರೆ, ರಸ್ತೆಯಲ್ಲಿ ಟ್ರ್ಯಾಫಿಕ್ ಜ್ಯಾಮ್ ಆದರೆ, ರಸ್ತೆಗಳಲ್ಲಿ ಗುಂಡಿಗಳಿದ್ದರೆ, ಸೂಕ್ತ ರೀತಿಯ ಸೂಚನಾ ಫಲಕಗಳಿರದಿದ್ದರೆ, ವಾಹನ ನಿಲುಗಡೆಗಾಗಿ ವ್ಯವಸ್ಥೆ ಇಲ್ಲದಿದ್ದರೆ, ಪೆಟ್ರೊಲ್ ಪಂಪ್ ಗಳಿಗಾಗಿ ಸೂಕ್ತ ಸ್ಥಳದಲ್ಲಿ ವ್ಯವಸ್ಥೆ ಇಲ್ಲದಿದ್ದರೆ ಆಗ ಪ್ರವಾಸಿ ಒಮ್ಮೆ ಬರಬಹುದು. ಆದರೆ, ಹಿಂದಿರುಗಿದ ನಂತರ ಇದರ ಬಗ್ಗೆ ಯೋಚಿಸುತ್ತಿರುತ್ತಾನೆ. ಈ 15,000 ಕೋಟಿ ರೂ. ಮೌಲ್ಯದ ಯೋಜನೆಗಳು ಭೂಮಿಯ ಮೇಲೆ ಕೇವಲ ರಸ್ತೆಗಳನ್ನು ಮಾತ್ರ ಸೃಷ್ಟಿಸುತ್ತಿಲ್ಲ. ಅವು ರಾಜಸ್ಥಾನಕ್ಕೆ ಲಾಭದಾಯಕ ಭವಿಷ್ಯದ ಮಾರ್ಗವನ್ನು ತೆರೆಯುತ್ತಿವೆ. ನಾನು ಇದನ್ನು ಸ್ಪಷ್ಟವಾಗಿ ನೋಡಬಲ್ಲೆ. ಆದ್ದರಿಂದ ಮೂಲಸೌಕರ್ಯ ಯೋಜನೆಗಳ ಮೇಲೆ ಒತ್ತು ನೀಡಲಾಗುತ್ತಿದೆ. ಭಾರತ ಸರ್ಕಾರ ಈ ಉದ್ದೇಶಕ್ಕಾಗಿ ವೆಚ್ಚ ಮಾಡುವಲ್ಲಿ ಸಂಪೂರ್ಣ ಬದ್ಧತೆ ಹೊಂದಿದೆ. ಭಾರತಕ್ಕೆ ಆಧುನಿಕ ರೂಪದ ಮೂಲಸೌಕರ್ಯವನ್ನು ನೀಡಲು ನಾವು ಇಚ್ಛಿಸುತ್ತೇವೆ. ಆಪ್ಟಿಕಲ್ ಫೈಬರ್ ಜಾಲ, ದೂರದ ಗ್ರಾಮಗಳಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಹೇಗೆ ನೀಡುವುದು, ದೂರದ ಬಾನಸವಾಡಾದಲ್ಲಿನ ಬುಡಕಟ್ಟು ಜನಾಂಗದ ಸಹೋದರರಿಗೆ ಯಾವ ರೀತಿಯಲ್ಲಿ ಅಜಮೇರ್ ನಲ್ಲಿನ ಅತ್ಯುತ್ತಮ ಶಾಲೆಗಳಲ್ಲಿ ನೀಡುವ ಶಿಕ್ಷಣವನ್ನು ತಲುಪಿಸುವುದು, ಈ ಡಿಜಿಟಲ್ ಜಾಲದ ಮೂಲಕ ಹಾಗೂ ದೂರ ಶಿಕ್ಷಣದ ಮೂಲಕ, ಆಪ್ಟಿಕಲ್ ಫೈಬರ್ ಜಾಲದ ಮೂಲಕ, ತಂತ್ರಜ್ಞಾನದ ಮೂಲಕ ನೂತನ ಪೀಳಿಗೆಗೆ ನೂತನ ಜ್ಞಾನವನ್ನು ಈ ಬೃಹತ್ ಯೋಜನೆ ಪೂರೈಸಲಿದೆ. ಅದಕ್ಕಾಗಿ ಲಕ್ಷಾಂತರ ಕಿಲೋ ಮೀಟರುಗಳ ಆಪ್ಟಿಕಲ್ ಫೈಬರ್ ಜಾಲವನ್ನು ಸ್ಥಾಪಿಸಲಾಗುತ್ತಿದೆ. ಈ ಆಪ್ಟಿಕಲ್ ಫೈಬರ್ಜಾಲ ಶತ ಮತ್ತು ಶತಕೋಟಿ ರೂ.