ರಾಜಮಾತೆ ವಿಜಯ ರಾಜೇ ಸಿಂಧಿಯಾ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನನಾಯಕಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅವರು ಧೈರ್ಯ ಮತ್ತು ದೂರದೃಷ್ಟಿಯ ಪ್ರತೀಕವಾಗಿದ್ದರು ಎಂದು ಮೋದಿ ಬಣ್ಣಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
“ಅವರ ಜನ್ಮ ವಾರ್ಷಿಕೋತ್ಸವದಂದು ರಾಜಮಾತೆ ವಿಜಯ ರಾಜೇ ಸಿಂಧಿಯಾ ಅವರಿಗೆ ಗೌರವ ನಮನಗಳು. ಅವರು ಧೈರ್ಯ ಮತ್ತು ದೂರದೃಷ್ಟಿಯ ಧೀಮಂತ ನಾಯಕಿಯಾಗಿದ್ದರು. ಅವರು ಸಾರ್ವಜನಿಕರ ಸೇವೆಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟರು. ಅವರ ಮಹೋನ್ನತ ವ್ಯಕ್ತಿತ್ವದ ಬಗ್ಗೆ ಹಿಂದಿನ #ಮನ್ ಕಿ ಬಾತ್ ಕಾರ್ಯಕ್ರಮವೊಂದರಲ್ಲಿ ನಾನು ಪ್ರಸ್ತಾಪಿಸಿದ್ದನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಪ್ರಧಾನಿ ಸ್ಮರಿಸಿದ್ದಾರೆ.
*****
On her birth anniversary, tributes to Rajmata Vijaya Raje Scindia Ji. She was synonymous with courage and foresight. She devoted her life to serving others. Sharing what I had said during one of the previous #MannKiBaat programmes about her outstanding personality. pic.twitter.com/HTDBGxkSuw
— Narendra Modi (@narendramodi) October 12, 2022