ಗಳ ವೆಚ್ಚದ ಅಗತ್ಯ ಹೊಂದಿರುತ್ತದೆ. ಈ ಸ್ಥಳದ ಮೂಲಕ ಸಾಗುವ ಯಾರಿಗೂ ಇದು ಕಾಣಿಸುವುದಿಲ್ಲ. ಆದರೆ, ಇದರಲ್ಲಿ ನನಗೇನಿದೆ? ನಮಗೇನು ಮಾಡಲಾಗುತ್ತಿದೆ? ಇದು ಯಾರ ಗಮನಕ್ಕೂ ಬರುವುದಿಲ್ಲ. ಆದರೆ, ಅವುಗಳನ್ನು ಸ್ಥಾಪಿಸಿದ ನಂತರ, ಮಕ್ಕಳಿಗೆ ಶಿಕ್ಷಣವಾಗಲಿ, ರೋಗಿಗಳಿಗೆ ಟೆಲಿ ಮೆಡಿಸಿನ್ ಮೂಲಕ ಉತ್ತಮ ಚಿಕಿತ್ಸೆಯಾಗಲಿ ಲಭಿಸಬಹುದಾಗಿದೆ. ನಗರಗಳಲ್ಲಿ ಇರುವಂತಹ ಸೌಲಭ್ಯಗಳನ್ನು ಗ್ರಾಮೀಣ ಜನರಿಗೆ ನೀಡುವ ಕಾರ್ಯಕ್ಕೆ ಇದು ದಾರಿಯಾಗಲಿದೆ. ಭಾರತದ ಗ್ರಾಮಗಳಲ್ಲಿ ಯಾವ ರೀತಿಯ ಅಪಾರ ಬದಲಾವಣೆ ಬರಲಿದೆ ಎಂದು ನೀವು ಊಹಿಸಬಹುದೇ? ಆ ಮೂಲಸೌಕರ್ಯದ ಮೇಲೆ ಒತ್ತು ನೀಡಿ ನಾವು ಕೆಲಸವನ್ನು ಮುಂದುವರಿಸುತ್ತಿದ್ದೇವೆ.
ಈಗ ತಾನೇ, ಮುಖ್ಯಮಂತ್ರಿ ಅವರು ಉಜ್ವಲ ಯೋಜನೆ ಬಗ್ಗೆ ಮಾತನಾಡುತ್ತಿದ್ದರು. ಈ ಯೋಜನೆ ಲಕ್ಷಾಂತರ ಬಡ ತಾಯಂದಿರು ಮತ್ತು ಸೋದರಿಯರಿಗೆ ಗ್ಯಾಸ್ ಸ್ಟೋವ್ ನೀಡಿದೆ. ಬಡ ತಾಯಿಯೊಬ್ಬಳು ಮರದ ಒಲೆಯಲ್ಲಿ ಅಡುಗೆ ಮಾಡುವಾಗ 400 ಸಿಗರೇಟ್ ಗಳಿಗೆ ಸಮನಾದಂತಹ ಹೊಗೆಯನ್ನು ಸೇವಿಸುತ್ತಾಳೆ. ಈ ತಾಯಂದಿರ ಬಗ್ಗೆ, ಆಟವಾಡುವ ವಯಸ್ಸಿನ ಆ ಮಕ್ಕಳ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ? ಒಂದು ಕಾಲದಲ್ಲಿ ಗ್ಯಾಸ್ ಸಂಪರ್ಕ ಪಡೆಯುವುದು ಅಪಾರ ಶ್ರಮದ ವಿಷಯವಾಗಿತ್ತು. ಅದು ಎಷ್ಟು ಕಷ್ಟವಾಗಿತ್ತೆಂದರೆ ಹಲವಾರು ರಾಜಕಾರಣಿಗಳ ಶಿಫಾರಸ್ಸುಗಳು ಬೇಕಾಗಿತ್ತು. ಬಡವರಿಗೆ ಅವರ ಮನೆ ಬಾಗಿಲಲ್ಲಿ ಗ್ಯಾಸ್ ಸಂಪರ್ಕಗಳನ್ನು ಪೂರೈಸುವ ಯೋಜನೆಯನ್ನು ನಡೆಸುತ್ತಿರುವ ಸರ್ಕಾರ ಇದಾಗಿದೆ. ಇದು ಲಕ್ಷಾಂತರ ಜನರಿಗೆ ಗ್ಯಾಸ್ ಸಂಪರ್ಕಗಳನ್ನು ಪೂರೈಸಿದೆ.
ಇಂದು, ರಸ್ತೆಗಳು ಮತ್ತು ರೈಲು ಮಾರ್ಗಗಳನ್ನು ಹಿಂದಿಗಿಂತ ಎರಡು ಪಟ್ಟು ವೇಗದಲ್ಲಿ ನಿರ್ಮಿಸಲಾಗುತ್ತಿದೆ, ನೀರಿನ ಪೂರೈಕೆ ಯೋಜನೆಯಾಗಿರಲಿ, ಅಥವ ಆಪ್ಟಿಕಲ್ ಫೈಬರ್ ಯೋಜನೆಯಾಗಿರಲಿ, ನಾವು ಅದರ ವೇಗ, ಪ್ರಮಾಣ ಮತ್ತು ಸಾಧ್ಯತೆಗಳನ್ನು ಕೂಡ ಹೆಚ್ಚಿಸಿದ್ದೇವೆ. ಕೌಶಲ್ಯಗಳನ್ನು ಸುಧಾರಿಸುವುದರೊಂದಿಗೆ ಈ ವಿಷಯಗಳನ್ನು ಆಧುನಿಕಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ.
ಜಿಎಸ್ಟಿಯನ್ನು ಆರಂಭಿಸಲಾಗಿದೆ. ಆರಂಭದಲ್ಲಿ ಜನರು ಜಗತ್ತಿನಲ್ಲೇ ಇದು ಅನನ್ಯವಾದುದ್ದು ಎಂದು ಯೋಚಿಸಿದ್ದರು. 1.25 ಶತಕೋಟಿ ಜನರು ಇರುವ ಇಂತಹ ಬೃಹತ್ ದೇಶಕ್ಕೆ ಇದು ಅನನ್ಯ ಮತ್ತು ವ್ಯವಸ್ಥೆಯನ್ನು ಒಂದೇ ರಾತ್ರಿಯಲ್ಲಿ ಬದಲಾಯಿಸುವುದು ಎಂದು ಯೋಚಿಸಿದ್ದರು. ಈ ದೇಶದ 1.25 ಶತಕೋಟಿ ನಾಗರಿಕರು ನೂತನ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇದು ಭಾರತದ ಶಕ್ತಿಯನ್ನು ಬಿಂಬಿಸುತ್ತದೆ. ಸ್ನೇಹಿತರೆ, ಗ್ರಾಮಗಳಲ್ಲಿ ಇರುವಂತಹ ಸಣ್ಣ ಮಾರಾಟಗಾರರು ಈಗ ತಂತ್ರಜ್ಞಾನವನ್ನು ಬಳಸಿ ಆಧುನೀಕರಣ ಹೊಂದಲು ಇಚ್ಛೆ ಹೊಂದಿದ್ದಾರೆ ಎಂಬ ವಾಸ್ತವ ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. 15 ದಿನಗಳು ಅಭಿಯಾನವನ್ನು ನಡೆಸಲು ನಾನು ರಾಜಸ್ಥಾನದ ಅಧಿಕಾರಿಗಳಿಗೆ ಆಗ್ರಹಿಸುತ್ತೇನೆ. ಈ ಅಭಿಯಾನದ ಮೂಲಕ ಗ್ರಾಮಗಳಲ್ಲಿನ ಪ್ರತಿ ಸಣ್ಣ ಮಾರಾಟಗಾರರು 20 ಲಕ್ಷಕ್ಕೂ ಕಡಿಮೆ ವಹಿವಾಟು ಹೊಂದಿದ್ದರೂ ಅಥವಾ 10 ಲಕ್ಷಕ್ಕೂ ಕಡಿಮೆ ವಹಿವಾಟು ಹೊಂದಿದ್ದರೂ ಅವರನ್ನು ಜಿಎಸ್ಟಿಗೆ ಜೋಡಿಸಿ. ಈ ಬಡ ಮಾರಾಟಗಾರರಿಗೆ ಇದರಿಂದ ಜಿಎಸ್ಟಿಯ ಲಾಭ ಬರಲು ಅವಕಾಶ ಮಾಡಿಕೊಡಿ. ಅವರು ಜಿಎಸ್ಟಿ ಸಂಪರ್ಕ ಪಡೆಯದಿದ್ದರೆ ಆಗ ಸರಪಣಿ ಮುರಿಯುತ್ತದೆ. ಅದು ಎಲ್ಲೋ ಒಂದು ಕಡೆ ನಿಂತುಹೋಗಿ ಲಾಭಗಳು ಕೊನೆಯ ವ್ಯಕ್ತಿಯವರೆಗೆ ತಲುಪುವುದಿಲ್ಲ. ಇದಕ್ಕಾಗಿ ಈ ಮೇಲೆ ಹೇಳಿದ ಅಭಿಯಾನವನ್ನು ಕಡ್ಡಾಯವಾಗಿ ಕೈಗೆತ್ತಿಕೊಳ್ಳಬೇಕು.
ರಾಜಸ್ಥಾನದ ಆದಾಯಗಳಲ್ಲಿ ಇಂತಹ ಬೃಹತ್ ಹೆಚ್ಚಳ ಉಂಟಾಗುತ್ತದೆ ಎಂದು ನೀವು ಕಲ್ಪಿಸಿಕೊಂಡಿರಲು ಸಾಧ್ಯವಿರಲಿಲ್ಲ. ಇದರಿಂದಾಗಿಯೇ ಸರ್ಕಾರ ರಾಜಸ್ಥಾನದ ಬಡ ಜನರಿಗೆ ಅನೇಕ ನೂತನ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ.
ಜಿಎಸ್ಟಿ ಒಂದರಿಂದಾಗಿಯೇ ಸಾರಿಗೆ ಕ್ಷೇತ್ರದಲ್ಲಿ, ಅಂದರೆ ನಿತಿನ್ ಜಿ ಅವರು ನೋಡಿಕೊಳ್ಳುತ್ತಿರುವ ಇಲಾಖೆಯಲ್ಲಿ ಒಬ್ಬ ಚಾಲಕ ಪ್ರಯಾಣವೊಂದನ್ನು ತನ್ನ ಸ್ಥಳದಿಂದ ಕಡಲತೀರದ ಬಂದರಿಗೆ ಸರಕುಗಳನ್ನು ಪೂರೈಸಲು ಹೊರಟರೆ ಮತ್ತು ನಾವು ಟ್ರಕ್ ನ ವೇಗ ಮತ್ತು ಕಿಲೋ ಮೀಟರ್ ಗಳನ್ನು ಲೆಕ್ಕ ಹಾಕಿದರೆ ಆಗ ಆ ಟ್ರಕ್ ಮೂರು ದಿನಗಳಲ್ಲಿ ಗುರಿ ತಲುಪುತ್ತದೆ. ಆದರೆ, ರಸ್ತೆಯಲ್ಲಿ ಪ್ರತಿ ಸ್ಥಳದಲ್ಲಿ ಚೆಕ್ ಪೋಸ್ಟ್ ಗಳಿದ್ದರೆ , ಆಗ ಏನಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಚೆಕ್ ಪೋಸ್ಟ್ ಗಳಲ್ಲಿ ಯಾವ ರೀತಿ ಕೆಲಸ ನಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಬಡಪಾಯಿ ತನ್ನ ಗುರಿಯನ್ನು 5 ದಿನಗಳಲ್ಲಿ ತಲುಪುತ್ತಿದ್ದ. ಟ್ರಕ್ ಒಂದು ವಾರದಲ್ಲಿ ಎರಡು ದಿನಗಳ ಕಾಲ ಉಪಯೋಗಕ್ಕೆ ಬರದಿದ್ದರೆ ದೇಶದ ಆರ್ಥಿಕ ಕ್ಷೇತ್ರದಲ್ಲಿ ಸಾರಿಗೆ ವಿಭಾಗಕ್ಕೆ ಇದು ಶೇ.25ಕ್ಕೂ ಹೆಚ್ಚಿನ ನಷ್ಟವುಂಟು ಮಾಡುತ್ತದೆ. ಜಿಎಸ್ಟಿ ಅನುಷ್ಠಾನದ ನಂತರ ಈ ಎಲ್ಲಾ ಚೆಕ್ ಪೋಸ್ಟ್ ಗಳನ್ನು ರದ್ದು ಮಾಡಲಾಗಿದೆ. ಟ್ರಕ್ ಚಾಲಕರು ಇವುಗಳಿಂದಾಗಿ ನಿಂತುಹೋಗುತ್ತಿದ್ದರು. ಈಗ ಎಲ್ಲ ನೀಲಿ ಪಾಸ್ ಮತ್ತು ಕೆಂಪು ಪಾಸ್ ಗಳ ಅಗತ್ಯ ಇಲ್ಲವಾಗಿದೆ. ಈ ಹಿಂದೆ ಅವರು 5 ದಿನಗಳಲ್ಲಿ ತಲುಪುತ್ತಿದ್ದ ಸ್ಥಳವನ್ನು ಈಗ 3 ದಿನಗಳಲ್ಲಿ ತಲುಪುತ್ತಾರೆ. ಇದರಿಂದ ಸಾರಿಗೆ ವೆಚ್ಚ ಕಡಿಮೆಯಾಗುವುದಲ್ಲದೆ, ಸಾರಿಗೆ ವಹಿವಾಟುದಾರರ ಆದಾಯ ಹೆಚ್ಚಾಗಿದೆ. ಸಾರಿಗೆ ಕ್ಷೇತ್ರದ ನಿಯಮಗಳನ್ನು ದೈನಂದಿನ ಆಧಾರದ ಮೇಲೆ ಮೇಲ್ದರ್ಜೆಗೇರಿಸಬೇಕೆಂದು ನಾನು ನಿತಿನ್ ಜೀ ಅವರನ್ನು ಕೇಳುತ್ತಿದ್ದೇನೆ. ಇಂದು, ನಮ್ಮ ದೇಶದ ವ್ಯವಸ್ಥೆ ಏನಿದೆಯೋ ಅದರ ಪ್ರಕಾರ ಟ್ರಕ್ ನಲ್ಲಿ ಎಲ್ಲ ಸರಕುಗಳನ್ನು ಒಯ್ಯುವಾಗ ಅವೆಲ್ಲವನ್ನು ಟ್ರಕ್ ನಲ್ಲಿಯೇ ದಾಸ್ತಾನು ಮಾಡಲಾಗುತ್ತದೆ. ಟ್ರ್ಯಾಕ್ಟರ್ ಮತ್ತು ಪ್ರತ್ಯೇಕಿಸಬಹುದಾದ ಟ್ರ್ಯಾಲಿಗಳಲ್ಲಿರುವಂತೆ ಇಂದಿನ ಬದಲಾದ ಸಮಯ ಟ್ರಕ್ ಮತ್ತು ಟ್ರ್ಯಾಲಿಗಳ ಬೇಡಿಕೆ ಪ್ರತ್ಯೇಕತೆಯನ್ನು ಕೋರುತ್ತಿದೆ. ಸರಕುಗಳನ್ನು ಟ್ರ್ಯಾಲಿಗಳಲ್ಲಿ ದಾಸ್ತಾನು ಮಾಡಬೇಕು. ಆಗ, ಟ್ರ್ಯಾಲಿಯನ್ನು ಜೈಪುರದಲ್ಲಿ ಬಿಟ್ಟು ಟ್ರಕ್ ಮುಂದುವರಿಯಬಹುದು. ಅದು ಮತ್ತೊಂದು ಟ್ರ್ಯಾಲಿಯನ್ನು ಜೋಡಿಸಿಕೊಂಡು ನೂತನ ಗುರಿಯ ಕಡೆಗೆ ಸಾಗಬಹುದು. ವಾಹನ ಚಾಲಕರು ರಾತ್ರಿಯ ವೇಳೆಗೆ ತಮ್ಮ ಮನೆಗೆ ತಲುಪಿ ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುವಂತಹ ವ್ಯವಸ್ಥೆಯನ್ನು ಸೃಷ್ಟಿಸಬೇಕಿದೆ. ಇಂತಹ ವ್ಯವಸ್ಥೆಯನ್ನು ಸೃಷ್ಟಿಸುವತ್ತ ನಮ್ಮ ಸಾರಿಗೆ ಕ್ಷೇತ್ರವನ್ನು ಪರಿವರ್ತಿಸುವ ಕಡೆಗೆ ನಾವು ಕೆಲಸ ಮಾಡುತ್ತಿದ್ದೇವೆ. ದೇಶವನ್ನು ಪರಿವರ್ತಿಸಬೇಕಿದ್ದರೆ ಇದನ್ನು ಸಾರಿಗೆ ಕ್ಷೇತ್ರದ ಮೂಲಕ ಕ್ಷಿಪ್ರಗತಿಯಲ್ಲಿ ಕೈಗೊಳ್ಳಬಹುದಾಗಿದೆ. ಸಮಗ್ರ ಯೋಜನೆಯ ಮೂಲಕ ಅಭಿವೃದ್ಧಿಯ ನೂತನ ಎತ್ತರವನ್ನು ತಲುಪುವ ನಿಟ್ಟಿನಲ್ಲಿ ನಾವು ಸಾಗಿದ್ದೇವೆ.
ನೀವೆಲ್ಲ ಜನರು ತೋರಿಸಿರುವ ಪ್ರೀತಿ, ನಿಮ್ಮೆಲ್ಲರ ಆಶೀರ್ವಾದ, ನಿಮ್ಮೆಲ್ಲರ ಸ್ವಾಗತ ಮತ್ತು ನೀವು ನೀಡಿರುವ ಗೌರವಗಳಿಗಾಗಿ ಮತ್ತೊಮ್ಮೆ ನಾನು ಹೃದಯಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ.
ನಿಮಗೆ ಬಹಳ ವಂದನೆಗಳು
Governor Shri Kalyan Singh, CM @VasundharaBJP and others welcomed PM @narendramodi to Udaipur. #ModiAtUdaipur #RisingRajasthan pic.twitter.com/CZUWAAqJrU
— PMO India (@PMOIndia) August 29, 2017
PM @narendramodi's name is synonymous with trust. Based on PM's vision, we are poised to usher in a New India: @VasundharaBJP #ModiAtUdaipur
— PMO India (@PMOIndia) August 29, 2017
We in Rajasthan have embraced Mantra of Sabka Saath, Sabka Vikas. We have transformed the education sector: @VasundharaBJP #RisingRajasthan
— PMO India (@PMOIndia) August 29, 2017
In Rajasthan we are focussing on Digital India and providing water to our farmers: CM @VasundharaBJP #ModiAtUdaipur #RisingRajasthan
— PMO India (@PMOIndia) August 29, 2017
Our focus is to make Rajasthan ODF. I thank PM for allocating resources for the smart cities in Rajasthan: @VasundharaBJP #RisingRajasthan
— PMO India (@PMOIndia) August 29, 2017
Rajasthan is a family. We are all together moving on the path of progress: CM @VasundharaBJP #ModiAtUdaipur #RisingRajasthan
— PMO India (@PMOIndia) August 29, 2017
The Prime Minister has begun his speech in Udaipur. Watch. https://t.co/Iy8hu3Nre5 #ModiAtUdaipur #RisingRajasthan
— PMO India (@PMOIndia) August 29, 2017
I am delighted to be in this Veer Bhumi. I bow to the brave people of this land: PM @narendramodi #ModiAtUdaipur #RisingRajasthan
— PMO India (@PMOIndia) August 29, 2017
We are standing shoulder to shoulder with the people of Rajasthan who are battling the floods. We have assured all possible support: PM
— PMO India (@PMOIndia) August 29, 2017
The number of projects being inaugurated today is a matter of joy: PM @narendramodi #ModiAtUdaipur #RisingRajasthan https://t.co/Iy8hu3Nre5
— PMO India (@PMOIndia) August 29, 2017
Some of the projects being inaugurated were pending for years. Our focus is on timely completion. We will complete projects we begin: PM
— PMO India (@PMOIndia) August 29, 2017
To take India to newer heights, the role of infrastructure, railways, roads is very important: PM @narendramodi https://t.co/Iy8hu3Nre5
— PMO India (@PMOIndia) August 29, 2017
Better roads will help our farmers immensely. This is one of the reasons why Atal Ji dreamt of a strong roads network across India: PM
— PMO India (@PMOIndia) August 29, 2017
Good roads will help Rajasthan in particular. Tourism will get a big boost due to a strong roads network in the state: PM @narendramodi pic.twitter.com/DIwYlljyPB
— PMO India (@PMOIndia) August 29, 2017
With a tourist comes economic opportunities for the locals: PM @narendramodi #ModiAtUdaipur #RisingRajasthan pic.twitter.com/Up5qsLlUP7
— PMO India (@PMOIndia) August 29, 2017
These roads are not only connecting Rajasthan & the nation, they are gateways to progress: PM @narendramodi #ModiAtUdaipur #RisingRajasthan pic.twitter.com/r63y9NmS8w
— PMO India (@PMOIndia) August 29, 2017